For Quick Alerts
ALLOW NOTIFICATIONS  
For Daily Alerts

Wedding Insurance: ಮದುವೆ ಇನ್ಷೂರೆನ್ಸ್ ಬಗ್ಗೆ ನಿಮಗೆಷ್ಟು ಗೊತ್ತು?

|

ಭಾರತದಲ್ಲಿ ಮದುವೆ ಅಂದರೆ ದುಬಾರಿ ಬಾಬ್ತು. ದುಡಿಮೆಯ ಅಥವಾ ಸಂಪತ್ತಿನ ದೊಡ್ಡ ಪಾಲು ಮದುವೆಗೆ ಖರ್ಚಾಗುತ್ತದೆ. ನೂರಾರು- ಸಾವಿರಾರು ಸಂಖ್ಯೆಯ ಅಭ್ಯಾಗತರು, ಅತಿಥಿಗಳು. ಅವರಿಗೆ ಔತಣ ಕೂಟ ಅವುಗಳ ಖರ್ಚಿನದೇ ಒಂದು ತೂಕವಾದರೆ, ಮದುವೆಗೆ ಮುಂಚಿತವಾಗಿ ಚಿನ್ನದ ಆಭರಣಗಳ ಖರೀದಿಯ ವೆಚ್ಚ ಮತ್ತೂ ಹೆಚ್ಚು.

ಈಗಂತೂ ಡೆಸ್ಟಿನೇಷನ್ ವೆಡ್ಡಿಂಗ್ ಗಳ ಕಾಲ (ಮುಕೇಶ್ ಅಂಬಾನಿಯ ಮಗಳ ಮದುವೆ, ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ, ರಣವೀರ್ ಸಿಂಗ್- ದೀಪಿಕಾ ಪಡುಕೋಣೆ ಮದುವೆಯೆಲ್ಲ ಡೆಸ್ಟಿನೇಷನ್ ವೆಡ್ಡಿಂಗ್ ಗಳೇ). ಇವುಗಳ ಖರ್ಚಂತೂ ಇನ್ನೂ ಭಾರೀ. ಆದ್ದರಿಂದ ಭಾರತದ ಜನರಲ್ ಇನ್ಷೂರೆನ್ಸ್ ಕಂಪೆನಿಗಳು ಮದುವೆಯ ಇನ್ಷೂರೆನ್ಸ್ ಮಾಡುತ್ತಿವೆ.

ನ್ಯಾಷನಲ್ ಇನ್ಷೂರೆನ್ಸ್, ಐಸಿಐಸಿಐ ಲೊಂಬಾರ್ಡ್, ಫ್ಯೂಚರ್ ಜನರಲಿ, ಓರಿಯೆಂಟಲ್ ಇನ್ಷೂರೆನ್ಸ್, ಬಜಾಜ್ ಅಲೈಯನ್ಜ್ ಕಂಪೆನಿಗಳು ಮದುವೆಯ ಇನ್ಷೂರೆನ್ಸ್ ಗಳನ್ನು ಮಾಡುತ್ತವೆ. ಈ ಲೇಖನದಲ್ಲಿ ಕೆಲವು ಅಂಶಗಳನ್ನು ಪ್ರಸ್ತಾಪ ಮಾಡುತ್ತಿದ್ದೇವೆ. ಇಂಥ ಸನ್ನಿವೇಶಗಳಲ್ಲಿ ಇನ್ಷೂರೆನ್ಸ್ ಅಗತ್ಯ ಕಂಡುಬರುತ್ತದೆ. ನಿಮಗೋ ಅಥವಾ ನಿಮ್ಮ ಸಂಬಂಧಿಕರ ಮದುವೆಗೋ ಇನ್ಷೂರೆನ್ಸ್ ಅಗತ್ಯ ಇದೆ ಎಂದು ಕಂಡುಬಂದಲ್ಲಿ ಇದರ ಪ್ರಯೋಜನ ಪಡೆಯಬಹುದು.

ಮದುವೆ ಇನ್ಷೂರೆನ್ಸ್ ಪಾಲಿಸಿ ಎಂದರೇನು?

ಮದುವೆ ಇನ್ಷೂರೆನ್ಸ್ ಪಾಲಿಸಿ ಎಂದರೇನು?

ಮದುವೆ ಸಮಾರಂಭಕ್ಕೆ ಸಂಬಂಧಿಸಿದಂತೆ ಇರುವ ನಿರ್ದಿಷ್ಟ ಅಪಾಯಗಳಿಗೆ ಗ್ರಾಹಕರ ಅಗತ್ಯಕ್ಕೆ ತಕ್ಕ ಇನ್ಷೂರೆನ್ಸ್ ಮಾಡಿಸಬಹುದು. ನೈಸರ್ಗಿಕ ವಿಕೋಪಗಳಿಂದ ಮದುವೆಗೆ ತೊಂದರೆ ಆಗಬಹುದು. ಅಗ್ನಿ ಅವಘಡ, ಕಳುವು ಅಥವಾ ಕುಟುಂಬ ಸದಸ್ಯರಿಗೆ ಅಪಘಾತ ಆಗಬಹುದು. ಈ ಮೇಲ್ಕಂಡ ಯಾವುದೋ ಒಂದು ಕಾರಣಕ್ಕೆ ಮದುವೆ ಮುಂದೂಡಲೇ ಬೇಕಾದ ಸನ್ನಿವೇಶ ಸೃಷ್ಟಿಯಾಗಬಹುದು. ಇಂಥ ಸಂದರ್ಭದಲ್ಲಿ ಮದುವೆ ಛತ್ರ್- ಸ್ಥಳದ ಮಾಲೀಕರು, ಅಡುಗೆಯವರು ರೀ ಫಂಡ್ ಮಾಡುವುದಿಲ್ಲ. ಅದರಲ್ಲೂ ಮದುವೆಗೆ ದೊಡ್ಡ ಸಂಖ್ಯೆಯಲ್ಲಿ ಅಭ್ಯಾಗತರಿರುತ್ತಾರೆ. ಬಜೆಟ್ ದೊಡ್ಡದು. ಮದುವೆಯ ಮುಂದೂಡಿಕೆ ಅಥವಾ ರದ್ದು ಆದರೆ ಅಥವಾ ಅವಘಡ ಸಂಭವಿಸಿದಲ್ಲಿ ಆರ್ಥಿಕ ಸಮಸ್ಯೆ ಎದುರಾಗಿ, ಯೋಜನೆಗಳಲ್ಲಿ ಏರುಪೇರಾಗುತ್ತದೆ.

ಇನ್ಷೂರೆನ್ಸ್ ನಲ್ಲಿ ಏನೇನು ಒಳಗೊಳ್ಳುತ್ತದೆ?

ಇನ್ಷೂರೆನ್ಸ್ ನಲ್ಲಿ ಏನೇನು ಒಳಗೊಳ್ಳುತ್ತದೆ?

ನೈಸರ್ಗಿಕ ವಿಕೋಪದಿಂದ ಆದ ಹಾನಿ, ಅಗ್ನಿ ಅವಘಡ, ಭಯೋತ್ಪಾದಕರ ದಾಳಿ, ಹಿಂಸಾಚಾರ, ಕರ್ಫ್ಯೂ, ಕಳುವು ಹೀಗೆ ಗ್ರಾಹಕರು ಯಾವುದಕ್ಕೆ ಇನ್ಷೂರೆನ್ಸ್ ಮಾಡಿಸಿಕೊಳ್ಳಬೇಕು ಎಂಬುದನ್ನು ನಿರ್ಧಾರ ಮಾಡಬೇಕು. ಎಲ್ಲಿ ಮದುವೆ ನಡೆಯಲಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಬೇಕು. ಇದರ ಜತೆಗೆ ಕುಟುಂಬ ಸದಸ್ಯರಿಗೆ ಅಪಘಾತ ಅಥವಾ ಸಾವು ಸಂಭವಿಸಿದಲ್ಲಿ ಆಗುವ ಹಾನಿಯೂ ಒಳಗೊಳ್ಳಬಹುದು. ಇನ್ನು ಮದುವೆಗೆ ಬಂದವರ ಜೀವಕ್ಕೆ ಅಥವಾ ಆಸ್ತಿಗೆ ಹಾನಿಯಾದಲ್ಲಿ, ಚಿನ್ನಾಭರಣಗಳ ಕಳುವು ಅಥವಾ ಮನೆಯಲ್ಲಿ ನಗದು ಕಳುವು ಕೂಡ ಈ ಇನ್ಷೂರೆನ್ಸ್ ನಲ್ಲಿ ಕವರ್ ಮಾಡಿಸಬಹುದು.

ಮದುವೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಶುರುವಾಗುವ ಇಪ್ಪತ್ನಾಲ್ಕು ಗಂಟೆ ಮುಂಚಿತವಾಗಿ ಇನ್ಷೂರೆನ್ಸ್ ಕವರ್ ಆರಂಭವಾಗುತ್ತದೆ. ಅಥವಾ ಮದುವೆಗೆ ಏಳು ದಿನದ ಮುಂಚಿತವಾಗಿ (ಮೆಹೆಂದಿ, ಸಂಗೀತ್ ಹೀಗೆ) ಶುರುವಾಗಿ ವಿವಾಹದ ಮರು ದಿನದ ತನಕ ಇನ್ಷೂರೆನ್ಸ್ ಇರುತ್ತದೆ. ವರನೋ ಅಥವಾ ವಧುವೋ ಮದುವೆಯನ್ನು ರದ್ದು ಪಡಿಸಿದಲ್ಲಿ ಆಗ ಇನ್ಷೂರೆನ್ಸ್ ಕ್ಲೇಮ್ ಮಾಡಲು ಸಾಧ್ಯವಿಲ್ಲ. ಇನ್ನು ಇನ್ಷೂರೆನ್ಸ್ ಮಾಡಿಸುವವರಿಗೆ ಮುಂಚೆಯೇ ನಷ್ಟದ ಬಗ್ಗೆ ಅಂದಾಜಿದ್ದು, ಇನ್ಷೂರೆನ್ಸ್ ಕಂಪೆನಿಯಿಂದ ಮಾಹಿತಿ ಮುಚ್ಚಿಟ್ಟಿದ್ದಲ್ಲಿ ಕೂಡ ಕ್ಲೇಮ್ ತಿರಸ್ಕೃತವಾಗಬಹುದು.

 

ಇನ್ಷೂರೆನ್ಸ್ ಪ್ರೀಮಿಯಂ ಎಷ್ಟಾಗಬಹುದು?

ಇನ್ಷೂರೆನ್ಸ್ ಪ್ರೀಮಿಯಂ ಎಷ್ಟಾಗಬಹುದು?

ಒಂದರಿಂದ ಮತ್ತೊಂದು ಬಗೆಯದಕ್ಕೆ ಇನ್ಷೂರೆನ್ಸ್ ಪ್ರೀಮಿಯಂ ಬದಲಾಗುತ್ತದೆ. ವರ- ವಧುವಿನ ಕಡೆಯವರು ಯಾರು? ಯಾರು ಭಾಗವಹಿಸುತ್ತಿದ್ದಾರೆ? ಸ್ಥಳ (ಹೊರಾಂಗಣವೋ ಅಥವಾ ಒಳಾಂಗಣವೋ?), ಅಲಂಕಾರದ ವೆಚ್ಚ, ಕಾರ್ಯಕ್ರಮದ ಆಯೋಜನೆಗೆ ತಗುಲಿದ ವೆಚ್ಚ, ಅಡುಗೆಗೆ ಆದ ವೆಚ್ಚ ಇತ್ಯಾದಿ ಮಾಹಿತಿ ನೀಡಬೇಕಾಗುತ್ತದೆ. ಎಷ್ಟು ಮೊತ್ತಕ್ಕೆ ಇನ್ಷೂರೆನ್ಸ್ ಮಾಡಿಸಿಕೊಂಡಿದ್ದಾರೆ ಮತ್ತು ಯಾವ ಮಟ್ಟದ ಅಪಾಯ ಎಂಬುದು ಕೂಡ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಮದುವೆ ಇನ್ಷೂರೆನ್ಸ್ ಪ್ರೀಮಿಯಂನ ಮೊತ್ತವು ಒಟ್ಟು ಇನ್ಷೂರ್ಡ್ ಮೊತ್ತದ 0.5 ಪರ್ಸೆಂಟ್ ನಿಂದ 2 ಪರ್ಸೆಂಟ್ ನಷ್ಟಿರುತ್ತದೆ.

ಇನ್ಷೂರೆನ್ಸ್ ಖರೀದಿ ಮಾಡುವುದು ಹೇಗೆ?

ಇನ್ಷೂರೆನ್ಸ್ ಖರೀದಿ ಮಾಡುವುದು ಹೇಗೆ?

ಇವೆಂಟ್ ಪ್ಲ್ಯಾನರ್ ಗಳಿಗೆ ಮದುವೆಯನ್ನು ಒಪ್ಪಿಸಿದರೆ ಬಹುತೇಕರು ಕಾರ್ಯಕ್ರಮದ ಖರ್ಚಿನಲ್ಲೇ ಇನ್ಷೂರೆನ್ಸ್ ಒಳಗೊಂಡಿರುವಂತೆ ನೋಡಿಕೊಳ್ಳುತ್ತಾರೆ. ಅಥವಾ ಅವರಿಗೆ ಸೂಚನೆ ನೀಡಬಹುದು. ಇಲ್ಲದಿದ್ದರೆ ಜನರಲ್ ಇನ್ಷೂರೆನ್ಸ್ ಕಂಪೆನಿಗಳಿಂದ ನೇರವಾಗಿ ಖರೀದಿ ಮಾಡಬಹುದು. ಭಾರತದಲ್ಲಿ ನ್ಯಾಷನಲ್ ಇನ್ಷೂರೆನ್ಸ್, ಐಸಿಐಸಿಐ ಲೊಂಬಾರ್ಡ್, ಫ್ಯೂಚರ್ ಜನರಲಿ, ಓರಿಯೆಂಟಲ್ ಇನ್ಷೂರೆನ್ಸ್, ಬಜಾಜ್ ಅಲೈಯನ್ಜ್ ಕಂಪೆನಿಗಳು ಮದುವೆಯ ಇನ್ಷೂರೆನ್ಸ್ ಗಳನ್ನು ಮಾಡುತ್ತವೆ.

English summary

What Is Wedding Insurance? How It works?

Wedding Insurance Explainer: What is wedding insurance? How it works? Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X