For Quick Alerts
ALLOW NOTIFICATIONS  
For Daily Alerts

ಜಗತ್ತಿನ ಅರ್ಧದಷ್ಟು ಸಂಪತ್ತು ಇವರ ಬಳಿ ಇದೆ!

ಕೇವಲ 10 ವ್ಯಕ್ತಿಗಳ ಹತ್ತಿರ ವಿಶ್ವದ ಅರ್ಧದಷ್ಟು ಸಂಪತ್ತು ಇದೆ. ಅವರೇಲ್ಲರೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಮಹಾಪುರುಷರು! ಅದರಲ್ಲಿ ಹೆಚ್ಚಿನವರು ಅಮೆರಿಕಾದವರಾದರೆ ಒಬ್ಬರು ಯೂರೋಪಿಯನ್, ಇನ್ನೊಬ್ಬರು ಮೆಕ್ಸಿಕನ್.

|

ಆದಾಯ ಅಸಮಾನತೆ ಜಗತ್ತನ್ನು ಕಾಡುತ್ತಿರುವ ಒಂದು ಮಹಾ ಪಿಡುಗು. ಅಂತಾದರಲ್ಲಿ ಇಡೀ ಜಗತ್ತಿನ ಅರ್ಧದಷ್ಟು ಸಂಪತ್ತು ಕೆವಲ ಕೇಲವೆ ವ್ಯಕ್ತಿಗಳ ಬಳಿಯಲ್ಲಿ ಇದೆ ಎಂದರೆ ಆಶ್ಚರ್ಯ ಅಲ್ಲವೆ!!

 

ಕೇವಲ 10 ವ್ಯಕ್ತಿಗಳ ಹತ್ತಿರ ವಿಶ್ವದ ಅರ್ಧದಷ್ಟು ಸಂಪತ್ತು ಇದೆ. ಅವರೇಲ್ಲರೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಮಹಾಪುರುಷರು! ಅದರಲ್ಲಿ ಹೆಚ್ಚಿನವರು ಅಮೆರಿಕಾದವರಾದರೆ ಒಬ್ಬರು ಯೂರೋಪಿಯನ್, ಇನ್ನೊಬ್ಬರು ಮೆಕ್ಸಿಕನ್. ಜತೆಗೆ ಇವರೆಲ್ಲ ದಾನಧರ್ಮ ಮಾಡುವ ಮನೋಭಾವ ಹೊಂದಿದವರು. ಫೋರ್ಬ್ಸ್ ನಿಯತಕಾಲಿಕೆ ಪ್ರಕಾರ ಈ ಸಿರಿವಂತರ ನಿವ್ವಳ ಸಂಪತ್ತು ಆದಾಯ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ.

ಜಗತ್ತಿನ ಅರ್ಧದಷ್ಟು ಸಂಪತ್ತು ಹೊಂದಿರುವ ಆ ಶತಕೋಟ್ಯಾಧಿಪತಿಗಳ ಕುತೂಹಲಕಾರಿ ನೋಟ ಇಲ್ಲಿದೆ ನೋಡಿ...

1. ಬಿಲ್ ಗೇಟ್ಸ್

1. ಬಿಲ್ ಗೇಟ್ಸ್

ಸಂಸ್ಥೆ: ಮೈಕ್ರೊಸಾಪ್ಟ್
ಒಟ್ಟು ಆಸ್ತಿ ಮೌಲ್ಯ: USD 90.2 ಬಿಲಿಯನ್
ಬಿಲಿಯನೇರ್ ಪದದ ಇನ್ನೊಂದು ನಾಣ್ಣುಡಿ ರೂಪಕ ಬಿಲ್ ಗೇಟ್ಸ್. ಇವರು ಅಮೆರಿಕಾದ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿ ಮೈಕ್ರೊಸಾಪ್ಟ್ ಸಂಸ್ಥಾಪಕರು.
ಮೈಕ್ರೊಸಾಪ್ಟ್ ಕಂಪನಿಯು ಲೈಸೆನ್ಸ್, ಕಂಪ್ಯೂಟರ್ ಸಾಪ್ಟ್ವೇರ್, ಎಲೆಕ್ಟ್ರಾನಿಕ್ಸ್, ಪರ್ಸನಲ್ ಕಂಪ್ಯೂಟರ್ಸ್ ಮತ್ತು ಸೇವೆಗಳನ್ನು ಒದಗಿಸುತ್ತದೆ. ಮೈಕ್ರೊಸಾಪ್ಟ್ ಕಂಪ್ಯೂಟರ್ ಕ್ಷೇತ್ರದಲ್ಲಿ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ.
ಪೋರ್ಬ್ಸ್ ಬಿಡುಗಡೆ ಮಾಡಿರುವ 2016ರ ವಿಶ್ವದ ನೂರು ಶ್ರೀಮಂತ ಶತಕೋಟಿ ಉದ್ಯಮಿಗಳ ಪಟ್ಟಿಯಲ್ಲಿ ಮೈಕ್ರೊಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ಅಗ್ರ ಸ್ಥಾನ ಪಡೆದಿದ್ದಾರೆ.

2. ಅಮೆನಿಕೊ ಒರ್ಟೆಗಾ

2. ಅಮೆನಿಕೊ ಒರ್ಟೆಗಾ

ಸಂಸ್ಥೆ: ಪ್ಯಾಷನ್ ಹೌಸ್ ಇಂಡಿಟೆಕ್ಸ್
ಒಟ್ಟು ಆಸ್ತಿ ಮೌಲ್ಯ: USD 77.9 ಬಿಲಿಯನ್
ಅಮೆನಿಕೊ ಒರ್ಟೆಗಾ ಯೂರೋಪಿನ ಅತಿ ಶ್ರೀಮಂತ ವ್ಯಕ್ತಿ. ಝರಾ ಜವಳಿ ಉತ್ಪನ್ನ ಸರಣಿಯ ಸಂಸ್ಥಾಪಕರಾದ ಇವರು 1975ರಲ್ಲಿ ಝರಾ ಪ್ಯಾಷನ್ ಅಂಗಡಿಯನ್ನು ತೆರೆದರು. ಇದೀಗ ಒರ್ಟೆಗಾಸ್ ಇಂಡಿಟೆಕ್ಸ್ ಗ್ರೂಪ್ ಜಾಗತಿಕವಾಗಿ 7000 ಅಂಗಡಿಗಳನ್ನು ಹೊಂದಿದೆ. 13ನೇ ವಯಸ್ಸಿನಲ್ಲಿ ಶಾಲೆ ಬಿಟ್ಟು ಬಟ್ಟೆ ಅಂಗಡಿ ಉದ್ಯೋಗ ಪ್ರಾರಂಭಿಸಿದರು. ಇವರು ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುತ್ತಾರೆ.

3. ವಾರೆನ್ ಬಫೆಟ್
 

3. ವಾರೆನ್ ಬಫೆಟ್

ಸಂಸ್ಥೆ: ಬರ್ಕ್‌ಷೈರ್ ಹಾಥ್‌ವೇ
ಒಟ್ಟು ಆಸ್ತಿ ಮೌಲ್ಯ: USD 84.3 ಬಿಲಿಯನ್
ವಾರೆನ್ ಬಫೆಟ್ ವಿಶ್ವದ ಮಹಾನ್ ಶ್ರೀಮಂತ, ಶ್ರೇಷ್ಠ ಹೂಡಿಕೆದಾರ ಹಾಗೂ ಮಹಾನ್ ದಾನಿ. ಸಣ್ಣ ವಯಸ್ಸಿನಲ್ಲೇ ಕೋಕಾ ಕೋಲಾ ಕ್ಯಾನುಗಳನ್ನು ಲಾಭಕ್ಕೆ ಮಾರಿ, ಪೇಪರ್ ಹಾಕಿ ದುಡ್ಡು ಮಾಡಿ, ವಿಶ್ವದ ಹಣಕಾಸು ಎಂಬ ಮಾಯೆಯ ಲೋಕದಲ್ಲಿ ನಿರಂತರವಾಗಿ ಆರು ದಶಕಗಳಿಗೂ ಹೆಚ್ಚು ಕಾಲ ಶ್ರೇಷ್ಠ ಹೂಡಿಕೆದಾರನಾಗಿ ಉಳಿದ ವಿಸ್ಮಯಕಾರಿ ಅದ್ಬುತ ಉದ್ಯಮಿ. ಸಾವಿರಾರು ಹೂಡಿಕೆದಾರರು ಇವರನ್ನು ಹಿಂಬಾಲಿಸುತ್ತಾರೆ. 2008ರ ವರ್ಷದಲ್ಲಿ ವಿಶ್ವದಲ್ಲೇ ಅತ್ಯಂತ ಶ್ರೀಮಂತರೆನಿಸಿದ್ದ ಇವರು ತಮ್ಮ ಬಹುಪಾಲು ಸಂಪತ್ತನ್ನು ಸಮಾಜ ಸೇವೆಗೆ ಕೊಟ್ಟ ನಂತರವೂ ಈಗಲೂ 60.8 ಬಿಲಿಯನ್ ಡಾಲರ್ ಮೌಲ್ಯವುಳ್ಳ ವಿಶ್ವದ ದೊಡ್ಡ ಶ್ರೀಮಂತರಾಗಿದ್ದಾರೆ.

4. ಕಾರ್ಲೋಸ್ ಸ್ಲಿಮ್

4. ಕಾರ್ಲೋಸ್ ಸ್ಲಿಮ್

ಸಂಸ್ಥೆ: ಅಮೆರಿಕನ್ ಮೊವಿಲ್(ದೂರಸಂಪರ್ಕ)
ಒಟ್ಟು ಆಸ್ತಿ ಮೌಲ್ಯ: USD 64.3 ಬಿಲಿಯನ್
ಕಾರ್ಲೋಸ್ ಸ್ಲಿಮ್ ಇವರು ಮೆಕ್ಸಿಕನ್ ಪ್ರಸಿದ್ದ ಉದ್ಯಮಿ. ಬಹುರಾಷ್ಟ್ರೀಯ ದೂರಸಂಪರ್ಕ ಕಂಪನಿ ಅಮೆರಿಕನ್ ಮೊವಿಲ್ ನಲ್ಲಿ 42 ಶತಕೋಟಿ ಒಡೆತನ ಹೊಂದಿದ್ದಾರೆ. ಮೂರು ವರ್ಷಗಳ ಹಿಂದೆ ಶ್ರೀಮಂತ ವ್ಯಕ್ತಿ ಎಂಬ ಶ್ರೇಯಾಂಕ ಪಡೆದಿದ್ದರು.

5. ಜೆಫ್ ಬೆಜೊಸ್

5. ಜೆಫ್ ಬೆಜೊಸ್

ಸಂಸ್ಥೆ: ಅಮೆಜಾನ್.ಕಾಮ್
ಒಟ್ಟು ಆಸ್ತಿ ಮೌಲ್ಯ: USD 98.6 ಬಿಲಿಯನ್ (Forbes)
ಜೆಫ್ ಬೆಜೊಸ್ ಅಮೆಜಾನ್.ಕಾಮ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ. ಅಮೆಜಾನ್ ವಿಶ್ವದ ದೊಡ್ಡ ಆನ್ಲೈನ್ ಶಾಪಿಂಗ್ ಮಳಿಗೆ. ಜೆಫ್ ಬಿಜೋಸ್ ಪೋರ್ಬ್ಸ್ ಬಿಡುಗಡೆ ಮಾಡಿರುವ 2016ರ ವಿಶ್ವದ ನೂರು ಶ್ರೀಮಂತ ಶತಕೋಟಿ ಉದ್ಯಮಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅಮೆಜಾನ್.ಕಾಮ್ ಜಗತ್ತಿನ ಪ್ರತಿಷ್ಠಿತ ಇ-ಕಾಮರ್ಸ್, ಆನ್ಲೈನ್ ಮಾರುಕಟ್ಟೆಯ ಬೃಹತ್ ಕಂಪನಿಯಾಗಿದೆ.

6. ಮಾರ್ಕ್ ಜುಗರ್ ಬರ್ಗ್

6. ಮಾರ್ಕ್ ಜುಗರ್ ಬರ್ಗ್

ಸಂಸ್ಥೆ: ಪೇಸ್ಬುಕ್
ಒಟ್ಟು ಆಸ್ತಿ ಮೌಲ್ಯ: USD 72.3 ಬಿಲಿಯನ್
ಅಮೆರಿಕಾ ಮೂಲದ ಮಾರ್ಕ್ ಜುಗರ್ ಬರ್ಗ್ ಪ್ರಸಿದ್ದ ಅಂತರ್ಜಾಲ ಉದ್ಯಮಿ ಹಾಗೂ ಪ್ರೋಗ್ರಾಮರ್ ಆಗಿದ್ದಾರೆ. ಇವರು ಪೇಸ್ಬುಕ್ ಸಂಸ್ಥೆಯ ಅಧ್ಯಕ್ಷ, ಸಿಇಒ ಮತ್ತು ಸಹಸಂಸ್ಥಾಪಕರಾಗಿದ್ದಾರೆ. ಇವರ ನೇತೃತ್ವದಲ್ಲಿ ಸಾಮಾಜಿಕ ಮಾದ್ಯಮವಾದ ಪೇಸ್ಬುಕ್ ಸಂಸ್ಥೆ ಮಹತ್ತರ ಸಾಧನೆ ಮಾಡಿದೆ. ಪೇಸ್ಬುಕ್ ವಿಶ್ವದ ಪ್ರಸಿದ್ದ ಸಾಮಾಜಿಕ ಜಾಲತಾಣವಾಗಿದೆ.

7. ಲ್ಯಾರಿ ಎಲಿಸನ್

7. ಲ್ಯಾರಿ ಎಲಿಸನ್

ಸಂಸ್ಥೆ: ಓರಾಕಲ್
ಒಟ್ಟು ಆಸ್ತಿ ಮೌಲ್ಯ: USD 61.2 ಬಿಲಿಯನ್
ಲ್ಯಾರಿ ಎಲಿಸನ್ ಅಮೆರಿಕಾದ ಉದ್ಯಮಿ ಹಾಗೂ ಓರಾಕಲ್ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಸಿಇಒ. ಓರಾಕಲ್ ಕಂಪನಿ ಅಮೆರಿಕಾದ ಬಹುರಾಷ್ಟ್ರೀಯ ಕಂಪ್ಯೂಟರ್ ಟೆಕ್ನಾಲಜಿ ಕಾರ್ಪೋರೇಷನ್ ಆಗಿದೆ.
ಪ್ರಸ್ತುತ ಲ್ಯಾರಿ ಎಲಿಸನ್ ಕ್ಲೌಡ್ ಕಂಪ್ಯೂಟಿಂಗ್ ಮೇಲೆ ಹೆಚ್ಚು ಗಮನ ಕೇಂದ್ರಕರಿಸಿದ್ದು, ಇದರಲ್ಲಿ ದತ್ತಾಂಶವನ್ನು ಸಂಗ್ರಹಿಸಿ ನಿರ್ವಹಣೆ ಮಾಡಲಾಗುತ್ತದೆ.

8. ಮೈಕೆಲ್ ಬ್ಲೂಮ್ಬರ್ಗ್

8. ಮೈಕೆಲ್ ಬ್ಲೂಮ್ಬರ್ಗ್

ಮೈಕೆಲ್ ಬ್ಲೂಮ್ಬರ್ಗ್ ನ್ಯೂಯಾರ್ಕ್ ನ ಮಾಜಿ ಮೇಯರ್ ಆಗಿದ್ದು, ಅಮೆರಿಕಾದ ಬಿಸಿನೆಸ್ಮೆನ್, ಲೇಖಕ ಮತ್ತು ದಾನಿ.
ಇವರ ಒಟ್ಟು ಸಂಪತ್ತು: USD 49.7 ಬಿಲಿಯನ್ . ಹಣಕಾಸು ಸೇವಾ ಸಂಸ್ಥೆಗಳಿಗೆ ಡೇಟಾ ಟರ್ಮಿನಲ್ ಮಾರಾಟ ಮಾಡುವ ವ್ಯವಹಾರ ಮಾಡುತ್ತಾರೆ.

9. ಲ್ಯಾರಿ ಪೇಜ್

9. ಲ್ಯಾರಿ ಪೇಜ್

ಸಂಸ್ಥೆ: ಗೂಗಲ್ ಇಂಕ್
ಒಟ್ಟು ಆಸ್ತಿ ಮೌಲ್ಯ: USD 49.4 ಬಿಲಿಯನ್
ಲ್ಯಾರಿ ಪೇಜ್ ಅಮೆರಿಕಾದ ಕಂಪ್ಯೂಟರ್ ವಿಜ್ಞಾನಿ ಮತ್ತು ಅಂತರ್ಜಾಲ ಉದ್ಯಮಿ. ಗೂಗಲ್ ಪೇರೆಂಟ್ ಮತ್ತು ಅಲ್ಫಾಬೆಟ್ ಇಂಕ್. ಕಂಪನಿಯ ಸಿಇಒ.

10. ಸೆರ್ಗೆ ಬ್ರಿನ್

10. ಸೆರ್ಗೆ ಬ್ರಿನ್

ಸಂಸ್ಥೆ: ಗೂಗಲ್
ಒಟ್ಟು ಆಸ್ತಿ ಮೌಲ್ಯ: USD 47.9 ಬಿಲಿಯನ್, ಗೂಗಲ್ ಪೇರೆಂಟ್ ಮತ್ತು ಅಲ್ಫಾಬೆಟ್ ಇಂಕ್. ಕಂಪನಿಯ ಅಧ್ಯಕ್ಷ ಹಾಗೂ ಗೂಗಲ್ ಸಹಸಂಸ್ಥಾಪಕರು. ಇವರು ಕಂಪ್ಯೂಟರ್ ವಿಜ್ಞಾನಿ ಮತ್ತು ಅಂತರ್ಜಾಲ ಉದ್ಯಮಿ. ಗೂಗಲ್ ಜಗತ್ತಿನ ಪ್ರಸಿದ್ದ ಸರ್ಚ್ ಇಂಜಿನ್ ಆಗಿದೆ. 2016ರ ಟಾಪ್ 10 ಟೆಕ್ ಬಿಲಿಯನೇರ್

English summary

These 10 men are as rich as half of the world

The ten individuals who own as much as half of the rest of the planet are all men, and have largely made their fortunes in technology. Most are American, with one European and one Mexican in the mix. Several have pledged to give it all to charity.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X