For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನಲ್ಲಿ ಕೆಲಸ ಮಾಡಲು ಅತ್ಯುತ್ತಮವಾಗಿರುವ 10 ಕಂಪನಿಗಳು

ಭಾರತದ ಸಿಲಿಕಾನ್ ವ್ಯಾಲಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ಹೆಮ್ಮೆಯ ಬೆಂಗಳೂರು, ಪ್ರಮುಖ ಸ್ಟಾರ್ಟ್ಅಪ್ ಹಬ್ ಆಗಿಯೂ ಗುರುತಿಸಿಕೊಂಡಿದೆ.

By Siddu Thoravat
|

ಭಾರತದ ಸಿಲಿಕಾನ್ ವ್ಯಾಲಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ಹೆಮ್ಮೆಯ ಬೆಂಗಳೂರು, ಪ್ರಮುಖ ಸ್ಟಾರ್ಟ್ಅಪ್ ಹಬ್ ಆಗಿಯೂ ಗುರುತಿಸಿಕೊಂಡಿದೆ. ಬೃಹತ್ ಹಾಗೂ ಸಣ್ಣ ಕಂಪನಿಗಳು, ಸಾವಿರಾರು ಸಂಖ್ಯೆಯ ಉದ್ಯಮಗಳು ದೇಶದ ಎಲ್ಲೆಡೆಯಿಂದ ಬರುವ ವಿವಿಧ ಸಾಂಸ್ಕೃತಿಕ ಹಿನ್ನೆಲೆಯ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿವೆ. ನಿಜ ಹೇಳಬೇಕೆಂದರೆ ಈಗ ಬೆಂಗಳೂರು ಕೇವಲ ಐಟಿ ಹಬ್ ಮಾತ್ರವಲ್ಲ, ಅದನ್ನೂ ಮೀರಿ ಬೆಳೆದು ನಿಂತಿದೆ. ಏರೋನಾಟಿಕ್ಸ್, ಅಟೋಮೊಬೈಲ್ ಬಿಡಿಭಾಗಗಳ ತಯಾರಿಕೆ, ಬಯೊಟೆಕ್ನಾಲಜಿ, ಎಲೆಕ್ಟ್ರಾನಿಕ್ ಮಶೀನ್ ಟೂಲ್ಸ್, ಬಾಹ್ಯಾಕಾಶ ಸಂಶೋಧನೆ, ವೈಜ್ಞಾನಿಕ ಅನ್ವೇಷಣೆ, ದೇಶದ ರಕ್ಷಣಾ ವಲಯದಲ್ಲಿ ಸಂಶೋಧನೆ ಹಾಗೂ ರೇಷ್ಮೆ ಉದ್ಯಮ ಸೇರಿದಂತೆ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ.

 

ಅಲ್ಪ ಅವಧಿಯಲ್ಲಿ ಹಲವಾರು ಕ್ಷೇತ್ರಗಳಲ್ಲಿ ಬೆಂಗಳೂರು ಸಾಧಿಸಿರುವ ಬೆಳವಣಿಗೆಗೆ ಪೂರಕವಾದ ಅಂಶಗಳು ಯಾವುವು ಎಂಬುದು ಗೊತ್ತಾ? ಇದಕ್ಕೆ ಉತ್ತರ ಹುಡುಕುತ್ತ ಹೊರಟರೆ ಇಲ್ಲಿರುವ ಹಲವಾರು ಉತ್ಕೃಷ್ಟ ದರ್ಜೆಯ ಕಂಪನಿಗಳು, ಅವುಗಳಲ್ಲಿ ಕೆಲಸ ಮಾಡುವ ನುರಿತ ಉದ್ಯೋಗಿಗಳು, ಜೊತೆಗೆ ಈ ಕಂಪನಿಗಳು ಉದ್ಯೋಗಿಗಳಿಗೆ ನೀಡುವ ಹಲವಾರು ಸೌಲಭ್ಯಗಳು ಕಾರಣವಾಗಿವೆ ಎಂಬುದು ನಮಗೆ ಗೋಚರವಾಗುತ್ತದೆ. ಬೆಂಗಳೂರಿನ ಇಂಥ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಉದ್ಯೋಗ ಭದ್ರತೆ, ಕೆಲಸದಲ್ಲಿ ನೆಮ್ಮದಿ ಇರುವುದರಿಂದ ಅವರು ಮತ್ತಷ್ಟು ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡಿ ತಾವೂ ಏಳಿಗೆ ಹೊಂದಿ ಕಂಪನಿಗಳ ಅಭಿವೃದ್ಧಿಗೂ ಕೊಡುಗೆ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಅತಿಹೆಚ್ಚು ಸಂಬಳ ಪಾವತಿಸುವ ಕಂಪನಿಗಳು

ಬೆಂಗಳೂರಿನ ಟಾಪ್ 10 ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಯಾವೆಲ್ಲ ಸೌಕರ್ಯಗಳನ್ನು ನೀಡುತ್ತಿವೆ ಎಂಬುದನ್ನು ತಿಳಿದುಕೊಳ್ಳೋಣ:

1. ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

1. ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

ರಾಷ್ಟ್ರಮಟ್ಟದ ಶ್ರೇಯಾಂಕ (Via GPTW) : 1

ಕ್ಷೇತ್ರ : ಇನ್ಫರ್ಮೇಶನ್ ಟೆಕ್ನಾಲಜಿ ಮತ್ತು ಸಾಫ್ಟವೇರ್
ಗ್ಲಾಸ್ ಡೋರ್ ರೇಟಿಂಗ್ : 4.5/5
ಉದ್ಯೋಗಿಗಳ ಸಂಖ್ಯೆ : 1683

ಸೌಲಭ್ಯಗಳು: ಕೆಲಸದಲ್ಲಿ ಇರುವ ನೆಮ್ಮದಿಯ ವಾತಾವರಣದಿಂದ ಈ ಕಂಪನಿ ದೇಶದಲ್ಲಿಯೇ ಬೆಸ್ಟ್ ಉದ್ಯೋಗಿ ಸ್ನೇಹಿ ಸಂಸ್ಥೆಯಾಗಿದೆ. ಇಲ್ಲಿ ಉದ್ಯೋಗಿಗಳಿಗೆ ಸಿಗುವ ಹಲವಾರು ಸೌಲಭ್ಯಗಳು ಹೀಗಿವೆ:
ಅನುಕೂಲಕರ ಕೆಲಸದ ವೇಳಾಪಟ್ಟಿ
ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾ ಸೌಲಭ್ಯ
ಮಸಾಜ್ ಪಾರ್ಲರ್
ಸುಸಜ್ಜಿತ ಜಿಮ್
ಆರಾಮದಾಯಕ ಮಲಗುವ ದಿಂಬುಗಳು
ಉಚಿತ ಟಿಫಿನ್, ಮಧ್ಯಾಹ್ನ ಹಾಗೂ ರಾತ್ರಿಯ ಊಟ
ಸಾಕುಪ್ರಾಣಿಗಳನ್ನು ಜೊತೆಗಿಟ್ಟುಕೊಳ್ಳಲು ಉಚಿತ ಸ್ಥಳಾವಕಾಶ
ಆರೋಗ್ಯ ವಿಮೆ

2. ಅಮೇರಿಕನ್ ಎಕ್ಸ್ಪ್ರೆಸ್ ಇಂಡಿಯಾ

2. ಅಮೇರಿಕನ್ ಎಕ್ಸ್ಪ್ರೆಸ್ ಇಂಡಿಯಾ

ರಾಷ್ಟ್ರಮಟ್ಟದ ಶ್ರೇಯಾಂಕ (Via GPTW) : 2
ಕ್ಷೇತ್ರ : ಹಣಕಾಸು ಸೇವೆ ಮತ್ತು ಇನ್ಸೂರೆನ್ಸ್, ಬ್ಯಾಂಕಿಂಗ್/ ಕ್ರೆಡಿಟ್ ಕಾರ್ಡ್ ವ್ಯವಹಾರ
ಗ್ಲಾಸ್ ಡೋರ್ ರೇಟಿಂಗ್ : ೩.೭/೫
ಉದ್ಯೋಗಿಗಳ ಸಂಖ್ಯೆ : 10498

ಸೌಲಭ್ಯಗಳು : ಕೆಲಸ ಮಾಡಲು ಅತಿ ಉತ್ತಮ ಕಂಪನಿಯಾಗಿದೆ ಎಂದು ಸ್ವತಃ ಅಮೇರಿಕನ್ ಎಕ್ಸ್ ಪ್ರೆಸ್ ಇಂಡಿಯಾದ ಉದ್ಯೋಗಿಗಳೇ ಹೇಳುತ್ತಾರೆ. ಅದಕ್ಕೆ ಪೂರಕವಾದ ಅಂಶಗಳು ಹೀಗಿವೆ:
ಸ್ಮಾರ್ಟ್ ಉಳಿತಾಯ ಯೋಜನೆ
ಆರೋಗ್ಯ ಸೇವೆಗಳು
ಯಾವಾಗಲೂ ಲಭ್ಯವಿರುವ ಫಿಟ್ ನೆಸ್ ಸೆಂಟರ್
ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ
ವಿದ್ಯಾಭ್ಯಾಸದ ಖರ್ಚು ಭರಿಸುವಿಕೆ
ತಾಯಂದಿರಿಗೆ ನರ್ಸಿಂಗ್ ಕೊಠಡಿಗಳು

3. ಉಜ್ಜೀವನ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈ. ಲಿಮಿಟೆಡ್
 

3. ಉಜ್ಜೀವನ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈ. ಲಿಮಿಟೆಡ್

ರಾಷ್ಟ್ರಮಟ್ಟದ ಶ್ರೇಯಾಂಕ (Via GPTW) : 3

ಕ್ಷೇತ್ರ : ಹಣಕಾಸು ಸೇವೆಗಳು ಮತ್ತು ವಿಮೆ
ಗ್ಲಾಸ್ ಡೋರ್ ರೇಟಿಂಗ್ : ೩.೯/೫
ಉದ್ಯೋಗಿಗಳ ಸಂಖ್ಯೆ : 7853

ಸೌಲಭ್ಯಗಳು : ಉಜ್ಜೀವನ್ ಫೈನಾನ್ಸಿಯಲ್ ಸರ್ವಿಸಸ್ ಕಂಪನಿಯಲ್ಲಿ ಉದ್ಯೋಗಿಗಳಿಗೆ ನೀಡಲಾಗುವ ವಿಶಿಷ್ಟ್ ಸೌಲಭ್ಯಗಳಿಂದ ಅತಿ ಉತ್ತಮ ಉದ್ಯೋಗದಾತ ಕಂಪನಿಯಾಗಿ ಹೆಸರು ಗಳಿಸಿದೆ. ಇಲ್ಲಿ ನೀಡಲಾಗುವ ಸೌಕರ್ಯಗಳು ಹೀಗಿವೆ:
ಉದ್ಯೋಗಿ ಹಾಗೂ ಆತನ ಕುಟುಂಬಕ್ಕೆ ಆರೋಗ್ಯ ವಿಮೆ
ಅನುಕೂಲಕರ ಕೆಲಸದ ವೇಳಾಪಟ್ಟಿ
ಗುಂಪು ಅಪಘಾತ ವಿಮೆ ಯೋಜನೆ
ಉದ್ಯೋಗಿಗಳಿಗೆ ಕಂಪನಿಯ ಶೇರು ನೀಡಿಕೆ
ಸಾಲ ಸೌಲಭ್ಯ
ಮನೆ ಕಟ್ಟಲು ಸಾಲ
ಮಹಿಳೆಯರಿಗೆ ಹೆರಿಗೆ ಹಾಗೂ ಪುರುಷರಿಗೆ ಪಾಲನಾ ಅವಧಿಯ ರಜೆ
ಉದ್ಯೋಗಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಣಕಾಸು

4. ಸ್ಯಾಪ್ (SAP) ಲ್ಯಾಬ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

4. ಸ್ಯಾಪ್ (SAP) ಲ್ಯಾಬ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

ರಾಷ್ಟ್ರಮಟ್ಟದ ಶ್ರೇಯಾಂಕ (Via GPTW) : 07

ಕ್ಷೇತ್ರ : ಇನ್ಫರ್ಮೇಶನ್ ಟೆಕ್ನಾಲಜಿ ಮತ್ತು ಸರ್ವಿಸಸ್
ಗ್ಲಾಸ್ ಡೋರ್ ರೇಟಿಂಗ್ : ೪.೧/೫
ಉದ್ಯೋಗಿಗಳ ಸಂಖ್ಯೆ : 5339

ಸೌಲಭ್ಯಗಳು : ತನ್ನ ಉತ್ತಮ ಉದ್ಯೋಗಿಗಳಿಗೆ ಅವಾರ್ಡ್ ನೀಡುವ ಮೂಲಕ ಉತ್ತೇಜನ ನೀಡುವ ಸ್ಯಾಪ್ ಲ್ಯಾಬ್ಸ್, ಇನ್ನೂ ಹಲವಾರು ಸೌಕರ್ಯಗಳನ್ನು ಉದ್ಯೋಗಿಗಳಿಗೆ ನೀಡುತ್ತದೆ:
೨೦ ವಾರಗಳ ಹೆರಿಗೆ ರಜೆ ಹಾಗೂ ದತ್ತು ಪಡೆದರೆ ಮಹಿಳೆಯರಿಗೆ ಪಾವತಿ ರಜೆ ಸೌಲಭ್ಯ
ತಿಂಗಳಿಗೆ ನಾಲ್ಕು ದಿನ ಮನೆಯಿಂದಲೇ ಕೆಲಸ ಮಾಡಬಹುದು.

5. ಇಂಟ್ಯೂಟ್ ಟೆಕ್ನಾಲಜಿ ಸರ್ವಿಸಸ್

5. ಇಂಟ್ಯೂಟ್ ಟೆಕ್ನಾಲಜಿ ಸರ್ವಿಸಸ್

ರಾಷ್ಟ್ರಮಟ್ಟದ ಶ್ರೇಯಾಂಕ (Via GPTW) : 10

ಕ್ಷೇತ್ರ : ಇನ್ಫರ್ಮೇಶನ್ ಟೆಕ್ನಾಲಜಿ ಮತ್ತು ಸರ್ವಿಸಸ್

ಗ್ಲಾಸ್ ಡೋರ್ ರೇಟಿಂಗ್ : ೪.೩/೫
ಉದ್ಯೋಗಿಗಳ ಸಂಖ್ಯೆ : 943

ಉದ್ಯೋಗಿಗಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅವರು ಮತ್ತಷ್ಟು ಉತ್ತಮವಾಗಿ ಕೆಲಸ ಮಾಡುವಂತೆ ಪ್ರೇರೇಪಿಸುವ ವಾತಾವರಣವನ್ನು ಇಂಟ್ಯೂಟ್ ಟೆಕ್ನಾಲಜಿ ಸರ್ವಿಸಸ್ ಅಳವಡಿಸಿಕೊಂಡಿದೆ. ಜೊತೆಗೆ ಇನ್ನೂ ಹಲವಾರು ವಿಶಿಷ್ಟ ಸೌಲಭ್ಯಗಳೂ ಇವೆ:
ಸಲಿಂಗ ಕಾಮಿ, ಲಿಂಗ ಬದಲಾವಣೆ ಮಾಡಿಕೊಂಡವರಿಗೆ ಮುಕ್ತ ಚರ್ಚಾ ಶಿಬಿರಗಳು
ಕೆಲ ದಿನ ಉದ್ಯೋಗದಿಂದ ದೂರವಿದ್ದು ಮತ್ತೆ ಮರಳುವ ಅವಕಾಶ
ಆಫೀಸ್ ಬಿಟ್ಟು ಹೊರಗಡೆ ಹೊಸ ಪ್ರೊಜೆಕ್ಟ್ ಆರಂಭಿಸಲು ಅವಕಾಶ
ಹೆರಿಗೆ ಹಾಗೂ ಪಿತೃತ್ವ ರಜೆಗಳು

6. ಸಿಸ್ಕೊ ಸಿಸ್ಟಮ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್

6. ಸಿಸ್ಕೊ ಸಿಸ್ಟಮ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್

ರಾಷ್ಟ್ರಮಟ್ಟದಲ್ಲಿ ರ್ಯಾಂ್ಕ್ (Via GPTW) : 20

ಕ್ಷೇತ್ರ : ಇನ್ಫರ್ಮೇಶನ್ ಟೆಕ್ನಾಲಜಿ ಮತ್ತು ಸರ್ವಿಸಸ್

ಗ್ಲಾಸ್ ಡೋರ್ ರೇಟಿಂಗ್ : ೪/೫
ಉದ್ಯೋಗಿಗಳ ಸಂಖ್ಯೆ : 9330

ಸೌಲಭ್ಯಗಳು : ತನ್ನ ಉದ್ಯೋಗಿಗಳ ಕುರಿತು ಅತಿ ಚಿಕ್ಕ ವಿಷಯದ ಬಗ್ಗೆಯೂ ಕಾಳಜಿ ವಹಿಸುವ ಸಿಸ್ಕೊ, ಅತ್ಯುತ್ತಮ ಉದ್ಯೋಗಿ ಸ್ನೇಹಿ ಕಂಪನಿಯಾಗಿದೆ. ಇಲ್ಲಿರುವ ಮತ್ತಷ್ಟು ಸೌಕರ್ಯಗಳು ಹೀಗಿವೆ:
ಅಂತಾರಾಷ್ಟ್ರೀಯ ಮಟ್ಟದ ಜಿಮ್
ಹೆಲ್ಥ ಕ್ಲಬ್ ಗಳು
ಒಳಾಂಗಣ ಹಾಗೂ ಹೊರಾಂಗಣ ಆಟದ ಸೌಲಭ್ಯ
ಅನುಕೂಲಕರ ಕೆಲಸದ ಅವಧಿ
ಜನ್ಮದಿನದಂದು ರಜೆ
ಹೆರಿಗೆ ಹಾಗೂ ಪಿತೃತ್ವ ರಜೆ

7. ಅಡೋಬ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್

7. ಅಡೋಬ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್

ರಾಷ್ಟ್ರಮಟ್ಟದಲ್ಲಿ ರ್ಯಾಂಟಕ್ (Via GPTW) : 21
ಕ್ಷೇತ್ರ : ಇನ್ಫರ್ಮೇಶನ್ ಟೆಕ್ನಾಲಜಿ ಮತ್ತು ಸರ್ವಿಸಸ್

ಗ್ಲಾಸ್ ಡೋರ್ ರೇಟಿಂಗ್ : ೪.೩/೫
ಉದ್ಯೋಗಿಗಳ ಸಂಖ್ಯೆ : 3804

ಸೌಲಭ್ಯಗಳು : ನಿಮ್ಮ ಕಂಪನಿಯನ್ನು ಅತ್ಯುನ್ನತ ಮಟ್ಟದ ಕಂಪನಿಯಾಗಿ ಬೆಳೆಸ ಬಯಸಿದರೆ, ಅಡೋಬ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್ ನಿಮ್ಮ ಆಯ್ಕೆಯಾಗಿರಲಿ.
ಉದ್ಯೋಗಿ ಸ್ಟಾಕ್ ಖರೀದಿ ಯೋಜನೆ
ಆರೋಗ್ಯ ಸೇವೆಗಳು
ಶಿಕ್ಷಣ ಮರುಪಾವತಿ
ಒಳಾಂಗಣ ಮತ್ತು ಹೊರಾಂಗಣ ಆಟಗಳು
ದೀರ್ಘಕಾಲೀನ ವಿಮೆ ಯೋಜನೆ
ವಾಹನ ನಿರ್ವಹಣೆ
ಸ್ವಾಸ್ಥ್ಯ ಮರುಪಾವತಿ ಕಾರ್ಯಕ್ರಮ

8. EMC ಇಂಡಿಯಾ

8. EMC ಇಂಡಿಯಾ

ರಾಷ್ಟ್ರಮಟ್ಟದಲ್ಲಿ ರ್ಯಾಂ್ಕ್ (Via GPTW) : 33

ಕ್ಷೇತ್ರ : ಇನ್ಫರ್ಮೇಶನ್ ಟೆಕ್ನಾಲಜಿ ಮತ್ತು ನಿರ್ವಹಣೆ

ಗ್ಲಾಸ್ ಡೋರ್ ರೇಟಿಂಗ್ : ೩.೮/೫
ಉದ್ಯೋಗಿಗಳ ಸಂಖ್ಯೆ : 6079

ಸೌಲಭ್ಯಗಳು
ಉದ್ಯೋಗಿ ಸ್ಟಾಕ್ ಖರೀದಿ ಯೋಜನೆ
ಆರೋಗ್ಯ ಸೇವೆಗಳು
ಶಿಕ್ಷಣ ಮರುಪಾವತಿ
ವಿನೋದ ಒಳಾಂಗಣ ಮತ್ತು ಹೊರಾಂಗಣ ಆಟಗಳು
ದೀರ್ಘಕಾಲೀನ ವಿಮೆ ಯೋಜನೆ
ಉಚಿತ ಆನ್ಸೈಟ್ ಜಿಮ್
ಗುಂಪು ಟರ್ಮ್ ವಿಮೆ

9. ಬ್ರಿಗೇಡ್ ಎಂಟರ್ ಪ್ರೈಸಸ್ ಲಿಮಿಟೆಡ್

9. ಬ್ರಿಗೇಡ್ ಎಂಟರ್ ಪ್ರೈಸಸ್ ಲಿಮಿಟೆಡ್

ರಾಷ್ಟ್ರಮಟ್ಟದಲ್ಲಿ ರ್ಯಾಂಕ್ (Via GPTW) : ೩೯

ಕ್ಷೇತ್ರ : ಕಟ್ಟಡ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ - ಗುತ್ತಿಗೆದಾರಿಕೆ

ಗ್ಲಾಸ್ ಡೋರ್ ರೇಟಿಂಗ್ : ೩.೬/೫

ಉದ್ಯೋಗಿಗಳ ಸಂಖ್ಯೆ : 672

ಸೌಲಭ್ಯಗಳು : ನಾವು ಪದೇ ಪದೇ ಏನನ್ನು ಮಾಡುತ್ತೇವೆಯೋ ಅದೇ ನಾವಾಗುತ್ತೇವೆ. ಇಲ್ಲಿ ಶ್ರೇಷ್ಠತೆ ಎಂಬುದು ಕೃತಿಯಲ್ಲ, ಅದು ಕೆಲಸದ ವಿಧಾನವೇ ಆಗಿದೆ. ಉದ್ಯೋಗಿಗಳಿಗೆ ಉತ್ತಮ ವಾತಾವರಣ ಕಲ್ಪಿಸುವುದು ಒಂದು ನಿರಂತರ ಪ್ರಕ್ರಿಯೆ ಎಂಬುದು ಕಂಪನಿಯ ಧ್ಯೇಯವಾಗಿದೆ. ಇಲ್ಲಿ ಸಿಗುವ ಸೌಲಭ್ಯಗಳು ಹೀಗಿವೆ:

ಆರೋಗ್ಯ ಸೇವೆಗಳು
ಮೋಜಿನ ಒಳಾಂಗಣ ಹಾಗೂ ಹೊರಾಂಗಣ ಆಟಗಳು
ದೀರ್ಘಾವಧಿ ವಿಮೆ
ಗುಂಪು ವಿಮೆ ಯೋಜನೆ

10.	ಫೋರ್ಬ್ಸ ಮಾರ್ಶಲ್ ಪ್ರೈವೇಟ್ ಲಿಮಿಟೆಡ್

10. ಫೋರ್ಬ್ಸ ಮಾರ್ಶಲ್ ಪ್ರೈವೇಟ್ ಲಿಮಿಟೆಡ್

ರಾಷ್ಟ್ರಮಟ್ಟದಲ್ಲಿ ಶ್ರೇಯಾಂಕ (Via GPTW) : 49

ಕ್ಷೇತ್ರ : ಉತ್ಪಾದನಾ ವಲಯ

ಗ್ಲಾಸ್ ಡೋರ್ ರೇಟಿಂಗ್ : ೩.೮/೫

ಉದ್ಯೋಗಿಗಳ ಸಂಖ್ಯೆ : 1440

ಸೌಲಭ್ಯಗಳು : ಫೋರ್ಬ್ಸ ಮಾರ್ಶಲ್ ಕಂಪನಿ ಉದ್ಯೋಗಿಗಳ ಮೆಚ್ಚಿನ ಕಂಪನಿಗಳಲ್ಲೊಂದಾಗಿದೆ. ಇಲ್ಲಿ ನೀಡಲಾಗುವ ಸೌಲಭ್ಯಗಳ ಪಟ್ಟಿ ಹೀಗಿದೆ:

ಆರೋಗ್ಯ ಸೇವೆ ಹಾಗೂ ನಿಯಮಿತ ಆರೋಗ್ಯ ತಪಾಸಣೆ
ಮೋಜಿನ ಒಳಾಂಗಣ ಹಾಗೂ ಹೊರಾಂಗಣ ಆಟಗಳು
ದೀರ್ಘಾವಧಿ ವಿಮೆ ಯೋಜನೆ
ಸ್ವಾಸ್ಥ್ಯ ಮರುಪಾವತಿ ಯೋಜನೆ
ಗುಂಪು ವಿಮಾ ಯೋಜನೆ

English summary

10 Best Companies To Work For In Bangalore

Below are the 10 best companies to work for based in the Bangalore.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X