For Quick Alerts
ALLOW NOTIFICATIONS  
For Daily Alerts

ನೀರವ್ ಮೋದಿ, ಚೋಕ್ಸಿಯ 1,350 ಕೋಟಿಯ ವಜ್ರ, ಮುತ್ತು ಅಂತೂ ಬಂತು

|

2,300 ಕೇಜಿಗೂ ಹೆಚ್ಚು ತೂಕದ ಪಾಲಿಶ್ ಆದ ವಜ್ರಗಳು, ಮುತ್ತು ಮತ್ತು ಆಭರಣಗಳು ಭಾರತಕ್ಕೆ ಬಂದಿವೆ. ಇವುಗಳ ಮೌಲ್ಯ 1,350 ಕೋಟಿ ರುಪಾಯಿ. ಅಂದ ಹಾಗೆ ಇದು ಯಾವುದೋ ರಾಜ ಮನೆತನದ ಆಸ್ತಿಯಲ್ಲ. ವಂಚನೆ ಆರೋಪ ಹೊತ್ತಿರುವ ಆಭರಣ ವ್ಯಾಪಾರಿ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ದುಬೈಗೆ ತಲುಪಿಸಲು ಸಿದ್ಧತೆ ನಡೆಸಿದ್ದರು ಎನ್ನಲಾದವು. ಇವುಗಳನ್ನು ಜಾರಿ ನಿರ್ದೇಶನಾಲಯದಿಂದ ಭಾರತಕ್ಕೆ ವಾಪಸ್ ತರಲಾಗಿದೆ.

ನೀರವ್ ಮೋದಿ ಹಾಗೂ ಆತನ ಸಂಬಂಧಿ ಮೆಹುಲ್ ಚೋಕ್ಸಿ ನಡೆಸುತ್ತಿದ್ದ ಸಂಸ್ಥೆಗೆ ಸೇರಿದ್ದ ಇವುಗಳನ್ನು 108 ಪ್ಯಾಕೇಜ್ ಗಳಲ್ಲಿ ಹಾಂಕಾಂಗ್ ನಿಂದ ಇ.ಡಿ. "ಯಶಸ್ವಿಯಾಗಿ ಆಮದು" ಮಾಡಿಕೊಂಡಿದೆ. ಅಧಿಕಾರಿಗಳಿಂದ ತಪ್ಪಿಸಿಕೊಂಡು, 2018ರಲ್ಲಿ ಹಾಂಕಾಂಗ್ ನಿಂದ ದುಬೈಗೆ ಇವುಗಳನ್ನು ಸಾಗಿಸಲು ಇವರಿಬ್ಬರು ಯೋಜನೆ ರೂಪಿಸಿದ್ದರು.

ಸರಕಿನ ಮೌಲ್ಯ 1,350 ಕೋಟಿ ರುಪಾಯಿ

ಸರಕಿನ ಮೌಲ್ಯ 1,350 ಕೋಟಿ ರುಪಾಯಿ

ಈಗ ವಶಪಡಿಸಿಕೊಂಡು ಭಾರತಕ್ಕೆ ತಂದಿರುವುದರಲ್ಲಿ ಪಾಲಿಶ್ ಆದ ವಜ್ರಗಳು, ಮುತ್ತು, ಮುತ್ತು ಹಾಗೂ ಬೆಳ್ಳಿ ಆಭರಣಗಳು ಇವೆ. ತನಿಖಾಧಿಕಾರಿಗಳು ಹೇಳುವಂತೆ ಈ ಸರಕಿನ ಮೌಲ್ಯ 1,350 ಕೋಟಿ ರುಪಾಯಿ. ಇನ್ನು ತೂಕ 2,340 ಕೇಜಿ. ಗುಪ್ತಚರ ದಳ ನೀಡಿದ ಸುಳಿವಿನ ಮೇರೆಗೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಅಧಿಕೃತವಾಗಿ ಜಪ್ತಿ ಮಾಡಿಕೊಂಡಿದ್ದ ಆಭರಣಗಳನ್ನು ಹಾಂಕಾಂಗ್ ನಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲು ಪ್ರಯತ್ನ ನಡೆಸಿತ್ತು.

2018ರಲ್ಲಿ ಇಬ್ಬರೂ ದೇಶ ಬಿಟ್ಟು ಪಲಾಯನ

2018ರಲ್ಲಿ ಇಬ್ಬರೂ ದೇಶ ಬಿಟ್ಟು ಪಲಾಯನ

ಈ ಪ್ಯಾಕೇಜ್ ಗಳನ್ನು ಮುಂಬೈಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಹೇಳುವಂತೆ, ಒಟ್ಟು 108 ಕನ್ ಸೈನ್ ಮೆಂಟ್ ಗಳಿದ್ದು, ಅದರಲ್ಲಿ 32 ನೀರವ್ ಮೋದಿಗೆ ಸೇರಿದೆ. 76 ಮೆಹುಲ್ ಚೋಕ್ಸಿಗೆ ಸೇರಿದ್ದಾಗಿದೆ. ನಕಲಿ ಗ್ಯಾರಂಟಿಗಳನ್ನು ನೀಡಿ, ಪಿಎನ್ ಬಿಯಿಂದ ಇವರಿಬ್ಬರೂ ಸಾಲ ಪಡೆದು, ವಂಚಿಸಿದ್ದರು. ಸಿಬಿಐ ತನಿಖೆ ಆರಂಭಿಸುವ ಮುಂಚೆಯೇ 2018ರಲ್ಲಿ ಇಬ್ಬರೂ ದೇಶ ಬಿಟ್ಟು ಪಲಾಯನ ಮಾಡಿದ್ದರು.

PMLA ಅಡಿಯಲ್ಲಿ ಇಬ್ಬರ ವಿರುದ್ಧವೂ ಪ್ರಕರಣ

PMLA ಅಡಿಯಲ್ಲಿ ಇಬ್ಬರ ವಿರುದ್ಧವೂ ಪ್ರಕರಣ

ಇಬ್ಬರೂ ಉದ್ಯಮಿಗಳ ಬಗ್ಗೆ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ (PMLA) ಅಡಿಯಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ.) ತನಿಖೆ ನಡೆಯುತ್ತಿದೆ. ಕಳೆದ ವರ್ಷ ಲಂಡನ್ ನಲ್ಲಿ ನೀರವ್ ಮೋದಿಯನ್ನು ಬಂಧಿಸಲಾಗಿದೆ. ಆತ ಜೈಲಿನಲ್ಲಿದ್ದು, ಭಾರತಕ್ಕೆ ಹಸ್ತಾಂತರ ಮಾಡುವುದನ್ನು ವಿರೋಧಿಸಿ ಹೋರಾಟ ನಡೆಸುತ್ತಿದ್ದಾನೆ. ಬ್ಯಾಂಕ್ ಗಳಿಗೆ ನೀರವ್ ಮೋದಿಯಿಂದ ಬರಬೇಕಾದ ಮೊತ್ತವನ್ನು ಸ್ವಲ್ಪವಾದರೂ ವಸೂಲಿ ಮಾಡಬೇಕು ಎಂಬ ಕಾರಣಕ್ಕೆ ಆತನಿಗೆ ಸೇರಿದ ರೋಲ್ಸ್ ರಾಯ್ಸ್ ಕಾರು, ಎಂ.ಎಫ್. ಹುಸೇನ್ ಹಾಗೂ ಅಮೃತ ಶೆರ್ಗಿಲ್ ರಚಿಸಿದ ಕಲಾಕೃತಿಗಳು, ಡಿಸೈನರ್ ಹ್ಯಾಂಡ್ ಬ್ಯಾಗ್ ಮತ್ತಿತರ ವಿಲಾಸಿ ವಸ್ತುಗಳನ್ನು ತನಿಖಾ ಸಂಸ್ಥೆಗಳು ವಶಪಡಿಸಿಕೊಂಡು, ಹರಾಜು ಹಾಕಿಸಿವೆ.

English summary

1350 Crore Worth Of Diamond, Pearl Of Nirav Modi, Choksi Brought To India

PNB scam accused Nirav Modi and Mehul Choksi's 1350 crore worth of diamond, pearl and gold jewelry brought to India by enforcement directorate.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X