For Quick Alerts
ALLOW NOTIFICATIONS  
For Daily Alerts

30 ವಯಸ್ಸಿನೊಳಗೆ ಕೋಟ್ಯಾಧಿಪತಿಗಳಾದ ಯಶಸ್ವಿ ವ್ಯಕ್ತಿಗಳ ಕಥೆ

ಇಂದಿನ ದಿಢೀರ್ ಯುಗದವರ ಆಲೋಚನೆಗಳೇ ಬೇರೆ. ಎಲ್ಲಾ 'ಬೆಣ್ಣೆಯಲ್ಲಿ ಕೂದಲು ತೆಗೆಯುವಷ್ಟು' ಸರಾಗವಾಗಿರಬೇಕು. ಈಗ ರೆಡಿಮೇಡ್ ಕಾಲ, ವೇಗ ಭರಿತ ಜೀವನ. ಎಲ್ಲರಿಗೂ ಎಲ್ಲಾ ಚಿಟಿಕೆ ಹೊಡೆಯುವುದರಲ್ಲಿ ಆಗಿಬಿಡಬೇಕು ಎಂಬ ಬಯಕೆ.

|

"ಒಬ್ಬ ಯಶಸ್ವಿ ವ್ಯಕ್ತಿಗೂ, ಸಾಮಾನ್ಯ ವ್ಯಕ್ತಿಗೂ ವ್ಯತ್ಯಾಸ ಸಾಮರ್ಥ್ಯದಲ್ಲಲ್ಲ, ಜ್ಞಾನದಲ್ಲಲ್ಲ ಬದಲಿಗೆ ಸಂಕಲ್ಪ ಶಕ್ತಿಯಲ್ಲಿ" ಅಂತಾರೆ. ಈ ಮಾತು ಅಕ್ಷರಶಃ ನಿಜ. ಕನಸು ನಿಜ ಸ್ಥಿತಿಯಲ್ಲ ಅಥವಾ ಪವಾಡದಿಂದ ನನಸೂ ಆಗುವುದಿಲ್ಲ. ಅದು ಈಡೇರಲು ಧ್ಯೇಯವಿರಬೇಕು, ಪರಿಶ್ರಮ ಪಡಬೇಕು. ಕೆಲವು ಮಹಾನ್ ವ್ಯಕ್ತಿಗಳು ಪ್ರಪಂಚದಲ್ಲಿ ತಮ್ಮ ಗುರಿ ಮುಟ್ಟಿ ಅತಿದೊಡ್ಡ ಸಾಧಕರ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತಿದ್ದಾರೆ.

ಅವರೇಲ್ಲಾ ತಮ್ಮ ಚಿಕ್ಕವಯಸ್ಸಿನಲ್ಲೇ ಸಾಧನೆಯ ದಾರಿಯನ್ನು ಆರಂಭಿಸಿದ್ದವರು. ಅನೇಕ ಮಿಲೇನಿಯರ್ ಗಳ ಯಶಸ್ಸಿನ ಹಿಂದೆ ಅವರ ಕಠಿಣ ಪರಿಶ್ರಮವೇ ಗುಟ್ಟಾಗಿತ್ತು. ಮುನ್ನುಗ್ಗಲು ಗುರಿ ಕಾಣಲು ಬಹಳ ಹೋರಾಟ ನಡೆಸಿದ್ದಾರೆ. 'ಜೇನು ಅರಸಿ ಹೊರಟಾಗ ಜೇನುನೋಣಗಳಿಂದ ಕಚ್ಚಿಸಿಕೊಳ್ಳಲು ಸಿದ್ಧರಿರಬೇಕು ಅನ್ನುವುದನ್ನು ಮನಗಂಡವರು ಇವರು.

ಆದರೆ ಇಂದಿನ ದಿಢೀರ್ ಯುಗದವರ ಆಲೋಚನೆಗಳೇ ಬೇರೆ. ಎಲ್ಲಾ 'ಬೆಣ್ಣೆಯಲ್ಲಿ ಕೂದಲು ತೆಗೆಯುವಷ್ಟು' ಸರಾಗವಾಗಿರಬೇಕು. ಈಗ ರೆಡಿಮೇಡ್ ಕಾಲ, ವೇಗ ಭರಿತ ಜೀವನ. ಎಲ್ಲರಿಗೂ ಎಲ್ಲಾ ಚಿಟಿಕೆ ಹೊಡೆಯುವುದರಲ್ಲಿ ಆಗಿಬಿಡಬೇಕು ಎಂಬ ಬಯಕೆ. ಬಿಲಿಯನೇರ್ ಆಗಲು ವಿಚಾರಗಳು, ಆಲೋಚನೆಗಳು ಬೇಕೆಂಬ ಅನಿಸಿಕೆ ಕೆಲವರಿಗೆ. ಐಪಿಎಲ್ 2018: ಅತಿಹೆಚ್ಚು ಸಂಭಾವನೆ ಪಡೆದ ದುಬಾರಿ ಆಟಗಾರರು ಯಾರು ಗೊತ್ತೆ?

ಅತಿ ಬೇಗ ಸುಲಭವಾಗಿ ಕೀರ್ತಿ, ಯಶಸ್ಸು, ಸಂಪತ್ತು ಯಾರಿಗೆ ತಾನೇ ಬೇಡ? ತೀಕ್ಷ್ಣತೆ, ಜ್ಞಾನ, ಬುದ್ಧಿವಂತಿಕೆ, ಆಸ್ತಿಯನ್ನು ಬೆಳೆಸಿಕೊಳ್ಳುವ ಜಾಣತನ ಕೆಲವರಿಗೆ ವರವಾಗಿ ಬಂದಿದೆ. ಇಂತಹ ಕೆಲವರು ತಮ್ಮ ಮೂವತ್ತರ ಆಸುಪಾಸಿನಲ್ಲೇ ಆಕಾಶಕ್ಕೆ ಏಣಿ ಹಾಕಿದ್ದಾರೆ. ಹೀಗೆ ಎತ್ತರಕ್ಕೆ ಬೆಳೆದಂತಹ ಯಶಸ್ವಿ ವ್ಯಕ್ತಿಗಳ ಯಶಸ್ವಿ ಕಥೆಗಳು ಇಲ್ಲಿವೆ ನೋಡಿ..

1. ಮಾರ್ಕ್ ಜುಕರ್ ಬರ್ಗ್

1. ಮಾರ್ಕ್ ಜುಕರ್ ಬರ್ಗ್

ಮಾರ್ಕ್ ಜುಕರ್ ಬರ್ಗ್ ಅಮೇರಿಕಾದಲ್ಲಿ ಜನಿಸಿದ ಒಬ್ಬ ಅಂತರ್ಜಾಲ ಉದ್ಯಮಿ. ಇವರ ಆಸ್ತಿಯ ಮೌಲ್ಯ 16.8 ಬಿಲಿಯನ್ ಡಾಲರ್. ಇವರು 'ಫೇಸ್ಬುಕ್' ಸಹ ಸಂಸ್ಥಾಪಕರು. ಸದ್ಯದಲ್ಲಿ ಫೇಸ್ಬುಕ್ ನ ಅಧ್ಯಕ್ಷ ಹಾಗೂ ಸಿಇಒ ಆಗಿದ್ದಾರೆ. 2013 ರಲ್ಲೇ ಇವರ ವೈಯಕ್ತಿಕ ಸಂಪತ್ತು ಸುಮಾರು 16.8 ಬಿಲಿಯನ್ ಡಾಲರ್. ಇವರು ತಮ್ಮ 23ರ ವಯಸ್ಸಿನಲ್ಲೇ ಬಿಲಿಯನೇರ್ ಆದವರು. ಅಮೆರಿಕಾದ ಹೆಸರಾಂತ ಟೈಮ್ ಮ್ಯಾಗಜಿನ್ ಪ್ರಕಾರ ಪ್ರಪಂಚದಲ್ಲೇ ಅಪಾರ ಸಂಪತ್ತು ಹೊಂದಿರುವ ಹಾಗೂ ಅತಿ ಪ್ರಭಾವಶಾಲಿಯಾದ 100 ವ್ಯಕ್ತಿಗಳಲ್ಲಿ ಹೆಸರುವಾಸಿಯಾಗಿದ್ದಾರೆ.

2. ಸ್ಕಾಟ್ ಡಂಕನ್

2. ಸ್ಕಾಟ್ ಡಂಕನ್

ಸ್ಕಾಟ್ ಡಂಕನ್, ಲೀ ಎಲಿಸ ಹಾಗೂ ಡ್ಯಾನ್ ಡಂಕನ್ ಅವರ ಏಕೈಕ ಪುತ್ರ. ಇವರು ಅಮೇರಿಕಾದ ಪ್ರಸಿದ್ದ ಹೂಡಿಕೆದಾರ. ಇವರು ಎಂಟರ್ಪ್ರೈಸ್ ಪ್ರೋಡಕ್ಟ್ ಪಾರ್ಟ್‌ನರ್ ಎಲ್ ಪಿ ಸಹ ಸಂಸ್ಥಾಪಕರು. ಇವರ ಗಳಿಕೆಯ ಮೌಲ್ಯ 5.1 ಬಿಲಿಯನ್ ಡಾಲರ್. ಇವರ ತಂದೆ 77 ವಯಸ್ಸಿನಲ್ಲಿ ಮರಣಹೊಂದಿದರು. ಆ ನಂತರ 3.1ಬಿಲಿಯನ್ ಡಾಲರ್ ಗೆ ಇವರೇ ವಾರಸುದಾರರಾಗಿದ್ದಾರೆ. ಆ ಸಮಯದಲ್ಲಿ ಸ್ಥಿರ ಆಸ್ತಿಯ ತೆರಿಗೆಯ ಕಾನೂನಿನ ವಿಷಯದಲ್ಲಿ ಅಸ್ಪಷ್ಟತೆ ಇದ್ದುದರ ಸಲುವಾಗಿ ಸ್ಥಿರ ಆಸ್ತಿಯ ತೆರಿಗೆಯನ್ನೇ ಕಟ್ಟದ ಅಮೇರಿಕನ್ ಮಿಲೇನಿಯರ್ ಗಳಲ್ಲಿ ಇವರೇ ಮೊದಲಿಗರು. 2013 ರಲ್ಲಿ ಇವರ ಗಳಿಕೆಯ ಮೌಲ್ಯ 5.1 ಬಿಲಿಯನ್ ಡಾಲರ್.

3. ಡಸ್ಟಿನ್ ಮೊಸ್ಕೋವಿಟ್ಸ್

3. ಡಸ್ಟಿನ್ ಮೊಸ್ಕೋವಿಟ್ಸ್

33ರ ಹರೆಯದ ಡಸ್ಟಿನ್ ಮೊಸ್ಕೋವಿಟ್ಸ್, ಮಾರ್ಕ್ ಜುಕರ್ ಬರ್ಗ್ ಜೊತೆ ಸೇರಿ ಫೇಸ್ಬುಕ್ ಕಟ್ಟಿದವರು. ಇವರು ಹೊಂದಿರುವ ಆಸ್ತಿಯ ಮೌಲ್ಯ 3.8 ಬಿಲಿಯನ್ ಡಾಲರ್. 2008ರಲ್ಲಿ ಅಸನ (Asana) ಸಂಸ್ಥೆಯನ್ನು ಕಟ್ಟಲು ಫೇಸ್ಬುಕ್ ಬಿಟ್ಟರು. ಫೇಸ್ಬುಕ್ ನ 7.7% ಪಾಲು ಇವರಿಗೆ ಸ್ಥಾನಮಾನ ಗಳಿಸಿಕೊಟ್ಟಿದೆ. ಪಾಲೊ ಆಲ್ತೊದಲ್ಲಿ ಜುಕರ್ ಬರ್ಗ್ ಜೊತೆ ಕೈಜೋಡಿಸುವ ಮೊದಲು ಇವರು ಹಾರ್ವರ್ಡ್ ಯೂನಿವರ್ಸಿಟಿ ಯ ಹಣಕಾಸಿನ ಮುಖ್ಯಸ್ಥರಾಗಿದ್ದರು.

4. ಎಡ್ವಾರ್ಡೋ ಸೆವೆರಿನ್

4. ಎಡ್ವಾರ್ಡೋ ಸೆವೆರಿನ್

ಎಡ್ವಾರ್ಡೋ ಸೆವೆರಿನ್ ಒಬ್ಬ ಹೂಡಿಕೆದಾರ ಮತ್ತು ಅಂತರ್ಜಾಲ ಉದ್ಯಮಿ. ಇವರು ಮೂಲತಃ ಬ್ರೆಜಿಲ್ ನವರು. ಇವರ ಗಳಿಕೆಯ ಮೌಲ್ಯ 2.2 ಬಿಲಿಯನ್ ಡಾಲರ್. ಮಾರ್ಕ್ ಜುಕರ್ ಬರ್ಗ್ ಜೊತೆ ಎಡ್ವಾರ್ಡೋ ಸೆವೆರಿನ್ ಕೂಡ ಫೇಸ್ಬುಕ್ ಕಟ್ಟಿದವರಲ್ಲಿ ಒಬ್ಬರು. ಇವರು ಕೇವಲ 5% ಫೇಸ್ಬುಕ್ ಪಾಲು ಹೊಂದಿದ್ದಾರೆ ಮತ್ತು 2.2 ಬಿಲಿಯನ್ ಡಾಲರ್ ಒಡೆಯರಾಗಿದ್ದಾರೆ. 'ಕ್ವಿಕಿ ಮತ್ತು ಜುಮಿಯೊ' ಎಂಬ ಸಂಸ್ಥೆಯಲ್ಲೂ ಕೂಡ ಹೂಡಿಕೆ ಇಟ್ಟಿದ್ದಾರೆ.

5. ಆಲ್ಬರ್ಟ್ ವಾನ್‌ ಥರ್ನ್ ಉನದ್ ಟ್ಯಾಕ್ಸಿಸ್ ಆಲ್ಬರ್ಟ್

5. ಆಲ್ಬರ್ಟ್ ವಾನ್‌ ಥರ್ನ್ ಉನದ್ ಟ್ಯಾಕ್ಸಿಸ್ ಆಲ್ಬರ್ಟ್

 ಜರ್ಮನಿಯ ಶ್ರೀಮಂತ ರಾಜ ಮನೆತನಕ್ಕೆ ಸೇರಿದವರು. 1990ರಲ್ಲಿ ಇವರ ತಂದೆ ಮರಣ ಹೊಂದಿದರು. ನಂತರ ಇವರು ಪ್ರಪಂಚದ ಅತಿ ಚಿಕ್ಕವಯಸ್ಸಿನ ಬಿಲಿಯನೇರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಗಳಿಕೆಯ ಮೌಲ್ಯ 1.5 ಬಿಲಿಯನ್ ಡಾಲರ್. ಇವರ ತಾಯಿ ಕೂಡ ಮಾಧ್ಯಮದಲ್ಲಿ ಜನಪ್ರಿಯರಾಗಿದ್ದಾರೆ.

6. ಆಡಮ್ ಡಿ ಎಂಜಲೊ

6. ಆಡಮ್ ಡಿ ಎಂಜಲೊ

Quora ಎಂಬ ಪ್ರಸಿದ್ಧವಾದ ಪ್ರಶ್ನೆ- ಉತ್ತರ ಜಾಲತಾಣ/ಆನ್ಲೈನ್ ಜ್ಞಾನ ಮಾರುಕಟ್ಟೆಯ ಸಹ ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ. ಇವರ ಸಂಪಾದನೆ 700 ಮಿಲಿಯನ್ ಡಾಲರ್. ಇದಕ್ಕೂ ಮುನ್ನ ಇವರು ಫೇಸ್ಬುಕ್ ನ ಮುಖ್ಯ ತಾಂತ್ರಿಕ ಅಧಿಕಾರಿಯಾಗಿದ್ದರು. ಡಿ ಎಂಜಲೊ ಕ್ಯಾಲಿಫೋರ್ನಿಯ ತಾಂತ್ರಿಕ ಶಿಕ್ಷಣ ಸಂಸ್ಥೆ ಯ ವಿದ್ಯಾರ್ಥಿಯಾಗಿದ್ದರು. ಅಮೇರಿಕಾದ 'ಕಂಪ್ಯೂಟರ್ ಒಲಿಂಪಿಯಾಡ' ಎಂಬ ಸ್ಪರ್ಧೆಯಲ್ಲಿ ಎಂಟನೇಯವರಾಗಿ ಜಯಗಳಿಸಿದ್ದರು ಹಾಗೂ ಅಂತರಾಷ್ಟ್ರೀಯ ಟಾಪ್ ಕೋಡರ್ ಕೊಲಾಜಿಯೇಟ್ ಸ್ಪರ್ಧೆಯಲ್ಲೂ ಅಂತಿಮ ಗೆಲುವು ಕಂಡವರ ಪಟ್ಟಿಯಲ್ಲಿ ಕೂಡ ಒಬ್ಬರಾಗಿದ್ದರು. ಫಾರ್ಚ್ಯೂನ್ ಮ್ಯಾಗಜಿನ್ ಇವರಿಗೆ ತಾಂತ್ರಿಕ ಕ್ಷೇತ್ರದಲ್ಲಿ ಅತಿ ತೀಕ್ಷ್ಣ ಗ್ರಹಿಕೆಗಾರ ಎಂದು ಗುರುತಿಸಿದೆ.

7. ಡ್ರೂ ಹೂಸ್ಟನ್

7. ಡ್ರೂ ಹೂಸ್ಟನ್

ಡ್ರೂ ಹೂಸ್ಟನ್ 'ಡ್ರಾಪ್ ಬಾಕ್ಸ್' ಎಂಬ ಆನ್ಲೈನ್ ಬ್ಯಾಕ್ ಅಪ್ ಹಾಗೂ ಸ್ಟೋರೆಜ್ ಸಂಸ್ಥೆಯನ್ನು ಕಟ್ಟಿದರು. ಇವರ ಸಂಪತ್ತು $ 600 ಮಿಲಿಯನ್. 'ಮಾಸಾಚುಸೆಟ್ಸ್' ಶಿಕ್ಷಣ ಸಂಸ್ಥೆಯಿಂದ ಇವರು ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಹೊಂದಿದ್ದಾರೆ. ಡ್ರಾಪ್ ಬಾಕ್ಸ್ ನಲ್ಲಿ ಕೆಲಸ ಪ್ರಾರಂಭಿಸುವ ಮೊದಲು ಇವರು ಬಿಟ್ 9, ಅಕೊಲೇಡ್ ಮತ್ತು ಹಬ್ ಸ್ಪಾಟ್ ಗಳೆಂಬ ಹೊಸ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

8. ಕ್ರಿಸ್ ಹ್ಯೂಸ್

8. ಕ್ರಿಸ್ ಹ್ಯೂಸ್

ಮಾರ್ಕ್ ಜುಕರ್ ಬರ್ಗ್ ಜೊತೆ ಕ್ರಿಸ್ ಹ್ಯೂಸ್ ಕೂಡ ಫೇಸ್ಬುಕ್ ಕಟ್ಟಿದವರು. ಇವರ ಗಳಿಕೆಯ ಮೌಲ್ಯ $ 500 ಮಿಲಿಯನ್. 'ದ ನ್ಯೂ ರಿಪಬ್ಲಿಕ್' ಯೆಂಬ ಮ್ಯಾಗಜಿನ್ ಮುಖ್ಯಸ್ಥರಾಗಿದ್ದಾರೆ. ಹಾರ್ವರ್ಡ್ ಯುನಿವರ್ಸಿಟಿಯಿಂದ ಕಲೆ ಮತ್ತು ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ. ಇವರು My.BarackObama.com ಜಾಲತಾಣದಲ್ಲಿ ಒಬಾಮರ 2008 ಅಧ್ಯಕ್ಷರ ಹುದ್ದೆಯ ಆನ್‌ಲೈನ್ ಪ್ರಚಾರದ ವ್ಯವಸ್ಥಾಪಕರಾಗಿದ್ದರು

9. ಕೆವಿನ್ ಸಿಸ್ಟ್ರೊಮ್ ಕೆವಿನ್ ಸಿಸ್ಟ್ರೊಮ್

9. ಕೆವಿನ್ ಸಿಸ್ಟ್ರೊಮ್ ಕೆವಿನ್ ಸಿಸ್ಟ್ರೊಮ್

'ಇನ್ಸ್ಟಾಗ್ರಾಮ್' ಎಂಬ ಜನಪ್ರಿಯ ಫೋಟೋ ಹಂಚಿಕೊಳ್ಳುವ ಜಾಲತಾಣವನ್ನು ಕಟ್ಟಿದವರೆಂದು ಬಹಳ ಪ್ರಸಿದ್ಧವಾಗಿದ್ದಾರೆ. ಅಷ್ಟೇ ಅಲ್ಲದೆ ಇವರು ಸಾಫ್ಟ್ವೇರ್ ಇಂಜಿನಿಯರ್ ಮತ್ತು ಉದ್ಯಮಿಯೂ ಹೌದು. ಇವರ ಸಂಪತ್ತಿನ ಮೌಲ್ಯ $470 ಮಿಲಿಯನ್. ಸ್ಟಾನ್ಫೋರ್ಡ್ ಯುನಿವರ್ಸಿಟಿಯಿಂದ ವಿಜ್ಞಾನ ಮತ್ತು ಶಿಲ್ಪಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಇನ್ಸ್ಟಾಗ್ರಾಮ್ ಫೇಸ್ಬುಕ್ ಗೆ $715 ಮಿಲಿಯನ್ ಗೆ ಮಾರಿದ್ದಾರೆ. ಇವರು ಗೂಗಲ್ ಮತ್ತು ಟ್ವಿಟರ್ (ಒಡಿಯೊ) ಕಂಪನಿಗಳಲ್ಲೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.

10. ಅರಾಶ್ ಫೆರ್ಡೋಸಿ

10. ಅರಾಶ್ ಫೆರ್ಡೋಸಿ

ಅರಾಶ್ ಫೆರ್ಡೋಸಿ ಡ್ರಾಪ್ ಬಾಕ್ಸ್ ನ ಮುಖ್ಯ ತಾಂತ್ರಿಕ ಅಧಿಕಾರಿ. ಉದ್ಯೋಗದ ಕಡೆ ಗಮನಹರಿಸಲು ಕಷ್ಟವೆಂದು ಪದವಿ ಪಡೆಯುವ ಮುನ್ನವೇ ಶಿಕ್ಷಣ ಸಂಸ್ಥೆಯಿಂದ ಹೊರ ಬಂದವರು. 'Inc. Magazine' ಹಾಗೂ' ಫಾರ್ಚ್ಯೂನ್ ಮ್ಯಾಗಜಿನ್ ಪತ್ರಿಕೆಗಳು ಉನ್ನತ ಉದ್ಯಮಿಗಳ ಪಟ್ಟಿಯಲ್ಲಿ ಇವರ ಹೆಸರನ್ನು ಸೇರಿಸಿವೆ. ಮತ್ತಿತರ ಖಾಸಗಿ ಹೂಡಿಕೆದಾರ ಕಂಪನಿಗಳಿಂದ ಹೂಡಿಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಗಳಿಕೆಯ ಮೌಲ್ಯ $ 400 ಮಿಲಿಯನ್ ಗೂ ಹೆಚ್ಚಿದೆ.
ಸಫಲತೆಯ ಮುಗಿಲು ಮುಟ್ಟಿರುವ ಈ 10 ವ್ಯಕ್ತಿಗಳು ನಿಜಕ್ಕೂ ಶ್ಲಾಘನೀಯ.

Read more about: money finance news business ಹಣ
English summary

Top 10 Successful People to have Become Millionaires Under 30

Here are some of the success stories of people under the age bracket of thirty, and have already made it big.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X