For Quick Alerts
ALLOW NOTIFICATIONS  
For Daily Alerts

ಎಂಎಸ್‌ಎಂಇಗಳ ಡಿಜಿಟಲ್‌ ಪಯಣದ ಪ್ರಗತಿಗಾಗಿ 'ಭವಿಷ್ಯಕ್ಕೆ ಸಿದ್ಧತೆ' ಕಾರ್ಯಕ್ರಮ

|

ಕೋವಿಡ್‌ ಪಿಡುಗಿನ ನಂತರದ ದಿನಗಳಲ್ಲಿ ವಹಿವಾಟಿನ ಮೇಲಿನ ಪ್ರತಿಕೂಲ ಪರಿಣಾಮಗಳು ಉಂಟಾಗಿದೆ. ನಗದು ಲಭ್ಯತೆ ಬಿಕ್ಕಟ್ಟು ಮತ್ತು ಜಾಗತಿಕ ಉದ್ಯಮ ಲೋಕದಲ್ಲಿನ ಬದಲಾವಣೆಗಳು ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು (ಎಂಎಸ್‌ಎಂಸಿ) ದುರ್ಬಲಗೊಳಿಸಿವೆ.

"ವಿಶ್ವ ಎಂಎಸ್‌ಎಂಇ ದಿನ"ದ ಸಂದರ್ಭದಲ್ಲಿ ಈ ಸವಾಲುಗಳನ್ನು ಗಮನದಲ್ಲಿ ಇಟ್ಟುಕೊಂಡು, ಭಾರತದ ಪ್ರಮುಖ ದೂರಸಂಪರ್ಕ ಸೇವಾ ಕಂಪನಿಯಾಗಿರುವ ವೊಡಾಫೋನ್‌ ಐಡಿಯಾದ (Vi) ಉದ್ದಿಮೆ - ವಹಿವಾಟಿನ ಭಾಗವಾಗಿರುವ ವಿಐ ಬಿಸಿನೆಸ್ (Vi Business), ಎಂಎಸ್‌ಎಂಇಗಳು ತಮ್ಮ ವಹಿವಾಟಿನ ಬೆಳವಣಿಗೆಗೆ ವೇಗ ನೀಡಲು ನೆರವಾಗುವ ಭವಿಷ್ಯಕ್ಕೆ ಸಿದ್ಧತೆ (Ready for Next) ವಿಶೇಷ ಕಾರ್ಯಕ್ರಮ ಪ್ರಾರಂಭಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಜೂ.30ರಂದು 'ಉದ್ಯಮಿ ಭಾರತ್, MSME ಉಪಕ್ರಮಕ್ಕೆ ಮೋದಿಯಿಂದ ಚಾಲನೆಜೂ.30ರಂದು 'ಉದ್ಯಮಿ ಭಾರತ್, MSME ಉಪಕ್ರಮಕ್ಕೆ ಮೋದಿಯಿಂದ ಚಾಲನೆ

ಹೊಸ ವ್ಯಾಪಾರ- ವಹಿವಾಟಿನ ಭವಿಷ್ಯ ನಿರ್ಧರಿಸುವಲ್ಲಿ ಡಿಜಿಟಲ್ ಅಳವಡಿಕೆಯು ಅತ್ಯಂತ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಕಚೇರಿಯಿಂದ ದೂರದಲ್ಲಿ ಇದ್ದುಕೊಂಡೇ ಕೆಲಸ ಮಾಡುವ ಸದ್ಯದ ಹೊಸ ಕಾಲಘಟ್ಟದಲ್ಲಿ ವಹಿವಾಟನ್ನು ಡಿಜಿಟಲ್‌ ರೂಪದಲ್ಲಿ ಸುರಕ್ಷಿತವಾಗಿ ಇರಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಹೆಚ್ಚು ಮಹತ್ವದ್ದಾಗಿದೆ.

 ರೆಡಿ ಫಾರ್ ನೆಕ್ಸ್ಟ್ ಪ್ರೋಗ್ರಾಂ

ರೆಡಿ ಫಾರ್ ನೆಕ್ಸ್ಟ್ ಪ್ರೋಗ್ರಾಂ

ಎಂಎಸ್‌ಎಂಇಗಳ ಡಿಜಿಟಲ್ ಪಯಣದಲ್ಲಿ ಅವುಗಳ ಕೈಹಿಡಿದು ಮುನ್ನಡೆಸುವ ತತ್ವದ ಮೇಲೆ 'ವಿಐ ಬಿಸಿನೆಸ್‌ನ'-ರೆಡಿ ಫಾರ್ ನೆಕ್ಸ್ಟ್ (Ready for Next) ಪ್ರೋಗ್ರಾಂ (ಭವಿಷ್ಯಕ್ಕೆ ಸಿದ್ಧತೆ ಕಾರ್ಯಕ್ರಮವು) ಸಿದ್ಧಪಡಿಸಲಾಗಿದೆ. ವಿಶೇಷ ರೀತಿಯಲ್ಲಿ ರೂಪಿಸಿರುವ ಈ ಕಾರ್ಯಕ್ರಮವು ಎಂಎಸ್‌ಎಂಇಗಳ ಸಂಭವನೀಯ ಎಲ್ಲ ಬಗೆಯ ಅಗತ್ಯಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಹೆಚ್ಚು ವೇಗವಾಗಿ ಬೆಳೆಯುವುದಕ್ಕೂ ಈ ಕಾರ್ಯಕ್ರಮವು ಅನುವು ಮಾಡಿಕೊಡಲಿದೆ.

 ಎಂಎಸ್‌ಎಂಇ ಭಾರತದ ಆರ್ಥಿಕತೆಯ ಬೆನ್ನೆಲುಬು

ಎಂಎಸ್‌ಎಂಇ ಭಾರತದ ಆರ್ಥಿಕತೆಯ ಬೆನ್ನೆಲುಬು

ಈ ವಿಶಿಷ್ಟ ಮತ್ತು ವಿನೂತನ ಬಗೆಯ ಉಪಕ್ರಮದ ಕುರಿತು ಪ್ರತಿಕ್ರಿಯಿಸಿರುವ ವೊಡಾಫೋನ್ ಐಡಿಯಾದ ಉದ್ದಿಮೆ ವಹಿವಾಟಿನ ವಿಭಾಗದ ಮುಖ್ಯ ಅಧಿಕಾರಿ ಅರವಿಂದ್ ನೆವಾತಿಯಾ, "ಎಂಎಸ್‌ಎಂಇಗಳು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಜಿಡಿಪಿಗೆ ಶೇ 30ರಷ್ಟು ಕೊಡುಗೆ ನೀಡುತ್ತವೆ. ಹೊಸ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮತ್ತು ಡಿಜಿಟಲ್ ಭಾರತ ಪರಿಕಲ್ಪನೆ ಸಾಕಾರಗೊಳಿಸುವಲ್ಲಿ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳು ವಹಿಸುವ ಪ್ರಮುಖ ಪಾತ್ರವನ್ನು ನಾವು ಗುರುತಿಸುತ್ತೇವೆ. ಕ್ರಿಯಾಶೀಲ ಆವಿಷ್ಕಾರಗಳಿಗೆ ನಿರ್ದಿಷ್ಟ ಸೌಲಭ್ಯಗಳ ಅಗತ್ಯ ಇರಲಿದೆ. ಸದೃಢ ತಂತ್ರಜ್ಞಾನ ಬೆಂಬಲ ಮತ್ತು ಸುಸ್ಥಿರ ಬೆಳವಣಿಗೆಗೆ ವಿಶ್ವಾಸಾರ್ಹ ಪಾಲುದಾರರ ಅಗತ್ಯವೂ ಹೆಚ್ಚಿಗೆ ಇರಲಿದೆ," ಎಂದು ತಿಳಿಸಿದ್ದಾರೆ.

 ಎಂಎಸ್‌ಎಂಇಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ
 

ಎಂಎಸ್‌ಎಂಇಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ

"ಎಂಎಸ್‌ಎಂಇಗಳಿಗೆ ದೀರ್ಘಾವಧಿಯ ಪರಿಹಾರಗಳನ್ನು ಒದಗಿಸಲು 'ಭವಿಷ್ಯಕ್ಕೆ ಸಿದ್ಧತೆ ಕಾರ್ಯಕ್ರಮ'ವು ನಮ್ಮ ಬದ್ಧತೆಯ ಪ್ರತೀಕವಾಗಿದೆ. ಉದ್ದಿಮೆಗಳು ತಮ್ಮ ವಹಿವಾಟಿನಲ್ಲಿ ಮುನ್ನಡೆಯಲು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಈ ಕಾರ್ಯಕ್ರಮವು ನೆರವಾಗಲಿದೆ. ಉದ್ದಿಮೆದಾರರು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸರಳಗೊಳಿಸುವ ಗುರಿಯನ್ನೂ ಇದು ಹೊಂದಿದೆ. ಭವಿಷ್ಯದ ಅಗತ್ಯಗಳನ್ನು ಎದುರಿಸಲು ಬೇಕಾಗುವ ಸಿದ್ಧತೆ ಮಾಡಿಕೊಳ್ಳಲು ಹಾಗೂ ವಹಿವಾಟಿನಲ್ಲಿ ಮುನ್ನಡೆ ಸಾಧಿಸಲು ಈ ಕಾರ್ಯಕ್ರಮವು ದೀರ್ಘಾವಧಿಯ ಪರಿಹಾರಗಳನ್ನು ಒದಗಿಸಲಿದೆ. ಎಂಎಸ್‌ಎಂಇಗಳು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ವಹಿವಾಟಿನಲ್ಲಿ ಸರಿಯಾದ ಆದ್ಯತೆಗಳನ್ನು ಗುರುತಿಸಲು, ವಹಿವಾಟಿಗೆ ಸೂಕ್ತ ನಿರ್ದೇಶನ ಮತ್ತು ಪರಿಹಾರಗಳನ್ನು ಇದು ಒದಗಿಸಲಿದೆ. ಈ ಕಾರ್ಯಕ್ರಮವು ಎಂಎಸ್‌ಎಂಇಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ ಎನ್ನುವುದು ನಮ್ಮ ನಿರೀಕ್ಷೆಯಾಗಿದೆ. ಇದು 2,50,000 ಎಂಎಸ್‌ಎಂಇಗಳ ಬೆಳವಣಿಗೆಯನ್ನು ತ್ವರಿತಗೊಳಿಸಲು ಅವುಗಳನ್ನು ಸಶಕ್ತಗೊಳಿಸಲಿದೆ," ಎಂದು ಹೇಳಿದ್ದಾರೆ.

 ಮುಂದಿನ ಕ್ರಮಗಳ ಬಗ್ಗೆ ಶಿಫಾರಸು

ಮುಂದಿನ ಕ್ರಮಗಳ ಬಗ್ಗೆ ಶಿಫಾರಸು

"ರೆಡಿ ಫಾರ್‌ ನೆಕ್ಸ್ಟ್‌" ಮೌಲ್ಯಮಾಪನ ಪ್ರಕ್ರಿಯೆಯು ಉದ್ದಿಮೆಗಳ ಮಾಲೀಕರಿಗೆ ಮೂರು ಪ್ರಮುಖ ಸಂಗತಿಗಳಾದ - ಡಿಜಿಟಲ್ ಗ್ರಾಹಕ, ಡಿಜಿಟಲ್ ಕಾರ್ಯಕ್ಷೇತ್ರ ಮತ್ತು ಡಿಜಿಟಲ್‌ ವ್ಯಾಪಾರದಲ್ಲಿ ತಮ್ಮ ವಹಿವಾಟಿನ ಸ್ವರೂಪ ನಿರ್ಣಯಿಸಲು ಸಹಾಯ ಮಾಡುತ್ತದೆ. ಗ್ರಾಹಕರ ಅಗತ್ಯಗಳನ್ನು ಈಡೇರಿಸುವ ಮತ್ತು ಸೇವೆಗೆ ಸಂಬಂಧಿಸಿದ ವಿಷಯಗಳಲ್ಲಿ, ಸಿಬ್ಬಂದಿ ನಿರ್ವಹಣೆ ಹಾಗೂ ಮೂಲಸೌಕರ್ಯ ವಹಿವಾಟಿನ ದತ್ತಾಂಶ ಮತ್ತು ಸಂಪರ್ಕ ಜಾಲದ ಸುರಕ್ಷತೆ ನಿರ್ವಹಣೆ ಹಾಗೂ ಮೇಲ್ವಿಚಾರಣೆಯಲ್ಲಿ ಉದ್ದಿಮೆಯ ಸನ್ನದ್ಧತೆಗೆ ನೆರವಾಗಲಿದೆ. ಉದ್ದಿಮೆದಾರರು ಡಿಜಿಟಲ್ ಬದಲಾವಣೆಯ ಪಯಣದಲ್ಲಿ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಶಿಫಾರಸುಗಳನ್ನು ಸಹ ಇದು ನೀಡುತ್ತದೆ. ಗ್ರಾಹಕರು ಈ ಸೌಲಭ್ಯವನ್ನು ಇಲ್ಲಿ ಪಡೆಯಬಹುದು.

 ಎಂಎಸ್‌ಎಂಇಗಳಿಗೆ ರೆಡಿ ಫಾರ್‌ ನೆಕ್ಸ್ಟ್‌ನ ವಿಶೇಷ ಕೊಡುಗೆಗಳು

ಎಂಎಸ್‌ಎಂಇಗಳಿಗೆ ರೆಡಿ ಫಾರ್‌ ನೆಕ್ಸ್ಟ್‌ನ ವಿಶೇಷ ಕೊಡುಗೆಗಳು

ಈ ಕಾರ್ಯಕ್ರಮವನ್ನು - ತೊಡಗಿಸಿಕೊಳ್ಳಿ, ಬೆಳೆಯಿರಿ ಮತ್ತು ಸುರಕ್ಷಿತವಾಗಿರಿ -ಈ ಮೂರು ಆಧಾರ ಸ್ತಂಭಗಳ ಮೇಲೆ ನಿರ್ಮಿಸಲಾಗಿದೆ. ತಮ್ಮ ಗ್ರಾಹಕರ ಜೊತೆ ಸಂಪರ್ಕ ಸಾಧಿಸಲು, ವಹಿವಾಟು ಬೆಳೆಸಲು ಮತ್ತು ಡಿಜಿಟಲ್ ಸುರಕ್ಷಿತ ವ್ಯಾಪಾರ ವಾತಾವರಣವನ್ನು ನಿರ್ವಹಿಸಲು ವಿಶೇಷ ಸೌಲಭ್ಯಗಳನ್ನು ನೀಡುತ್ತದೆ. ಸಹಯೋಗದ ಉದ್ದೇಶಕ್ಕೆ ಆರೋಗ್ಯಕರ ವಾತಾವರಣ ಕಲ್ಪಿಸಿಕೊಡಲಿದೆ. ಡಿಜಿಟಲ್‌ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲು ''ವಿಐ ಬಿಸಿನೆಸ್‌" ರೂ 20,000 ಮೌಲ್ಯದ ಪ್ರಯೋಜನಗಳನ್ನು ಕೊಡಲಿದೆ. ಷರತ್ತು ಮತ್ತು ನಿಯಮಗಳು: ಇಲ್ಲಿ ಲಭ್ಯವಿವೆ.

English summary

Vi Business Launches ‘Ready for Next’ Program to help MSMEs

Vi Business Launches ‘Ready for Next’ Program to help MSMEs. On World MSME Day, announces benefit worth of Rs. 20,000 across varied product offerings to address digital gaps.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X