For Quick Alerts
ALLOW NOTIFICATIONS  
For Daily Alerts

ಏರ್ ಇಂಡಿಯಾದ ಕೋಟಿ ಬಾಂಡ್ ಖರೀದಿಸಿದ ಎಲ್ ಐಸಿ

By Mahesh
|

 7400 ಕೋಟಿ ಬಾಂಡ್ ಖರೀದಿಸಿದ ಎಲ್ ಐಸಿ
ಮುಂಬೈ, ನ. 21: ಸರ್ಕಾರಿ ಸ್ವಾಮ್ಯದ ವಿಮಾನಯಾನ ಕಂಪೆನಿ ಏರ್ ಇಂಡಿಯಾಕ್ಕೆ ಸೇರಿದ 7,400 ಕೋಟಿ ರು. ಬಾಂಡ್‌ಗಳನ್ನು ಸಂಪೂರ್ಣವಾಗಿ ಖರೀದಿಸಲು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮುಂದಾಗಿದೆ. ಈ ವಿಷಯವನ್ನು ಉನ್ನತ ಎಸ್‌ಬಿಐ ಕ್ಯಾಪ್ಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

'ಏರ್ ಇಂಡಿಯಾ ಮಾರಾಟ ಮಾಡುತ್ತಿರುವ ಸಂಪೂರ್ಣ 7,400 ಕೋಟಿ ರೂ. ನಾನ್ ಕನ್ವರ್ಟಿಬಲ್ ಡಿಬೆಂಚರ್ಸ್ (ಎನ್‌ಸಿಡಿ)ಗಳನ್ನು ಖರೀದಿಸಲು ಭಾರತೀಯ ಜೀವ ವಿಮಾ ನಿಗಮ ಮತ್ತು ಇಪಿಎಫ್‌ಒ ಒಪ್ಪಿಕೊಂಡಿವೆ. ಆದರೆ, ಬಾಂಡ್ ಮಾರಾಟ ಕಾರ್ಯಕ್ರಮ ಡಿಸೆಂಬರ್ 18ರವರೆಗೆ ಚಾಲ್ತಿಯಲ್ಲಿರುತ್ತದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಲ್‌ಐಸಿ 3,000 ಕೋಟಿ ರೂ. ವೌಲ್ಯದ ಬಾಂಡ್‌ಗಳನ್ನು ಖರೀದಿಸಿದರೆ, ಉಳಿದ ಬಾಂಡ್‌ಗಳನ್ನು ಇಪಿಎಫ್‌ಒ ಖರೀದಿಸಿದೆ.

ಆದರೆ, ಈ ಬಗ್ಗೆ ಏರ್ ಇಂಡಿಯಾದ ಆರ್ಥಿಕ ನಿರ್ದೇಶಕ ಎಸ್ ವೆಂಕಟ್ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಕಿಂಗ್ ಫಿಷರ್ ಸಂಸ್ಥೆಯಂತೆ ಸಾಲದ ಹೊರೆ ಹೊತ್ತಿರುವ ಏರ್ ಇಂಡಿಯಾ ಕೂಡಾ ಪುನುರುತ್ಥಾನದ ಹಾದಿಯಲ್ಲಿದೆ.

ನಾನ್ ಕನ್ವರ್ಟಿಬಲ್ ಡಿಬೆಂಚರ್ಸ್ (ಎನ್‌ಸಿಡಿ) ಖರೀದಿ ಇದರ ಮೊದಲ ಭಾಗವಾಗಿದೆ. ಸಾಲ ಪಡೆಯುವಲ್ಲಿ ಕಿಂಗ್ ಫಿಷರ್ ಗಿಂತ ಏರ್ ಇಂಡಿಯಾ ಮುಂದಿದ್ದು, 19 ವಿವಿಧ ಬ್ಯಾಂಕ್ ಗಳಿಂದ ಸಾಲ ಪಡೆದಿದೆ.

ಆದರೆ, 2020-21ರ ತನಕ ಏರ್ ಇಂಡಿಯಾಗೆ 23,481 ಕೋಟಿ ರು ಗಳ ಬೇಲ್ ಔಟ್ ಪ್ಯಾಕೇಜ್ ಸಿಕ್ಕಿರುವುದು ಕೊಂಚ ಉಸಿರಾಡುವಂತಾಗಿದೆ. ಕಳೆದ ವರ್ಷ ಡಿಸೆಂಬರ್ ಏರ್ ಇಂಡಿಯಾ ಲೆಕ್ಕಾಚಾರದ ಪುಸ್ತಕ ತೆಗೆದು ನೋಡಿದರೆ ಸುಮಾರು 43,777 ಕೋಟಿ ರು ಸಾಲದ ಹೊಣೆ ಹೊತ್ತಿರುವುದು ಎದ್ದು ಕಾಣುತ್ತದೆ. ಕಳೆದ 5 ವರ್ಷಗಳಲ್ಲಿ ಸುಮಾರು 27,000 ಕೋಟಿ ರು ಸಾಲ ಮಾಡಿಕೊಂಡಿದೆ.

ಸುಮಾರು 27 ಬೋಯಿಂಗ್ ಡ್ರೀಮ್ ಲೈನರ್ ಖರೀದಿ ಕೂಡಾ ಈ ಸಾಲ ಪಟ್ಟಿಯಲ್ಲಿ ಸೇರಿದೆ. ಆದರೆ, ಈವರೆಗೂ 3 ಬೋಯಿಂಗ್ ವಿಮಾನ ಮಾತ್ರ ಏರ್ ಇಂಡಿಯಾಗೆ ಸೇರ್ಪಡೆಗೊಂಡಿದೆ.

English summary

LIC, EPFO to pick up AI's Rs 7,400-cr bond issue at 9.08% | ಏರ್ ಇಂಡಿಯಾದ 7400 ಬಾಂಡ್ ಖರೀದಿಸಿದ ಎಲ್ ಐಸಿ

Life insurance major LIC and the Employee Provident Fund Organisation (EPFO) have agreed to fully subscribe to the Rs 7,400 crore bond sale of national carrier Air India, a top SBI Caps official said here today(Nov.21).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X