For Quick Alerts
ALLOW NOTIFICATIONS  
For Daily Alerts

ಭಾರ್ತಿ ವಾಲ್ಮಾರ್ಟ್ ಸಿಎಫ್ಒ ಅಮಾನತು

By Mahesh
|

ಭಾರ್ತಿ ವಾಲ್ಮಾರ್ಟ್ ಸಿಎಫ್ಒ ಅಮಾನತು
ಬೆಂಗಳೂರು, ನ.23: ರೀಟೈಲ್ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ಹೊತ್ತಿಗೆ ಭಾರ್ತಿ ವಾಲ್ಮಾರ್ಟ್ ಸಂಸ್ಥೆ ಸಿಎಫ್ ಒ ಅಮಾನತುಗೊಂಡಿದ್ದಾರೆ.

ಮುಖ್ಯ ಆರ್ಥಿಕ ನಿರ್ವಹಣಾಧಿಕಾರಿ ಪಂಕಜ್ ಮದನ್ ಸೇರಿದಂತೆ 5 ಜನರನ್ನು ಭಾರ್ತಿ ವಾಲ್ಮಾರ್ಟ್ ಅಮಾನತುಗೊಳಿಸಿದೆ.

 

ಯುಎಸ್ ನ ರೀಟೈಲ್ ದಿಗ್ಗಜ ವಾಲ್ಮಾರ್ಟ್ ಕಂಪನಿ ಮೇಲೆ ಭ್ರಷ್ಟಾಚಾರ ಆರೋಪದ ಮೇಲೆ ಜಾಗತಿಕ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ.

 

ಹೀಗಾಗಿ ಭಾರತದಲ್ಲಿ ವಾಲ್ಮರ್ಟ್ ನ ಮಳಿಗೆಗಳು ಸದ್ಯಕ್ಕಂತೂ ಆರಂಭಿಸುವುದು ಕಷ್ಟವೆನಿಸಿದೆ.

ಅಮಾನತು ಆದೇಶದ ಸುದ್ದಿಯನ್ನು ದೃಢಪಡಿಸಿದ ಭಾರ್ತಿ ವಾಲ್ಮಾರ್ಟ್ ನ ವಕ್ತಾರರು, " ನಮ್ಮ ಸಂಸ್ಥೆ ತನಿಖೆಗೆ ಸಂಪೂರ್ಣ ಸಹಕಾರ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ. ತನಿಖೆ ಚಾಲ್ತಿಯಲ್ಲಿರುವುದರಿಂದ ನಾವು ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ' ಎಂದಿದ್ದಾರೆ.

ಭಾರತ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ವಾಲ್ಮಾರ್ಟ್ ಸಂಸ್ಥೆ ಭ್ರಷ್ಟಾಚರದಲ್ಲಿ ತೊಡಗಿ ಎಂದು ಆರೋಪಗಳು ಕೇಳಿ ಬಂದಿತ್ತು.

ಭಾರತದಲ್ಲಿ ವಾಲ್ಮಾರ್ಟ್ ಮಳಿಗೆ ಆರಂಭ ತಡವಾಗಬಹುದು ಆದರೆ, ನಿಲ್ಲಿಸಲು ಸಾಧ್ಯವಿಲ್ಲ. ಭಾರತ ಅದ್ಭುತ ಅವಕಾಶ ಒದಗಿಸುವ ಉತ್ತಮ ಮಾರುಕಟ್ಟೆ ಹೊಂದಿದೆ. ರೈತ ಹಾಗೂ ಮಧ್ಯಮ ಮತ್ತು ಕೆಳ ಕ್ರಮಾಂಕದ ಜೀವನ ಶೈಲಿ ಹೊಂದಿರುವವರಿಗೆ ಎಫ್ ಡಿಐ ಉತ್ತಮ ಫಲಿತಾಂಶ ಒದಗಿಸಬಲ್ಲದು ಎಂದು ಭಾರ್ತಿ ವಾಲ್ಮಾರ್ಟ್ ಸಂಸ್ಥೆ ಹೇಳಿದೆ.

ಭಾರ್ತಿ ಹಾಗೂ ವಾಲ್ಮಾರ್ಟ್ ಸಂಸ್ಥೆ ಭಾರತದಲ್ಲಿ 50:50 ರ ಅನುಪಾತದಲ್ಲಿ ರೀಟೈಲ್ ಮಳಿಗೆ ಆರಂಭಿಸಲು ಮುಂದಾಗಿದೆ.

ಯುಎಸ್ ನ Foreign Corrupt Practices Act (FCPA) ನ ಅಡಿಯಲ್ಲಿ ಪ್ರಕರಣ ಎದುರಿಸುತ್ತಿರುವ ವಾಲ್ಮಾರ್ಟ್ ಗೆ ಭಾರತ ಪ್ರವೇಶಕ್ಕೆ ವಿಘ್ನ ಉಂಟಾಗಿದೆ. ಭಾರತ ಅಲ್ಲದೆ ಬ್ರೆಜಿಲ್, ಚೀನಾ ದೇಶದ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ವಾಲ್ಮಾರ್ಟ್ ಅಧಿಕಾರಿಗಳು ಎದುರಿಸುತ್ತಿದ್ದಾರೆ.ಮೆಕ್ಸಿಕೋ ದೇಶದಲ್ಲೂ ವಾಲ್ಮಾರ್ಟ್ ಮೇಲೆ ತನಿಖೆ ನಡೆಯುತ್ತಿದೆ.

English summary

Bharti Walmart suspends 5 including CFO in graft probe | ಭಾರ್ತಿ ಏರ್ ಟೆಲ್ ಸಿಎಫ್ ಒ ಸೇರಿ 5 ಜನ ಅಮಾನತು |

Bharti Walmart has suspended five people, including CFO Pankaj Madan, as part of an ongoing global investigation by the US retail giant against alleged corrupt practices, sources said. It is understood that more heads may roll as the investigation progresses in the coming days in the company
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X