For Quick Alerts
ALLOW NOTIFICATIONS  
For Daily Alerts

2017ರಲ್ಲಿ ಮನೆ ಖರೀದಿ ಮಾಡಲು ಉತ್ತಮ 10 ನಗರಗಳು

ಈ ವರ್ಷದ ರಿಯಲ್ ಎಸ್ಟೇಟ್ ಸಂಬಂಧಿತ ಹಲವಾರು ನೀತಿಗಳಿಂದಾಗಿ ಈಗಾಗಲೇ ವಹಿವಾಟಿನಲ್ಲಿ ಕಡಿತ ಮತ್ತು ಗ್ರಾಹಕರಲ್ಲಿ ಕಡಿಮೆ ವಿಶ್ವಾಸ ಉಂಟುಮಾಡಿದೆ.

By Siddu
|

ಈ ವರ್ಷದ ರಿಯಲ್ ಎಸ್ಟೇಟ್ ಸಂಬಂಧಿತ ಹಲವಾರು ನೀತಿಗಳಿಂದಾಗಿ ಈಗಾಗಲೇ ವಹಿವಾಟಿನಲ್ಲಿ ಕಡಿತ ಮತ್ತು ಗ್ರಾಹಕರಲ್ಲಿ ಕಡಿಮೆ ವಿಶ್ವಾಸ ಉಂಟುಮಾಡಿದೆ. ನೋಟು ರದ್ದತಿ ಮತ್ತು ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಕಾಯಿದೆ ಸೂಚನೆ ಅನ್ವಯ ಮಾರಾಟ ಮತ್ತು ಹೊಸ ಲಾಂಚ್ ಪ್ರಕ್ರಿಯೆಗಳು ಹೆಚ್ಚುಕಡಿಮೆ ನಿಂತಿವೆ. ಅದಕ್ಕೆ ಕಾರಣ ಮನೆ ಕೊಳ್ಳುವವರು ಮತ್ತು ಕಟ್ಟುವವರು ಇಬ್ಬರೂ ಕೂಡ ಕಾದು ನೋಡುವ ಸ್ಥಿತಿಯಲ್ಲಿರುವುದು. ಭಾರತದಲ್ಲಿ ವಸತಿ ಬೇಡಿಕೆ ಹೆಚ್ಚಿರುವ 11 ನಗರಗಳು

 

ಇದರ ನಡುವೆಯೂ 2017ರಲ್ಲಿ ಭಾರತದಲ್ಲಿ ಮನೆ ಖರೀದಿಗಾಗಿ ಆಯ್ಕೆ ಮಾಡಬಹುದಾದ ಪ್ರಮುಖ ಹತ್ತು ಉತ್ತಮ ಸ್ಥಳಗಳ ವಿವರ ಇಲ್ಲಿ ನೀಡಲಾಗಿದೆ...

1. ಅಹಮದಾಬಾದ್(ಗಿಫ್ಟ್ ಸಿಟಿ)

1. ಅಹಮದಾಬಾದ್(ಗಿಫ್ಟ್ ಸಿಟಿ)

ಗಿಫ್ಟ್ ಸಿಟಿಯಲ್ಲಿನ ಸ್ಥಳಗಳಾದಂತಹ ಥಾಲ್‍ತೇಜ್, ಸೊಲಾ, ಸೈನ್ಸ್ ಸಿಟಿ ರೋಡ್, ತ್ರಾಗಾದ್ ಮತ್ತು ಗೊಡ್ರೆಜ್ ಗಾರ್ಡನ್ ಸಿಟಿಗಳು ಬಹು ಬೇಡಿಕೆಯ ಸ್ಥಳಗಳಾಗಲಿವೆ. ಇದಕ್ಕೆ ಕಾರಣ-
• ಪ್ರಮುಖ ಹೆದ್ದಾರಿಗಳಿಗೆ ಸುಲಭವಾಗಿ ತಲುಪಬಹುದು. ಉದಾಹರಣೆಗೆ ಸರ್ಖೆಜ್-ಗಾಂಧಿನಗರ ಹೆದ್ದಾರಿ ಮತ್ತು ಸರ್ದಾರ್ ಪಟೇಲ್ ರಿಂಗ್ ರೋಡ್.
• ಸಾಮಾಜಿಕವಾಗಿ ಹಾಗೂ ದೈಹಿಕವಾಗಿ ಮೂಲ ಸೌಕರ್ಯಗಳು ತುಂಬಾ ಚೆನ್ನಾಗಿವೆ
• ಗಿಫ್ಟ್ ಸಿಟಿಗೆ ಹತ್ತಿರವಾಗಿದ್ದಲ್ಲದೆ, ಅಂತರಾಷ್ಟ್ರೀಯ ಆರ್ಥಿಕ ಕೇಂದ್ರಕ್ಕೆ ಆತಿಥೇಯವಾಗಿದೆ. ಜೊತೆಗೆ ಮಲ್ಟಿ-ಸ್ಪೆಷಾಲಿಟಿ ಸ್ಪೆಷಲ್ ಇಕೊನೊಮಿಕ್ ಜೊನ್(SEZ) ಕೂಡ ಹೊಂದಿದೆ.

2. ಬೆಂಗಳೂರು(ಥಣಿಸಂದ್ರ)

2. ಬೆಂಗಳೂರು(ಥಣಿಸಂದ್ರ)

• ಸ್ಪರ್ಧಾತ್ಮಕ ವಸತಿ ಬೆಲೆಯಿದೆ.
• ಉದ್ಯೋಗವಕಾಶಗಳು, ಸಾಮಾಜಿಕ ಮತ್ತು ದೈಹಿಕ ಮೂಲ ಸೌಕರ್ಯಗಳು ಲಭ್ಯ ಇವೆ.
• ದೊಡ್ಡ ಅಂಗಡಿ, ಮನೊರಂಜನೆ, ವೈದ್ಯಕೀಯ ಮತ್ತು ಶೈಕ್ಷಣಿಕ ವ್ಯವಸ್ಥೆಗಳಂತಹ ಜಾಲ ಸಂಪರ್ಕ ತಾಣಗಳೆಲ್ಲಾ 3 ರಿಂದ 12 ಕಿ.ಮೀ ಒಳಗಡೆಯೇ ಬರುತ್ತವೆ.
* ಉದ್ಯೋಗ ಸಂಬಂಧಿತ ತಾಣಗಳು 10-20 ನಿಮಿಷಗಳ ದೂರದಲ್ಲಿವೆ.

3. ಬೆಂಗಳೂರು(ಪಣತೂರ್-ವರ್ತೂರ್)
 

3. ಬೆಂಗಳೂರು(ಪಣತೂರ್-ವರ್ತೂರ್)

• ಮಾರತಹಳ್ಳಿ ಒಆರ್ಆರ್ ಮತ್ತು ವೈಟ್ ಫೀಲ್ಡ್ (ವರ್ತೂರ್ ಕೊಡಿ ಮೂಲಕ) ಎರಡೂ ಕಡೆಯಿಂದ ಸಂಪರ್ಕ ಹೊಂದಿದೆ.
• ಮುಖ್ಯ ಐಟಿ ತಾಣಗಳಿಗೆ 10 ರಿಂದ 20 ನಿಮಿಷಗಳ ದಾರಿ
• ಪ್ರಮುಖ ಚಿಲ್ಲರೆ ಅಂಗಡಿ, ಮನರಂಜನೆ, ವೈದ್ಯಕೀಯ ಮತ್ತು ಶೈಕ್ಷಣಿಕ ವ್ಯವಸ್ಥೆ (ಟೇಬಲ್ 6) ಜಾಲ ಸಂಪರ್ಕ ತಾಣಗಳೆಲ್ಲಾ 2 ರಿಂದ 15 ಕಿ.ಮೀ ಒಳಗಡೆಯೇ ಬರುತ್ತವೆ.
* ಉದ್ಯೋಗಿ ಸಂಬಂಧಿತ ಸ್ಥಳಗಳು 5 ರಿಂದ 30 ನಿಮಿಷಗಳ ದೂರದಲ್ಲಿವೆ.

4. ದಕ್ಷಿಣ ಚೆನ್ನೈ

4. ದಕ್ಷಿಣ ಚೆನ್ನೈ

ಪೆರುಂಬಕ್ಕಮ್, ಕ್ರೊಮ್‍ಪೆಟ್, ಶೊಲಿಂಗಾನಲ್ಲುರ್, ಗುಡುವಂಚೆರಿ, ಕೆಲಂಬಕ್ಕಮ್ ಇವು ಬೇಡಿಕೆಯಲ್ಲಿರುವ ನಗರಗಳು. ಕೈಗೆಟಕುವ ದರದ ಜೊತೆಗೆ ಮೂಲ ಸೌಕರ್ಯಗಳು ಇವೆ. ಪ್ರಮುಖವಾಗಿ ಉದ್ಯೊಗ ತಾಣಗಳಿಗೆ ಹತ್ತಿರವಿರುವುದರಿಂದ ಇವು ಎಲ್ಲರ ನೆಚ್ಚಿನ ತಾಣಗಳಾಗಿವೆ.

5. ಚೆನ್ನೈ(ಗಿಂಡಿ - ಅಲಂದುರ್ ಕ್ಲಸ್ಟರ್)

5. ಚೆನ್ನೈ(ಗಿಂಡಿ - ಅಲಂದುರ್ ಕ್ಲಸ್ಟರ್)

• ಸರಿಸುಮಾರು ಉದ್ಯೋಗಿ ಸ್ಥಳಗಳಿಗೆ ಹತ್ತಿರ ಮತ್ತು ವಸತಿ ಸ್ಥಳಗಳ ಬೆಲೆ ದುಬಾರಿ
• ಮೆಟ್ರೊ ಮತ್ತು ಎಮ್‍ಆರ್‍ಟಿಎಸ್ ದಾರಿಗಳ ಮೂಲಕ ಎಲ್ಲೆಡೆಯೂ ಸಂಪರ್ಕ ಹೊಂದಬಹುದು.
• ಸಾಮಾಜಿಕ ಸೌಕರ್ಯಗಳು ಚೆನ್ನಾಗಿವೆ. ಉದಾಹರಣೆಗೆ ಪ್ರಮುಖ ಮಾಲ್‍ಗಳು, ಆಸ್ಪತ್ರೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಜೊತೆಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕೂಡ 20 ನಿಮಿಷಗಳ ದೂರದಲ್ಲಿದೆ.

6. ಹೈದ್ರಾಬಾದ್(ಪುಪ್ಪಲ್‍ಗುಡಾ-ನರ್ಸಿಂಗಿ)

6. ಹೈದ್ರಾಬಾದ್(ಪುಪ್ಪಲ್‍ಗುಡಾ-ನರ್ಸಿಂಗಿ)

• ಐಟಿ/ಐಟಿಇಎಸ್ ಮತ್ತು ಬಿಎಫ್ಎಸ್ಐ ಸ್ಥಳಗಳಿಗೆ ಹತ್ತಿರ ಇವೆ. ಉದಾಹರಣೆಗೆ ಹೈಟೆಕ್ ಸಿಟಿ ಮತ್ತು ಗಚಿಬೌಲಿ ಮನೆ ಕೊಳ್ಳುವವರಿಗೆ ನಿರಂತರವಾಗಿ ಆಕರ್ಷಿಸುತ್ತಿದೆ.
• ಕಡಿಮೆ ಬೆಲೆ ಮತ್ತು ಜಿಲ್ಲಾ ವಹಿವಾಟು ಮುಖ್ಯ ಕಚೇರಿಗಳಿಗೆ ಹತ್ತಿರವಾಗಿರುವುದು ಈ ಸ್ಥಳಕ್ಕೆ ಹೆಚ್ಚಿನ ಪ್ರಾಮುಖ್ಯತೆ ತಂದಿದೆ.
• ಸಾಮಾಜಿಕ ಸೌಕರ್ಯಗಳು ಚೆನ್ನಾಗಿವೆ. ಉದಾಹರಣೆಗೆ ಪ್ರಮುಖ ಮಾಲ್‍ಗಳು, ಆಸ್ಪತ್ರೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಜೊತೆಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲವೂ 30 ನಿಮಿಷಗಳ ಒಳಗೆ ತಲುಪಬಹುದು.
• ಹಳೆ ಮುಂಬಯಿ ಹೈವೆಗೆ ಸಂಪರ್ಕ ಹೊಂದುವ ಫ್ಲೈ ಓವರ್ ಟೊಲಿ ಚೌಕಿಗೆ ಹತ್ತಿರವಾಗಿದೆ. ಜತೆಗೆ ಒಆರ್ಆರ್ ಗೆ ನೇರವಾದ ಸಂಪರ್ಕವಿದೆ. ಚತುಷ್ಪತ ರಸ್ತೆಯ ಕೆಲಸ ಸದ್ಯ ನಡೆಯುತ್ತಿರುವುದರಿಂದ ಹೆಚ್ಚಿನ ಬೇಡಿಕೆ ಇರಲಿದೆ.

7. ಕೊಲ್ಕತ್ತಾ(ರಾಜರಹತ್)

7. ಕೊಲ್ಕತ್ತಾ(ರಾಜರಹತ್)

ಸುಸಜ್ಜಿತವಾಗಿರುವ ರಸ್ತೆಗಳು ಮತ್ತು ಮುಂಬರಲಿರುವ ರಸ್ತೆಗಳ ಸಂಪರ್ಕ ಜಾಲ ಈ ಸ್ಥಳದ ವಿಶೇಷತೆಯಾಗಿದೆ.
ಮೆಟ್ರೊ ಸಂಪರ್ಕ ರಾಜರಹತ್ ಮತ್ತು ಇತರ ಸ್ಥಳಗಳಿಗೆ ತರುವ ಪ್ರಸ್ತಾವನೆ ಚಾಲನೆಯಲ್ಲಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಸಾಲ್ಟ್ ಲೇಕ್ ಸೆಕ್ಟರ್ ವಿ- ಐಟಿ/ಐಟಿಇಎಸ್ ಮತ್ತು ಇತರ ವಹಿವಾಟು ಸಂಬಂಧಿತ ಸ್ಥಳಗಳಿಗೆ ರಾಜರಹತ್ ಹತ್ತಿರವಾಗಿದೆ.

8. ಎಮ್‍ಎಮ್‍ಆರ್(ಮಜಿವಾಡ-ಕಸರ್ವಡಾವಲಿ)

8. ಎಮ್‍ಎಮ್‍ಆರ್(ಮಜಿವಾಡ-ಕಸರ್ವಡಾವಲಿ)

• ಬೇರೆ ಸ್ಥಳಗಳಿಗೆ ಹೋಲಿಸಿದರೆ ಆಕರ್ಷಕ ಬೆಲೆಯಲ್ಲಿ ವಸತಿಗಳು ಲಭ್ಯವಿವೆ. ಉದ್ಯೋಗ ತಾಣಗಳಿಗೆ ಸಂಪರ್ಕವಿದ್ದು, ಮೂಲಭೂತ ಸೌಕರ್ಯಗಳಿವೆ.
• 32 ಕಿ. ಮೀ ಚತುಷ್ಪತ ಮುಂಬಯಿ ಮೆಟ್ರೊ( ವಡಾಲಾ - ಘಾಟ್‍ಕೊಪ್ಪರ್ - ಥಾಣೆ-ಕಾಸರ್ವಡಾವಲಿ) ಕಾರ್ಯ ಸಂಪೂರ್ಣಗೊಂಡಾಗ ಎಮ್‍ಆರ್‍ಟಿಎಸ್ ಗೆ ನೇರ ಸಂಪರ್ಕ ಸಾಧ್ಯವಾಗಲಿದೆ.

9. ಪುಣೆ(ವಿಮಾನ ನಗರ ಮತ್ತು ವಿಶ್ರಾಂತ್ ವಾಡಿ)

9. ಪುಣೆ(ವಿಮಾನ ನಗರ ಮತ್ತು ವಿಶ್ರಾಂತ್ ವಾಡಿ)

• ಯರವಾಡಾ, ವಿಮಾನ ನಿಲ್ದಾಣ ರಸ್ತೆ, ಕಲ್ಯಾಣಿ ನಗರ ಮತ್ತು ವಿಮಾನ ನಗರಗಳಿಂದ ಉದ್ಯೋಗ ತಾಣಗಳಿಗೆ ಸಂಪರ್ಕವಿದೆ. ಬಿಆರ್‍ಟಿ ವ್ಯವಸ್ಥೆ ಮತ್ತು ಮೆಟ್ರೊ ರೈಲ್ವೆ ಸಂಪರ್ಕಕ್ಕೆ ಯೋಜನೆ ಮಾಡಲಾಗಿದೆ.
• ಎಲ್ಲಾ ಪ್ರಮುಖ ಅಂಗಡಿಗಳು, ಮನರಂಜನಾ, ವೈದ್ಯಕೀಯ ಮತ್ತು ಶೈಕ್ಷಣಿಕ ಸಂಸ್ಥೆಗಳಿರುವ ಎಲ್ಲಾ ಸ್ಥಳಗಳು 10-20 ನಿಮಿಷಗಳ ಅಂತರದಲ್ಲಿವೆ. ವಿಮಾನ ನಿಲ್ದಾಣ ಮತ್ತು ರೇಲ್ವೆ ನಿಲ್ದಾಣಗಳು ಕೂಡ ಹತ್ತಿರದಲ್ಲಿವೆ.

10. ಗುರಗಾಂವ್(ಗಾಲ್ಫ್ ಕೊರ್ಸ್ ಎಕ್ಸ್‍ಟೆನ್ಶನ್)

10. ಗುರಗಾಂವ್(ಗಾಲ್ಫ್ ಕೊರ್ಸ್ ಎಕ್ಸ್‍ಟೆನ್ಶನ್)

ಡಿಎಲ್ಎಫ್ ಸೈಬರ್ ಸಿಟಿ ಹತ್ತಿರವಿದ್ದು, ವೇಗದ ಸಂಪರ್ಕ ಸೌಲಭ್ಯವಿದೆ. ಉತ್ತಮ ಸುಸಜ್ಜಿತ ಸಾಮಾಜಿಕ ಮತ್ತು ದೈಹಿಕ ಮೂಲ ಸೌಕರ್ಯಗಳು ಲಭ್ಯವಿವೆ. ಮುಂದಿನ ಬೆಳವಣಿಗೆ ಮತತ್ಉ ಅಭಿವೃದ್ದಿಗೆ ಸಿಮಿತ ಭೂಮಿ ಲಭ್ಯತೆ ಇದೆ.
ಮುಂದಿನ ಎರಡು ವರ್ಷಗಳ ಒಳಗಾಗಿ ಸುಸಜ್ಜಿತ ಕೊಳವೆ ವ್ಯವಸ್ಥೆಯನ್ನು ಹೊಂದಿದೆ. ಈಗಾಗಲೇ ಇರುವ ದೆಹಲಿ ಮತ್ತು ಗುರಗಾವ್ ನ ಮೆಟ್ರೊ ಲಿಂಕ್ ಅನ್ನು ಮಣೆಸರ್ ವರೆಗೆ ವಿಸ್ತಿರಿಸುವುದರಿಂದ ಗಾಲ್ಪ್ ಕೊರ್ಸ್ ಎಕ್ಸ್‍ಟೆನ್ಶನ್ ರಸ್ತೆ ಮೂಲಕ ಹಾದು ಹೋಗಲಿದೆ.

Read more about: home loan housing ವಸತಿ
English summary

Top 10 locations in India to buy homes in 2017

The residential real estate, which was already reeling under slow sales and low consumer confidence, has bear the brunt of many policy decisions this year. With the introduction of real estate regulatory Act and demonetisation, the sales and new launches have almost stopped as both home buyers and developers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X