For Quick Alerts
ALLOW NOTIFICATIONS  
For Daily Alerts

ಸಿಹಿಸುದ್ದಿ! ಬೃಹತ್ ಪ್ರಮಾಣದಲ್ಲಿ ನೇಮಕಾತಿ ಮಾಡಲು ಕಂಪನಿಗಳು ಸಿದ್ದ

ಭಾರತದಲ್ಲಿನ ಹೆಚ್ಚು ಕಂಪನಿಗಳು ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜನೆ ಹಾಕಿದ್ದಾರೆ ಎಂದು ಸಮೀಕ್ಷಾ ವರದಿ ತಿಳಿಸಿದೆ.

By Siddu Thoravat
|

ಭಾರತದಲ್ಲಿನ ಹೆಚ್ಚು ಕಂಪನಿಗಳು ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜನೆ ಹಾಕಿದ್ದಾರೆ ಎಂದು ಸಮೀಕ್ಷಾ ವರದಿ ತಿಳಿಸಿದೆ.
ಟೀಮ್‌ಲೀಸ್ ಎಂಪ್ಲಾಯ್ಮೆಂಟ್ ಔಟಲುಕ್ ಸಂಸ್ಥೆ ಸಿದ್ಧಪಡಿಸಿದ ಸಮೀಕ್ಷಾ ವರದಿಯ ಪ್ರಕಾರ ಕಳೆದ ವರ್ಷದ ಏಪ್ರಿಲ್‌-ಸೆಪ್ಟೆಂಬರ್‌ ಅವಧಿಯಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಹೆಚ್ಚಳವಾಗಿತ್ತು. ಮುಂದಿನ ದಿನಗಳಲ್ಲಿ ಹೆಚ್ಚಾಗಲಿರುವ ಉದ್ಯೋಗಾವಕಾಶಗಳು ಕೂಡ ಆಶಾದಾಯಕವಾಗಿದೆ. ಇದು ಧನಾತ್ಮಕ ಆರ್ಥಿಕ ಬೆಳವಣಿಗೆ ಎಂದು ವರದಿ ತಿಳಿಸಿದೆ. ಮನೆ ಬಾಗಿಲಿಗೆ 100 ಸರ್ಕಾರಿ ಸೇವೆಗಳು ಲಭ್ಯ, ಅವು ಯಾವುವು ಗೊತ್ತೆ?

 

ಯಾವ ವಲಯದಲ್ಲಿ ಉದ್ಯೋಗ ಸೃಷ್ಟಿ

ಯಾವ ವಲಯದಲ್ಲಿ ಉದ್ಯೋಗ ಸೃಷ್ಟಿ

ಬಿಪಿಒ, ಕೆಪಿಒ, ರಿಟೇಲ್, ಇ-ಕಾಮರ್ಸ್‌, ಎಫ್‌ಎಂಸಿಜಿ, ನಿರ್ಮಾಣ, ರಿಯಾಲ್ಟಿ, ತಂತ್ರಜ್ಞಾನ ಆಧಾರಿತ ಸ್ಟಾರ್ಟಪ್‌, ಹಣಕಾಸು ಸೇವೆ, ಮಾಧ್ಯಮ ಮತ್ತು ಮನರಂಜನೆ ವಲಯದಲ್ಲಿ ಉದ್ಯೋಗ ಸೃಷ್ಟಿ ಏರಿಕೆಯಾಗಿದೆ.

ಉದ್ಯೋಗ ಇಳಿಕೆಯಾದ ವಲಯ

ಉದ್ಯೋಗ ಇಳಿಕೆಯಾದ ವಲಯ

ಉದ್ಯೋಗ ಸೃಷ್ಟಿ ಪ್ರಮಾಣ ಕೃಷಿ, ಕೃಷಿ ರಾಸಾಯನಿಕ, ದೂರಸಂಪರ್ಕ, ಆರೋಗ್ಯ, ಔಷಧ, ಶಿಕ್ಷಣ, ಉತ್ಪಾದನೆ, ಎಂಜಿನಿಯರಿಂಗ್‌, ಟ್ರಾವೆಲ್ಸ್‌, ಹೋಟೆಲ್‌ ವಲಯದಲ್ಲಿ ಇಳಿಕೆಯಾಗಿದ್ದರೆ, ವಿದ್ಯುತ್‌ ಮತ್ತಿತರ ಇಂಧನ ವಲಯದಲ್ಲಿ ತಟಸ್ಥವಾಗಿದೆ ಎಂದು ವರದಿ ಹೇಳಿದೆ.

ಉದ್ಯೋಗ ಸೃಷ್ಟಿ ಎಲ್ಲಿ ಜಾಸ್ತಿ

ಉದ್ಯೋಗ ಸೃಷ್ಟಿ ಎಲ್ಲಿ ಜಾಸ್ತಿ

ಉದ್ಯೋಗ ಸೃಷ್ಟಿ ಮಾಡುವಲ್ಲಿ ಮುಂಬೈ ಮತ್ತು ದೆಹಲಿ ಅಗ್ರಸ್ಥಾನದಲ್ಲಿದ್ದು, ಬೆಂಗಳೂರು, ಹೈದರಾಬಾದ್‌, ಪುಣೆ ನಂತರದ ಸ್ಥಾನಗಳಲ್ಲಿವೆ. ಕೋಲ್ಕೊತಾ, ಅಹಮದಾಬಾದ್‌ ನಗರಗಳಲ್ಲಿ ಸಲ್ಪ ಇಳಿಕೆ ಕಂಡು ಬಂದಿದೆ.

English summary

Companies set to recruit in big numbers: report

According to a TeamLease study, fast-moving consumer goods (FMCG), retail, business process outsourcing (BPO), IT-enabled services (ITeS) are likely to drive recruitment during this fiscal.
Story first published: Wednesday, July 4, 2018, 16:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X