For Quick Alerts
ALLOW NOTIFICATIONS  
For Daily Alerts

ಪ್ಲಾಟಿನಂ ಮೇಲಿನ ಒಟ್ಟು ಆಮದು ಸುಂಕ ಏರಿಕೆ, ಪರಿಣಾಮವೇನು?

|

ಪ್ಲಾಟಿನಂ ಮೇಲಿನ ಒಟ್ಟು ಆಮದು ಸುಂಕವನ್ನು ಭಾರತ ಸರ್ಕಾರ ಏರಿಕೆ ಮಾಡಿದೆ. ಶೇ 10.75 ರಿಂದ ಶೇ 15.4 ಕ್ಕೆ ಹೆಚ್ಚಿಸಿದೆ ಎಂದು ಸೋಮವಾರದಂದು ಅಧಿಸೂಚನೆಯಲ್ಲಿ ತಿಳಿಸಿದೆ. ಚಿನ್ನ ಮತ್ತು ಪ್ಲಾಟಿನಂ ನಡುವಿನ ಆಮದು ಸುಂಕದ ರಚನೆಯಲ್ಲಿ ಸಮಾನತೆಯನ್ನು ತರಲು ಸರ್ಕಾರ ಯತ್ನಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ಜುಲೈನಲ್ಲಿ, ಚಿನ್ನದ ಮೇಲಿನ ಆಮದು ಸುಂಕವನ್ನು 15% ಕ್ಕೆ ಏರಿಸಲಾಗಿತ್ತು. ಆದರೆ ನಂತರ ಪ್ಲಾಟಿನಂ ಆಮದುಗಳ ಮೇಲಿನ ತೆರಿಗೆಯನ್ನು 10.75% ನಂತೆ ಇರಿಸಲಾಗಿತ್ತು.

ಸೆಪ್ಟೆಂಬರ್‌ನಲ್ಲಿ ಭಾರತದ ಪ್ಲಾಟಿನಂ ಆಮದುಗಳು ದಾಖಲೆಯ ಮಟ್ಟಕ್ಕೆ ಜಿಗಿತ ಕಂಡ ಬೆನ್ನಲ್ಲೇ ಸರ್ಕಾರ ಸುಂಕ ಏರಿಕೆ ಕ್ರಮ ಕೈಗೊಂಡಿದೆ. ಪ್ಲಾಟಿನಂ ಮಿಶ್ರಲೋಹವಾಗಿ ಖರೀದಿಗೆ ನೋಂದಾಯಿಸಿದ್ದವರು ಸಣ್ಣ ಪ್ರಮಾಣದ ಪ್ಲಾಟಿನಂ ಹೊಂದಿರುವ ದೊಡ್ಡ ಪ್ರಮಾಣದ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿರುವುದು ಪತ್ತೆಯಾಗಿದೆ. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಮಟ್ಟದಲ್ಲಿ ಸುಂಕ ಕೈ ತಪ್ಪುತ್ತಿದೆ. ಹೀಗಾಗಿ, ಪ್ಲಾಟಿನಂ ಮೇಲಿನ ಸುಂಕ ಏರಿಕೆ ಮಾಡಲಾಗಿದೆ.

ಪ್ಲಾಟಿನಂ ಮೇಲಿನ ಒಟ್ಟು ಆಮದು ಸುಂಕ ಏರಿಕೆ, ಪರಿಣಾಮವೇನು?

ಏಕೆಂದರೆ ರಿಫೈನರ್‌ಗಳು ಸಣ್ಣ ಪ್ರಮಾಣದ ಪ್ಲಾಟಿನಂ ಹೊಂದಿರುವ ದೊಡ್ಡ ಪ್ರಮಾಣದ ಚಿನ್ನವನ್ನು ಆಮದು ಮಾಡಿಕೊಂಡರು ಆದರೆ ಹೆಚ್ಚಿನ ಸುಂಕವನ್ನು ಪಾವತಿಸುವುದನ್ನು ತಪ್ಪಿಸಲು ಕಸ್ಟಮ್ಸ್‌ನೊಂದಿಗೆ ಪ್ಲಾಟಿನಂ ಮಿಶ್ರಲೋಹವಾಗಿ ಖರೀದಿಗಳನ್ನು ನೋಂದಾಯಿಸಿದರು.

ಭಾರತದಲ್ಲಿ ಪ್ಲಾಟಿನಂ ಬೆಲೆ
ಅಕ್ಟೋಬರ್ 3ರಂದು ಪ್ರತಿ 10 ಗ್ರಾಂ ಪ್ಲಾಟಿನಂ ಬೆಲೆ 22 640 ರು ನಂತೆ ಇತ್ತು. ಮಂಗಳವಾರದಂದು 1060 ರು ಏರಿಕೆ ಕಂಡಿದ್ದು, ಪ್ರತಿ 10 ಗ್ರಾಂ ಪ್ಲಾಟಿನಂ ಬೆಲೆ 23,700 ರು ಆಗಿದೆ. ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಸೆ. 30ರಂದು ಪ್ಲಾಟಿನಂ ಬೆಲೆ 2,268 ರು ಪ್ರತಿ 10ಗ್ರಾಂ ನಂತೆ ವ್ಯವಹಾರ ಕಂಡಿತ್ತು.

English summary

India raises import duty on platinum to 15.4%

India has raised total import duty on platinum to 15.4% from 10.75%, the government said in a notification on Monday, seeking to bring parity in import duty structure between gold and platinum.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X