For Quick Alerts
ALLOW NOTIFICATIONS  
For Daily Alerts

ಆಯುಷ್ಮಾನ್ ಭಾರತ್ ಯೋಜನೆಗೆ ನಾಳೆ ಚಾಲನೆ

ಕೇಂದ್ರ ಸರ್ಕಾರದ ಪ್ರಮುಖ ಆಯುಷ್ಮಾನ್ ಭಾರತ್- ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್ ಯೋಜನೆಗೆ ಪ್ರಧಾನಿ ಮೋದಿ ಯವರು ನಾಳೆ ಜಾರ್ಖಂಡಿನಲ್ಲಿ ಚಾಲನೆ ನೀಡಲಿದ್ದಾರೆ.

|

ಕೇಂದ್ರ ಸರ್ಕಾರದ ಪ್ರಮುಖ ಆಯುಷ್ಮಾನ್ ಭಾರತ್- ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್ ಯೋಜನೆಗೆ ಪ್ರಧಾನಿ ಮೋದಿ ಯವರು ನಾಳೆ ಜಾರ್ಖಂಡಿನಲ್ಲಿ ಚಾಲನೆ ನೀಡಲಿದ್ದಾರೆ.

 
ಆಯುಷ್ಮಾನ್ ಭಾರತ್ ಯೋಜನೆಗೆ ನಾಳೆ ಚಾಲನೆ

ಈ ಮಹತ್ವಾಕಾಂಕ್ಷಾ ಯೋಜನೆಯು ಪ್ರಧಾನ್ ಮಂತ್ರಿ ಜನ ಆರೋಗ್ಯ ಅಭಿಯಾನ (PMJAY) ಎಂದು ಮರುನಾಮಕರಣಗೊಂಡಿದೆ. ವಾರ್ಷಿಕವಾಗಿ ಪ್ರತಿ ಕುಟುಂಬಕ್ಕೆ ರೂ. 5 ಲಕ್ಷ ಪರಿಹಾರ ಸಿಗಲಿದ್ದು, ಸುಮಾರು 10 ಕೋಟಿಗೂ ಹೆಚ್ಚು ಬಡ ಕುಟುಂಬಗಳಿಗೆ ಪ್ರಯೋಜನವಾಗಲಿದೆ.

 

ಪ್ರಧಾನಿಯವರು ಸೆಪ್ಟೆಂಬರ್ 23 ರಂದು ಯೋಜನೆಯನ್ನು ಪ್ರಾರಂಭಿಸಲಿದ್ದಾರೆ. ಆದರೆ ಪಂಡಿತ್ ದೀನದಯಾಲ್ ಉಪಾಧ್ಯಾಯ ಅವರ ಜನ್ಮದಿನ ಸೆಪ್ಟೆಂಬರ್ 25 ರಿಂದ ಕಾರ್ಯಾರಂಭವಾಗಲಿದೆ.

ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯ ಪಡೆಯಲು ಪಡಿತರ ಚೀಟಿ ಇರಬೇಕಾಗುತ್ತದೆ. ಈ ಯೋಜನೆಗೆ ಆಧಾರ್ ಕಾರ್ಡ್ ಕಡ್ಡಾಯ ಅಲ್ಲ. ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಚೀಟಿ ಯಾವುದಿದ್ದರೂ ಸಾಕು. ಕುಟುಂಬದ ಗಾತ್ರ ಹಾಗು ನಿಮ್ಮ ವಯಸ್ಸಿಗೆ ಯಾವುದೇ ಮಿತಿ ಇರುವುದಿಲ್ಲ. ಫಲಾನುಭವಿಗಳಿಗೆ ಆಸ್ಪತ್ರೆಗೆ ಸಂಚರಿಸಲು ನಿಗದಿತ ಪ್ರಯಾಣಕ್ಕೆ ಭತ್ಯೆಯೂ ಸಿಗಲಿದೆ. ಒಮ್ಮೆ ನೋಂದಾಯಿಸಿದರೆ ಒಂದು ವರ್ಷದವರೆಗೆ ಸೌಲಭ್ಯವಿರುತ್ತದೆ. ಆಯುಷ್ಮಾನ್ ಭಾರತ್ ಯೋಜನೆ: 5 ಲಕ್ಷ ವಿಮಾ ಸೌಲಭ್ಯ ಯಾರಿಗೆ ಸಿಗಲಿದೆ, ನೋಂದಣಿ ಹೇಗೆ?

English summary

PM To Launch 'World's Largest Health Programme' Ayushman Bharat Tomorrow

Prime Minister Narendra Modi will roll out the Centre's flagship Ayushman Bharat-National Health Protection Mission (AB-NHPM) from Jharkhand tomorrow.
Story first published: Saturday, September 22, 2018, 19:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X