ಆದಾಯ ತೆರಿಗೆ ವಿವರಗಳನ್ನು ಸಲ್ಲಿಸುವ 'ಐಟಿ- ರಿಟರ್ನ್ಸ್' ಪ್ರಕ್ರಿಯೆಗೆ ಡೆಡ್ ಲೈನ್ ನೀಡಲಾಗಿದ್ದು ಆಗಸ್ಟ್ 31ರ ತನಕ ಅವಕಾಶವಿದೆ. 2009-10 ರಿಂದ 2014-15ರ ಅವಧಿಯಲ್ಲಿ ಬಾಕಿ ಉಳಿಸಿಕೊಂಡಿರುವ 'ಐಟಿ- ರಿಟರ್ನ್ಸ್' ನ್ನು ಆಗಸ್ಟ್ 31, 2016ರೊಳಗೆ ಸಲ್ಲಿಕೆ ಮಾಡಬೇಕಾಗುತ್ತದೆ.
ಆಧಾರ್ ಕಾರ್ಡ್ ಲಿಂಕ್, ಬ್ಯಾಂಕ್ ಖಾತೆ ಬಳಸಿಕೊಂಡು ಅಂತರ್ಜಾಲದ ಮುಖಾಂತರ ರಿಟರ್ನ್ಸ್ ಸಲ್ಲಿಕೆ ಮಾಡಬೇಕು. ಒಂದು ವೇಳೆ ಸಲ್ಲಿಕೆ ಮಾಡಲಾಗಿದ್ದು ಕೆಲ ಕಾರಣದಿಂದ ದೃಢೀಕರಣವಾಗಿರದಿದ್ದರೆ ಮತ್ತೊಮ್ಮೆ ದಾಖಲು ಮಾಡಬೇಕು.[ಬಿಬಿಎಂಪಿ ಆಸ್ತಿ ತೆರಿಗೆ ಸಲ್ಲಿಕೆ ಪ್ರಕ್ರಿಯೆ ಹೇಗೆ?]

ಬ್ಯಾಂಕ್ ಖಾತೆ ವಿವರಗಳ ಪೈಕಿ ಐಎಫ್ ಎಸ್ ಕೋಡ್, ಅಕೌಂಟ್ ನಂಬರ್ (ಕರೆಂಟ್ ಅಥವಾ ಉಳಿತಾಯ ಖಾತೆ) ನೀಡಿದರೆ ಸಾಕು. ನಿಮ್ಮ ಅಕೌಂಟ್ ನಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂಬುದನ್ನು ಹೇಳಿಕೊಳ್ಳಬೇಕಾಗಿಲ್ಲ. ಸಂಬಳದಾರರು, ಬಿಸಿನೆಸ್ ಹಾಗೂ ವೃತ್ತಿಪರ ಆದಾಯ ಇಲ್ಲದ ವ್ಯಕ್ತಿಗಳು ಐಟಿಆರ್ 1 ಅಥವಾ ಐಟಿಆರ್ 2 ಬಳಸಿಕೊಂಡು ಪ್ರತಿ ವರ್ಷ ಜು.31 ರೊಳಗೆ ಆದಾಯ ತೆರಿಗೆ ಪಾವತಿ ಸಲ್ಲಿಕೆ ಮಾಡಬೇಕಾದದ್ದು ನಿಯಮ.
ಈ ಬಗ್ಗೆ ಆದೇಶ ನೀಡಿರುವ ಕೇಂದ್ರ ತೆರಿಗೆ ಮಂಡಳಿ (ಸಿಬಿಡಿಟಿ) ಅಂಚೆ ಮೂಲಕವೂ ಸಲ್ಲಿಕೆ ಮಾಡಬಹುದಾಗಿದ್ದು ನಿಗದಿತ ದಿನಾಂಕದೊಳಗೆ ಕಚೇರಿಯ ಕೈ ಸೇರಬೇಕು ಎಂದು ತಿಳಿಸಿದೆ.[ಆನ್ ಲೈನ್ ಮೂಲಕ ಆಧಾರ್ ಕಾರ್ಡ್ ಡೌನ್ ಲೋಡ್ ಹೇಗೆ?]
ಇದು ತೆರಿಗೆ ಪಾವತಿದಾರರಿಗೆ ಕೊನೆ ಅವಕಾಶವಾಗಿದೆ. ಬಾಕಿ ಉಳಿಸಿಕೊಂಡಿರುವ ರಿಟರ್ನ್ಸ್ ಸಲ್ಲಿಕೆ ಮಾಡಲೇಬೇಕು. ಸೆಕ್ಷನ್ 139ರ ಅನ್ವಯ ಸಲ್ಲಿಕೆ ಪ್ರಕ್ರಿಯೆಯನ್ನು ನಡೆಸಬಹುದು. ಅಲ್ಲದೇ ಸಲ್ಲಿಕೆ ಮಾಡಿದವರು ಮರುಪಾವತಿಯನ್ನು ಪಡೆದುಕೊಂಡು ಕಾಪಾಡಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದೆ.


Click it and Unblock the Notifications