For Quick Alerts
ALLOW NOTIFICATIONS  
For Daily Alerts

2000 ರುಪಾಯಿ ಮುಖಬೆಲೆಯ ನೋಟುಗಳು ಹೊಸದಾಗಿ ಮುದ್ರಣ ಮಾಡಿಲ್ಲ: ಆರ್ ಬಿಐ

|

2000 ರುಪಾಯಿ ಮುಖಬೆಲೆಯ ನೋಟುಗಳು 2019- 20ರಲ್ಲಿ ಮುದ್ರಣ ಮಾಡಿಲ್ಲ ಮತ್ತು ವರ್ಷದಿಂದ ವರ್ಷಕ್ಕೆ ಈ ನೋಟುಗಳ ಚಲಾವಣೆ ಕಡಿಮೆ ಆಗುತ್ತಾ ಬಂದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವರದಿಯಲ್ಲಿ ತಿಳಿದುಬಂದಿದೆ. 2018ನೇ ಇಸವಿಯ ಮಾರ್ಚ್ ಕೊನೆ ಹೊತ್ತಿಗೆ 2000 ರುಪಾಯಿ ಮುಖಬೆಲೆಯ 33,632 ಲಕ್ಷ ನೋಟುಗಳು ಚಲಾವಣೆಯಲ್ಲಿ ಇದ್ದವು. 2019ರ ಮಾರ್ಚ್ ಹೊತ್ತಿಗೆ ಅದು 32,910 ಲಕ್ಷಕ್ಕೆ ಇಳಿದಿದೆ.

 

ಈ ವರ್ಷದ ಮಾರ್ಚ್ ಕೊನೆ ಹೊತ್ತಿಗೆ 2000 ರುಪಾಯಿ ಮುಖಬೆಲೆಯ ನೋಟುಗಳ ಸಂಖ್ಯೆ 27,938 ಲಕ್ಷಕ್ಕೆ ಇಳಿದಿದೆ ಎಂದು ಆರ್ ಬಿಐ ವಾರ್ಷಿಕ ವರದಿ ತಿಳಿಸಿದೆ. ಒಟ್ಟಾರೆ ಚಲಾವಣೆಯಲ್ಲಿ ಇರುವ ನೋಟುಗಳ ಪೈಕಿ 2000 ಮುಖಬೆಲೆಯದು 2.4 ಪರ್ಸೆಂಟ್ ನಷ್ಟಿದೆ. ಇದು 2020ರ ಮಾರ್ಚ್ ಅಂಕಿ- ಅಂಶ. ಈ ಪ್ರಮಾಣ 2019ರಲ್ಲಿ 3% ಹಾಗೂ 2018ರಲ್ಲಿ 3.3% ನಷ್ಟು ಇತ್ತು.

500, 200 ರುಪಾಯಿ ನೋಟುಗಳ ಚಲಾವಣೆ ಹೆಚ್ಚಳ

500, 200 ರುಪಾಯಿ ನೋಟುಗಳ ಚಲಾವಣೆ ಹೆಚ್ಚಳ

ಮೌಲ್ಯದ ಲೆಕ್ಕದಿಂದಲೂ 2020ರ ಮಾರ್ಚ್ ಹೊತ್ತಿಗೆ 22.6%ಗೆ ಕುಸಿದಿದೆ. ಈ ಪ್ರಮಾಣ 2019ರಲ್ಲಿ 31.2% ಹಾಗೂ 2018ರಲ್ಲಿ 37.3% ನಷ್ಟು ಇತ್ತು. ಈ ಮಧ್ಯೆ 500 ಹಾಗೂ 200 ರುಪಾಯಿಗಳ ಚಲಾವಣೆ ಮೌಲ್ಯ ಹಾಗೂ ಪ್ರಮಾಣ ಎರಡೂ ಹೆಚ್ಚಾಗಿದೆ. ಈ ಮಧ್ಯೆ 2019- 20ನೇ ಇಸವಿಯಲ್ಲಿ 2000 ರುಪಾಯಿ ನೋಟು ಮುದ್ರಿಸುವಂತೆ ಯಾವ ಬೇಡಿಕೆ ಬಂದಿಲ್ಲ ಎಂಬ ಮಾಹಿತಿ ನೀಡಲಾಗಿದೆ. ಇದರ ಜತೆಗೆ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್ ಮತ್ತು ಸೆಕ್ಯೂರಿಟಿ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೊರೇಷನ್ ನಿಂದ ಹೊಸದಾಗಿ ಪೂರೈಕೆ ಆಗಿಲ್ಲ. ಒಟ್ಟಾರೆಯಾಗಿ 2019- 20ರಲ್ಲಿ ಬ್ಯಾಂಕ್ ನೋಟುಗಳ ಬೇಡಿಕೆಯೇ ಹಿಂದಿನ ವರ್ಷಕ್ಕಿಂತ 13.1 ಪರ್ಸೆಂಟ್ ಕಡಿಮೆ ಆಗಿದೆ.

ಲಾಕ್ ಡೌನ್ ನಿಂದ ಆಗಿರುವ ಪರಿಣಾಮ

ಲಾಕ್ ಡೌನ್ ನಿಂದ ಆಗಿರುವ ಪರಿಣಾಮ

2019- 20ರಲ್ಲಿ ಬ್ಯಾಂಕ್ ನೋಟ್ ಪೂರೈಕೆ ಕೂಡ ಹಿಂದಿನ ವರ್ಷಕ್ಕಿಂತ 23.3 ಪರ್ಸೆಂಟ್ ಕಡಿಮೆ ಆಗಿದೆ. ಕೊರೊನಾ ಕಾರಣಕ್ಕೆ ಲಾಕ್ ಡೌನ್ ಇದ್ದುದರಿಂದ ಹೀಗಾಗಿದೆ ಎಂದು ಹೇಳಲಾಗಿದೆ. 500 ರುಪಾಯಿ ಮುಖಬೆಲೆಯ ನೋಟುಗಳು 1,463 ಕೋಟಿ ತುಂಡುಗಳು ಬೇಡಿಕೆ ಬಂದಿದೆ. 1200 ಕೋಟಿ ತುಂಡುಗಳನ್ನು 2019- 20ರಲ್ಲಿ ಪೂರೈಸಲಾಗಿದೆ. 100 ರುಪಾಯಿ ನೋಟುಗಳು 330 ಕೋಟಿ ತುಂಡುಗಳು, 50 ರುಪಾಯಿ ನೋಟು 240 ಕೋಟಿ ತುಂಡುಗಳು, 200 ರುಪಾಯಿ ನೋಟುಗಳು 205 ಕೋಟಿ ತುಂಡುಗಳು, 10 ರುಪಾಯಿಯ 147 ಕೋಟಿ ತುಂಡುಗಳು, 20 ರುಪಾಯಿಯ 125 ಕೋಟಿ ತುಂಡುಗಳಿಗೆ 2019-20ರಲ್ಲಿ ಬೇಡಿಕೆ ಸಲ್ಲಿಸಲಾಗಿದೆ.

ನಕಲಿ ನೋಟುಗಳ ಪ್ರಮಾಣ ಹೆಚ್ಚು
 

ನಕಲಿ ನೋಟುಗಳ ಪ್ರಮಾಣ ಹೆಚ್ಚು

ಒಟ್ಟಾರೆ 2,96,695 ನಕಲಿ ನೋಟುಗಳು ಪತ್ತೆಯಾಗಿವೆ. ಅದರಲ್ಲಿ 4.6 ಪರ್ಸೆಂಟ್ ನಷ್ಟು ನಕಲಿ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಂಡುಹಿಡಿದಿದ್ದರೆ, 95.4 ಪರ್ಸೆಂಟ್ ನಷ್ಟು ಇತರ ಬ್ಯಾಂಕ್ ಗಳು ಕಂಡುಹಿಡಿದಿವೆ. ಹಿಂದಿನ ಬಾರಿಗಿಂತ ಈ ಸಲ ನಕಲಿ ನೋಟುಗಳ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆ ಪೈಕಿ ಎರಡು ಸಾವಿರ ಮುಖ ಬೆಲೆಯ ನಕಲಿ ನೋಟು ಪ್ರಮಾಣ ಕಡಿಮೆ ಆಗಿದೆ. ಕೊರೊನಾ ಸೇರಿದಂತೆ ಮತ್ತಿತರ ಬೆಳವಣಿಗೆಗಳ ಕಾರಣಕ್ಕೆ ಕೆಲವು ನೋಟುಗಳ ಮುದ್ರಣ ಕಾರ್ಯಗಳು ಮುಂದಕ್ಕೆ ಹೋಗಿವೆ ಎಂದು ಮೂಲಗಳು ತಿಳಿಸಿವೆ.

English summary

2000 Rupees Face Value Currency Notes Not Printed in 2019-20

According to RBI report, 2000 Rupees face value currency notes not printed in 2019- 20. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X