For Quick Alerts
ALLOW NOTIFICATIONS  
For Daily Alerts

ಆರ್ಬಿಐ ಬಡ್ಡಿದರ ಹೆಚ್ಚಳ, ಸಾಲ ದುಬಾರಿ

ಭಾರತೀಯ ರಿಸರ್ವ್ ಬ್ಯಾಂಕ್ಇಂದು ಎರಡು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡನೇ ಬಾರಿಗೆ ಬಡ್ಡಿದರಗಳನ್ನು ಹೆಚ್ಚಿಸಿದ್ದು, ಇದು ಸಾಲದ ಬಡ್ಡಿದರದಲ್ಲಿ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯನ್ನು ಹೆಚ್ಚಿಸಿದೆ.

By Siddu Thoravat
|

ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಎರಡು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡನೇ ಬಾರಿಗೆ ಬಡ್ಡಿದರಗಳನ್ನು ಹೆಚ್ಚಿಸಿದ್ದು, ಇದು ಸಾಲದ ಬಡ್ಡಿದರದಲ್ಲಿ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯನ್ನು ಹೆಚ್ಚಿಸಿದೆ.

ಆರ್ಬಿಐ ಬಡ್ಡಿದರ ಹೆಚ್ಚಳ, ಸಾಲ ದುಬಾರಿ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇಂದು ರೆಪೊ ದರಗಳನ್ನು ಹೆಚ್ಚಿಸಿದೆ. ಅಂದರೆ ಆರ್ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಈ ಬಡ್ಡಿದರಗಳ ಏರಿಕೆ, ಸಾಮಾನ್ಯವಾಗಿ ಬ್ಯಾಂಕುಗಳ ಸಾಲ ಮತ್ತು ಠೇವಣಿ ದರ ಹೆಚ್ಚಳಕ್ಕೆ ಕಾರಣವಾಗಬಹುದು.

ಜೂನ್ ಸಭೆಯಲ್ಲಿ ರೆಪೊ ದರ ಹೆಚ್ಚಿದಂತೆ, ಹೆಚ್ಚಿನ ಅರ್ಥಶಾಸ್ತ್ರಜ್ಞರು ಮತ್ತು ವಿಶ್ಲೇಷಕರು ಆರ್ಬಿಐ ದರ ಏರಿಸಲಿದೆ ಎಂದೇ ಭಾವಿಸಿದ್ದರು. ಸಮಿತಿಯ ಆರು ಜನ ಸದಸ್ಯರಲ್ಲಿ ಐದು ಜನರು ದರ ಏರಿಕೆಗೆ ಮತ ಚಲಾಯಿಸಿದ್ದಾರೆ.

ಹಣಕಾಸು ನೀತಿಯ ಪ್ರಮುಖ ಅಂಶಗಳು:
- ರೆಪೊ ದರ 6.25 ರಿಂದ ಶೇ. 6.5 ಕ್ಕೆ ಏರಿಕೆ
- ಜೂನ್ ತಿಂಗಳಲ್ಲಿ ಮೊದಲನೆ ಹೆಚ್ಚಳ ಮಾಡಿದ ನಂತರ, ಆರ್ಬಿಐನಿಂದ ಎರಡನೇ ನೇರ ಹೆಚ್ಚಳ
- 2018-19ರಲ್ಲಿ ಜಿಡಿಪಿ ಶೇಕಡಾ 7.4 ಕ್ಕೆ ಇಳಿಕೆ
- 6 ಎಂಪಿಸಿ ಸದಸ್ಯರ ಪೈಕಿ 5 ಮಂದಿ ಏರಿಕೆಗೆ ಮತ ಚಲಾವಣೆ

ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಮೇ ತಿಂಗಳಲ್ಲಿ ಶೇ. 4.9 ರಿಂದ ಶೇ. 5 ಕ್ಕೆ ಏರಿದೆ. ಬಡ್ಡಿದರಗಳಲ್ಲಿ ಇಂದಿನ ಏರಿಕೆಯೂ ಮುಂಬರುವ ದಿನಗಳಲ್ಲಿ ಸಾಲಗಳ ಮೇಲೆ ಪರಿಣಾಮ ಬೀರಲಿದ್ದು, ಹೆಚ್ಚು ದುಬಾರಿಯಾಗಬಹುದು. ಆದಾಗ್ಯೂ, ಬಡ್ಡಿಯ ಆದಾಯವನ್ನು ಹುಡುಕುವವರಿಗೆ ಇದು ಸ್ವಲ್ಪ ನೆಮ್ಮದಿ ತರಬಹುದು. RBI Hikes Interest Rates Again; Loans To Get Costlier

English summary

RBI Hikes Interest Rates, Loans To Get Costlier

India's central bank today raised interest rates for the second time in less than two months, raising the prospects of further increase in loan interest rates.
Story first published: Wednesday, August 1, 2018, 15:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X