For Quick Alerts
ALLOW NOTIFICATIONS  
For Daily Alerts

Year Ender 2022: 2023ರಲ್ಲಿ ಚಿನ್ನ, ಬೆಳ್ಳಿಯನ್ನು ಖರೀದಿಸಬಹುದೇ?

|

ಈಗ ನಾವು 2022ರ ಅಂತ್ಯದಲ್ಲಿದ್ದೇವೆ, ಹೊಸ ವರ್ಷವನ್ನು ಸ್ವಾಗತಿಸಲು ಇನ್ನು ಎರಡು ದಿನಗಳಷ್ಟೇ ಬಾಕಿ ಉಳಿದಿದೆ. ಈ ನಡುವೆ ಹೂಡಿಕೆ, ಖರೀದಿ ಬಗ್ಗೆ ಕೊಂಚ ತಿಳಿಯುವುದು ಮುಖ್ಯವಾಗಿದೆ. ಕಳೆದ ಮೂರು ತಿಂಗಳುಗಳಿಂದ ಬೆಲೆಬಾಳುವ ಲೋಹಗಳಾದ ಚಿನ್ನ, ಬೆಳ್ಳಿಯಲ್ಲಿ ಕೊಂಚ ಅಧಿಕ ರಿಟರ್ನ್ ಬಂದಿದೆ. ಆದ್ದರಿಂದಾಗಿ ಹೂಡಿಕೆದಾರರು ಈಗ ತಮ್ಮ ಹೂಡಿಕೆಯನ್ನು ಅಧಿಕ ಮಾಡುವ ಚಿಂತನೆಯನ್ನು ನಡೆಸುತ್ತಿದ್ದಾರೆ.

ಗೋಲ್ಡ್ ಇಟಿಎಫ್ ಶೇಕಡ 9.75ರಷ್ಟು ಏರಿಕೆಯನ್ನು ದಾಖಲಿಸಿದ್ದರೆ, ಸಿಲ್ವರ್ ಇಟಿಎಫ್ ಶೇಕಡ 22.55ರಷ್ಟು ಏರಿಕೆಯನ್ನು ಕಂಡಿದೆ. ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ಸ್ (ಇಟಿಎಫ್‌ಗಳು) ನಾವು ಬೆಲೆಬಾಳುವ ಲೋಹದ ಮೇಲೆ ಹೂಡಿಕೆ ಮಾಡಲು ಪ್ರಸ್ತುತ ಅತೀ ಜನಪ್ರಿಯವಾದ ಹೂಡಿಕೆ ವಿಧಾನವಾಗಿದೆ. ನಾವು ಇತ್ತೀಚಿನ ವಿದ್ಯಮಾನವನ್ನು ಗಮನಿಸಿದಾಗ ಚಿನ್ನ ಹಾಗೂ ಬೆಳ್ಳಿಯು ಲಾಭವನ್ನು ನೀಡುವ ಲೋಹವಾಗಿಯೇ ಉಳಿದಿದೆ.

Gold Rate Today: ಚಿನ್ನ, ಬೆಳ್ಳಿ ಬೆಲೆ ಇಳಿಕೆ, ಡಿ.29ರಂದು ದರ ಇಷ್ಟಿದೆ...Gold Rate Today: ಚಿನ್ನ, ಬೆಳ್ಳಿ ಬೆಲೆ ಇಳಿಕೆ, ಡಿ.29ರಂದು ದರ ಇಷ್ಟಿದೆ...

ಆದರೆ ಹೂಡಿಕೆ, ಖರೀದಿ ವಿಚಾರಕ್ಕೆ ಬಂದಾಗ ನಾವು ಕೊಂಚ ಜಾಗರೂಕರಾಗಿರುವುದು ಉತ್ತಮವಲ್ಲವೇ? ಲಾಭವಿಲ್ಲದಿದ್ದರೆ ನಮ್ಮ ವಹಿವಾಟು ವ್ಯರ್ಥವಷ್ಟೆ! ಮುಂದಿನ ವರ್ಷ ಅಂದರೆ 2023ರಲ್ಲಿ ನೀವು ಚಿನ್ನ ಹಾಗೂ ಬೆಳ್ಳಿಯನ್ನು ಖರೀದಿ ಮಾಡಬಹುದೇ? ತಜ್ಞರುಗಳು ಹೇಳುವುದೇನು, ಇಲ್ಲಿದೆ ವಿವರ ಮುಂದೆ ಓದಿ...

 2022ರಲ್ಲಿ ಚಿನ್ನ, ಬೆಳ್ಳಿ ದರ ಏರಿಳಿತ

2022ರಲ್ಲಿ ಚಿನ್ನ, ಬೆಳ್ಳಿ ದರ ಏರಿಳಿತ

ನಾವು ಭವಿಷ್ಯದಲ್ಲಿ ಚಿನ್ನವನ್ನು ಖರೀದಿ ಮಾಡುವ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಈ ಹಿಂದಿನ ವರ್ಷದಲ್ಲಿ ಏನು ನಡೆದಿದೆ ಎಂದು ತಿಳಿಯುವುದು ಮುಖ್ಯವಾಗಿದೆ. 2022ರ ಮೊದಲಾರ್ಧದಲ್ಲಿ ಪ್ರಮುಖವಾದ ಮಾರುಕಟ್ಟೆಗಳಾದ ಈಕ್ವಿಟಿ ಮಾರುಕಟ್ಟೆಗಳು ನಷ್ಟವನ್ನು ಕಂಡಿದೆ. ಫೆಬ್ರವರಿಯಲ್ಲಿ ಉಕ್ರೇನ್ ರಷ್ಯಾದ ಯುದ್ಧದ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ನಷ್ಟ ಉಂಟಾಗಿದೆ. ಹಣದುಬ್ಬರವು ಕೂಡಾ ಅಧಿಕವಾಗಿದೆ. ಇನ್ನು ಮೇ ತಿಂಗಳಿನಲ್ಲಿ ಯುಎಸ್ ಡಾಲರ್ ಬಲಗೊಂಡಂತೆ ಚಿನ್ನದ ದರವು ಸುಮಾರು 18 ತಿಂಗಳ ಕನಿಷ್ಠ ಮಟ್ಟ 1,614 ಡಾಲರ್‌ಗೆ ಇಳಿದಿತ್ತು. ಆದರೆ 2022ರ ನಾಲ್ಕನೇ ತ್ರೈಮಾಸಿಕದಲ್ಲಿ ಡಾಲರ್ ಮೌಲ್ಯ ಏರಿಕೆ ಕೊಂಚ ಹತೋಟಿಗೆ ಬರುತ್ತಿದ್ದಂತೆ ಚಿನ್ನದ ಬೆಲೆಯು ಏರಿಕೆಯಾಗಿದೆ ಎಂದು ತಜ್ಞರುಗಳು ವಿವರಿಸುತ್ತಾರೆ. ವಿಶ್ವದಾದ್ಯಂತ ಕೇಂದ್ರ ಬ್ಯಾಂಕುಗಳು 2022ರ ಮೂರನೇ ತ್ರೈಮಾಸಿಕದಲ್ಲಿ ಸುಮಾರು 400 ಟನ್ ಚಿನ್ನವನ್ನು ಖರೀದಿಸಿದ್ದಾರೆ. ಒಟ್ಟಾಗಿ ವರ್ಷದಲ್ಲಿ 673 ಟನ್ ಚಿನ್ನವನ್ನು ಕೇಂದ್ರ ಬ್ಯಾಂಕುಗಳು ಖರೀದಿಸಿದೆ. ಇದು 1967ರ ಬಳಿಕ ಅಧಿಕ ಖರೀದಿ ಮೌಲ್ಯವಾಗಿದೆ. 2022ರ ಆರಂಭದ ಬಳಿಕ ಈವರೆಗೆ ಚಿನ್ನದ ಬೆಲೆಯು ಶೇಕಡ 13.93ರಷ್ಟು ಏರಿದೆ, ಹತ್ತು ಗ್ರಾಂಗೆ 54,574 ರೂಪಾಯಿಯಂತಿದೆ. ಬೆಳ್ಳಿ ದರ ಶೇಕಡ 11.76ರಷ್ಟು ಹೆಚ್ಚಾಗಿ 69,033 ರೂಪಾಯಿಯಷ್ಟಿದೆ.

 ಭವಿಷ್ಯದಲ್ಲಿ ಚಿನ್ನ, ಬೆಳ್ಳಿ ಸ್ಥಿತಿ ಹೇಗಿರಬಹುದು?
 

ಭವಿಷ್ಯದಲ್ಲಿ ಚಿನ್ನ, ಬೆಳ್ಳಿ ಸ್ಥಿತಿ ಹೇಗಿರಬಹುದು?

ಕಳೆದ ಹಲವು ವರ್ಷಗಳಿಂದ ಜನರು ಲಾಭದ ಕಡೆಗೆ ಹೆಚ್ಚು ವಾಲುತ್ತಿದ್ದಾರೆ. ಲೋಹಗಳಿಗೆ ಕಡಿಮೆ ಬೆಲೆ ಇದ್ದಾಗ ಖರೀದಿ ಮಾಡಿ, ಅದನ್ನು ಅಧಿಕ ಬೆಲೆ ಇದ್ದಾಗ ಮಾರಾಟ ಮಾಡುವುದು ಹಲವಾರು ಮಂದಿಯ ವಹಿವಾಟು ತಂತ್ರವಾಗಿದೆ. ಆದರೆ ತಜ್ಞರ ಪ್ರಕಾರ ಪ್ರಸ್ತುತ ಸ್ಥಿತಿಯು ಹಲವು ಸಮಯದವರೆಗೆ ಮುಂದುವರಿಯಲಿದೆ. "2021ರಲ್ಲಿ ಹಲವಾರು ಮಂದಿ ಹೂಡಿಕೆದಾರರು ಕ್ರಿಪ್ಟೋ ಅತೀ ಸುರಕ್ಷಿತ ಹೂಡಿಕೆ ಎಂದು ಅಂದುಕೊಂಡಿದ್ದರು. ಅದು ಅತೀ ದೊಡ್ಡ ತಪ್ಪಾಗಿತ್ತು. ಆದರೆ ಈಗ ಹಲವಾರು ಮಂದಿ ಹೂಡಿಕೆದಾರರು ಮತ್ತೆ ಅತೀ ಸುರಕ್ಷಿತ ಆಸ್ತಿಯಾದ ಚಿನ್ನದತ್ತ ವಾಲುತ್ತಿದ್ದಾರೆ," ಎಂದು ಐಥಾಟ್ ಅಡ್ವೈಸರಿಯ ಶ್ಯಾಮ್ ಶೇಖರ್ ಹೇಳಿದ್ದಾರೆ. ಯುಎಸ್ ಡಾಲರ್ ಮೌಲ್ಯ ಹೆಚ್ಚಾದರೆ ಬಂಗಾರ ಮೌಲ್ಯ ಇಳಿಯುತ್ತದೆ. ಯುಎಸ್ ಡಾಲರ್ ಮೌಲ್ಯ ಕಡಿಮೆಯಾದರೆ ಬಂಗಾರ ದರ ಹೆಚ್ಚಾಗುತ್ತದೆ. ಚಿನ್ನದ ಬೆಲೆ ಎಂದಿಗೂ ಡಾಲರ್ ಮೇಲೆ ಅವಲಂಭಿತವಾಗಿರುತ್ತದೆ. ಆದ್ದರಿಂದಾಗಿ ಯುಎಸ್ ಫೆಡರಲ್ ರಿಸರ್ವ್‌ನ ಎಲ್ಲ ನಿರ್ಧಾರಗಳು ಚಿನ್ನದ ಬೆಲೆ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಇನ್ನು ಸಾಮ್ಕೋ ಸೆಕ್ಯೂರಿಟೀಸ್‌ನ ಅಪೂರ್ವ ಸೇಟ್ ಪ್ರಕಾರ ಚಿನ್ನದ ಬೆಲೆಯು 2023ರಲ್ಲಿ 10 ಗ್ರಾಂಗೆ 65 ಸಾವಿರ ರೂಪಾಯಿ ಆಗಬಹುದು.

 ಬೆಳ್ಳಿ ಚಿನ್ನವಲ್ಲ ನೆನೆಪಿರಲಿ

ಬೆಳ್ಳಿ ಚಿನ್ನವಲ್ಲ ನೆನೆಪಿರಲಿ

ಬೆಳ್ಳಿಯು ಈ ವರ್ಷದಲ್ಲಿ ಬಹಳಷ್ಟು ಏರಿಳಿತವನ್ನು ಕಂಡಿದೆ. ಮುಂದಿನ ದಿನಗಳಲ್ಲಿ ಹಿಂಜರಿತವು ಬೆಳ್ಳಿ ಮೇಲೆ ಪರಿಣಾಮ ಬೀರಿದರೆ ಬೆಳ್ಳಿ ದರವು ಚಿನ್ನದ ದರಕ್ಕೆ ಸಮೀಪವಾಗಬಹುದು. ಈ ಬಗ್ಗೆ ಮಾಹಿತಿ ನೀಡಿದ, ಸಾಮ್ಕೋ ಸೆಕ್ಯೂರಿಟೀಸ್‌ನ ಅಪೂರ್ವ ಸೇಟ್, "ಬೆಳ್ಳಿ ದರವು ಹಲವು ದಿನಗಳಿಂದ ಬಳಗೊಳ್ಳುತ್ತಿದೆ. ಡಾಲರ್ ಮೌಲ್ಯವು ಇಳಿದರೆ, ಬೆಳ್ಳಿ ದರದಲ್ಲಿ ಇನ್ನಷ್ಟು ಏರಿಕೆಯನ್ನು ನಾವು ಕಾಣಬಹುದು," ಎಂದು ತಿಳಿಸಿದ್ದಾರೆ. ಮುಂದಿನ 30 ದಿನದಲ್ಲಿ ಬೆಳ್ಳಿ ದರವು 1 ಲಕ್ಷವನ್ನು ತಲುವುವ ಸಾಧ್ಯತೆಯನ್ನು ಕೂಡಾ ತಿಳಿಸಿದ್ದಾರೆ. ಪ್ರತಿ ಕೆಜಿ ಬೆಳ್ಳಿ ದರವು 75,000 ಸಮೀಪಕ್ಕೆ ತಲುಪುತ್ತಿದೆ. ದರವು ಅದಕ್ಕೂ ಅಧಿಕವಾಗುತ್ತಲೇ ಹೋಗಬಹುದು. ಇನ್ನು ಐಐಎಫ್‌ಎಲ್ ಸೆಕ್ಯೂರಿಟೀಸ್‌ನ ಅನುಜ್ ಗುಪ್ತಾ ಪ್ರಕಾರ ಮುಂದಿನ ವರ್ಷದಲ್ಲಿ ಚಿನ್ನದ ಬೆಲೆಯು ಹತ್ತು ಗ್ರಾಂಗೆ 58,000ರಿಂದ 60,000 ರೂಪಾಯಿಗೆ ತಲುಪಿದರೆ, ಬೆಳ್ಳಿ ದರವು ಪ್ರತಿ ಕೆಜಿಗೆ 75,000ರಿಂದ 80,000 ರೂಪಾಯಿಗೆ ತಲುಪಲಿದೆ.

 ನೀವೇನು ಮಾಡಬೇಕು?

ನೀವೇನು ಮಾಡಬೇಕು?

ನೀವು ಚಿನ್ನವನ್ನು ಖರೀದಿ ಮಾಡುವುದರ ಬಗ್ಗೆ ಅಧಿಕ ಗಮನವನ್ನು ಹರಿಸಬಹುದು. ಆದರೆ ನೀವು ಕೊಂಚ ಜಾಗರೂಕರಾಗಿರುವುದು ಉತ್ತಮ. ನಿಮ್ಮ ಆದಾಯವನ್ನು ಎಲ್ಲಿ ಎಷ್ಟು ಖರ್ಚು ಮಾಡಬೇಕು ಎಂದು ನೋಡಿಕೊಳ್ಳಿ. ನೀವು ಈಗಾಗಲೇ ಸುಮಾರು 10 ಶೇಕಡದಷ್ಟು ಮೊತ್ತವನ್ನು ಚಿನ್ನಕ್ಕೆಂದು ಇರಿಸಿದ್ದೀರಿ ಅಂದುಕೊಳ್ಳಿ, ಅಥವಾ ಚಿನ್ನದ ಹೂಡಿಕೆ ಬಳಸುತ್ತಿದ್ದೀರಿ ಅಂದುಕೊಳ್ಳೋಣ, ಅದಕ್ಕೂ ಅಧಿಕ ಹೂಡಿಕೆಯನ್ನು ಮಾಡುವ ಅಗತ್ಯವಿಲ್ಲ ಎಂಬುವುದು ತಜ್ಞರೊಬ್ಬರ ಅಭಿಪ್ರಾಯವಾಗಿದೆ. ಐಥಾಟ್ ಅಡ್ವೈಸರಿಯ ಶ್ಯಾಮ್ ಶೇಖರ್ ಪ್ರಕಾರ, "ಮ್ಯೂಚುವಲ್ ಫಂಡ್ ಮೂಲಕ ಹೂಡಿಕೆದಾರರು ಶೇಕಡ 10ರಷ್ಟು ಚಿನ್ನಕ್ಕೆ ಹೂಡಿಕೆ ಮಾಡಬಹುದು. ಶೇಕಡ 5ರಷ್ಟು ಬೆಳ್ಳಿಗೆ ಹೂಡಿಕೆ ಮಾಡಬಹುದು," ಎಂದು ತಿಳಿಸಿದ್ದಾರೆ.

English summary

Year Ender 2022: Should you buy gold and silver in 2023, Explained in Kannada

Year Ender 2022: Should you buy gold and silver in 2023, Here is what experts expect from gold and silver in CY2023. Explained in Kannada.
Story first published: Friday, December 30, 2022, 11:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X