For Quick Alerts
ALLOW NOTIFICATIONS  
For Daily Alerts

ಉತ್ತರ ಪ್ರದೇಶ: ‘ಒನ್ ಡಿಸ್ಟ್ರಿಕ್ಟ್, ಒನ್ ಪ್ರೊಡಕ್ಟ್' ಪ್ರೋತ್ಸಾಹಿಸಲು ಕೂ ಜೊತೆ ಒಪ್ಪಂದ

|

ಲಕ್ನೋ, ಜು.28: 'ಒನ್ ಡಿಸ್ಟ್ರಿಕ್ಟ್ , ಒನ್ ಪ್ರೊಡಕ್ಟ್' ಅಭಿಯಾನವನ್ನು ಸ್ಥಳೀಯ ಭಾಷೆಗಳಲ್ಲಿ ಉತ್ತೇಜಿಸಲು ಉತ್ತರ ಪ್ರದೇಶದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಫ್ತು ಉತ್ತೇಜನ ಇಲಾಖೆಯು ಕೂ ಅಪ್ಲಿಕೇಶನ್‌ನೊಂದಿಗೆ ಪರಸ್ಪರ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ.

ತಿಳಿವಳಿಕೆ ಒಪ್ಪಂದದ ಭಾಗವಾಗಿ, ಕೂ ತನ್ನ ಪ್ಲಾಟ್‌ಫಾರ್ಮ್ ಮೂಲಕ 10 ಭಾಷೆಗಳಲ್ಲಿ ODOP ವಿಷಯ ಮತ್ತು ಉತ್ಪನ್ನಗಳ ಮಾಹಿತಿಯನ್ನು ನೀಡುವ ಮೂಲಕ ಅರಿವು ಮೂಡಿಸಲಿದೆ. ವಿಶೇಷವಾಗಿ ಇಂಗ್ಲಿಷ್ ಮಾತನಾಡದ ಜನರಿಗೆ ಮತ್ತು ಸ್ಥಳೀಯ ಕುಶಲಕರ್ಮಿಗಳು ಭಿನ್ನ ಗ್ರಾಹಕರನ್ನು ತಲುಪಲು ಮತ್ತು ದೇಶಾದ್ಯಂತ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಇದು ಸಹಾಯ ಮಾಡಲಿದೆ. ODOP ಹ್ಯಾಂಡಲ್ ಅನ್ನು ಕೂ ಅಪ್ಲಿಕೇಶನ್ @UP_ODOP ನಲ್ಲಿ ಕಾಣಬಹುದು.

ಉತ್ತರ ಪ್ರದೇಶ ಸರ್ಕಾರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ರಫ್ತು ಉತ್ತೇಜನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಲ್ ಹಾಗೂ ಕೂ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಣಾಧಿಕಾರಿ ಅಪ್ರಮೇಯ ರಾಧಾಕೃಷ್ಣ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು.

‘ಒನ್ ಡಿಸ್ಟ್ರಿಕ್ಟ್, ಒನ್ ಪ್ರೊಡಕ್ಟ್': ಕೂ ಜೊತೆ ಒಪ್ಪಂದ

ಈ ಸಂದರ್ಭದಲ್ಲಿ ಮಾತನಾಡಿದ ನವನೀತ್ ಸೆಹಗಲ್, 'ಕೂ ಜೊತೆಗಿನ ಈ ಸಹಯೋಗದಿಂದ ನಮ್ಮ ODOP ಉತ್ಪನ್ನಗಳನ್ನು ಹೆಚ್ಚಿನ ಜನರಿಗೆ ತಲುಪುವ ಜೊತೆಗೆ ಅವರದೇ ಭಾಷೆಯಲ್ಲಿ ಈ ಕುರಿತು ಮಾಹಿತಿ ದೊರೆಯಲಿದೆ' ಎಂದು ಹೇಳಿದರು.

ಕೂ ಸಹ ಸಂಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ, "ಉತ್ತರ ಪ್ರದೇಶ ಸರ್ಕಾರದೊಂದಿಗೆ ಇಂದು ಈ ಒಪ್ಪಂದಕ್ಕೆ ಸಹಿ ಹಾಕುತ್ತಿರುವುದು ನಮಗೆ ಸಂತೋಷ ತಂದಿದೆ. ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಉತ್ತೇಜಿಸುವ ODOP ಯೋಜನೆ ಮುಂದಾಳ್ತನದಲ್ಲಿ ಉತ್ತರ ಪ್ರದೇಶ ಪ್ರಮುಖ ಎನಿಸಿಕೊಂಡಿದೆ. ಸ್ಥಳೀಯ ಕುಶಲಕರ್ಮಿಗಳು ಮತ್ತು ಅವರ ಕರಕುಶಲತೆಯನ್ನು ಭಾರತದ ಉಳಿದ ಭಾಗಗಳಿಗೆ ವಿವಿಧ ಭಾಷೆಗಳಲ್ಲಿ ಪ್ರಚಾರ ಮಾಡುವ ಮೂಲಕ ಸಹಾಯ ಮಾಡುವುದರಲ್ಲಿ ನಾವು ತೊಡಗಿಕೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ' ಎಂದರು.

'ಒನ್ ಡಿಸ್ಟ್ರಿಕ್ಟ್',' ಒನ್ ಪ್ರೊಡಕ್ಟ್'

'ಒನ್ ಡಿಸ್ಟ್ರಿಕ್ಟ್ , ಒನ್ ಪ್ರೊಡಕ್ಟ್' (ODOP) ಎಂಬುದು ಮಾನ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 2018 ರಲ್ಲಿ ಪ್ರಾರಂಭಿಸಿದರು. ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುವ ಮೂಲಕ ಸ್ಥಳೀಯ ಮತ್ತು ವಿಶೇಷ ಉತ್ಪನ್ನಗಳು ಮತ್ತು ಕರಕುಶಲತೆಯನ್ನು ಪ್ರೋತ್ಸಾಹಿಸುವುದಾಗಿದೆ. ಹೆಚ್ಚಿನ ಮಾಹಿತಿಗಾಗಿ, ವೆಬ್‌ಸೈಟ್‌ಗೆ ಭೇಟಿ ನೀಡಿ - http://www.odopup.in/en

English summary

UP MSME Department Inks an MoU with Koo App to boost ‘One District, One Product’

Micro, Small and Medium Industries Export Promotion Department of Uttar Pradesh has signed a Memorandum of Understanding (MoU) with Koo App to promote 'One District, One Product' campaign in local languages.
Story first published: Thursday, July 28, 2022, 12:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X