For Quick Alerts
ALLOW NOTIFICATIONS  
For Daily Alerts

"2 ಸಾವಿರದ ನೋಟು ಹೋಗಲ್ಲ, 1 ಸಾವಿರದ ನೋಟು ಬರಲ್ಲ"

|

ನೋಟು ಚಲಾವಣೆ ಬಗ್ಗೆ ನಾನಾ ವದಂತಿಗಳು ಹರಿದಾಡುತ್ತಲೇ ಇವೆ. 2 ಸಾವಿರ ರುಪಾಯಿ ನೋಟನ್ನು ಸರ್ಕಾರ ನಿಷೇಧ ಮಾಡುತ್ತದೋ ಇಲ್ಲವೋ ಕೆಲವು ಮಾಧ್ಯಮಗಳಂತೂ ಈಗಾಗಲೇ ಮಾಡಿಯಾಗಿದೆ. ಸ್ವತಃ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೂ ಗೊತ್ತಿಲ್ಲದ 2 ಸಾವಿರ ರುಪಾಯಿ ನೋಟು ನಿಷೇಧದ ಬಗ್ಗೆ ಮಾಧ್ಯಮಗಳಿಗೆ ಗೊತ್ತಾಗಿದ್ದು ಹೇಗೆ? ಈಗ 1,000 ರುಪಾಯಿ ನೋಟು ಮತ್ತೆ ಬರುತ್ತದೆ ಎಂದು ಗುಲ್ಲೆಬ್ಬಿಸಲಾಗುತ್ತಿದೆ.

 

ಆ ರೀತಿ ಏನೂ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನಕಲಿ ಫೋಟೋ. ಅಂಥ ಯಾವ ಅಧಿಸೂಚನೆಯನ್ನೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿಲ್ಲ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಸರಿ, ಇದು ಸತ್ಯ ಅಂತ ನಿಮಗೆ ಹೇಗೆ ಗೊತ್ತು ಎಮ್ದು ಪ್ರಶ್ನೆ ಕೇಳುವವರಿಗೆ, ಒಂದು ರಿಯಾಲಿಟಿ ಚೆಕ್ ಮಾಡಿಯೇ ಪಿಐಬಿ ಫ್ಯಾಕ್ಟ್ ಚೆಕ್ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಹಾಕಲಾಗಿದೆ.

ಸದ್ಯಕ್ಕೆ ಯಾವ ನೋಟುಗಳು ಚಲಾವಣೆಯಲ್ಲಿ ಇವೆಯೋ ಅವೇ ಮುಂದುವರಿಯಲಿವೆ. ಹೊಸ ಹಾಗೂ ಹಳೇ ನೂರು ರುಪಾಯಿ ನೋಟಿನ ಆಕಾರದಲ್ಲಿ ವ್ಯತ್ಯಾಸ ಇರುವುದರಿಂದ ಎಟಿಎಂನಲ್ಲಿ ಹಣ ತುಂಬುವುದು ಸಮಸ್ಯೆ ಆಗಿತ್ತು. ಅದನ್ನು ಸರಿಪಡಿಸುವುದಕ್ಕೆ ಮುಂದಾಗಲಿದೆ. ಹೊರತುಪಡಿಸಿದರೆ ಎರಡು ಸಾವಿರ ರುಪಾಯಿ ನೋಟು ನಿಷೇಧ ಆಗುತ್ತದೆ ಅನ್ನೋದೆಲ್ಲ ಶುದ್ಧ ಸುಳ್ಳು ಎಂಬುದು ಮೂಲಗಳ ಮಾಹಿತಿ.

ಈ ಹಿಂದೆ ನೋಟು ನಿಷೇಧ ಮಾಡಲಿಲ್ಲವಾ, ಹಾಗೆ ಈಗಲೂ ಮಾಡಬಹುದು ಎಂಬುದು ಕೆಲವರ ವಾದ. ನೆನಪಿರಲಿ, ಚಲಾವಣೆಯಲ್ಲಿ ಇರುವ 2 ಸಾವಿರ ರುಪಾಯಿ ನೋಟುಗಳನ್ನು ಹಿಂಪಡೆದು ಅದಕ್ಕೆ ಸಮಾನವಾದ ಅಥವಾ ಪರ್ಯಾಯವಾದ ನೋಟು ವಿತರಣೆ ಮಾಡುವುದಕ್ಕೆ ಎಷ್ಟು ಸಮಯ, ಹಣ, ಶ್ರಮ ಆಗುತ್ತದೆ ಮತ್ತು ಅದರಿಂದ ಆಗಬಹುದಾದ ದೊಡ್ಡ ಪ್ರಯೋಜನವಾದರೂ ಏನು?

ಎರಡು ಸಾವಿರ ರುಪಾಯಿ ನೋಟಿಗೆ ತಲೆ ಮೇಲೆ ಹೊಡೆದಂತೆ ಇರುವ ನಕಲಿ ನೋಟುಗಳು ಚಲಾವಣೆಗೆ ಬಂದಿರುವುದು ಆರ್ ಬಿಐ ಅಧಿಕಾರಿಗಳಿಗೆ ಗೊತ್ತಾಗಿದೆ. ಅದಕ್ಕೆ ಏನು ಕ್ರಮ ಕೈಗೊಳ್ಳಬಹುದು ಎಂಬ ಆಲೋಚನೆಯಲ್ಲಿದ್ದಾರೆ.

English summary

1 Thousand Rupee Currency Will Not Come: Source Confirmed

1 thousand currency will not come, 2 thousand currency will not ban, confirmed by sources.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X