For Quick Alerts
ALLOW NOTIFICATIONS  
For Daily Alerts

ಜನ ಧನ ಖಾತೆಗಳ ಠೇವಣಿ ರೂ. 80,000 ಕೋಟಿ ದಾಟಿದೆ

ಜನ ಧನ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾರ್ಚ್ 31, 2018ರ ವೇಳೆಗೆ ಜನ್ ಧನ್ ಖಾತೆಗಳ ಠೇವಣಿ ಮೊತ್ತ ರೂ. 80,000 ಕೋಟಿ ದಾಟಿದೆ. ನೋಟು ರದ್ದತಿ ನಂತರದಲ್ಲಿ ಜನ ಧನ ಖಾತೆಗಳ ಸಂಖ್ಯೆ ವೇಗವಾಗಿ ಹೆಚ್ಚಳವಾಗುತ್ತಾ ಸಾಗಿದೆ.

|

ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಜಾರಿ ತರಲಾದ ಪ್ರಧಾನ ಮಂತ್ರಿ ಜನ ಧನ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

 
ಜನ ಧನ ಖಾತೆಗಳ ಠೇವಣಿ ರೂ. 80,000 ಕೋಟಿ ದಾಟಿದೆ

ಮಾರ್ಚ್ 31, 2018ರ ವೇಳೆಗೆ ಜನ್ ಧನ್ ಖಾತೆಗಳ ಠೇವಣಿ ಮೊತ್ತ ರೂ. 80,000 ಕೋಟಿ ದಾಟಿದೆ. ನೋಟು ರದ್ದತಿ ನಂತರದಲ್ಲಿ ಜನ ಧನ ಖಾತೆಗಳ ಸಂಖ್ಯೆ ವೇಗವಾಗಿ ಹೆಚ್ಚಳವಾಗುತ್ತಾ ಸಾಗಿದೆ.

 

2016 ರ ನವೆಂಬರ್ ನಲ್ಲಿ ಜನ ಧನ ಖಾತೆ ಗಳಲ್ಲಿ ರೂ. 45,300 ಕೋಟಿ ಮೊತ್ತ ಸಂಗ್ರಹವಾಗಿತ್ತು. ಭಾರತ ಸರ್ಕಾರ ರೂ. 500 ಹಾಗು 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ಸಂದರ್ಭದಲ್ಲಿ ಜನ ಧನ ಖಾತೆಗಳಲ್ಲಿ ರೂ. 45,300 ಕೋಟಿಯಿಂದ ರೂ. 74,000 ಕೋಟಿಗೆ ಏರಿಕೆಯಾಯಿತು.

ತದನಂತರದಲ್ಲಿ ಖಾತೆಗಳಲ್ಲಿ ಠೇವಣಿ ಮೊತ್ತ ಕಡಿಮೆಯಾಗಿ 2017ರ ಮಾರ್ಚ್ ಬಳಿಕ ಸ್ಥಿರತೆ ಕಾಯ್ದುಕೊಂಡಿದೆ ಎನ್ನಲಾಗಿದೆ. ಇದು 2017ರ ಡಿಸೆಂಬರ್ನಲ್ಲಿ ರೂ. 73,878.73 ಕೋಟಿಗೆ ಏರಿದೆ. ಫೆಬ್ರವರಿ 2018 ರ ವೇಳೆಗೆ ರೂ. 75,572 ಕೋಟಿ ಮತ್ತು ಕಳೆದ ತಿಂಗಳು ರೂ. 78,494 ಕೋಟಿ ಏರಿಕೆ ಕಂಡಿದೆ. ಜನ ಧನ ಖಾತೆಗಳಲ್ಲಿನ ಠೇವಣಿ ಮೊತ್ತ ರೂ. 80,545 ಕೋಟಿ ದಾಟಿದೆ ಎಂದು ಸರ್ಕಾರ ತಿಳಿಸಿದೆ.

ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿದ್ದ ವರದಿಯಲ್ಲಿ ಜನ ಧನ ಖಾತೆಯ ಯಶಸ್ಸಿನ ಕುರಿತು ಪ್ರಶಂಸೆ ವ್ಯಕ್ತವಾಗಿತ್ತು. 'ಪ್ರಧಾನ ಮಂತ್ರಿ ಜನ ಧನ ಖಾತೆ' ಯಾಕೆ ತೆರೆಯಬೇಕು?

English summary

Deposits in Jan Dhan accounts cross Rs 80,000 crore

Total deposits in Jan Dhan accounts crossed Rs 80,000 crore mark with more people joining the flagship financial inclusion programme, according to official data.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X