For Quick Alerts
ALLOW NOTIFICATIONS  
For Daily Alerts

ನೋಟು ನಿಷೇಧದಿಂದ ಹಬ್ಬಿರುವ ವದಂತಿ - ಸತ್ಯಾಂಶಗಳೇನು ಗೊತ್ತೆ?

ನೋಟು ರದ್ದತಿ ಹಲವು ಧನಾತ್ಮಕ ಹಾಗೂ ನಕಾರಾತ್ಮಕ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕರು ನೋಟು ವಿನಿಮಯ/ಬದಲಾವಣೆ ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದು, ಕೆಲ ಜನರು ಅಂತೆ ಕಂತೆಯ ಕಟ್ಟುಕತೆ ಹಾಗೂ ವದಂತಿಗಳನ್ನು ಹರಡಿಸುತ್ತಿದ್ದಾರೆ.

By Siddu
|

ನೋಟು ನಿಷೇಧದಿಂದ ಹಬ್ಬಿರುವ ವದಂತಿ - ಸತ್ಯಾಂಶಗಳೇನು ಗೊತ್ತೆ?
ಕೇಂದ್ರ ಸರ್ಕಾರ ನವೆಂಬರ್ 8, 2016ರಂದು ರೂ.500, 100 ಮುಖಬೆಲೆ ನೋಟುಗಳ ಚಲಾವಣೆ ನಿಷೇಧಿಸಿ ಕಪ್ಪುಹಣ, ಭ್ರಷ್ಟಾಚಾರ, ಭಯೋತ್ಪಾದನೆ, ಖೋಟಾ ನೋಟು ತಡೆಗೆ ದಿಟ್ಟ ಹೆಜ್ಜೆ ಇಟ್ಟಿರುವ ಸಂಗತಿ ನಮಗೆಲ್ಲ ತಿಳಿದಿದೆ. ರೂ. 2000 ನೋಟಿನ ವಿಶೇಷತೆಗಳೇನು?

ನೋಟು ರದ್ದತಿ ಹಲವು ಧನಾತ್ಮಕ ಹಾಗೂ ನಕಾರಾತ್ಮಕ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕರು ನೋಟು ವಿನಿಮಯ/ಬದಲಾವಣೆ ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದು, ಕೆಲ ಜನರು ಅಂತೆ ಕಂತೆಯ ಕಟ್ಟುಕತೆ ಹಾಗೂ ವದಂತಿಗಳನ್ನು ಹರಡಿಸುತ್ತಿದ್ದಾರೆ. ಭಾರತ ಸರ್ಕಾರ ಈಗಾಗಲೇ ಇಂತಹ ವದಂತಿಗಳಿಗೆ ಕಿವಿಗೊಡದೆ ಜಾಗೃತಿ ಮೂಡಿಸಲು ವಿನಂತಿಸಿದೆ. ನೋಟು ನಿಷೇಧದಿಂದ ದೇಶದ ಮೇಲಾಗುವ ಪರಿಣಾಮಗಳೇನು?

ಈಗಾಗಲೇ ದೇಶದಾದ್ಯಂತ ಹಬ್ಬಿರುವ ಕಟ್ಟುಕತೆ/ವದಂತಿ ಹಾಗೂ ಸತ್ಯಾಂಶಗಳು ಏನು ಎಂಬುದನ್ನು ನೋಡೋಣ...

1. ಸಣ್ಣ ನೋಟುಗಳ ನಿಷೇಧ

1. ಸಣ್ಣ ನೋಟುಗಳ ನಿಷೇಧ

ವದಂತಿ: ಪ್ರಧಾನಿ ದೇಶವನ್ನು ಉದ್ದೇಶಿಸಿ ರೂ. 50, 100 ಮುಖಬೆಲೆಯ ನೋಟುಗಳ ರದ್ದತಿ ಪ್ರಕಟಿಸಲಿದ್ದಾರೆ.
ಸತ್ಯಾಂಶ: ಆಧಾರರಹಿತವಾದ್ದು, ಪ್ರಸ್ತುತ ರೂ. 50೦, 100೦ ನೋಟುಗಳ ನಿಷೇಧದ ಹೊರತಾಗಿ ಬೇರೆ ಯಾವುದೇ ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಉದ್ದೇಶ ಇಲ್ಲ.

2. ಮಾಹಿತಿ ಸೋರಿಕೆ

2. ಮಾಹಿತಿ ಸೋರಿಕೆ

ವದಂತಿ: ನೋಟುಗಳ ನಿಷೇಧದ ಮುಂಚೆಯೇ ಕೆಲ ಕಾರ್ಪೊರೇಟ್ ಸಂಸ್ಥೆ ಮತ್ತು ಪಕ್ಷದ ಸದಸ್ಯರಿಗೆ ಈ ವಿಷಯ ತಿಳಿದಿತ್ತು.
ಸತ್ಯಾಂಶ: ಸಂಪೂರ್ಣ ರಹಸ್ಯ ಕಾಪಾಡಿಕೊಳ್ಳಲಾಗಿತ್ತು. ಸೋರಿಕೆ ಹಿಂದೆ ಸರ್ಕಾರದ ಯಾವುದೇ ಸದುದ್ದೇಶ ಇರಲಿಲ್ಲ.

3. ಲಾಭಕ್ಕಿಂತ ವೆಚ್ಚ ಹೆಚ್ಚು

3. ಲಾಭಕ್ಕಿಂತ ವೆಚ್ಚ ಹೆಚ್ಚು

ವದಂತಿ: ಜನರಿಗಾಗುವ ಪ್ರಯೋಜನಕ್ಕಿಂತ ಅನುಷ್ಠಾನ ವೆಚ್ಚವೇ ಹೆಚ್ಚು.
ಸತ್ಯಾಂಶ: ಕಪ್ಪುಹಣ, ಖೋಟಾ ನೋಟು, ಭ್ರಷ್ಟಾಚಾರದಿಂದ ದೇಶದ ಆರ್ಥಿಕತೆ ಹದಗೆಡುತ್ತಿದೆ. ಶ್ರೀಮಂತರಿಗಿಂತ ಮಧ್ಯಮ ವರ್ಗ ಮತ್ತು ಬಡವರಿಗೆ ಈ ಯೋಜನೆಯ ಅನುಷ್ಠಾನದಿಂದ ಪ್ರಯೋಜನ ಹೆಚ್ಚು.

4. ಬ್ಲಾಕ್ ಮನಿ

4. ಬ್ಲಾಕ್ ಮನಿ

ವದಂತಿ: ನೋಟುಗಳ ನಿಷೇಧ ಕೇವಲ ಪ್ರದರ್ಶನಕ್ಕಾಗಿ ಹೋರತು ಜನ ಕಪ್ಪುಹಣ ಇರಿಸಿಕೊಳ್ಳಲು ಬೇರೆ ಮಾರ್ಗಗಳನ್ನು ಅನುಸರಿಸುತ್ತಾರೆ. ಈಗಾಗಲೇ ಕೈಗಾರಿಕೆಗಳು ಮತ್ತು ಕಂಪನಿಗಳು ಕಪ್ಪುಹಣ ಭದ್ರತೆಗಾಗಿ ಬೇರೆ ಮಾರ್ಗಗಳಿಗಾಗಿ ಯೋಜನೆ ರೂಪಿಸುತ್ತಿವೆ.
ಸತ್ಯಾಂಶ: ಸಂಬಂಧಪಟ್ಟ ಏಜೆನ್ಸಿ, ಇಲಾಖೆಗಳು ಅವರ ಮೇಲೆ ಕಣ್ಣಿಡುತ್ತವೆ. ಬೇನಾಮಿ ವ್ಯವಹಾರ ಕಾಯಿದೆ ತಿದ್ದುಪಡಿಯಾಗಿದ್ದು, ಕಪ್ಪುಹಣ ಪರಿಕ್ಷೀಸಲು ವಿದೇಶಿ ಸರ್ಕಾರಗಳೊಂದಿಗೆ ಒಪ್ಪಂದ ಆಗಿದೆ.

5. ಚಿಪ್ ಇಲ್ಲ

5. ಚಿಪ್ ಇಲ್ಲ

ವದಂತಿ: ಹೊಸ ನೋಟುಗಳಲ್ಲಿ ಚಿಪ್ ಇದ್ದು, ಪ್ರತಿಯೊಬ್ಬರ ಬಳಿ ಇರುವ ಆಸ್ತಿ, ಕಪ್ಪುಹಣವನ್ನು ಪತ್ತೆಹಚ್ಚಲಾಗುವುದು.
ಸತ್ಯಾಂಶ: ಹೊಸ ನೋಟುಗಳನ್ನು ಯಾವುದೇ ತರಹದ ಚಿಪ್ ತಂತ್ರಾಂಶ ಅಳವಡಿಸಲಾಗಿಲ್ಲ.

6. ಕಳಪೆ ಗುಣಮಟ್ಟ

6. ಕಳಪೆ ಗುಣಮಟ್ಟ

ವದಂತಿ: ರೂ. 2000 ಮುಖಬೆಲೆಯ ನೋಟುಗಳು ಕಳಪೆ ಮಟ್ಟದಾಗಿದ್ದು, ಬಣ್ಣ ಕಳೆದುಕೊಳ್ಳುತ್ತದೆ.
ಸತ್ಯಾಂಶ: ಕರೆನ್ಸಿ ನೋಟು ಉತ್ಕೃಷ್ಟ ಮಟ್ಟದ ಮುದ್ರಣ ಮತ್ತು ಭದ್ರತಾ ವೈಶಿಷ್ಟ್ಯತೆ ಹೊಂದಿದೆ.

7. ಬ್ಯಾಂಕ್ ಲಾಕರ್ಸ್, ಚಿನ್ನಾಭರಣ ವಶ

7. ಬ್ಯಾಂಕ್ ಲಾಕರ್ಸ್, ಚಿನ್ನಾಭರಣ ವಶ

ವದಂತಿ: ಮುಂದಿನ ಹಂತದಲ್ಲಿ ಬ್ಯಾಂಕ್ ಲಾಕರ್ಸ್ ಸೀಲ್, ಚಿನ್ನಾಭರಣ, ವಜ್ರ ಮಳಿಗೆಗಳನ್ನು ವಶಪಡಿಸಿ ಮುದ್ರೆ ಒತ್ತಲಾಗುವುದು.
ಸತ್ಯಾಂಶ: ಬ್ಯಾಂಕ್ ಲಾಕರ್ಸ್ ಸೀಲ್ ಮಾಡುವ ಅಥವಾ ಚಿನ್ನಾಭರಣಗಳನ್ನು ವಶಪಡಿಸುವ ಯಾವುದೇ ಕ್ರಮ ಇಲ್ಲ.

English summary

Denomination Myths and Facts

Do Not Pay Attention On Rumors Know All About Demonetization Here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X