Englishहिन्दी മലയാളം தமிழ் తెలుగు

ಪೇಟಿಎಂ ನಲ್ಲಿ 2000 ಉದ್ಯೋಗ ಅವಕಾಶ

Posted By: Siddu
Subscribe to GoodReturns Kannada

ದೇಶದ ಪ್ರಮುಖ ಇ-ಕಾಮರ್ಸ್ ದೈತ್ಯ ಸಂಸ್ಥೆ ಪೇಟಿಎಂ ಹೊಸದಾಗಿ 2 ಸಾವಿರ ಉದ್ಯೋಗಿಗಳ ನೇಮಕ ಮಾಡಲು ಚಿಂತನೆ ನಡೆಸಿದೆ.
ವಿಶೇಷವಾಗಿ ಪೇಟಿಎಂ ಹೊಸ ಘಟಕವಾಗಿರುವ ಆನ್ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಪೇಟಿಎಂ ಮಾಲ್ ಗಾಗಿ ಸಿಬ್ಬಂದಿಗಳ ನೇಮಕಕ್ಕೆ ಮುಂದಾಗಿದೆ.

ಪೇಟಿಎಂ ಕಂಪನಿ ಪೇಟಿಎಂ ಪೇಮೆಂಟ್ ಬ್ಯಾಂಕ್ ಪ್ರೈ. ಲಿ. ಎಂದು ನಾಮಾಂಕಿತಗೊಂಡ ನಂತರ ಇದರ ಕಾರ್ಯವ್ಯಾಪ್ತಿ ಕೂಡ ದೊಡ್ಡದಾಗುತ್ತಿದೆ.

ಉದ್ಯೋಗಿಗಳ ಸ್ಥಳಾಂತರ

ಪೇಟಿಎಂ 800 ಉದ್ಯೋಗಿಗಳನ್ನು One97 ಕಮ್ಯೂನಿಕೆಷನ್ ನಿಂದ ಪೇಟಿಎಂ ಪೇಮೆಂಟ್ ಬ್ಯಾಂಕ್ ಘಟಕಕ್ಕೆ ಸ್ಥಳಾಂತರಿಸಿದೆ. ಇದು ಆನ್ಲೈನ್ ಶಾಪಿಂಗ್ ವೇದಿಕೆಯಾಗಿರುವ ಪೇಟಿಎಂ ಮಾಲ್ ನ್ನು ನಡೆಸುತ್ತದೆ.

ಒಟ್ಟು ಸಿಬ್ಬಂದಿಗಳು

ಪ್ರಸ್ತುತ, ಪೇಟಿಎಂ ಸಂಸ್ಥೆ 5,000 ಉದ್ಯೋಗಿಗಳನ್ನು ಹೊಂದಿದೆ. ಇದು ಇತ್ತೀಚೆಗೆ ಬಿಡುಗಡೆಯಾದ ಪೇಟಿಎಂ ಪೇಮೆಂಟ್ ಬ್ಯಾಂಕ್ ನ್ನು ಕೂಡ ಒಳಗೊಂಡಿದೆ. ಇ-ಕಾಮರ್ಸ್ ವ್ಯವಹಾರದಲ್ಲಿ ತನ್ನ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಸಿಬ್ಬಂದಿ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ.

ಪೇಟಿಎಂ ಪೇಮೆಂಟ್ ಬ್ಯಾಂಕ್‌ ಸೌಲಭ್ಯಗಳೇನು?

* ಪೇಟಿಎಂ ಪೇಮೆಂಟ್ ಬ್ಯಾಂಕ್‌ ಖಾತೆಗೆ ರೂ. 25 ಸಾವಿರ ಜಮೆ ಮಾಡುವವರಿಗೆ ರೂ. 250 ಕ್ಯಾಷ್‌ಬ್ಯಾಕ್‌ ಕೊಡುಗೆ ಸಿಗಲಿದೆ.
* ಮಿನಿಮಮ್ ಬ್ಯಾಲೆನ್ಸ್ ಖಾತೆ, ನೆಫ್ಟ್(NEFT), ಐಎಂಪಿಎಸ್(IMPS)‌ ಆರ್ಟಿಜಿಎಸ್(RTGS) ಸೇರಿದಂತೆ ಉಚಿತ ಆನ್‌ಲೈನ್‌ ವಹಿವಾಟು ಸೇವೆ ಒದಗಿಸಲಿದೆ.
* ಗರಿಷ್ಠ ರೂ. 1 ಲಕ್ಷದ ವರೆಗೆ ಪೇಮೆಂಟ್ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಅವಕಾಶವಿದೆ.
* ಪೇಟಿಎಂ ಪೇಮೆಂಟ್ ಬ್ಯಾಂಕ್‌ ಡೆಬಿಟ್ ಕಾರ್ಡ್ ಸೌಲಭ್ಯ ಒದಗಿಸಲಿದೆ. ಆದರೆ ಕ್ರೆಡಿಟ್ ಕಾರ್ಡ್ ಸೌಲಭ್ಯವಿರುವುದಿಲ್ಲ.
* ಪೇಮೆಂಟ್‌ ಬ್ಯಾಂಕ್‌ ಉಳಿತಾಯ ಖಾತೆಯಲ್ಲಿನ ಠೇವಣಿಗೆ ಶೇ. 4ರಷ್ಟು ಬಡ್ಡಿ ನಿಗದಿಪಡಿಸಿದೆ.
* ಗ್ರಾಹಕರಿಗೆ ಡೆಬಿಟ್ ಕಾರ್ಡ್‌ ಒದಗಿಸಲಾಗುತ್ತಿದ್ದು, ಪೇಟಿಎಂ ಪೇಮೆಂಟ್ ಬ್ಯಾಂಕ್‌ ಎಟಿಎಂ ಮೂಲಕ 5 ಬಾರಿ ಉಚಿತವಾಗಿ ಹಣ ವಿತ್ ಡ್ರಾ ಮಾಡಬಹುದು. ಮೆಟ್ರೊ ಮತ್ತು ನಾನ್ ಮೆಟ್ರೊ ಎಟಿಎಂ ಗಳಲ್ಲಿ ಮೂರು ಬಾರಿ ಉಚಿತವಾಗಿ ಹಣ ಪಡೆಯಬಹುದು. ನಂತರದ ಪ್ರತಿ ವಹಿವಾಟಿಗೆ ರೂ. 20 ಶುಲ್ಕ ವಿಧಿಸಲಾಗುತ್ತದೆ.

English summary

Paytm Mall is looking to hire 2,000 more employees

Paytm has shifted over 800 employees from One97 Communications to its newly-carved entity Paytm Ecommerce Pvt Ltd, which runs the online shopping platform Paytm Mall, as it looks to boost the personnel strength of its ecommerce business.
Story first published: Thursday, July 13, 2017, 15:48 [IST]
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC