For Quick Alerts
ALLOW NOTIFICATIONS  
For Daily Alerts

Budget 2023: ಚಿನ್ನ, ಬೆಳ್ಳಿ ಮೇಲೆ ಬಜೆಟ್ ಪರಿಣಾಮ ಹೇಗಿದೆ?

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ಪ್ರಮುಖವಾಗಿ ಚಿನ್ನ ಹಾಗೂ ಬೆಳ್ಳಿ ದರದ ಮೇಲೆ ಪ್ರಭಾವ ಉಂಟು ಮಾಡಿದೆ. ವಿತ್ತ ಸಚಿವೆ ಚಿನ್ನ ಹಾಗೂ ಬೆಳ್ಳಿ ಬಾರ್‌ಗಳ ಸುಂಕವನ್ನು ಏರಿಸಿ ಘೋಷಣೆ ಮಾಡಿದ ಬಳಿಕ ಚಿನ್ನ, ಬೆಳ್ಳಿ ಎರಡೂ ಲೋಹಗಳ ದರವು ಹೆಚ್ಚಳವಾಗಿದೆ.

"ಚಿನ್ನ, ಪ್ಲಾಟಿನಂ ಬಾರ್‌ಗಳ ಮೇಲಿನ ಕಸ್ಟಮ್ ಸುಂಕವನ್ನು ಏರಿಸಲಾಗಿದೆ. ಈಗ ಚಿನ್ನದ ವಸ್ತುಗಳ ಮೇಲಿನ ಸುಂಕವನ್ನು ಏರಿಸಲಾಗುತ್ತದೆ. ಬೆಳ್ಳಿ ಬಾರ್‌ಗಳ ಮೇಲಿನ ಸುಂಕವನ್ನು ಕೂಡಾ ಏರಿಸಲಾಗುತ್ತದೆ. ಚಿನ್ನ, ಪ್ಲಾಟಿನಂ ಆರ್ಟಿಕಲ್‌ಗಳ ಸುಂಕವನ್ನು ಹೆಚ್ಚಳ ಮಾಡಲಾಗುತ್ತದೆ," ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

Budget 2023 Cheaper & Costlier Items : ಕೇಂದ್ರ ಬಜೆಟ್ ಬಳಿಕ ಯಾವೆಲ್ಲ ವಸ್ತುಗಳು ಅಗ್ಗ, ದುಬಾರಿ?Budget 2023 Cheaper & Costlier Items : ಕೇಂದ್ರ ಬಜೆಟ್ ಬಳಿಕ ಯಾವೆಲ್ಲ ವಸ್ತುಗಳು ಅಗ್ಗ, ದುಬಾರಿ?

ಈ ಹಿಂದೆ ಜುಲೈ 2022ರಂದು ಚಿನ್ನದ ಬಾರ್‌ಗಳ ಮೇಲಿನ ಕಸ್ಟಮ್ ಸುಂಕವನ್ನು ಏರಿಕೆ ಮಾಡಲಾಗಿದೆ. ಹಾಗೆಯೇ ಚಿನ್ನದ ಆರ್ಟಿಕಲ್‌ಗಳ ಮೇಲಿನ ಸುಂಕವನ್ನು ಕೂಡಾ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಚಿನ್ನದ ಬೆಲೆಯು ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಬಜೆಟ್ ಬಳಿಕ ಚಿನ್ನದ ಬೆಲೆ ಎಷ್ಟಾಗಿದೆ, ಪ್ರಸ್ತುತ ಚಿನ್ನದ ಬೆಲೆ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಬಜೆಟ್‌ ಮುನ್ನ, ಬಜೆಟ್ ಬಳಿಕ ಚಿನ್ನದ ಬೆಲೆ

ಬಜೆಟ್‌ ಮುನ್ನ, ಬಜೆಟ್ ಬಳಿಕ ಚಿನ್ನದ ಬೆಲೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಮಾಡುವುದಕ್ಕೂ ಮುನ್ನ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು ಕುಸಿದು 52,650 ರೂಪಾಯಿಗೆ ತಲುಪಿತ್ತು. ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆಯು 57,430 ರೂಪಾಯಿ ಆಗಿತ್ತು. ಒಂದು ಕೆಜಿ ಬೆಳ್ಳಿ ದರವು 72,300 ರೂಪಾಯಿ ಆಗಿತ್ತು. ಆದರೆ ಬಜೆಟ್ ಮಂಡನೆಯಾದ ಬಳಿಕ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು ಏರಿಕೆಯಾಗಿ 52,900 ರೂಪಾಯಿಗೆ ತಲುಪಿದೆ. 24 ಕ್ಯಾರೆಟ್ ಚಿನ್ನದ ಬೆಲೆಯು ಕೂಡಾ 57,700 ರೂಪಾಯಿಗೆ ಏರಿದೆ. ಒಂದು ಕೆಜಿ ಬೆಳ್ಳಿ ದರ 73,300 ರೂಪಾಯಿಗೆ ತಲುಪಿದೆ.

Union Budget 2023 Highlights : ಕೇಂದ್ರ ಬಜೆಟ್‌ನ ಪ್ರಮುಖಾಂಶಗಳು ಇಲ್ಲಿದೆUnion Budget 2023 Highlights : ಕೇಂದ್ರ ಬಜೆಟ್‌ನ ಪ್ರಮುಖಾಂಶಗಳು ಇಲ್ಲಿದೆ

 ಇಂದಿನ ಚಿನ್ನದ ಬೆಲೆ ಎಷ್ಟಿದೆ?

ಇಂದಿನ ಚಿನ್ನದ ಬೆಲೆ ಎಷ್ಟಿದೆ?

ಸತತ ಎರಡು ದಿನಗಳಿಂದ ಚಿನ್ನದ ಬೆಲೆಯು ಏರಿಕೆಯಾಗುತ್ತಿದೆ. ಕಳೆದ 10 ದಿನಗಳಲ್ಲಿ 5 ಬಾರಿ ಗೋಲ್ಡ್ ರೇಟ್ ಜಿಗಿದಿದೆ. ಫೆಬ್ರವರಿ 2ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 600 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 53,600 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 650 ರೂಪಾಯಿ ಹಿಗ್ಗಿದ್ದು ಪ್ರಸ್ತುತ 58,470 ರೂಪಾಯಿ ಆಗಿದೆ. ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 1100 ರೂಪಾಯಿ ಹಿಗ್ಗಿದ್ದು ಪ್ರಸ್ತುತ 74,400 ರೂಪಾಯಿ ಆಗಿದೆ.

 ಎಂಸಿಎಕ್ಸ್‌ನಲ್ಲಿ ವಹಿವಾಟು ಹೇಗಿದೆ?

ಎಂಸಿಎಕ್ಸ್‌ನಲ್ಲಿ ವಹಿವಾಟು ಹೇಗಿದೆ?

ಫೆಬ್ರವರಿ 2ರಂದು ಈ ಸಮಯಕ್ಕೆ ನಡೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಹಿಗ್ಗಿದ್ದು 58550.00 ರೂಪಾಯಿ ಆಗಿದೆ. ಬೆಳ್ಳಿ ಇಳಿಕೆಯಾಗಿದ್ದು 71412.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.03ರಷ್ಟು ಹಿಗ್ಗಿದ್ದು 1,953.17 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.64ರಷ್ಟು ಏರಿಕೆಯಾಗಿದ್ದು 24.2 ಯುಎಸ್ ಡಾಲರ್ ಆಗಿದೆ.

 ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ ದರ?

ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ ದರ?

10 ಗ್ರಾಂ ಲೆಕ್ಕಾಚಾರದಲ್ಲಿ

ಬೆಂಗಳೂರು
22 ಕ್ಯಾರೆಟ್ ಚಿನ್ನ: 53,650 ರೂಪಾಯಿ
24 ಕ್ಯಾರೆಟ್ ಚಿನ್ನ: 58,510 ರೂಪಾಯಿ

ಮುಂಬೈ
22 ಕ್ಯಾರೆಟ್ ಚಿನ್ನ: 53,600 ರೂಪಾಯಿ
24 ಕ್ಯಾರೆಟ್ ಚಿನ್ನ: 58,470 ರೂಪಾಯಿ

ದೆಹಲಿ
22 ಕ್ಯಾರೆಟ್ ಚಿನ್ನ: 53,750 ರೂಪಾಯಿ
24 ಕ್ಯಾರೆಟ್ ಚಿನ್ನ: 58,610 ರೂಪಾಯಿ

ಕೇರಳ
22 ಕ್ಯಾರೆಟ್ ಚಿನ್ನ: 53,600 ರೂಪಾಯಿ
24 ಕ್ಯಾರೆಟ್ ಚಿನ್ನ: 58,470 ರೂಪಾಯಿ

ಮಂಗಳೂರು
22 ಕ್ಯಾರೆಟ್ ಚಿನ್ನ: 53,650 ರೂಪಾಯಿ
24 ಕ್ಯಾರೆಟ್ ಚಿನ್ನ: 58,510 ರೂಪಾಯಿ

ಮೈಸೂರು
22 ಕ್ಯಾರೆಟ್ ಚಿನ್ನ: 53,650 ರೂಪಾಯಿ
24 ಕ್ಯಾರೆಟ್ ಚಿನ್ನ: 58,510 ರೂಪಾಯಿ

 

English summary

Union Budget 2023: Budget impact on Gold and Silver, How Budget Affect Gold Price?

Union Budget 2023: The Budget 2023 presented by Finance Minister Nirmala Sitharaman in the Parliament on February 1. How is Gold and Silver Price After Union Budget.
Story first published: Thursday, February 2, 2023, 11:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X