For Quick Alerts
ALLOW NOTIFICATIONS  
For Daily Alerts

ವೈನ್‌ಶಾಪ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ಮದ್ಯದ ಮೇಲೆ ಮಾರ್ಜಿನ್ ಎಷ್ಟು? ಕಂಪನಿಗೆ ಎಷ್ಟು ಲಾಭ?

|

ಕೊರೊನಾವೈರಸ್ ಹಾವಳಿಯಿಂದಾಗಿ ಭಾರತದಲ್ಲಿ ಬಹುತೇಕ ಎಲ್ಲಾ ಉದ್ಯಮಗಳು ನೆಲಕಚ್ಚಿವೆ. ವ್ಯಾಪಾರ-ವಹಿವಾಟು ಮೇಲೆ ಕೊರೊನಾ ಪ್ರಭಾವ ಬೀರಿದೆ. ದಿನನಿತ್ಯದ ಅವಶ್ಯಕತೆ ಸರಕುಗಳು ಸಿಗುತ್ತಿವೆ ಹೊರತು ಬೇರೆ ಎಲ್ಲಾ ವ್ಯಾಪಾರವೂ ಸ್ಥಗಿತಗೊಂಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹೆಚ್ಚು ಆದಾಯ ತಂದುಕೊಂಡುವ ಮದ್ಯವು ಸಹ ಮಾರಾಟವಾಗ್ತಿಲ್ಲ. ದೇಶದೆಲ್ಲೆಡೆ ಮದ್ಯದ ಅಂಗಡಿಗಳು ಬಂದ್‌ ಆಗಿದ್ದು, ಮದ್ಯಪ್ರಿಯರು ಯಾವಾಗ ವೈನ್‌ಶಾಪ್ ಓಪನ್ ಆಗುತ್ತೋ ಅನ್ನುವಷ್ಟರ ಮಟ್ಟಿಗೆ ಎದುರು ನೋಡುತ್ತಿದ್ದಾರೆ.

ಪ್ರತಿ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಭಾರೀ ಆದಾಯ ತಂದುಕೊಡುವ ಅಬಕಾರಿ ಸುಂಕವು ಪ್ರಮುಖ ಆದಾಯಗಳಲ್ಲಿ ಒಂದಾಗಿದೆ. ಕರ್ನಾಟಕ ಸರ್ಕಾರವೂ ಕೂಡ ಈ ಆದಾಯವನ್ನು ನೆಚ್ಚಿಕೊಂಡಿದೆ. ಹೀಗಿರುವಾಗ ವೈನ್ ಶಾಪ್, ಬಾರ್ ಅಂಡ್ ರೆಸ್ಟೋರೆಂಟ್‌ಗಳು, ಎಂಎಸ್ಐಎಲ್ ಬಂದ್ ಆಗಿರುವುದರಿಂದ ಭಾರೀ ನಷ್ಟವುಂಟಾಗಿದೆ.

ಹೀಗೆ ಭಾರೀ ಆದಾಯದ ಮೂಲವಾಗಿರುವ ವೈನ್ ಶಾಪ್‌, ಬಾರ್ ರೆಸ್ಟೋರೆಂಟ್‌ಗಳು, ಎಂಎಸ್‌ಐಎಲ್ ಚಾಲ್ತಿಯಲ್ಲಿರುವಾಗ ಎಷ್ಟು ಲಾಭ ಮಾಡುತ್ತವೆ? ಬಂದ್ ಆಗಿರೋದ್ರಿಂದ ಆಗ್ತಿರೋ ನಷ್ಟವೆಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಓದಿ.

ದಿನಕ್ಕೆ 1.5 ರಿಂದ 2 ಲಕ್ಷದವರೆಗೆ ಬಿಜಿನೆಸ್

ದಿನಕ್ಕೆ 1.5 ರಿಂದ 2 ಲಕ್ಷದವರೆಗೆ ಬಿಜಿನೆಸ್

ಹಳ್ಳಿಯಿಂದ ಹಿಡಿದು ಮಹಾನಗರಗಳವರೆಗೂ ಮದ್ಯಕ್ಕೆ ಬೇಡಿಕೆ ಯಾವಾಗಲೂ ಹೆಚ್ಚಾಗಿಯೇ ಇರುತ್ತದೆ. ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ವೈನ್‌ ಶಾಪ್‌ಗಳಿಗೆ, ಎಂಎಸ್‌ಐಎಲ್‌ಗಳಿಗೆ ದಿನಕ್ಕೆ ಸುಮಾರು ಒಂದೂವರೆ ಲಕ್ಷದಿಂದ ಎರಡು ಲಕ್ಷದವರೆಗೂ ವ್ಯಾಪಾರ ನಡೆಯುತ್ತದೆ. ನಗರದಲ್ಲಿ ಕೆಲವು ಫೇಮಸ್ ವೈನ್‌ಶಾಪ್‌ಗಳಲ್ಲಿ ಅಂದಾಜಿಗಿಂತ ಸ್ವಲ್ಪ ಹೆಚ್ಚಿನ ವ್ಯಾಪಾರ ನಡೆಯುತ್ತದೆ.

ಎಂಎಸ್‌ಐಎಲ್ MRP ದರ, ವೈನ್ ಶಾಪ್‌ಗಳಲ್ಲಿ 10 ಪರ್ಸೆಂಟ್ ಮಾರ್ಜಿನ್

ಎಂಎಸ್‌ಐಎಲ್ MRP ದರ, ವೈನ್ ಶಾಪ್‌ಗಳಲ್ಲಿ 10 ಪರ್ಸೆಂಟ್ ಮಾರ್ಜಿನ್

ನಿಮಗೆಲ್ಲಾ ಗೊತ್ತಿರುವ ಹಾಗೆ 11ಸಿ ಲೈಸೆನ್ಸ್ ಇರುವ ಎಂಎಸ್‌ಐಎಲ್‌ಗಳಲ್ಲಿ ಯಾವುದೇ ಮದ್ಯವನ್ನು MRP ಎಷ್ಟಿರುತ್ತದೆಯೋ, ಅದೇ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ವೈನ್‌ಶಾಪ್‌ಗಳಲ್ಲಿ ಈ ಎಂಆರ್‌ಪಿ ದರದ ಮೇಲೆ 10 ಪರ್ಸೆಂಟ್ ಮಾರ್ಜಿನ್ ಇಟ್ಟುಕೊಂಡು ಮಾರುವ ಅವಕಾಶವಿದೆ. ಹೀಗಾಗಿ ಸಿಎಲ್‌2 ಲೈಸೆನ್ಸ್ ಹೊಂದಿರುವ ವೈನ್‌ಶಾಪ್‌ಗಳಲ್ಲಿ ಎಂಎಸ್‌ಐಎಲ್‌ಗಿಂತ ಕೊಂಚ ಬೆಲೆ ಹೆಚ್ಚಿರುತ್ತೆ.

ಬಾರ್‌ಗಳಲ್ಲಿ 20 ರಿಂದ 30 ಪರ್ಸೆಂಟ್ ಮಾರ್ಜಿನ್
 

ಬಾರ್‌ಗಳಲ್ಲಿ 20 ರಿಂದ 30 ಪರ್ಸೆಂಟ್ ಮಾರ್ಜಿನ್

ಎಂಎಸ್‌ಐಎಲ್‌ಗಿಂತ ಕೊಂಚ ಹೆಚ್ಚಿನ ದರ ವೈನ್‌ ಶಾಪ್‌ಗಳಲ್ಲಿ ಎಂದು ತಿಳಿದಿರಿ. ಆದರೆ ಅದಕ್ಕಿಂತ ಹೆಚ್ಚಿನ ಲಾಭವು ಈ ಬಾರ್‌ಗಳಲ್ಲಿರುತ್ತದೆ. ಬಾರ್‌ಗಳಲ್ಲಿ ಮದ್ಯದ ಮೇಲೆ 20 ರಿಂದ 30 ಪರ್ಸೆಂಟ್‌ವರೆಗೆ ಮಾರ್ಜಿನ್ ಇಟ್ಟುಕೊಂಡು ಮಾರುವ ಅವಕಾಶವಿದೆ.

ನೀವು ಬಾರ್‌ಗಳಲ್ಲೇ ಹೆಚ್ಚಿನ ಮಾರ್ಜಿನ್ ಹೆಚ್ಚಿರುತ್ತೆ ಅಂದುಕೊಂಡರು ತಪ್ಪಾಗುತ್ತದೆ. ಏಕೆಂದರೆ ಬಾರ್‌ಗಳಿಗಿಂತ ಹೆಚ್ಚಿನ ಮಾರ್ಜಿನ್ ರೆಸ್ಟೋರೆಂಟ್ ಕಂ ಬಾರ್‌ಗಳಲ್ಲಿರುತ್ತದೆ. ಏಕೆಂದರೆ ಇಲ್ಲಿ ಆಹಾರದ ಜೊತೆಗೆ ಮದ್ಯವು ಸಿಗುವುದರಿಂದ 40 ಪರ್ಸೆಂಟ್ ಮಾರ್ಜಿನ್ ಇರುತ್ತದೆ. ಹೀಗಾಗಿ ರೆಸ್ಟೋರೆಂಟ್ ಕಂ ಬಾರ್‌ಗಳಲ್ಲಿ ಮದ್ಯದ ಬೆಲೆಯು ತಿನ್ನುವ ಆಹಾರಕ್ಕಿಂತಲೂ ದುಬಾರಿಯಾಗಿರುತ್ತದೆ.

 

ಕ್ಲಬ್‌ಗಳಲ್ಲಿ 50 ಪರ್ಸೆಂಟ್, ಫೈವ್‌ಸ್ಟಾರ್‌ ಹೋಟೆಲ್‌ಗಳಲ್ಲಿ 60 ಪರ್ಸೆಂಟ್!

ಕ್ಲಬ್‌ಗಳಲ್ಲಿ 50 ಪರ್ಸೆಂಟ್, ಫೈವ್‌ಸ್ಟಾರ್‌ ಹೋಟೆಲ್‌ಗಳಲ್ಲಿ 60 ಪರ್ಸೆಂಟ್!

ರೆಸ್ಟೋರೆಂಟ್ ಕಂ ಬಾರ್‌ಗಳಲ್ಲೇ ಮದ್ಯದ ಮೇಲಿನ ಮಾರ್ಜಿನ್ ಹೆಚ್ಚು ಅಂದುಕೊಂಡಿದ್ದರೆ ಅದೂ ಕೂಡ ತಪ್ಪು. ಏಕೆಂದರೆ ಅದಕ್ಕಿಂತ ಹೆಚ್ಚು ಕ್ಲಬ್ ಹಾಗೂ ಫೈವ್‌ಸ್ಟಾರ್ ಹೋಟೆಲ್‌ಗಳಲ್ಲಿರುತ್ತದೆ. ಯಾವುದೇ ಮದ್ಯದ ಮೇಲೆ ಕ್ಲಬ್‌ಗಳಲ್ಲಿ 50 ಪರ್ಸೆಂಟ್‌ಗೂ ಹೆಚ್ಚಿನ ಮಾರ್ಜಿನ್‌ನಲ್ಲಿ ಮಾರಬಹುದು.

ಇನ್ನು ಫೈವ್‌ಸ್ಟಾರ್‌ ಹೋಟೆಲ್‌ಗಳಲ್ಲಂತೂ ದರದ ಬಗ್ಗೆ ಮಾತನಾಡುವ ಹಾಗೇ ಇಲ್ಲ. ಏಕೆಂದರೆ ಇಲ್ಲಿ 60 ಪರ್ಸೆಂಟ್‌ಗೂ ಅಧಿಕ ಮಾರ್ಜಿನ್‌ನಲ್ಲಿ ಮಾರಾಟ ಮಾಡುವ ಅವಕಾಶವಿದೆ.

ಮದ್ಯ ಮಾರಾಟದಿಂದ ಕಂಪನಿಗೆ ಎಷ್ಟು ಲಾಭ?

ಮದ್ಯ ಮಾರಾಟದಿಂದ ಕಂಪನಿಗೆ ಎಷ್ಟು ಲಾಭ?

ಮದ್ಯದ ಮೇಲೆ MRP ಹಾಗೂ ಮಾರ್ಜಿನ್ ಎಷ್ಟಿದೆ ಎಂಬುದನ್ನು ತಿಳಿದುಕೊಂಡಿರಿ. ಹಾಗಿದ್ದರೆ ಮದ್ಯ ತಯಾರಿಕಾ ಕಂಪನಿಗಳು ಎಷ್ಟು ದರ ವಿಧಿಸುತ್ತವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಉದಾಹರಣೆಗೆ ಕಿಂಗ್‌ಫಿಶರ್ ಸ್ಟ್ರಾಂಗ್ ಬಿಯರ್ ದರವು MRP 145 ರುಪಾಯಿ ಇದೆ. ಆದರೆ ಕಂಪನಿಯು ಇದನ್ನು 30-35 ರುಪಾಯಿಗೆ ಮಾರಾಟ ಮಾಡಿರುತ್ತದೆ. ಉಳಿದ ಎಂಆರ್‌ಪಿ ಹಣವು ಅಬಕಾರಿ ಸುಂಕ, ಜಿಎಸ್‌ಟಿ ದರ ಸೇರಿ ಸರ್ಕಾರದ ಬೊಕ್ಕಸಕ್ಕೆ ಸೇರುತ್ತದೆ. ಈ ಎಂಆರ್‌ಪಿಗಳ ಮೇಲೆ ಮಾರ್ಜಿನ್ ಮೇಲೆ ವೈನ್ ಶಾಪ್ ಮತ್ತು ಬಾರ್ ಅಂಡ್‌ ರೆಸ್ಟೋರೆಂಟ್‌ಗಳು ಮಾರಾಟ ಮಾಡುತ್ತವೆ.

ಮದ್ಯ ತಯಾರಿಕಾ ಕಂಪನಿಗಳು ಮಾರಾಟ ಮಾಡುವ ಪ್ರಾಥಮಿಕ ದರದ ಬಗ್ಗೆ ಮತ್ತೊಂದು ಉದಾಹರಣೆಯೆಂದರೆ ಸಿಎಂ, ಒರಿಜಿನಲ್ ಚಾಯ್ಸ್ ಎಂಆರ್‌ಪಿ ದರ 60 ರುಪಾಯಿ 58 ಪೈಸೆಯಷ್ಟಿದೆ. ಒಂದು ಬಾಕ್ಸ್‌ನಲ್ಲಿ 48 ಇರಲಿದ್ದು, ಇದನ್ನು ಕಂಪನಿಯು 450 ರಿಂದ 499 ರುಪಾಯಿವರೆಗೆ ಮಾರಾಟ ಮಾಡುತ್ತದೆ. ಉಳಿದೆಲ್ಲಾ ಹಣವು ತೆರಿಗೆ ರೂಪದಲ್ಲಿ ಸರ್ಕಾರದ ಬೊಕ್ಕಸ ಸೇರುತ್ತದೆ.

 

ಲಾಕ್‌ಡೌನ್‌ ನೆಪದಲ್ಲಿ 5 ರಿಂದ 10 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ

ಲಾಕ್‌ಡೌನ್‌ ನೆಪದಲ್ಲಿ 5 ರಿಂದ 10 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ

ಕೊರೊನಾದಿಂದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಇರುವುದರಿಂದ ಮದ್ಯ ಮಾರಾಟ ಮಾಡುವಂತಿಲ್ಲ. ಹೀಗಿರುವಾಗಲೂ ಕಳ್ಳ ಮಾರ್ಗಗಳ ಮೂಲಕ ಮದ್ಯ ಮಾರಾಟ ಮಾಡಲಾಗುತ್ತಿದೆ. ಮದ್ಯದ ಮೇಲಿನ ದರವು ಯಾವುದೇ ಮಾರ್ಜಿನ್ ರೇಟ್ ಎಂದು ಇಟ್ಟುಕೊಳ್ಳದೆ ಐದರಿಂದ, ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಉದಾಹರಣೆಗೆ 2020 ರುಪಾಯಿ ಎಂಆರ್‌ಪಿ ಹೊಂದಿರುವ ಮದ್ಯವನ್ನು 7,500 ರುಪಾಯಿಯಿಂದ 15,000 ರುಪಾಯಿವರೆಗೂ ಮಾರಾಟ ಮಾಡಲಾಗುತ್ತಿರುವ ಆರೋಪವೂ ಕೇಳಿಬಂದಿದೆ.

ಈ ರೀತಿಯಾಗಿ ಕಳ್ಳ ಮಾರ್ಗಗಳ ಮೂಲಕ ದುಪ್ಪಟ್ಟು ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದರೂ, ಸರ್ಕಾರದ ಬೊಕ್ಕಸಕ್ಕೆ ಮಾತ್ರ ಯಾವುದೇ ಹೆಚ್ಚಿನ ಲಾಭವಿಲ್ಲದೆ ನಷ್ಟವೇ ಹೆಚ್ಚಾಗಿದೆ.

 

English summary

What Is The Profit Margin Rate Of Wine Shops And Bars

In this article explained the rate of profit margin on Wine shops, bars, club and resturants come bar. what is the Liquor company Profit
Story first published: Tuesday, April 28, 2020, 14:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X