For Quick Alerts
ALLOW NOTIFICATIONS  
For Daily Alerts

'MSME ಅಷ್ಟೇ ಅಲ್ಲ, ಇತರ ಉದ್ಯಮ, ವ್ಯಾಪಾರಕ್ಕೂ ಸಾಲ ನೀಡಿ'

|

ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಂಸ್ಥೆಗಳಿಗೆ (ಎಂಎಸ್ ಎಂಇ) ಯಾವುದೇ ಶ್ಯೂರಿಟಿ ಇಲ್ಲದೆ ತುರ್ತು ಸಾಲ ಗ್ಯಾರಂಟಿ ಯೋಜನೆ ಅಡಿ ಸಾಲ ನೀಡುವುದನ್ನು ಮುಂದುವರಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಹೇಳಿದರು. ಸಾರ್ವಜನಿಕ ವಲಯದ ಬ್ಯಾಂಕ್ ಗಳ ಕಾರ್ಯನಿರ್ವಾಹಕ ನಿರ್ದೇಶಕರ ಜತೆ ನಡೆದ ಪರಿಶೀಲನಾ ಸಭೆಯಲ್ಲಿ ಅವರು ಸೂಚನೆ ನೀಡಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಇತರ ಉದ್ಯಮ, ವ್ಯಾಪಾರಗಳ ಹಣಕಾಸಿನ ಅಗತ್ಯಗಳಿಗೂ ಸಾಲ ನೀಡುವಂತೆ ತಿಳಿಸಿದರು. ಫೈನಾನ್ಷಿಯಲ್ ಸರ್ವೀಸಸ್ ಇಲಾಖೆಯ ಟ್ವೀಟ್ ನಲ್ಲಿ, ಅರ್ಹ ಎಂಎಸ್ ಎಂಇಗಳಿಗೆ ಸಾಲ ಮಂಜೂರು ಮಾಡುವ ಬಗ್ಗೆ ಗಮನ ನೀಡುವುದನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ಮುಂದುವರಿಸಲಿವೆ. ಇತರ ವ್ಯವಹಾರ- ಉದ್ಯಮಗಳಿಗೆ ಸಾಲ ನೀಡುವ ಬಗ್ಗೆಯೂ ಸಭೆಯಲ್ಲಿ ಸೂಚಿಸಲಾಗಿದೆ ಎಂದು ತಿಳಿಸಲಾಗಿದೆ.

 

'ಆರ್ಥಿಕ ಪ್ಯಾಕೇಜ್ ಅಡಿ MSMEಗಳಿಗೆ ಖಾಸಗಿ ಬ್ಯಾಂಕ್ ಸಾಲ ಕೊಡ್ತಿಲ್ಲ'

ಸೋಮವಾರವಷ್ಟೇ ಎಫ್ ಐಸಿಸಿಐ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಬಳಿಕ ಕೇಂದ್ರ ಸಚಿವೆ ಕೆಲವು ವಿಚಾರ ಸ್ಪಷ್ಟಪಡಿಸಿದ್ದರು. ಆತ್ಮನಿರ್ಭರ್ ಪ್ಯಾಕೇಜ್ ಅಡಿಯಲ್ಲಿ ಎಂಎಸ್ ಎಂಇ ಮಾತ್ರ ಅಲ್ಲ, ಎಲ್ಲ ಕಂಪೆನಿಗಳನ್ನೂ ಒಳಗೊಳ್ಳಲಿವೆ ಎಂದಿದ್ದರು.

'MSME ಅಷ್ಟೇ ಅಲ್ಲ, ಇತರ ಉದ್ಯಮ, ವ್ಯಾಪಾರಕ್ಕೂ ಸಾಲ ನೀಡಿ'

ತುರ್ತು ಸಾಲ ಗ್ಯಾರಂಟಿ ಯೋಜನೆ ಅಡಿಯಲ್ಲಿ 20 ಸಾವಿರ ಕೋಟಿ ರುಪಾಯಿ ಸಾಲವನ್ನು ಯಾವುದೇ ಶ್ಯೂರಿಟಿ ಇಲ್ಲದೆ ವಿತರಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿ ಇರುವ ಎಂಎಸ್ ಎಂಇಗಳಿಗಾಗಿ ಆತ್ಮನಿರ್ಭರ್ ಪ್ಯಾಕೇಜ್ ಅಡಿಯಲ್ಲಿ 3 ಲಕ್ಷ ಕೋಟಿ ರುಪಾಯಿ ಘೋಷಣೆ ಮಾಡಲಾಗಿದೆ.

English summary

Give Loans To Other Business Including MSME's, Says Nirmala Sitharaman

Union finance minister Nirmala Sitharaman said, public sector banks should provide loan to other business including MSME's.
Story first published: Tuesday, June 9, 2020, 20:10 [IST]
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more