For Quick Alerts
ALLOW NOTIFICATIONS  
For Daily Alerts

Varamahalakshmi Vrata : ವರಮಹಾಲಕ್ಷ್ಮೀ: ಹೂವು, ಹಣ್ಣು ದರ ಏರಿಕೆ, ಎಷ್ಟಿದೆ ಇಲ್ಲಿ ಪರಿಶೀಲಿಸಿ

|

ರಾಜ್ಯದಾದ್ಯಂತ ಆಗಸ್ಟ್ 5ರಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ಕಾರಣದಿಂದಾಗಿ ಇಂದು (ಆಗಸ್ಟ್ 4) ಮಾರುಕಟ್ಟೆಯಲ್ಲಿ ಹೂವು, ಹಣ್ಣು ಹಾಗೂ ಹಬ್ಬಕ್ಕೆ ಬೇಕಾದ ಇತರೆ ವಸ್ತುಗಳ ಖರೀದಿಯು ಭರದಿಂದ ಸಾಗುತ್ತಿದೆ. ಆದರೆ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ.

 

ಬೇಡಿದ ವರವನ್ನು ವರಮಹಾಲಕ್ಷ್ಮೀ ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ. ಈ ಹಬ್ಬ ಆಚರಣೆ ಮಾಡುವುದರಿಂದ ತಾಯಿ ಲಕ್ಷ್ಮೀಯ ಅನುಗ್ರಹಕ್ಕೆ ಪಾತ್ರವಾಗಬಹುದು ಎಂಬ ನಂಬಿಕೆ ಇದೆ. ನಾಳೆ ಹಬ್ಬದ ಹಿನ್ನೆಲೆಯಿಂದಾಗಿ ಈಗಾಗಲೇ ಹೆಣ್ಣು ಮಕ್ಕಳು ಎಲ್ಲಾ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಹಬ್ಬದ ಕಾರಣದಿಂದಾಗಿ ಬೆಂಗಳೂರಿನಲ್ಲಿ ಖರೀದಿ ಭರಾಟೆ ಅಧಿಕವಾಗಿದೆ.

ಆ.3ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು, ಎಣ್ಣೆ ಮಾರುಕಟ್ಟೆ ಬೆಲೆ

ಕೆ ಆರ್ ಮಾರುಕಟ್ಟೆಯಲ್ಲಿ ಜನಜಾತ್ರೆಯಾಗಿದೆ. ಈ ಮಳೆಯ ನಡುವೆಯೂ ಜನರು ಹಬ್ಬದ ತಯಾರಿಯಲ್ಲಿ ವ್ಯಸ್ತರಾಗಿದ್ದಾರೆ. ಮೊದಲೇ ಟ್ರಾಫಿಕ್ ಜಾಮ್ ಸಾಮಾನ್ಯವಾದ ಸಮಸ್ಯೆಯಾಗಿರುವಾಗ ಜನರು ವರಮಹಾಲಕ್ಷ್ಮೀ ಹಬ್ಬದ ಶಾಫಿಂಗ್‌ನಲ್ಲಿ ಇರುವ ಕಾರಣದಿಂದಾಗಿ ಟ್ರಾಫಿಕ್ ಇನ್ನಷ್ಟು ಅಧಿಕವಾಗಿದೆ. ಆದರೆ ಈ ನಡುವೆ ಹೂವು ಹಣ್ಣುಗಳ ಬೆಲೆಯು ದಿಢೀರ್ ಏರಿಕೆಯಾಗಿದೆ. ಹಬ್ಬದ ತಯಾರಿಯಲ್ಲಿರುವ ಜನರಿಗೆ ಬೆಲೆ ಏರಿಕೆ ಶಾಕ್ ನೀಡಿದೆ.

ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಹೂವು, ಹಣ್ಣು ಹಾಗೂ ಇತರೆ ವಸ್ತುಗಳ ಬೆಲೆ ಹೇಗಿದೆ ಎಂಬ ಬಗ್ಗೆ ಇಲ್ಲಿ ನಾವು ವಿವರವಾದ ಮಾಹಿತಿ ನೀಡಿದ್ದೇವೆ ಮುಂದೆ ಓದಿ....

 ಹೂವಿನ ಬೆಲೆ ತಿಳಿಯಿರಿ

ಹೂವಿನ ಬೆಲೆ ತಿಳಿಯಿರಿ

ಚೆಂಡು ಹೂವು 80 ರೂ/ ಕೆಜಿ
ಮಲ್ಲಿಗೆ ಒಂದು ಮಾರು 200 ರೂ
ಗುಲಾಬಿ - 410 ರೂ/ ಕೆಜಿ
ಕನಕಾಂಬರ ಒಂದು ಮಾರು 300 ರೂ/ ಕೆಜಿ
ಸುಗಂಧರಾಜ 110 ರೂ/ ಕೆಜಿ
ಸೇವಂತಿಗೆ 400 ರೂ/ ಕೆಜಿ

ಆಗಸ್ಟ್ 03ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

 ಹಣ್ಣಿನ ಬೆಲೆ ನೋಡಿ

ಹಣ್ಣಿನ ಬೆಲೆ ನೋಡಿ

ಏಲಕ್ಕಿ ಬಾಳೆಹಣ್ಣು 80 ರೂ/ ಕೆಜಿ
ಸೇಬು 180 ರೂ/ ಕೆಜಿ
ಮೂಸಂಬಿ 100 ರೂ/ ಕೆಜಿ
ಆರೆಂಜ್ 220 ರೂ/ ಕೆಜಿ
ದ್ರಾಕ್ಷಿ 200-220 ರೂ/ ಕೆಜಿ
ಸಪೋಟ 200 ರೂ/ ಕೆಜಿ
ಸೀಬೆಹಣ್ಣು 100 ರೂ/ ಕೆಜಿ
ದಾಳಿಂಬೆ 150 ರೂ/ ಕೆಜಿ

 ಅಗತ್ಯ ವಸ್ತುಗಳ ಬೆಲೆ
 

ಅಗತ್ಯ ವಸ್ತುಗಳ ಬೆಲೆ

ಬೇವಿನ ಸೊಪ್ಪು - 20 ರೂ - ಕಟ್ಟು
ಮಾವಿನ ಎಲೆ 20 ರೂ - ಕಟ್ಟು
ಬೆಲ್ಲ (ಅಚ್ಚು / ಉಂಡೆ) - 70 - 80 ರೂ/ ಕೆಜಿ
ಬಾಳೆ ಕಂಬ - 50 ರೂ
ತುಳಸಿ ತೋರಣ - 50 ರೂ- ಮಾರು

English summary

Prices of Flowers, Fruits Soar in Bengaluru on 4th August Ahead of Varamahalakshmi Festival

Prices of Flowers, Fruits Soar in Bengaluru on 4th August Ahead of Varamahalakshmi Festival. Check out the Fruits, Flowers latest market prices in Bengaluru today 4 August, 2022. Take a look:
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X