For Quick Alerts
ALLOW NOTIFICATIONS  
For Daily Alerts

ಮಸ್ಕ್ ಅನ್ನು ಹಿಂದಿಕ್ಕಿ ವಿಶ್ವದ ಶ್ರೀಮಂತ ವ್ಯಕ್ತಿಯಾದ ಬರ್ನಾರ್ಡ್ ಅರ್ನಾಲ್ಟ್ ಯಾರು?

|

ಟೆಸ್ಲಾ ಮುಖ್ಯಸ್ಥ, ಟ್ವಿಟ್ಟರ್ ಮಾಲಿಕ ಎಲಾನ್ ಮಸ್ಕ್ ಪೋರ್ಬ್ಸ್‌ನ ವಿಶ್ವದ ಶ್ರೀಮಂತ ವ್ಯಕ್ತಿಗಳ ರಿಯಲ್‌ ಟೈಮ್‌ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಿಂದ ಕೆಳಕ್ಕೆ ಇಳಿದಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಸೋಮವಾರ ಎಲಾನ್ ಮಸ್ಕ್ ಟೆಸ್ಲಾ ಷೇರುಗಳು ಭಾರೀ ಕುಸಿತ ಕಂಡಿದೆ. ಇದಾದ ಬೆನ್ನಲ್ಲೇ ಎಲಾನ್ ಮಸ್ಕ್ ವಿಶ್ವದ ಮೊದಲ ಶ್ರೀಮಂತ ವ್ಯಕ್ತಿ ಎಂಬ ತನ್ನ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಫೋರ್ಬ್ಸ್‌ ಪ್ರಕಾರ ಬರ್ನಾರ್ಡ್ ಅರ್ನಾಲ್ಟ್ ನಿವ್ವಳ ಆದಾಯವು 186.2 ಬಿಲಿಯನ್ ಡಾಲರ್ ಆಗಿದೆ. ಇನ್ನು ಭಾರತದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಗೌತಮ್ ಅದಾನಿ 134 ಬಿಲಿಯನ್ ಡಾಲರ್ ಆದಾಯವನ್ನು ಹೊಂದಿದ್ದು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.

ಎಲಾನ್ ಮಸ್ಕ್ ಅನ್ನು ಹಿಂದಿಕ್ಕಿ ವಿಶ್ವದ ಮೊದಲ ಶ್ರೀಮಂತ ವ್ಯಕ್ತಿಯಾದ ಬರ್ನಾರ್ಡ್ ಅರ್ನಾಲ್ಟ್ಎಲಾನ್ ಮಸ್ಕ್ ಅನ್ನು ಹಿಂದಿಕ್ಕಿ ವಿಶ್ವದ ಮೊದಲ ಶ್ರೀಮಂತ ವ್ಯಕ್ತಿಯಾದ ಬರ್ನಾರ್ಡ್ ಅರ್ನಾಲ್ಟ್

ಎಲ್‌ವಿಎಂಎಚ್‌ನ ಸಿಇಒ ಆಗಿರುವ ಬರ್ನಾರ್ಡ್ ಅರ್ನಾಲ್ಟ್ ಯಾರು? ಬರ್ನಾರ್ಡ್ ಅರ್ನಾಲ್ಟ್ ಬಗ್ಗೆ ತಿಳಿಯಬೇಕಾದ ಹತ್ತು ಪ್ರಮುಖ ಮಾಹಿತಿ ಇಲ್ಲಿದೆ ಮುಂದೆ ಓದಿ....

 ಬರ್ನಾರ್ಡ್ ಅರ್ನಾಲ್ಟ್ ಆದಾಯ?

ಬರ್ನಾರ್ಡ್ ಅರ್ನಾಲ್ಟ್ ಆದಾಯ?

1. ಬರ್ನಾರ್ಡ್ ಅರ್ನಾಲ್ಟ್ ಲೂಯಿ ವಿಟಾನ್, ಗಿವೆಂಚಿ ಮತ್ತು ಕೆಂಜೊ ಸೇರಿದಂತೆ ಹಲವಾರು ಬ್ರಾಂಡ್‌ಗಳ ಮೂಲ ಕಂಪನಿ ಆಗಿರುವ ಎಲ್‌ವಿಎಂಎಚ್‌ನ ಸಿಇಒ ಆಗಿದ್ದಾರೆ. ಲೂಯಿ ವಿಟಾನ್ ಐಷಾರಾಮಿ ವಸ್ತುಗಳ ಕಂಪನಿಯಾಗಿದೆ.

2. ಪೋರ್ಬ್ಸ್ ಪ್ರಕಾರ ಡಿಸೆಂಬರ್ 2022ರ ಲೆಕ್ಕಾಚಾರದಂತೆ ಬರ್ನಾರ್ಡ್ ಅರ್ನಾಲ್ಟ್ ಹಾಗೂ ಅವರ ಕುಟುಂಬದ ನಿವ್ವಳ ಆದಾಯವು 188.6 ಬಿಲಿಯನ್ ಯುಎಸ್ ಡಾಲರ್ ಆಗಿದೆ.

ಟೆಸ್ಲಾ ಷೇರು ಪ್ರಪಾತಕ್ಕೆ; ವಿಶ್ವದ ಅತಿದೊಡ್ಡ ಶ್ರೀಮಂತನೆಂಬ ಪಟ್ಟ ಕಳೆದುಕೊಳ್ಳುತ್ತಾರಾ ಮಸ್ಕ್?ಟೆಸ್ಲಾ ಷೇರು ಪ್ರಪಾತಕ್ಕೆ; ವಿಶ್ವದ ಅತಿದೊಡ್ಡ ಶ್ರೀಮಂತನೆಂಬ ಪಟ್ಟ ಕಳೆದುಕೊಳ್ಳುತ್ತಾರಾ ಮಸ್ಕ್?

 ಬರ್ನಾರ್ಡ್ ಅರ್ನಾಲ್ಟ್ ವಿವಾಹ, ಮಕ್ಕಳು

ಬರ್ನಾರ್ಡ್ ಅರ್ನಾಲ್ಟ್ ವಿವಾಹ, ಮಕ್ಕಳು

3. ಬರ್ನಾರ್ಡ್ ಅರ್ನಾಲ್ಟ್ ಎರಡು ವಿವಾಹವಾಗಿದ್ದು, ಒಟ್ಟು ಐವರು ಮಕ್ಕಳಿದ್ದಾರೆ. ಎಲ್ಲ ಮಕ್ಕಳು ಎಲ್‌ವಿಎಂಎಚ್‌ಯ ಅಂಗ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್‌ನ ಎರಡನೇ ಪುತ್ರನಾದ ಆಂಟನಿ ಅರ್ನಾಲ್ಟ್ ಕ್ರಿಶ್ಚಿಯನ್ ಡಿಯಾರ್ ಎಸ್‌ಇ ಎಂಬ ಸಂಸ್ಥೆಯನ್ನು ಆರಂಭ ಮಾಡಿದೆ.

4. ಬರ್ನಾರ್ಡ್ ಅರ್ನಾಲ್ಟ್ 1949ರಲ್ಲಿ ಫ್ರಾನ್ಸ್‌ನ ರೌಬೆಕ್ಸ್‌ನಲ್ಲಿ ಜನಿಸಿದ್ದಾರೆ. ಇಕೋಲ್ ಪಾಲಿಟೆಕ್ನಿಕ್‌ನ ಎಲೈಟ್ ಇಂಜಿನಿಯರಿಂಗ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ತನ್ನ ಕುಟುಂಬದ ಉದ್ಯಮದಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಬಳಿಕ 1981ರಲ್ಲಿ ಯುಎಸ್‌ಗೆ ತಲುಪಿದ್ದಾರೆ.

 

 ಬರ್ನಾರ್ಡ್ ಅರ್ನಾಲ್ಟ್ ಉದ್ಯಮಕ್ಕೆ ಎಂಟ್ರಿ
 

ಬರ್ನಾರ್ಡ್ ಅರ್ನಾಲ್ಟ್ ಉದ್ಯಮಕ್ಕೆ ಎಂಟ್ರಿ

5. 1984ರಲ್ಲಿ ಬರ್ನಾರ್ಡ್ ಅರ್ನಾಲ್ಟ್ ಫ್ರಾನ್ಸ್‌ಗೆ ವಾಪಾಸ್ ಬಂದಿದ್ದು, ಸಾಲದಲ್ಲಿ ಇರುವ ಟೆಕ್ಸ್‌ಟೈಲ್‌ ಗ್ರೂಪ್‌ ಬೌಸ್ಸಕ್ ಸೇಂಟ್ ಫ್ರೆರೆಸ್ ಅನ್ನು ತನ್ನ ಮಾಲೀಕತ್ವಕ್ಕೆ ಪಡೆದುಕೊಂಡರು. ಬಳಿಕ ಬೇರೆ ಉದ್ಯಮಗಳ ಷೇರನ್ನು ಖರೀದಿ ಮಾಡಿದರು. ಬಳಿಕ ಲಾಭ ಗಳಿಸಿದಾಗ ಎಲ್‌ವಿಎಂಎಚ್‌ನ ಎರಡು ಪ್ರಮುಖ ಅಂಗಸಂಸ್ಥೆಗಳಾದ ಲೂಯಿಸ್ ವಿಟಾನ್, ಮಾಯ್ಟ್ ಹೆನ್ನೆಸ್ಸಿಯನ್ನು ಖರೀದಿ ಮಾಡಿದರು.

6. ದಶಕಗಳಲ್ಲಿ ಬರ್ನಾರ್ಡ್ ಅರ್ನಾಲ್ಟ್ ಎಲ್‌ವಿಎಂಎಚ್‌ ಐಷಾರಾಮಿ ವಸ್ತುಗಳನ್ನು ಮಾರಾಟ ಮಾಡುವ ಕಂಪನಿಯನ್ನಾಗಿ ಪರಿವರ್ತಿಸಿದರು. ಐಷಾರಾಮಿ ಚಾಂಪೇನ್, ವೈನ್, ಸ್ಪಿರೀಟ್, ಫ್ಯಾಷನ್, ಚರ್ಮದ ವಸ್ತುಗಳು, ವಾಚ್‌ಗಳು, ಜ್ಯುವೆಲ್ಲರಿ, ಹೊಟೇಲ್, ಪರ್ಫ್ಯೂಮ್, ಮೇಕಪ್ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆಯನ್ನಾಗಿಸಿದರು. ವಿಶ್ವದಾದ್ಯಂತ 5,500 ಸ್ಟೋರ್‌ಗಳನ್ನು ಸಂಸ್ಥೆಯು ಹೊಂದಿದೆ.

 

 ಲೂಯಿಸ್ ವಿಟಾನ್ ಫೌಂಡೇಷನ್ ಬಗ್ಗೆ ತಿಳಿಯಿರಿ

ಲೂಯಿಸ್ ವಿಟಾನ್ ಫೌಂಡೇಷನ್ ಬಗ್ಗೆ ತಿಳಿಯಿರಿ

7. ಬರ್ನಾರ್ಡ್ ಅರ್ನಾಲ್ಟ್ ಕಲಾತ್ಮಕ ವಸ್ತುಗಳನ್ನು ಸಂಗ್ರಹ ಮಾಡುವ ಹವ್ಯಾಸವನ್ನು ಹೊಂದಿದ್ದು, ಇದರಿಂದಾಗಿ 2014ರಲ್ಲಿ ಪ್ಯಾರಿಸ್‌ನಲ್ಲಿ ಲೂಯಿಸ್ ವಿಟಾನ್ ಫೌಂಡೇಷನ್ ಅನ್ನು ಆರಂಭ ಮಾಡಿದ್ದಾರೆ. ಇದು ಖಾಸಗಿ ಮ್ಯೂಸಿಯಂ ಆಗಿದ್ದು ಫ್ರಾಂಕ್ ಗೆಹ್ರಿ ಈ ಕಟ್ಟಡದ ವಿನ್ಯಾಸ ಮಾಡಿದ್ದಾರೆ. ಇನ್ನು ಎಲ್‌ವಿಎಂಎಚ್‌ ಕಾರ್ಪೋರೇಟ್ ಕಲೆಕ್ಷನ್ ಕೂಡಾ ಇದರಲ್ಲಿದೆ.
8. ಪ್ರಸ್ತುತ 73 ವಯಸ್ಸಾಗಿರುವ ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಹಾಗೆಯೇ ಸಾರ್ವಜನಿಕವಾಗಿ ತೀರಾ ವಿರಳವಾಗಿ ಕಾಣುತ್ತಾರೆ. ಹಾಗೆಯೇ ಸಾಮಾಜಿಕ ಮಾಧ್ಯಮದಲ್ಲಿಯೂ ಸಕ್ರಿಯವಾಗಿಲ್ಲ.

 ವಯಸ್ಸಾದರೂ ಇನ್ನೂ ಎಲ್‌ವಿಎಂಎಚ್ ಸಿಇಒ

ವಯಸ್ಸಾದರೂ ಇನ್ನೂ ಎಲ್‌ವಿಎಂಎಚ್ ಸಿಇಒ

9. ಈ ವರ್ಷದ ಆರಂಭದಲ್ಲಿ ಎಲ್‌ವಿಎಂಎಚ್ ತನ್ನ ಸಿಇಒ ಸ್ಥಾನಕ್ಕೆ ಇರುವ ವಯೋಮಿತಿಯನ್ನು ತೆಗೆದುಹಾಕಿದೆ. ಇದರಿಂದಾಗಿ 80 ವರ್ಷ ಸಮೀಪಕ್ಕೆ ತಲುಪಿರುವ ಬರ್ನಾರ್ಡ್ ಅರ್ನಾಲ್ಟ್ ಇನ್ನೂ ಕೂಡಾ ಈ ಸಂಸ್ಥೆಯ ಸಿಇಒ ಆಗಿ ಉಳಿದಿದ್ದಾರೆ. ತಮಗೆ 80 ವರ್ಷವಾಗುವರೆಗೂ ಬರ್ನಾರ್ಡ್ ಅರ್ನಾಲ್ಟ್ ಮುಖ್ಯಸ್ಥರಾಗಿರಲಿದ್ದಾರೆ.
10. ಬ್ಲ್ಯೂಬರ್ಗ್‌ನ ವೆಲ್ತ್‌ ಇಂಡಕ್ಸ್ ಪ್ರಕಾರ ಬರ್ನಾರ್ಡ್ ಅರ್ನಾಲ್ಟ್‌ ಶೇಕಡ 97.5ರಷ್ಟು ಕ್ರಿಶ್ಚಿಯನ್ ಡಿಯಾರ್‌ ಸಂಸ್ಥೆಯ ಷೇರನ್ನು ಹೊಂದಿದ್ದಾರೆ. ಹಾಗೆಯೇ ಎಲ್‌ವಿಎಂಎಚ್‌ನಲ್ಲಿ ಶೇಕಡ 41ರಷ್ಟು ಷೇರನ್ನು ಹೊಂದಿದ್ದಾರೆ. ಇನ್ನು ಅವರ ಕುಟುಂಬವು ಸುಮಾರು ಶೇಕಡ 6ರಷ್ಟು ಎಲ್‌ವಿಎಂಎಚ್‌ ಷೇರನ್ನು ಹೊಂದಿದೆ.

English summary

Who is Bernard Arnault?, The Man who becomes World's Richest Person

Forbes Rich List: Billionaire entrepreneur Elon Musk was taken off the top position on Forbes’ Real-Time Billionaires List. Who is Bernard Arnault? The Man who becomes World's Richest Person. details in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X