For Quick Alerts
ALLOW NOTIFICATIONS  
For Daily Alerts

ರೂ. 2000 ನೋಟಿನ ವಿಶೇಷತೆಗಳೇನು? ತಪ್ಪದೆ ನೋಡಿ...

ಭಾರತೀಯ ರಿಸರ್ವ್ ಬ್ಯಾಂಕು ಶೀಘ್ರದಲ್ಲಿಯೇ ರೂ. 2000 ಮುಖಬೆಲೆಯ ಹೊಸ ನೋಟು ದೇಶದಾದ್ಯಂತ ಚಲಾವಣೆಗೆ ತರಲಿದೆ.

By Siddu
|

ಹೊಸ ವಿನ್ಯಾಸ.. ಹೊಸ ಬಣ್ಣ.. ಹೊಸ ತಂತ್ರಜ್ಞಾನ.. ಈ ಎಲ್ಲ ವಿಶೇಷಣಗಳೊಂದಿಗೆ ನಿಮ್ಮ ಮುಂದೆ ಹೊಸ ನೋಟು...

ಭಾರತೀಯ ರಿಸರ್ವ್ ಬ್ಯಾಂಕು ಶೀಘ್ರದಲ್ಲಿಯೇ ರೂ. 2000 ಮುಖಬೆಲೆಯ ಹೊಸ ನೋಟು ದೇಶದಾದ್ಯಂತ ಚಲಾವಣೆಗೆ ತರಲಿದೆ. ಹಳೆ 500-1000 ನೋಟುಗಳ ವಿನಿಮಯ ಹೇಗೆ?ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ..

ಕಪ್ಪುಹಣ, ಭ್ರಷ್ಟಾಚಾರ ಹಾಗೂ ಖೋಟಾ ನೋಟುಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕಠಿಣ ನಿರ್ಧಾರ ಕೈಗೊಂಡು ನೋಟಿನಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಮಾಡಿದೆ. ರೂ. 500-1000 ನೋಟುಗಳ ನಿಷೇಧದಿಂದ ಈಗಾಗಲೇ ದೇಶದಾದ್ಯಂತ ಸಂಚಲನ ಸೃಷ್ಠಿಯಾಗಿದ್ದು, ಕಾಳಧನಿಕರಿಗೆ ಹಾಗೂ ಭ್ರಷ್ಟರಿಗೆ ಪ್ರಧಾನಿ ಮೋದಿ ನಡುಕ ಹುಟ್ಟಿಸಿದ್ದಾರೆ. ಇದೇ ಮೊದಲ ಬಾರಿಗೆ ರೂ.2 ಸಾವಿರ ಮುಖಬೆಲೆಯ ನೋಟು ದೇಶದಲ್ಲಿ ಚಲಾವಣೆಗೆ ಬರುತ್ತಿದ್ದು, ಈ ನೋಟಿನಲ್ಲಿ ಸುಧಾರಿತ ಭದ್ರತಾ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ರೂ. 500 - 1000 ನೋಟುಗಳ ರದ್ದತಿ: ತಿಳಿದುಕೊಳ್ಳಬೇಕಾದ ಅಂಶಗಳೇನು?

ಹಾಗಿದ್ದರೆ ರೂ. 2 ಸಾವಿರ ನೋಟಿನಲ್ಲ್ಲಿ ಅಳವಡಿಸಿರುವ ತಂತ್ರಜ್ಞಾನ ಹಾಗೂ ಯುನಿಕ್ ಆಗಿರುವ ವಿಶೇಷ ಅಂಶಗಳೇನು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಮ್ಮಲ್ಲಿ ಇದ್ದೆ ಇರುತ್ತದೆ. ಅದರ ಸಂಕ್ಷಿಪ್ತ ಚಿತ್ರಣ ಇಲ್ಲಿದೆ ನೋಡಿ..

1. ದೆವನಾಗರಿ ಲಿಪಿಯಲ್ಲಿ 2000

1. ದೆವನಾಗರಿ ಲಿಪಿಯಲ್ಲಿ 2000

ದೆವನಾಗರಿ ನಮ್ಮ ದೇಶದ ಪ್ರಾಚೀನ ಲಿಪಿ. ಈ ನೋಟಿನ ಮೇಲೆ ಬಲಬದಿಗೆ 2000 ಎಂಬ ಸಂಖ್ಯಾವಾಚಕ ಇರುತ್ತದೆ. ಇದರ ಎಡಬದಿಗೆ ದೆವನಾಗರಿ ಲಿಪಿಯಲ್ಲಿ २००० ಸಂಖ್ಯಾವಾಚಕ ಇರುತ್ತದೆ. ಮಧ್ಯಭಾಗದಲ್ಲಿ ಮಹಾತ್ಮ ಗಾಂಧಿಯವರ ಚಿತ್ರವಿದೆ.

2. ಸೂಕ್ಷ್ಮ ಅಕ್ಷರಗಳು

2. ಸೂಕ್ಷ್ಮ ಅಕ್ಷರಗಳು

ಈ ಹೊಸ ನೋಟಿನ ಎಡಭಾಗದಲ್ಲಿ ನೋಟಿನ ಸಂಖ್ಯೆ ಮತ್ತು ಆರ್ಬಿಐ ಅಕ್ಷರಗಳನ್ನು ಮೈಕ್ರೋ ಅಕ್ಷರಗಳಲ್ಲಿ ಬರೆದಿರಲಾಗುತ್ತದೆ. ಭಾರತ್(ಹಿಂದಿ) ಎಂಬ ಅಕ್ಷರ ಇದ್ದು ಭದ್ರತೆಗೆ ಸಹಕಾರಿಯಾಗಲಿದೆ. ನೋಟಿನ ಬಣ್ಣ ಹಳದಿ ಬಣ್ಣದ್ದಾಗಿದೆ.

3. ಭದ್ರತೆ ಎಳೆ(ತ್ರೆಡ್)

3. ಭದ್ರತೆ ಎಳೆ(ತ್ರೆಡ್)

ನೋಟನ್ನು ಬಾಗಿಸಿ ನೋಡಿದಾಗ ಭದ್ರತೆ ಗೆರೆ(ತ್ರೆಡ್) ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುವುದನ್ನು ಗಮನಿಸಬಹುದು. ಭಾರತ, ಗವರ್ನರ್ ಸಹಿ, ಆರ್ಬಿಐ ಲಾಂಛನ, ಗ್ರಾರಂಟಿ ಷರತ್ತು ನೋಟಿನಲ್ಲಿ ಬರೆಯಲಾಗಿದೆ.
ನೋಟಿನ ಕೆಳಭಾಗದ ಬಲಗಡೆಗೆ ಇರುವ ₹2000 ಸಿಂಬಲ್ ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ.

4. ಅಶೋಕ ಸ್ಥಂಭ

4. ಅಶೋಕ ಸ್ಥಂಭ

ಎಲೆಕ್ರ್ಟೋಟೈಪ್ (2000) ನೀರು ಗುರುತು ಮತ್ತು ಗಾಂಧಿ ಭಾವಚಿತ್ರ ನೋಟಿನ ಬಲಭಾಗದಲ್ಲಿ ಇರುತ್ತದೆ. ರಾಷ್ಟ್ರ ಲಾಂಛನ ಬಲಭಾಗದಲ್ಲಿದ್ದು, ಹಸಿರು ಬಣ್ಣದಲ್ಲಿ ಅಂಕಿಗಳ ಉಲ್ಲೇಖವಿದ್ದು, ಬೆಳಕಿನಲ್ಲಿ ಇದು ನೀಲಿ ಬಣ್ಣಕ್ಕೆ ಬದಲಾಗುತ್ತದೆ.

5. ಬ್ರೈಲ್ ಲಿಪಿ

5. ಬ್ರೈಲ್ ಲಿಪಿ

ಅಂಧರಿಗೆ ನೋಟಿನ ಮೌಲ್ಯ ಅರ್ಥವಾಗುವುದಕ್ಕಾಗಿ ಬ್ರೈಲ್ ಲಿಪಿ ತಂತ್ರಜ್ಞಾನ ಅಳವಡಿಸಲಾಗಿದೆ. ಗಾಂಧಿ ಭಾವಚಿತ್ರ, ರಾಷ್ಟ್ರಲಾಂಛನ, ರೇಖೆಗಳ ಮೂಲಕ ಇದನ್ನು ಗುರುತಿಸಬಹುದಾಗಿದೆ.

6. ನೋಟಿನ ಹಿಂಬದಿ

6. ನೋಟಿನ ಹಿಂಬದಿ

ನೋಟಿನ ಹಿಂಬದಿಯಲ್ಲಿ ಮಂಗಳ ಗ್ರಹಕ್ಕೆ ರವಾನಿಲಾದ ಭಾರತ್ದ ಉಪಗ್ರಹದ ಲಾಂಛನವಿದೆ. ಕನ್ನಡ ಸೇರಿದಂತೆ 15 ಭಾಷೆಗಳಲ್ಲಿ ರಾಊಪಾಯಿಯ ಬರಹವಿರುತ್ತದೆ. ಸ್ವಚ್ಛಭಾರತ ಲಾಂಛನ, ನೋಟು ಮುದ್ರಿಸಲ್ಪಟ್ಟ ವರ್ಷ ಉಲ್ಲೇಖಿಸಲಾಗಿರುತ್ತದೆ.

7. ನೋಟಿನ ಗಾತ್ರ

7. ನೋಟಿನ ಗಾತ್ರ

2000 ಮುಖಬೆಲೆಯ ಹೊಸ ನೋಟಿನ ಅಗಲ 166 ಮಿಲಿಮೀಟರ್, ಎತ್ತರ 66 ಮಿಲಿಮೀಟರ್ ಇದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಹಿಂದಿ ಭಾಷೆಯಲ್ಲೂ ಎರಡು ಸಾವಿರ ಎಂದು ದೊಡ್ಡದಾಗಿ ಬರೆಯಲಾಗಿದೆ. ನವೆಂಬರ್ 10ರಂದು ರು.500 ಹಾಗೂ 2,000 ನೋಟುಗಳು ಬಿಡುಗಡೆಯಾಗಲಿದೆ.

English summary

Know Your Rs 2000 Currency Note Unique Features

The Reserve Bank of India will soon come up with new Rs 2000 denomination banknotes bearing signature of Dr. Urjit R. Patel, Governor, Reserve Bank of India, and the year of printing '2016' printed on the reverse of the banknote.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X