For Quick Alerts
ALLOW NOTIFICATIONS  
For Daily Alerts

ಪಾತಾಳಕ್ಕಿಳಿದ ರುಪಾಯಿ ದರ, ಇಂಧನ ಬೆಲೆ ವ್ಯತ್ಯಯ?

By Mahesh
|

ಪಾತಾಳಕ್ಕಿಳಿದ ರುಪಾಯಿ ದರ, ಇಂಧನ ಬೆಲೆ ವ್ಯತ್ಯಯ?
INR
83.382United States Dollar
90.156Euro
ಮುಂಬೈ, ಜೂ.22: ಡಾಲರ್ ಮುಂದೆ ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಶುಕ್ರವಾರ(ಜೂ.22) ದಾಖಲೆ ಕುಸಿತ ಕಂಡಿದೆ. ಒಂದು ಡಾಲರ್ ಮುಂದೆ ರೂಪಾಯಿ ಮೌಲ್ಯ 57.06 ತನಕ ಕುಸಿತವಾಗಿದೆ.

ತೈಲ ರಫ್ತುದಾರರು ಅಮೆರಿಕದ ಕರೆನ್ಸಿ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ವಿಶ್ವ ಮಾರುಕಟ್ಟೆಯಲ್ಲಿ ಯುರೋ ಮತ್ತು ಇತರ ಕರೆನ್ಸಿಗಳ ಮುಂದೆ ಡಾಲರ್ ತನ್ನ ಮೌಲ್ಯವನ್ನು ಹೆಚ್ಚಳ ಕಂಡಿದೆ.

 

ಷೇರು ಮಾರುಕಟ್ಟೆಯಲ್ಲಿನ ಕುಸಿತ ಕೂಡ ರೂಪಾಯಿ ಮೌಲ್ಯದ ಮೇಲೆ ಭಾರಿ ಹೊಡೆತ ಕೊಟ್ಟಿದೆ. ಗುರುವಾರದ ಅಂತ್ಯಕ್ಕೆ ರೂಪಾಯಿ ಮೌಲ್ಯ 56.03ಕ್ಕೆ ಕುಸಿದಿತ್ತು.

 

ಶುಕ್ರವಾರ ಆರಂಭದಲ್ಲಿ ರೂಪಾಯಿ ಮೌಲ್ಯ 56.80 ರೂ. ಇತ್ತು. ಆದರೆ ಸ್ವಲ್ಪ ಚೇತರಿಕೆ ಕಂಡು 56.76 ಆಗಿತ್ತು. ಆದರೆ ಇದರ ಬಳಿಕ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿ 57.06 ಕ್ಕೆ ಕುಸಿತವಾಗಿದೆ(ಸಮಯ 11.50 IST).

ರುಪಾಯಿಗೆ ಮೌಲ್ಯಕ್ಕೆ ಸ್ಥಿರತೆ ತರಲು ಆರ್ ಬಿಐ ಈಗ ಡಾಲರ್ ಮಾರಾಟಕ್ಕೆ ಇಳಿಯುವುದೊಂದೆ ಮಾರ್ಗ ಉಳಿದಿದೆ. ಮಾರುಕಟ್ಟೆಯಲ್ಲಿನ ಏರುಪೇರುಗಳನ್ನು ಸರಿಪಡಿಸುವಲ್ಲಿ ನಿರತರಾಗಿರುವ ಆರ್ ಬಿಐ, ರುಪಾಯಿ ಕುಸಿತದ ಬಗ್ಗೆ ಇನ್ನೂ ಕ್ರಮ ಕೈಗೊಂಡಿಲ್ಲ.

ವರ್ಷದ ಆರಂಭದಲ್ಲಿ ಇದ್ದ ವಿದೇಶಿ ಬಂಡವಾಳ ಹರಿವು ಕೂಡಾ ಈಗ ಬಹುತೇಕ ನಿಂತಿದೆ. ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ವಿದೇಶಿ ನಿಧಿ ವಾಪಸ್ ಆಗಿದ್ದೇ ಹೆಚ್ಚಾಗಿತ್ತು. ಹೀಗಾಗಿ ರುಪಾಯಿ ಮೌಲ್ಯ ಇನ್ನಷ್ಟು ಕುಸಿತ ಕಾಣುವ ಸಾಧ್ಯತೆಯಿದೆ.

ಇಂಧನ ಬೆಲೆ ವ್ಯತ್ಯಯ? : ಕಳೆದ ತಿಂಗಳು ರುಪಾಯಿ ಮೌಲ್ಯ ಕುಸಿತವಾದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಖರೀದಿ ವೆಚ್ಚ ದುಬಾರಿಯಾಗಿತ್ತು. ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳು ಶೇ 11 ರಷ್ಟು ಪೆಟ್ರೋಲ್ ಬೆಲೆಯನ್ನು ಏರಿಕೆ ಮಾಡಿದ್ದವು.

ಇದರಿಂದ ಜನ ಸಾಮಾನ್ಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ವಿಪಕ್ಷಗಳು ಶುಕ್ರವಾರ(ಜೂ.22)ದಂದು ಜೈಲು ಭರೋ ನಡೆಸಿದ್ದರು. ಈಗ ಮತ್ತೊಮ್ಮೆ ಡಾಲರ್ ಬೆಲೆ ಏರಿಕೆಯಾಗಿರುವುದರಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.ಆರ್ಥಿಕ ಮೂಲಗಳು ಇನ್ನಷ್ಟು ಕುಸಿತ ಕಂಡು ಪರಿಸ್ಥಿತಿ ಬಿಗಡಾಯಿಸುವ ಲಕ್ಷಣಗಳು ತೋರಿದೆ.

English summary

Rupee plunges into abyss; hits 57 to the dollar | ಪಾತಾಳಕ್ಕಿಳಿದ ರುಪಾಯಿ ದರ| ಡಾಲರ್ ಎದುರು 57 ರು ಗೆ ಇಳಿಕೆ |

The Rupee went into a freefall today(Jun.22), plunging by a huge 67 paise, to reach a fresh historic low of 57 to the dollar at 11.50 am IST. The rupee is expected to remain under pressure and is likely to continue to weaken as economic fundamentals
Story first published: Friday, June 22, 2012, 18:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X