For Quick Alerts
ALLOW NOTIFICATIONS  
For Daily Alerts

ಷೇರು ಮಾರಿ ಹೂಡಿಕೆ ಗಳಿಸಲು ಅನಿಲ್ ಅಂಬಾನಿ ಡೀಲ್

By Mahesh
|

ಬೆಂಗಳೂರು, ಜು.19: ಅನಿಲ್ ಅಂಬಾನಿ ಒಡೆತನದ ಬೃಹತ್ ಸಿನಿಮಾ ಜಾಲ ಸಂಸ್ಥೆ ರಿಲಯನ್ಸ್ ಮೀಡಿಯಾವರ್ಕ್ಸ್ ಲಿ. ಪರಿಸ್ಥಿತಿ ಯಾಕೋ ಸುಧಾರಿಸಿಲ್ಲ. ಬುಧವಾರ (ಜು.18) ಅಂತಾರಾಷ್ಟ್ರೀಯ ಈಕ್ವಿಟಿ ಫಂಡ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂಲಕ ಫಿಲಂ ಹಾಗೂ ಮೀಡಿಯಾ ಸರ್ವಿಸಸ್ ವಿಭಾಗದ ಸುಮಾರು 6.05 ಬಿಲಿಯನ್ ರುಪಾಯಿ (110 ಮಿಲಿಯನ್ ಡಾಲರ್) ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದೆ.

ರಿಲಯನ್ಸ್ ಮೀಡಿಯಾ ವರ್ಕ್ಸ್ ನಲ್ಲಿ ಭಾರಿ ಬದಲಾವಣೆಗಳಾಗುತ್ತಿದ್ದು, ಈ ಮುಂಚೆ ಫಿಲಂ ವಿತರಣೆ ಹಾಗೂ ಮಾಧ್ಯಮ ವ್ಯವಹಾರಗಳನ್ನು ಪ್ರತ್ಯೇಕಗೊಳಿಸಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಅನಿಲ್ ಅಂಬಾನಿ ಯತ್ನಿಸಿದ್ದರು. ಈಗ ಷೇರು ಮಾರಾಟ ಹಾಗೂ ಹೊಸ ಬಂಡವಾಳ ಹೂಡಿಕೆಯತ್ತ ಯೋಜನೆ ಹಾಕಿಕೊಳ್ಳಲಾಗಿದೆ.

 

ಮುಂಬೈ ಮೂಲದ ಕಂಪನಿ ಫಿಲಂ ಪ್ರೊಸೆಸಿಂಗ್ ಹಾಗೂ ಚಲನಚಿತ್ರ ವಿತರಣೆ ಜಾಲವನ್ನು ಹೊಂದಿದೆ. ಅಮೆರಿಕದಲ್ಲಿ 490ಕ್ಕೂ ಅಧಿಕ ಸ್ಕ್ರೀನ್ ಗಳಿದ್ದು, ಭಾರತದಲ್ಲಿ 550ಕ್ಕೂ ಅಧಿಕ ಸ್ಕ್ರೀನ್ ಗಳಿದೆ.

 

ಮಲೇಶಿಯಾ ನೆದರ್ಲೆಂಡ್ ಹಾಗೂ ನೇಪಾಳದಲ್ಲೂ ಚಿತ್ರಮಂದಿರಗಳನ್ನು ಹೊಂದಿದೆ. ಇದಲ್ಲದೆ ಮಾಧ್ಯಮ ಕ್ಷೇತ್ರದಲ್ಲಿ ಲೇಖನ, ಚಿತ್ರ ಹಾಗೂ ದಾಖಲೆ ಶೇಖರಣೆ, ವಿಷುಯಲ್ ಎಫೆಕ್ಟ್ ಹಾಗೂ 3 ಡಿ ಅನಿಮೇಷನ್ ಕನ್ವರ್ಷನ್ ಕಾರ್ಯಗಳನ್ನು ಕೂಡಾ ರಿಲಯನ್ಸ್ ಸಂಸ್ಥೆ ಒದಗಿಸುತ್ತಿದೆ.

ವಿದೇಶಿ ಈಕ್ವಿಟಿ ಫಂಡ್ ಮೂಲಕ 605 ಕೋಟಿ ರು ಹಣ ಎತ್ತಲು ನಿರ್ಧರಿಸಿರುವ ರಿಲಯನ್ಸ್ ಮೀಡಿಯಾ ವರ್ಕ್ಸ್ ಕ್ರಮಕ್ಕೆ ಷೇರುಪೇಟೆಯಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಿಎಸ್ ಇನಲ್ಲಿ ಷೇರುಗಳು ಶೇ 8.6 ರಷ್ಟು ಏರಿಕೆ ಕಂಡಿತ್ತು.2012 ಆರ್ಥಿಕ ವರ್ಷದಲ್ಲಿ ಸಂಸ್ಥೆ ಸುಮಾರು 114.23 ಕೋಟಿ ರು ನಷ್ಟ ಅನುಭವಿಸಿತ್ತು, ಹಾಗೂ 95.93 ಕೋಟಿ ರು ಆದಾಯ ಗಳಿಸಿತ್ತು.

English summary

Reliance MediaWorks stake sales | Anil Ambani's cinema chain operator | ರಿಲಯನ್ಸ್ ಮೀಡಿಯಾವರ್ಕ್ಸ್ ಷೇರು ಮಾರಾಟ, ಅನಿಲ್ ಅಂಬಾನಿ ಸಿನಿಮಾ ಜಾಲ,

Reliance MediaWorks Ltd. said Wednesday(Jul.18) it signed a term sheet with an international private equity fund to sell a “substantial” minority stake in its film and media services division for 6.05 billion rupees ($110 million).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X