For Quick Alerts
ALLOW NOTIFICATIONS  
For Daily Alerts

34 ಸಾವಿರ ಕೋಟಿ ರೈತರ ಸಾಲಮನ್ನಾ, ಇಸ್ರೇಲ್ ಮಾದರಿ ಹಾಗು ಶೂನ್ಯ ಬಂಡವಾಳ ಕೃಷಿ

ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದ ಮೊದಲ ಬಜೆಟ್ ನಲ್ಲಿ ರೈತರಿಗೆ ಭರಪೂರ ಕೊಡುಗೆಗಳನ್ನು ಘೋಷಿಸಲಾಗಿದೆ. ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಕೃಷಿ ಸಾಲಮನ್ನಾ ಮಾಡಲು ಹೆಚ್ಚಿನ ಆದ್ಯತೆ ನೀಡಿದೆ

By Siddu
|

ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದ ಮೊದಲ ಬಜೆಟ್ ನಲ್ಲಿ ರೈತರಿಗೆ ಭರಪೂರ ಕೊಡುಗೆಗಳನ್ನು ಘೋಷಿಸಲಾಗಿದೆ. ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಕೃಷಿ ಸಾಲಮನ್ನಾ ಮಾಡಲು ಹೆಚ್ಚಿನ ಆದ್ಯತೆ ನೀಡಿದ್ದಾರೆ.

34 ಸಾವಿರ ಕೋಟಿ ರೈತರ ಸಾಲಮನ್ನಾ, ಇಸ್ರೇಲ್ ಮಾದರಿ ಕೃಷಿ

ರೂ. 34 ಸಾವಿರ ಕೋಟಿ ರೈತರ ಸಾಲಮನ್ನಾ
ರೈತರ ರೂ. 34 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಲು ಸರ್ಕಾರ ಮುಂದಾಗಿದ್ದು, ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಸಂಪನ್ಮೂಲ ಕ್ರೋಢೀಕರಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ರೈತರ ರೂ. 2 ಲಕ್ಷಗಳವರೆಗಿನ ಸಾಲಮನ್ನಾ ಜೊತೆಗೆ ರಾಜ್ಯದ ಕೃಷಿ ವಲಯಕ್ಕೆ ಭರಪೂರ ಕೊಡುಗೆಗಳು ಸಿಕ್ಕಿವೆ. ಕರ್ನಾಟಕ ಬಜೆಟ್ 2018: ಎಚ್. ಡಿ. ಕುಮಾರಸ್ವಾಮಿಯವರ ಜನಪ್ರಿಯ ಯೋಜನೆಗಳ ಸಂಪೂರ್ಣ ವಿವರ..

ಇಸ್ರೆಲ್ ಮಾದರಿ ಕೃಷಿ
ಇಸ್ರೆಲ್ ಮಾದರಿಯ ನೂತನ ಕೃಷಿ ಪದ್ದತಿಯನ್ನು ಅಧ್ಯಯನಮಾಡಿರುವ ಮುಖ್ಯಮಂತ್ರಿ ಇಸ್ರೇಲ್ ಮಾದರಿಯ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ರೂ. 150 ಕೋಟಿ ಮೀಸಲು ಇಟ್ಟಿದ್ದಾರೆ. ೫ ಸಾವಿರ ಹೆಕ್ಟೇರ್ ನಲ್ಲಿ ಇಸ್ರೇಲ್ ಮಾದರಿ ಕೃಷಿ ಆರಂಭ. ರಾಜ್ಯದಾದ್ಯಂತ ೧.೯ ಲಕ್ಷ ಹೊಂಡಗಳ ನಿರ್ಮಾಣ ಗುರಿ ಇದೆ.

ರೈತರಿಗೆ ರೂ. 6 ಸಾವಿರ ಕೋಟಿ ಮೀಸಲು
ರೈತರಿಗೆ ಹೊಸದಾಗಿ ಸಾಲ ನೀಡಲು ರೂ. 6 ಸಾವಿರ ಕೋಟಿ ಮೀಸಲು ಇಡಲಾಗಿದೆ. ಸುಮಾರು ರೂ. 2 ಲಕ್ಷ ವರೆಗಿನ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದರು. ರೂ. ೩ ಕೋಟಿ ವೆಚ್ಚದಲ್ಲಿ ಮೈಸೂರಿನಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಾಪನೆ ಆಗಲಿದೆ.

ಶೂನ್ಯ ಬಂಡವಾಳ ಸಹಜ ಕೃಷಿ
ಕೃಷಿ ಯಂತ್ರೋಪಕರಣಗಳ ಬೆಲೆ, ಅನಿಶ್ಚಿತ ಮಳೆಯಿಂದಾಗಿ ರೈತರ ಸಾಲ ಹೆಚ್ಚಾಗುತ್ತಿದೆ. ಈ ಪರಿಸ್ಥಿತಿಯಿಂದ ರೈತರನ್ನು ಹೊರ ತರಲು ಆಂದ್ರ ಪ್ರದೇಶ ಅಳವಡಿಸುತ್ತಿರುವ ಶೂನ್ಯ ಬಂಡವಾಳ ಕೃಷಿ ಪದ್ದತಿಯನ್ನು ಅನುಷ್ಠಾನಕ್ಕೆ ತರಲಾಗುವುದು.

English summary

HD Kumaraswamy announces Rs 34,000 crore farm loan waiver, Israel model and zero investment agriculture

The Karnataka government on Thursday waived farm loans up to Rs 34,000 crore, giving relief to lakhs of farmers across the state.
Story first published: Thursday, July 5, 2018, 16:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X