For Quick Alerts
ALLOW NOTIFICATIONS  
For Daily Alerts

MSMEಗಳಿಗೆ ಜುಲೈ 15ರ ತನಕ 1.23 ಲಕ್ಷ ಕೋಟಿ ರು. ಸಾಲ ಮಂಜೂರು

|

ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) ಅಡಿಯಲ್ಲಿ ಬ್ಯಾಂಕ್ ಗಳು ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ವಲಯಗಳಿಗೆ (MSME) 1.23 ಲಕ್ಷ ಕೋಟಿ ರುಪಾಯಿಗಳ ಸಾಲ ಮಂಜೂರು ಮಾಡಿವೆ. ಆದರೆ ಜುಲೈ 15ನೇ ತಾರೀಕಿನ ತನಕ 68,311 ಕೋಟಿ ರುಪಾಯಿ ವಿತರಣೆ ಮಾಡಲಾಗಿದೆ ಎಂದು ಗುರುವಾರ ಆರ್ಥಿಕ ಸಚಿವಾಲಯ ತಿಳಿಸಿದೆ.

ಮತ್ತೆ ಲಾಕ್‌ಡೌನ್ ಮಾಡಿದರೇ ಶೇ 40 ರಷ್ಟು ಸಣ್ಣ ಕೈಗಾರಿಕೆಗಳು ನಾಶಮತ್ತೆ ಲಾಕ್‌ಡೌನ್ ಮಾಡಿದರೇ ಶೇ 40 ರಷ್ಟು ಸಣ್ಣ ಕೈಗಾರಿಕೆಗಳು ನಾಶ

ಕೊರೊನಾ ಬಿಕ್ಕಟ್ಟಿನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಎಂಎಸ್ ಎಂಇಗಳಿಗೆ ನೆರವಾಗುವ ಉದ್ದೇಶದಿಂದ ಆತ್ಮನಿರ್ಭರ್ ಯೋಜನೆ ಅಡಿಯಲ್ಲಿ ಯಾವುದೇ ಗ್ಯಾರಂಟಿ ಅಗತ್ಯ ಇಲ್ಲದೆ, ಸಾಲ ನೀಡುವ ಯೋಜನೆ ರೂಪಿಸಲಾಗಿತ್ತು. ಈ ಯೋಜನೆಗಾಗಿ 3 ಲಕ್ಷ ಕೋಟಿ ರುಪಾಯಿ ಘೋಷಣೆ ಸಹ ಮಾಡಲಾಗಿತ್ತು.

MSMEಗಳಿಗೆ ಜುಲೈ 15ರ ತನಕ  1.23 ಲಕ್ಷ ಕೋಟಿ ರು. ಸಾಲ ಮಂಜೂರು

ಈಗ ಆರ್ಥಿಕ ಸಚಿವಾಲಯ ಬಿಡುಗಡೆ ಮಾಡಿರುವುದು ಎಲ್ಲ 12 ಸಾರ್ವಜನಿಕ ವಲಯದ ಬ್ಯಾಂಕ್ ಗಳು, 22 ಖಾಸಗಿ ಬ್ಯಾಂಕ್ ಗಳು ಮತ್ತು 21 ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ಮಾಹಿತಿ. ಸಾರ್ವಜನಿಕ ಬ್ಯಾಂಕ್ ಗಳು 69,135.19 ಕೋಟಿ ರುಪಾಯಿ ಮಂಜೂರು ಮಾಡಿದ್ದು, ಅದರಲ್ಲಿ 41,819 ಕೋಟಿ ವಿತರಿಸಿವೆ. ಖಾಸಗಿ ಬ್ಯಾಂಕ್ ಗಳು 54,209.97 ಕೋಟಿ ಮಂಜೂರು ಮಾಡಿ, 26,492 ಕೋಟಿ ವಿತರಿಸಿವೆ.

English summary

Banks And NBFC's Sanctioned 1.23 Lakh Crore To MSME's Under ECLGS

Banks and NBFC's sanctioned 1.23 lakh crore under ECLGS to MSME's till July 15, 2020, According to finance ministry.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X