For Quick Alerts
ALLOW NOTIFICATIONS  
For Daily Alerts

11.58 ಲಕ್ಷ ರೈಲ್ವೆ ಸಿಬ್ಬಂದಿಗೆ 78 ದಿನಕ್ಕೆ ಸಮಾನವಾದ ವೇತನ ಬೋನಸ್ ಆಗಿ ಘೋಷಣೆ

|

11.58 ಲಕ್ಷದಷ್ಟು ನಾನ್ ಗೆಜೆಟೆಡ್ ರೈಲ್ವೆ ಉದ್ಯೋಗಿಗಳಿಗೆ 2019- 20ನೇ ಸಾಲಿನ ಆರ್ಥಿಕ ವರ್ಷಕ್ಕೆ 78 ದಿನಕ್ಕೆ ಸಮಾನವಾದ ವೇತನವನ್ನು ಬೋನಸ್ ಆಗಿ ಘೋಷಣೆ ಮಾಡಲಾಗಿದೆ. ಇದು ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ ಆಗಿದ್ದು, ಇದರಿಂದ ಸರ್ಕಾರಕ್ಕೆ 2081.68 ಕೋಟಿ ರುಪಾಯಿ ಖರ್ಚು ಬರಲಿದೆ ಎಂದು ಅಧಿಕೃತ ಬಿಡುಗಡೆಯಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ 21ನೇ ತಾರೀಕಿನಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರೈಲ್ವೆ ಸಚಿವಾಲಯವು ಮುಂದಿಟ್ಟ ಪ್ರಸ್ತಾವವನ್ನು ಒಪ್ಪಿಕೊಂಡಿತು. ಆರ್ ಆರ್ ಎಫ್ ಹಾಗೂ ಆರ್ ಪಿಎಸ್ ಎಫ್ ಸಿಬ್ಬಂದಿಯನ್ನು ಹೊರತುಪಡಿಸಿದಂತೆ ಎಲ್ಲ ಅರ್ಹ ನಾನ್ ಗೆಜೆಟೆಡ್ ರೈಲ್ವೆ ಸಿಬ್ಬಂದಿಗೆ 78 ದಿನಗಳಿಗೆ ಸಮಾನವಾದ ವೇತನವು ಬೋನಸ್ ಆಗಿ ದೊರೆಯಲಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಬೋನಸ್; 30 ಲಕ್ಷ ಉದ್ಯೋಗಿಗಳಿಗೆ ವಿಜಯದಶಮಿ ಸಿಹಿಕೇಂದ್ರ ಸರ್ಕಾರಿ ನೌಕರರಿಗೆ ಬೋನಸ್; 30 ಲಕ್ಷ ಉದ್ಯೋಗಿಗಳಿಗೆ ವಿಜಯದಶಮಿ ಸಿಹಿ

ಇದಕ್ಕಾಗಿ ವೇತನವನ್ನು ಲೆಕ್ಕಾಚಾರ ಮಾಡುವಾಗ ನಾನ್ ಗೆಜೆಟೆಡ್ ರೈಲ್ವೆ ಸಿಬ್ಬಂದಿಗೆ ತಿಂಗಳ ಗರಿಷ್ಠ ಮಿತಿ ಎಂದು 7000 ರುಪಾಯಿ ನಿಗದಿ ಪಡಿಸಲಾಗಿದೆ. 78 ದಿನಗಳಿಗೆ ಅರ್ಹ ರೈಲ್ವೆ ಉದ್ಯೋಗಿಗೆ ಗರಿಷ್ಠ ಬೋನಸ್ ಮೊತ್ತ 17,951 ರುಪಾಯಿ ದೊರೆಯುತ್ತದೆ. ಪ್ರತಿ ವರ್ಷ ದಸರಾ ರಜಾಗೆ ಮುಂಚೆ ಈ ಬೋನಸ್ ನೀಡಲಾಗುತ್ತದೆ.

11.58 ಲಕ್ಷ ರೈಲ್ವೆ ಸಿಬ್ಬಂದಿಗೆ 78 ದಿನಕ್ಕೆ ಸಮಾನವಾದ ವೇತನ ಬೋನಸ್

ಅದೇ ರೀತಿ ಈ ವರ್ಷವೂ ಬೋನಸ್ ಘೋಷನೆ ಮಾಡಲಾಗಿದೆ. ಹಬ್ಬಗಳ ರಜಾಗೂ ಮುಂಚೆ ಕೇಂದ್ರ ಸಂಪುಟದ ತೀರ್ಮಾನವು ಜಾರಿಗೆ ಬರಲಿದೆ.

English summary

11.58 Lakh Railway Non Gazetted Employees To Get Bonus Equivalent To 78 Days Wages

Union government on Thursday announced that, 11.58 lakh railway non gazetted employees to get 78 days equivalent wages as bonus.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X