For Quick Alerts
ALLOW NOTIFICATIONS  
For Daily Alerts

ಕಾಫಿ ರಫ್ತು ಕುಸಿತ, ಅರೇಬಿಕಾ ಬೇಡಿಕೆ ಹೆಚ್ಚು

By Mahesh
|

ಕಾಫಿ ರಫ್ತು ಕುಸಿತ, ಅರೇಬಿಕಾ ಬೇಡಿಕೆ ಹೆಚ್ಚು
ನವದೆಹಲಿ, ಸೆ.4: ಪ್ರಸಕ್ತ ಆರ್ಥಿಕ ವರ್ಷದ ಮೊದಲ 5 ತಿಂಗಳಿನಲ್ಲಿ ಕಾಫಿ ರಫ್ತು ಪ್ರಮಾಣದಲ್ಲಿ ಶೇ 5 ರಷ್ಟು ಕುಸಿತ ಕಂಡಿದ್ದು 1,49,426 ಟನ್ ಗಳಷ್ಟು ಕಾಫಿ ರಫ್ತು ಮಾಡಲಾಗಿದೆ ಎಂದು ಕಾಫಿ ಬೋರ್ಡ್ ಆಫ್ ಇಂಡಿಯಾ ಮಂಗಳವಾರ(ಸೆ.4) ಪ್ರಕಟಿಸಿದೆ.

2011-12 ರ ಏಪ್ರಿಲ್- ಆಗಸ್ಟ್ ಅವಧಿಯಲ್ಲಿ 1,65,498 ಟನ್ ಗಳಷ್ಟು ಕಾಫಿ ರಫ್ತಾಗಿದೆ. ಕಳೆದ ವರ್ಷ ಸುಮಾರು 2,248.62 ಕೋಟಿ ರು ಆದಾಯ ಕಾಣಲಾಗಿತ್ತು, ಆದರೆ, ಈ ವರ್ಷ ಈ ಅವಧಿಯಲ್ಲಿ ಕೇವಲ 2,258.73 ಕೋಟಿ ರು ಆದಾಯ ಬಂದಿದೆ.

 

ಯುಎಸ್ ಡಾಲರ್ ಎಣಿಕೆಯಂತೆ ಶೇ 12 ರಷ್ಟು ಆದಾಯ ಇಳಿಕೆಯಾಗಿದ್ದು ಕಳೆದ ವರ್ಷ 501.41 ಮಿಲಿಯನ್ ಡಾಲರ್ ಇದ್ದಿದ್ದು ಈ ವರ್ಷ 439.39 ಮಿಲಿಯನ್ ಡಾಲರ್ ಗೆ ಕುಸಿದಿದೆ.

 

ಕಳೆದ 11 ತಿಂಗಳ ಹೋಲಿಕೆಯಲ್ಲಿ ಶೇ 7 ರಷ್ಟು ರಫ್ತು ಕುಸಿತವಾಗಿದ್ದು, 2010-11ರ ಅಕ್ಟೋಬರ್ ಆಗಸ್ಟ್ ಅವಧಿಯಲ್ಲಿ 3,28,867 ಟನ್ ಗಳಷ್ಟು ಇದ್ದದ್ದು ಈ ಬಾರಿ 3,06,238 ಟನ್ ಗಳಿಗೆ ಇಳಿದಿದೆ.

ಜನವರಿ- ಅಗಸ್ಟ್ ಅವಧಿಯಲ್ಲಿ ಶೇ 5 ರಷ್ಟು ಕುಸಿತ ಕಂಡಿದ್ದು, 2,49,697 ಟನ್ ಮಾತ್ರ ರಫ್ತಾಗಿದ್ದು, 2011ರಲ್ಲಿ ಇದೇ ಅವಧಿಯಲ್ಲಿ 2,63,652 ಟನ್ ರಫ್ತಾಗಿದೆ.

ಅರೇಬಿಕಾ ಮಾದರಿಗೆ ಬೇಡಿಕೆ ಏರಿಕೆಯಾಗುತ್ತಿದ್ದು ಜನವರಿ -ಆಗಸ್ಟ್ 2012 ಅವಧಿಯಲ್ಲಿ 49,187 ಟನ್ ಗಳಷ್ಟು ರಫ್ತಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 46,942 ಟನ್ ಮಾತ್ರ ರಫ್ತಾಗಿತ್ತು. ರೊಬಸ್ಟಾ ಬೇಡಿಕೆ ಕುಸಿತ ಕಂಡಿದ್ದು 1.50 ಲಕ್ಷ ಟನ್ ನಷ್ಟಿದ್ದ ಬೇಡಿಕೆ 1.36 ಲಕ್ಷ ಟನ್ ಗೆ ಇಳಿದಿದೆ.

2011-12 ರ ಅವಧಿಯಲ್ಲಿ ದಾಖಲೆಯ ಸುಮಾರು 4,888.30 ಕೋಟಿ ರು ಮೌಲ್ಯದ 3.48 ಲಕ್ಷ ಟನ್ ಕಳೆದ ವರ್ಷ ಇದೇ ಅವಧಿಯಲ್ಲಿ 3,674.98 ಕೋಟಿ ರು ಮೌಲ್ಯದ 3.16 ಲಕ್ಷ ಟನ್ ರಫ್ತು ಮಾಡಲಾಗಿತ್ತು.

English summary

Coffee exports down 10% at 1.49 lakh tonnes in April-Aug | ಕಾಫಿ ರಫ್ತು ಶೇ 10 ಕುಸಿತ ಏಪ್ರಿಲ್ ಆಗಸ್ಟ್ ನಲ್ಲಿ 1.49 ಲಕ್ಷ ಟನ್

India’s coffee exports fell by 10 per cent to 1,49,426 tonnes in the first 5 months of the current fiscal, the Coffee Board of India has said. The country had shipped 1,65,498 tonnes of the brew in the April-August period of the 2011-12 fiscal.
Story first published: Tuesday, September 4, 2012, 18:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X