For Quick Alerts
ALLOW NOTIFICATIONS  
For Daily Alerts

Rule 132: ಐಟಿ ಕಾಯ್ದೆಯ 132 ನಿಯಮ ಎಂದರೇನು, ತೆರಿಗೆದಾರರಿಗೆ ಯಾಕೆ ಮುಖ್ಯ?

|

ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (CBDT) ಆದಾಯ ತೆರಿಗೆ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದು ಅದಕ್ಕೆ ನಿಯಮ 132 ಅನ್ನು ಸೇರ್ಪಡೆ ಮಾಡಿದೆ. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 155 ರ ಉಪ-ವಿಭಾಗ 18 ರ ಅಡಿಯಲ್ಲಿ ಆದಾಯದ ಮರು ಲೆಕ್ಕಾಚಾರವನ್ನು ಆದಾಯದ ನಿಯಮ 132ರಲ್ಲಿ ಉಲ್ಲೇಖ ಮಾಡಲಾಗಿದೆ. ಈ ನಿಯಮವನ್ನು ಅಕ್ಟೋಬರ್ 1, 2022 ರಂದು ಜಾರಿಗೆ ತರಲಾಯಿತು.

ಆದರೆ ಹಲವಾರು ಮಂದಿಗೆ ಈ ನಿಯಮದ ಬಗ್ಗೆ ಮಾಹಿತಿಯೇ ಇಲ್ಲ. ತೆರಿಗೆಯನ್ನು ಪಾವತಿ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಕೂಡಾ ಈ ಆದಾಯ ತೆರಿಗೆ ನಿಯಮದ ಬಗ್ಗೆ ಮಾಹಿತಿ ಇರುವುದು ಅತೀ ಅಗತ್ಯವಾಗಿದೆ. ಈ ನಿಯಮವು ವ್ಯಾಪಾರ ಸಂಸ್ಥೆಗಳು ತಮ್ಮ ತೆರಿಗೆಯ ಆದಾಯವನ್ನು ನಿರ್ಧರಿಸುವಾಗ ಹೆಚ್ಚುವರಿ ಶುಲ್ಕ ಪಾವತಿಗಳನ್ನು ಕಡಿತಗೊಳಿಸಬೇಕೆ ಎಂಬುವುದನ್ನು ನಿರ್ಧಾರ ಮಾಡುತ್ತದೆ.

ರಿಟರ್ನ್ ಫೈಲ್ ಮಾಡಲು ಏಕರೀತಿಯ ಐಟಿಆರ್ ಫಾರ್ಮ್‌ಗೆ ಕೇಂದ್ರ ಪ್ರಸ್ತಾವರಿಟರ್ನ್ ಫೈಲ್ ಮಾಡಲು ಏಕರೀತಿಯ ಐಟಿಆರ್ ಫಾರ್ಮ್‌ಗೆ ಕೇಂದ್ರ ಪ್ರಸ್ತಾವ

ಸೆಕ್ಷನ್ 155(18) ಅಡಿಯಲ್ಲಿ ಒಟ್ಟು ಆದಾಯದ ಮರು ಲೆಕ್ಕಾಚಾರಕ್ಕಾಗಿ, ಆದಾಯ ತೆರಿಗೆ ಕಾಯ್ದೆಯ ನಿಯಮ 132 ರ ಅಡಿಯಲ್ಲಿ ಆದಾಯ ತೆರಿಗೆ ಇಲಾಖೆಯು ಫಾರ್ಮ್ 69 ಅನ್ನು ನೀಡುತ್ತದೆ. ಸೆಸ್/ಸರ್ಚಾರ್ಜ್ ಕಡಿತದ ಲಾಭವನ್ನು ಪಡೆದಿರುವ ವ್ಯಾಪಾರ ಅಥವಾ ವೃತ್ತಿಯಿಂದ ಆದಾಯ ಹೊಂದಿರುವವರಿಗೆ, ನಿಯಮ 132 ಅನ್ವಯವಾಗುತ್ತದೆ. ಆದ್ದರಿಂದಾಗಿ ತಮ್ಮ ಸೆಸ್,ಸರ್ಚಾರ್ಜ್ ಕಡಿತಕ್ಕೆ ಅರ್ಜಿ ಸಲ್ಲಿಕೆ ಮಾಡುವವರು ಫಾರ್ಮ್ 69 ಅನ್ನು ಬಳಕೆ ಮಾಡಬೇಕಾಗುತ್ತದೆ. ಹಾಗಾದರೆ ಈ 132 ನಿಯಮ ಏನು, ತೆರಿಗೆದಾರರಿಗೆ ಹೇಗೆ ಮುಖ್ಯ ಇದರ ಬಗ್ಗೆ ಅಧಿಕ ವಿವರ ಇಲ್ಲಿದೆ ಮುಂದೆ ಓದಿ..

 ಈ ನಿಯಮ ಯಾಕಾಗಿ ತರಲಾಗಿದೆ?

ಈ ನಿಯಮ ಯಾಕಾಗಿ ತರಲಾಗಿದೆ?

ಈ ನಿಯಮ ಯಾಕಾಗಿ ತರಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿದ ಹಣಕಾಸು ತಜ್ಞರಾದ ನಿಧಿ ಮಂಚಂದ, "ವೃತ್ತಿಪರರಾಗಿರುವ ಅಥವಾ ವ್ಯವಹಾರ ನಡೆಸುವ ತೆರಿಗೆದಾರರು ಆದಾಯ ತೆರಿಗೆ ಕಾಯಿದೆಯ ಇತ್ತೀಚೆಗೆ ಸೇರಿಸಲಾದ ನಿಯಮ 132 ರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. 132 ನಿಯಮ ಪರಿಚಯಕ್ಕೂ ಮುನ್ನ ವ್ಯವಹಾರದ ನಿವ್ವಳ ಲಾಭವನ್ನು ಲೆಕ್ಕಾಚಾರ ಮಾಡುವಾಗ ಪಾವತಿಸಿದ ಆದಾಯ ತೆರಿಗೆಯನ್ನು ಕಡಿತಗೊಳಿಸಲು ತೆರಿಗೆದಾರರಿಗೆ ಅವಕಾಶವಿರಲಿಲ್ಲ. ಆದರೆ ಸೆಸ್ ಅಥವಾ ಹೆಚ್ಚುವರಿ ಶುಲ್ಕವನ್ನು ಕಡಿತ ಮಾಡಬಹುದೇ ಎಂಬ ಬಗ್ಗೆ ಸ್ಪಷ್ಟನೆಯೂ ಇರಲಿಲ್ಲ. ಹೀಗಾಗಿ, ಕೆಲವು ವ್ಯವಹಾರಗಳು ಆದಾಯ ತೆರಿಗೆ ಕಾಯಿದೆಯಲ್ಲಿನ ಈ ಲೋಪದೋಷದ ಲಾಭವನ್ನು ಪಡೆದುಕೊಳ್ಳುತ್ತಿವೆ. ಸೆಸ್ ಮತ್ತು ಹೆಚ್ಚುವರಿ ಶುಲ್ಕವನ್ನು ಕಡಿತ ಮಾಡಬೇಕಾದ ಮೊತ್ತ ಎಂದು ಕೆಲವು ಸಂಸ್ಥೆಗಳು ವಾದ ಮಾಡುತ್ತದೆ," ಎಂದು ತಿಳಿಸಿದ್ದಾರೆ.

 ಯಾವಾಗಿನಿಂದ ಲೆಕ್ಕಾಚಾರ?

ಯಾವಾಗಿನಿಂದ ಲೆಕ್ಕಾಚಾರ?

"ಪ್ರಸ್ತುತ ನಿಯಮ 132 ರ ಪರಿಚಯದಿಂದಾಗಿ ಸೆಸ್ ಅಥವಾ ಹೆಚ್ಚುವರಿ ಶುಲ್ಕವಿಲ್ಲದೆ ತೆರಿಗೆ ವಿಧಿಸಬಹುದಾದ ಲಾಭವನ್ನು ಮರು ಲೆಕ್ಕಾಚಾರ ಮಾಡಲು ಹಾಗೂ ಹಿಂದಿನ ಆದಾಯದ ಅಡಿಯಲ್ಲಿ ಹೆಚ್ಚುವರಿ ತೆರಿಗೆಯನ್ನು ಠೇವಣಿ ಮಾಡಲು ಸರ್ಕಾರವು 31 ಮಾರ್ಚ್ 2023 ರವರೆಗೆ ಸಮಯಾವಕಾಶವನ್ನು ಒದಗಿಸಿದೆ. 2005ರಿಂದ ಈ ಲೆಕ್ಕಾಚಾರ ಮಾಡಬೇಕಾಗಿದೆ. ನಿಯಮಾವಳಿಗಳನ್ನು ಅನುಸರಿಸಲು ಮತ್ತು ಫಾರ್ಮ್ 69 ರಲ್ಲಿ ಅರ್ಜಿಯನ್ನು ಮಾಡಲು ಸೂಚಿಸಲಾಗಿದೆ. 31ನೇ ಮಾರ್ಚ್ 2023 ರವರೆಗೆ ಯಾವುದೇ ದಂಡವನ್ನು ವಿಧಿಸಲಾಗುವುದಿಲ್ಲ. ಆದರೆ ಆ ಬಳಿಕ ದಂಡ ಬೀಳಬಹುದು," ಎಂದು ಕೂಡಾ ತಿಳಿಸಿದ್ದಾರೆ.

 ಪ್ರಮುಖ ಅಂಶಗಳು ತಿಳಿದಿರಲಿ

ಪ್ರಮುಖ ಅಂಶಗಳು ತಿಳಿದಿರಲಿ

1. ಮೇಲ್ತೆರಿಗೆ / ಸೆಸ್ ಮತ್ತು ಒಟ್ಟು ಆದಾಯ ಎಂದು ಕ್ಲೈಮ್ ಮಾಡಿದ ಮೊತ್ತದ ವಿವರಗಳನ್ನು ಒದಗಿಸುವ ನಮೂನೆ 69 ರಲ್ಲಿ ಅರ್ಜಿ ಸಲ್ಲಿಸಲು 31 ಮಾರ್ಚ್ 2023 ಕೊನೆಯ ದಿನಾಂಕವಾಗಿದೆ. ಅದಕ್ಕೂ ಮುನ್ನ ಆದಾಯ ತೆರಿಗೆ ಪೋರ್ಟಲ್‌ನಲ್ಲಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ.
2. ಅರ್ಜಿಯನ್ನು ಸ್ವೀಕರಿಸಿದ ನಂತರ, ಮೌಲ್ಯಮಾಪನ ಮಾಡುವ ಅಧಿಕಾರಿಯು ಕಾಯಿದೆಯ 156 ನೇ ಪರಿಚ್ಛೇದದ ಅಡಿಯಲ್ಲಿ ಒಟ್ಟು ಆದಾಯವನ್ನು ಮತ್ತೆ ಪರಿಶೀಲನೆ ಮಾಡಬೇಕು. (ಕ್ಲೈಮ್‌ನಲ್ಲಿ ನಷ್ಟವಿದ್ದರೆ ಅದನ್ನು ಮುಂದಿನ ವರ್ಷದ ತೆರಿಗೆಯೊಂದಿಗೆ ಸರಿದೂಗಿಸಬಹುದು)
3. ಮೌಲ್ಯಮಾಪಕರು ಬೇಡಿಕೆಯ ಸೂಚನೆಯ ಪ್ರಕಾರ ಪಾವತಿಯನ್ನು ಮಾಡಬೇಕು. ಪಾವತಿಯ ವಿವರಗಳನ್ನು ನಮೂನೆ 70 ರಲ್ಲಿ ಪಾವತಿಸಿದ 30 ದಿನಗಳ ಒಳಗೆ ತಿಳಿಸಬೇಕು.

Income Tax Refund Status : ಆದಾಯ ತೆರಿಗೆ ರಿಫಂಡ್ ಆಗಿಲ್ಲವೇ, ಹೀಗೆ ಚೆಕ್ ಮಾಡಿIncome Tax Refund Status : ಆದಾಯ ತೆರಿಗೆ ರಿಫಂಡ್ ಆಗಿಲ್ಲವೇ, ಹೀಗೆ ಚೆಕ್ ಮಾಡಿ

English summary

What is Rule 132 of Income Tax, Importance of This, Explained in Kannada

The Central Board of Direct Taxes (CBDT) has amended the Income Tax Act to include Rule 132. What is Rule 132 of Income Tax, Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X