Englishहिन्दी മലയാളം தமிழ் తెలుగు

ಅತಿಹೆಚ್ಚು ಡಿಫೆನ್ಸ್ ಬಜೆಟ್ ಹೊಂದಿರುವ ವಿಶ್ವದ ಟಾಪ್ 10 ದೇಶಗಳಲ್ಲಿ ಭಾರತ

Written By: Siddu
Subscribe to GoodReturns Kannada

ಜಾಗತಿಕವಾಗಿ ಯಾವ ಸಂದರ್ಭದಲ್ಲಿ ಏನಾಗಬಹುದು, ಯಾವ ದೇಶ ಯಾರ ಮೇಲೆ ದಾಳಿ ಮಾಡಬಹುದು ಅಥವಾ ಯಾರು ಗೆಲುವು ಸಾಧಿಸಬಹುದು ಇತ್ಯಾದಿ ಆತಂಕಗಳಿಂದಾಗಿ ತಮ್ಮ ದೇಶದ ರಕ್ಷಣೆಗಾಗಿ ಎಲ್ಲ ದೇಶಗಳು ಮುಂಜಾಗ್ರತೆ ವಹಿಸುತ್ತವೆ. ಹೀಗಾಗಿ ಎಲ್ಲ ದೇಶಗಳು ರಕ್ಷಣಾ ಬಜೆಟ್ ಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ತಮ್ಮ ಮಿಲಿಟರಿ ವ್ಯವಸ್ಥೆ, ನೌಕಾಸೇನೆ ಹಾಗೂ ವಿಮಾನ ಶಕ್ತಿ ಹೆಚ್ಚಿಸಲು ಬಯಸುತ್ತವೆ.

ಮಾನವ ಸಂಪನ್ಮೂಲ, ಲ್ಯಾಂಡ್ ಸಿಸ್ಟಮ್, ವಿಮಾನ ಶಕ್ತಿ, ನೌಕಾಬಲ, ಭೂಸೇನೆ, ನೈಸರ್ಗಿಕ ಸಂಪನ್ಮೂಲ, ಜಿಡಿಪಿ, ಹಣಕಾಸು ಹಾಗೂ ಭೌಗೋಳಿಕತೆ ಈ ಅಂಶಗಳು ಕೂಡ ಉತ್ತಮ ರಕ್ಷಣೆಯಲ್ಲಿ ಮುಖ್ಯ ಪಾತ್ರವಹಿಸುತ್ತವೆ.

IHS ಜೇನ್ಸ್ ವಾರ್ಷಿಕ ರಕ್ಷಣಾ ಬಜೆಟ್ ವರದಿ ಪ್ರಕಾರ ಗ್ಲೋಬಲ್ ಡಿಫೆನ್ಸ್ ಬಜೆಟ್ 1.57 ಟ್ರಿಲಿಯನ್ ಡಾಲರ್ ಹೆಚ್ಚಾಗಿದೆ.

ದೇಶದ ರಕ್ಷಣಾ ವಲಯಕ್ಕೆ ಅತಿಹೆಚ್ಚು ಡಿಫೆನ್ಸ್ ಬಜೆಟ್ ಮೀಸಲಿಡುವ ದೇಶಗಳ ಸಾಲಿನಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ. ಅಂತಹ 10 ದೇಶಗಳ ರೋಮಾಂಚನಕಾರಿ ವಿವರ ಇಲ್ಲಿದೆ ನೋಡಿ...

1. ಅಮೆರಿಕಾ

ರಕ್ಷಣಾ ಬಜೆಟ್ 2015: 616 ಬಿಲಿಯನ್ ಡಾಲರ್
ರಕ್ಷಣಾ ಬಜೆಟ್ 2016: 622 ಬಿಲಿಯನ್ ಡಾಲರ್
ಜಗತ್ತಿನ ದೊಡ್ಡಣ್ಣ ಖ್ಯಾತಿಯ ಅಮೆರಿಕಾ ಮುಂಚೂಣಿಯಲ್ಲಿದ್ದು, ದೇಶದ ಒಟ್ಟು ಜಿಡಿಪಿಯ ಶೇ. 3.3ರಷ್ಟು ಭಾಗ ರಕ್ಷಣೆಗೆ ಬಳಸುತ್ತದೆ. 2016ರಲ್ಲಿ ಜಿಡಿಪಿ 17,149 ಬಿಲಿಯನ್ ಡಾಲರ್ ಇದ್ದು, 2016 ರಿಂದ 2030ರಲ್ಲಿ ಶೇ. 2.3ರಷ್ಟು ಹೆಚ್ಚಳ ಆಗಲಿದೆ. ಪ್ರಸ್ತುತ ಅಮೆರಿಕಾದ ಒಟ್ಟು ಸಂಪತ್ತು ರೂ. 3276 ಲಕ್ಷ ಕೋಟಿ ಹೊಂದಿದೆ.

2. ಚೀನಾ

ರಕ್ಷಣಾ ಬಜೆಟ್ 2015: 181 ಬಿಲಿಯನ್ ಡಾಲರ್
ರಕ್ಷಣಾ ಬಜೆಟ್ 2016: 191 ಬಿಲಿಯನ್ ಡಾಲರ್
ಚೀನಾ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದ್ದರೆ ಏಷಿಯಾದಲ್ಲಿ ಮೊದಲ ಸ್ಥಾನದಲ್ಲಿದೆ. ಇದು ಜಿಡಿಪಿಯ ಶೇ. 1.9ರಷ್ಟು ಭಾಗ ರಕ್ಷಣೆಗೆ ಮೀಸಲಿರಿಸಿದೆ. 2016ರಲ್ಲಿ ಜಿಡಿಪಿ 9307 ಬಿಲಿಯನ್ ಡಾಲರ್ ಇದ್ದು, 2030ರ ವೇಳೆಗೆ ಶೇ. 4ರಷ್ಟು ಹೆಚ್ಚಳವಾಗಲಿದೆ. ಪ್ರಸ್ತುತ ಚೀನಾ ದೇಶ ಒಟ್ಟು ರೂ. 1165 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

3. ಯುನೈಟೆಡ್ ಕಿಂಗ್ಡಮ್

ರಕ್ಷಣಾ ಬಜೆಟ್ 2015: 53.5 ಬಿಲಿಯನ್ ಡಾಲರ್
ರಕ್ಷಣಾ ಬಜೆಟ್ 2016: 53.8 ಬಿಲಿಯನ್ ಡಾಲರ್
ಯುಕೆ ಜಿಡಿಪಿಯ ಶೇ. 2.0 ರಷ್ಟು ಭಾಗ ರಕ್ಷಣೆಗೆ ಮೀಸಲಿರಿಸಿದೆ. ಇದು ಶೇ. 2.5ರಷ್ಟು ಆರ್ಥಿಕ ಕ್ರಾಂತಿಯೊಂದಿಗೆ 2030ರಲ್ಲಿ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊಮ್ಮಲಿದ್ದು, ಒಟ್ಟು ಸಂಪತ್ತು ರೂ. 616 ಲಕ್ಷಕೋಟಿ ಹೊಂದಿದೆ.

4. ರಷ್ಯಾ

ರಕ್ಷಣಾ ಬಜೆಟ್ 2015: 51.8 ಬಿಲಿಯನ್ ಡಾಲರ್
ರಕ್ಷಣಾ ಬಜೆಟ್ 2016: 48.5 ಬಿಲಿಯನ್ ಡಾಲರ್
ದೇಶದ ಒಟ್ಟು ಜಿಡಿಪಿಯಲ್ಲಿ ಶೇ. 5.4 ರಷ್ಟು ಭಾಗ ರಕ್ಷಣೆಗೆ ಮೀಸಲಿರಿಸಿದೆ.

5. ಸೌದಿ ಅರೆಬಿಯಾ

ರಕ್ಷಣಾ ಬಜೆಟ್ 2015: 50.5 ಬಿಲಿಯನ್ ಡಾಲರ್
ರಕ್ಷಣಾ ಬಜೆಟ್ 2016: 48.7 ಬಿಲಿಯನ್ ಡಾಲರ್
ದೇಶದ ಒಟ್ಟು ಜಿಡಿಪಿಯಲ್ಲಿ ಶೇ. 13.7 ರಷ್ಟು ಭಾಗ ರಕ್ಷಣೆಗೆ ಮೀಸಲಿರಿಸಿದೆ.

6. ಭಾರತ

ರಕ್ಷಣಾ ಬಜೆಟ್ 2015: 46.7 ಬಿಲಿಯನ್ ಡಾಲರ್
ರಕ್ಷಣಾ ಬಜೆಟ್ 2016: 50.7 ಬಿಲಿಯನ್ ಡಾಲರ್
ಭಾರತ ಒಟ್ಟು ಜಿಡಿಪಿಯಲ್ಲಿ ಶೇ. 2.3ರಷ್ಟು ಭಾಗ ರಕ್ಷಣೆಗೆ ಮೀಸಲಿರಿಸಿದೆ.
ಬಾರತ ಜಗತ್ತನ್ನು ಆಳಬಲ್ಲ ವಿಶ್ವದ ಮೂರನೇ ದೇಶ ಹಾಗೂ ಏಷಿಯಾದ 2ನೇ ದೇಶವಾಗಿದ್ದು, 4ನೇ ಅತಿದೊಡ್ಡ ಮಿಲಟರಿ ಶಕ್ತಿಯಾಗಿದೆ. 2016ರಲ್ಲಿ ಇರುವ 2557 ಬಿಲಿಯನ್ ಡಾಲರ್ ಜಿಡಿಪಿಯಿಂದ 2030ರ ವೇಳೆಗೆ 7287 ಬಿಲಿಯನ್ ಡಾಲರ್ ಜಿಡಿಪಿ ಏರಲಿದೆ. ಅತಿ ದೊಡ್ಡ ಜನಸಂಖ್ಯೆಯಿಂದಾಗಿ ಭಾರತವು ಜಗತ್ತಿನ 10 ಸಿರಿವಂತ ದೇಶಗಳ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ. ಈಗ ಭಾರತವು ಒಟ್ಟು ರೂ. 375 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

7. ಪ್ರಾನ್ಸ್

ರಕ್ಷಣಾ ಬಜೆಟ್ 2015: 44.2 ಬಿಲಿಯನ್ ಡಾಲರ್
ರಕ್ಷಣಾ ಬಜೆಟ್ 2016: 44.4 ಬಿಲಿಯನ್ ಡಾಲರ್
ಒಟ್ಟು ಜಿಡಿಪಿಯಲ್ಲಿ ಶೇ. 2.1ರಷ್ಟು ಭಾಗ ರಕ್ಷಣೆಗೆ ಮೀಸಲಿರಿಸಿದೆ. ಫ್ರಾನ್ಸ್ ವಿಶ್ವದ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು, ರೂ. 442 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ.

8. ಜಪಾನ್

ರಕ್ಷಣಾ ಬಜೆಟ್ 2015: 42.2 ಬಿಲಿಯನ್ ಡಾಲರ್
ರಕ್ಷಣಾ ಬಜೆಟ್ 2016: 41.7ಬಿಲಿಯನ್ ಡಾಲರ್
ಒಟ್ಟು ಜಿಡಿಪಿಯಲ್ಲಿ ಶೇ. 1.4ರಷ್ಟು ಭಾಗ ರಕ್ಷಣೆಗೆ ಮೀಸಲಿರಿಸಿದೆ.

9. ಜರ್ಮನಿ

ರಕ್ಷಣಾ ಬಜೆಟ್ 2015: 36 ಬಿಲಿಯನ್ ಡಾಲರ್
ರಕ್ಷಣಾ ಬಜೆಟ್ 2016: 35.8 ಬಿಲಿಯನ್ ಡಾಲರ್
ಒಟ್ಟು ಜಿಡಿಪಿಯಲ್ಲಿ ಶೇ. 1.2ರಷ್ಟು ಭಾಗ ರಕ್ಷಣೆಗೆ ಮೀಸಲಿರಿಸಿದೆ. ಜರ್ಮನಿಯ ಒಟ್ಟು ಜಿಡಿಪಿ ಮೌಲ್ಯ 3747 ಬಿಲಿಯನ್ ಡಾಲರ್ ಹೊಂದಿದ್ದು,ಒಟ್ಟು ಸಂಪತ್ತು ರೂ. 609 ಲಕ್ಷಕೋಟಿ ಆಗಿದೆ.

10. ದಕ್ಷಿಣ ಕೊರಿಯಾ

ರಕ್ಷಣಾ ಬಜೆಟ್ 2015: 32.2 ಬಿಲಿಯನ್ ಡಾಲರ್
ರಕ್ಷಣಾ ಬಜೆಟ್ 2016: 33.5 ಬಿಲಿಯನ್ ಡಾಲರ್
ಒಟ್ಟು ಜಿಡಿಪಿಯಲ್ಲಿ ಶೇ. 2.6ರಷ್ಟು ಭಾಗ ರಕ್ಷಣೆಗೆ ಮೀಸಲಿರಿಸಿದೆ.

English summary

10 countries with highest defence budgets

Global defence spending rose to $1.57 trillion in 2016 according to the report, kicking off what is forecast to be a decade of stronger global defence expenditure. Below are Top 10 defence budgets for 2015 and 2016:
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns