ಐಪಿಎಲ್ ತಂಡ ಖರೀದಿ, ಸನ್ ಟಿವಿ ಷೇರು ಕುಸಿತ

ಐಪಿಎಲ್ ತಂಡ ಖರೀದಿ, ಸನ್ ಟಿವಿ ಷೇರು ಕುಸಿತ
Sun TV Network: Quotes, News
BSE 464.65BSE Quote10.8 (-2.32%)
NSE 464.25NSE Quote11.75 (-2.53%)
PVP Ventures: Quotes, News
BSE 61.69BSE Quote3.24 (-5.25%)
NSE 61.58NSE Quote3.24 (-5.26%)
ಚೆನ್ನೈ, ಅ.25: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಡೆಕ್ಕನ್ ಚಾರ್ಜರ್ಸ್ ತಂಡ ಕೊನೆಗೂ ಚೆನ್ನೈ ಮೂಲದ ಸನ್ ಟಿವಿ ಸಮೂಹ ಮೋಕ್ಷ ನೀಡಿರುವುದು ಷೇರುದಾರರಿಗೆ ಏಕೋ ಇಷ್ಟವಾದಂತಿಲ್ಲ. ಐಪಿಎಲ್ ತಂಡ ಖರೀದಿಸಿದ ಸನ್ ಟಿವಿ ಗುರುವಾರ(ಅ.25) ಷೇರು ಪೇಟೆಯಲ್ಲಿ ಕುಸಿತ ಕಂಡಿದೆ.

ಆದರೆ, ಐಪಿಎಲ್ ತಂಡ ಖರೀದಿ ಪೈಪೋಟಿಯಲ್ಲಿ ಸೋತರೂ ಸನ್ ಟಿವಿ ವಿರುದ್ಧ ಪಿವಿಪಿ ವೆಂಚರ್ಸ್ ಸಂಸ್ಥೆ ಷೇರು ಪೇಟೆಯಲ್ಲಿ ಉತ್ತಮ ಸ್ಥಿತಿ ಕಾಯ್ದುಕೊಂಡಿದೆ.

ಸನ್ ಟಿವಿ ಷೇರುಗಳು ಬಿಎಸ್ ಇನಲ್ಲಿ ಗುರುವಾರ ಶೇ 4 ರಷ್ಟು ಕುಸಿತ ಕಂಡಿತ್ತು. ಪಿವಿಪಿ ಷೇರುಗಳು ಶೇ 3 ರಷ್ಟು ಮೇಲಕ್ಕೇರಿತ್ತು.

ಬಿಎಸ್ ಇನಲ್ಲಿ ಸನ್ ಟಿವಿ ಷೇರುಗಳು ಮಧ್ಯಾನ್ಹ 2.50 ರ ಸುಮಾರಿಗೆ 342.50 ರು ನಂತೆ ಶೇ 3.78 ರಷ್ಟು ಕುಸಿತ ಕಂಡಿದೆ. ಸುಮಾರು 13.45 ರು ಕಳೆದುಕೊಂಡಿದೆ. ಎನ್ ಎಸ್ ಇನಲ್ಲಿ 342.05 ರು ನಂತೆ ಶೇ 4.08 ರಷ್ಟು ಇಳಿಮುಖವಾಗಿ 14.55 ರು ನಷ್ಟು ಕಳೆದುಕೊಂಡಿದೆ.

ಪಿವಿಪಿ ವೆಂಚರ್ಸ್ ಷೇರುಗಳು ಬಿಎಸ್ ಇನಲ್ಲಿ 6.84 ರು ನಂತೆ ಶೇ 2.24 ರಷ್ಟು ಏರಿದೆ. ಎನ್ ಎಸ್ ಇನಲ್ಲಿ 6.901 ರು,ನಂತೆ ಶೇ 3.76 ರಷ್ಟು ಏರಿಕೆ ಕಂಡಿದೆ.

ಡೆಕ್ಕನ್ ಚಾರ್ಜರ್ಸ್ ತಂಡವನ್ನು ವಾರ್ಷಿಕ 85.05 ಕೋಟಿ ರು ನಂತೆ ನೀಡಿ ಸನ್ ಟಿವಿ ಖರೀದಿಸಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಗುರುವಾರ(ಅ.25) ಪ್ರಕಟಿಸಿತ್ತು.

ಡೆಕ್ಕನ್ ಚಾರ್ಜರ್ಸ್ ತಂಡ ಕೊನೆಗೂ ಮುಂಬೈ ಮೂಲದ ರಿಯಲ್ ಎಸ್ಟೇಟ್ ಕಂಪನಿ ಕಮ್ಲಾ ಲ್ಯಾಂಡ್ ಮಾರ್ಕ್ ಗೆ ಮಾರಾಟವಾಗುವ ಹಂತದಲ್ಲಿ ಮಾರಾಟ ಪ್ರಕ್ರಿಯೆ ಮುರಿದು ಬಿದ್ದಿತ್ತು. ಐಪಿಎಲ್ ತಂಡಗಳು ನೀಡಬೇಕಾದ ಕನಿಷ್ಠ ಬ್ಯಾಂಕ್ ಗ್ಯಾರಂಟಿ ಮೊತ್ತ ಪಾವತಿಸಲು ವಿಫಲವಾದ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹೊರಹಾಕಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+