For Quick Alerts
ALLOW NOTIFICATIONS  
For Daily Alerts

ಆಧಾರ್ ಕಾರ್ಡ್ ಇಲ್ಲದೆಯೇ ಸಬ್ಸಿಡಿಗಳನ್ನು ಪಡೆಯುವುದು ಹೇಗೆ?

|

ಎಲ್ಲಾ ದಾಖಲೆಗಳ ಪೈಕಿ ಈಗ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ನಮ್ಮ ರೇಷನ್ ಕಾರ್ಡ್, ಪ್ಯಾನ್ ಕಾರ್ಡ್, ಹೀಗೆ ಮೊದಲಾದ ಎಲ್ಲಾ ಪ್ರಮುಖ ದಾಖಲೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಲು ಆಯಾ ಇಲಾಖೆಗಳು ಸೂಚನೆ ನೀಡುತ್ತಾ ಬಂದಿದೆ. ಆದರೆ ಹಲವಾರು ಮಂದಿಗೆ ಇನ್ನೂ ಕೂಡಾ ಆಧಾರ್ ಕಾರ್ಡ್ ಲಭ್ಯವಾಗಿಲ್ಲ. ಆದರೆ ಸರ್ಕಾರದ ಎಲ್ಲ ಸಬ್ಸಿಡಿ, ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಮುಖ್ಯವಾಗಿದೆ. ಹಾಗಿರುವಾಗ ಆಧಾರ್ ಕಾರ್ಡ್ ಇಲ್ಲದೆಯೇ ಹೇಗೆ ಸಬ್ಸಿಡಿಯನ್ನು ಪಡೆಯುವುದು?

ನಿಮಗೆ ಈವರೆಗೆ ಆಧಾರ್ ಕಾರ್ಡ್ ಲಭ್ಯವಾಗಿಲ್ಲದಿದ್ದರೆ ಆದರೆ ನೀವು ಸರ್ಕಾರದ ಸಬ್ಸಿಡಿ ಹಾಗೂ ಪ್ರಯೋಜನಗಳನ್ನು ಪಡೆಯಲು ಬಯಸಿದರೆ, ನಿಮಗೆ ಆ ಅವಕಾಶವಿದೆ. ಕೇಂದ್ರ ಹಾಗೂ ರಾಜ್ಯಕ್ಕೆ ಕಳೆದ ವಾರ ನೀಡಲಾದ ಸುತ್ತೋಲೆಯಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಕಾಯ್ದೆಯ ಸೆಕ್ಷನ್ 7 ರಲ್ಲಿ ಅಸ್ತಿತ್ವದಲ್ಲಿರುವ ನಿಬಂಧನೆಯನ್ನು ಉಲ್ಲೇಖಿಸಿದೆ.

Voter ID card Aadhaar linking: ವೋಟರ್ ಐಡಿಗೆ ಆಧಾರ್ ಕಾರ್ಡ್‌ ಲಿಂಕ್ ಮಾಡುವುದು ಹೇಗೆ?Voter ID card Aadhaar linking: ವೋಟರ್ ಐಡಿಗೆ ಆಧಾರ್ ಕಾರ್ಡ್‌ ಲಿಂಕ್ ಮಾಡುವುದು ಹೇಗೆ?

ಈ ಸುತ್ತೋಲೆಯ ಪ್ರಕಾರ ಆಧಾರ್ ಕಾರ್ಡ್ ಹೊಂದಿಲ್ಲದ ಯಾವುದೇ ವ್ಯಕ್ತಿ ಅರ್ಜಿ ಮತ್ತು ಸಬ್ಸಿಡಿ, ಪ್ರಯೋಜನ ಅಥವಾ ಸೇವೆಯನ್ನು ಪಡೆಯಲು ಪರ್ಯಾಯ ವ್ಯವಸ್ಥೆಯನ್ನು ಪಾಲನೆ ಮಾಡಬಹುದು. ಇದಕ್ಕಾಗಿ ಪರ್ಯಾಯವಾದ ಗುರುತನ್ನು ವ್ಯಕ್ತಿಗೆ ನೀಡಲಾಗುತ್ತದೆ.

 ಸುತ್ತೋಲೆ ಏನು ಹೇಳುತ್ತದೆ?

ಸುತ್ತೋಲೆ ಏನು ಹೇಳುತ್ತದೆ?

ಈ ಸುತ್ತೋಲೆಯಲ್ಲಿ, "ಮೇಲಿನ ಕಾರಣದಿಂದಾಗಿ ಕಾಯಿದೆಯ ಸೆಕ್ಷನ್ 7 ರ ನಿಬಂಧನೆಯನ್ನು ಪರಿಗಣಿಸಿ ಒಬ್ಬ ವ್ಯಕ್ತಿಗೆ ಯಾವುದೇ ಆಧಾರ್ ಸಂಖ್ಯೆ ಇಲ್ಲವಾದರೆ ಅವನು/ಅವಳು ದಾಖಲಾತಿಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಅಂತಹ ವ್ಯಕ್ತಿಗೆ ಆಧಾರ್ ಸಂಖ್ಯೆಯನ್ನು ನಿಗದಿಪಡಿಸುವವರೆಗೆ, ಅವನು/ಅವಳು ಆಧಾರ್ ದಾಖಲಾತಿ ಗುರುತಿನ ಸಂಖ್ಯೆ/ಸ್ಲಿಪ್‌ನೊಂದಿಗೆ ಪರ್ಯಾಯ ಗುರುತಿನ ವಿಧಾನಗಳ ಮೂಲಕ ಪ್ರಯೋಜನಗಳು, ಸಬ್ಸಿಡಿಗಳು ಮತ್ತು ಸೇವೆಗಳನ್ನು ಪಡೆಯಬಹುದು," ಎಂದು ಉಲ್ಲೇಖ ಮಾಡಲಾಗಿದೆ.

ಆಧಾರ್ ಕಾಯಿದೆ, 2016 ರ ಸೆಕ್ಷನ್ 7 ರ ಅಡಿಯಲ್ಲಿ ಸೂಚಿಸಲಾದ ಯೋಜನೆಗಳ ಅಡಿಯಲ್ಲಿ ವ್ಯಕ್ತಿಗೆ, ಸಬ್ಸಿಡಿಗಳು, ಪ್ರಯೋಜನಗಳು ಅಥವಾ ಸೇವೆಗಳಿಗೆ ಆಧಾರ್ ಅನ್ನು ನೀಡುವವರೆಗೆ ಈ ಕೆಳಗಿನ ದಾಖಲೆಗಳನ್ನು ಪರ್ಯಾಯ ದಾಖಲೆಯಾಗಿ ಪರಿಗಣಿಸಲಾಗುತ್ತದೆ.

 

 ಪರ್ಯಾಯ ದಾಖಲೆಗಳು ಯಾವುದು?

ಪರ್ಯಾಯ ದಾಖಲೆಗಳು ಯಾವುದು?

* ಅರ್ಜಿದಾರರ ಬ್ಯಾಂಕ್ ಪಾಸ್‌ಬುಕ್: ಇದರಲ್ಲಿ ವ್ಯಕ್ತಿಯ ಫೋಷಕರೊಂದಿಗೆ ಹೆಸರು ಜಂಟಿಯಾಗಿರಬೇಕು ಮತ್ತು ಅರ್ಜಿದಾರರ ಭಾವಚಿತ್ರ ಇರಬೇಕು
* ಆಧಾರ್‌ಗಾಗಿ ನೋಂದಣಿ ಮಾಡಿಕೊಂಡಿದ್ದರೆ, ಆಧಾರ್ ನೋಂದಣಿ ಐಡಿ ಸ್ಲಿಪ್ ನೀಡಿದರೆ ಸಾಕಾಗುತ್ತದೆ
* ಆಧಾರ್ ನೋಂದಣಿಗಾಗಿ ಮಾಡಿದ ಅರ್ಜಿ ಕೋರಿಕೆಯ ಪ್ರತಿ

 

 ಗುರುತಿನ ಪುರಾವೆಗಳು ಯಾವುದು?

ಗುರುತಿನ ಪುರಾವೆಗಳು ಯಾವುದು?

* ಭಾರತದ ಚುನಾವಣಾ ಆಯೋಗವು ನೀಡಿದ ಮತದಾರರ ಗುರುತಿನ ಚೀಟಿ
* ಆದಾಯ ತೆರಿಗೆ ಇಲಾಖೆ ನೀಡಿದ ಶಾಶ್ವತ ಖಾತೆ ಸಂಖ್ಯೆ/ಪ್ಯಾನ್ (PAN) ಕಾರ್ಡ್
* ಪಾಸ್‌ಪೋರ್ಟ್
* ಮೋಟಾರು ವಾಹನಗಳ ಕಾಯಿದೆ, 1988 (1988 ರ 59) ಅಡಿಯಲ್ಲಿ ಪರವಾನಗಿ ಪ್ರಾಧಿಕಾರವು ನೀಡಿದ ಚಾಲನಾ ಪರವಾನಗಿ
* ಅಧಿಕೃತ ಲೆಟರ್ ಹೆಡ್‌ನಲ್ಲಿ ಗೆಜೆಟೆಡ್ ಅಧಿಕಾರಿ ಅಥವಾ ತಹಸೀಲ್ದಾರ್ ನೀಡಿದ ಸದಸ್ಯರ ಫೋಟೋ ಹೊಂದಿರುವ ಗುರುತಿನ ಪ್ರಮಾಣಪತ್ರ
* ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಿದ ಯಾವುದೇ ಇತರ ದಾಖಲೆ

English summary

You Can Avail Govt Subsidies And Benefits Without Aadhaar Card, Know How

You Can Avail Govt Subsidies And Benefits Without Aadhaar Card, Know How, Steps and needed documents explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X