For Quick Alerts
ALLOW NOTIFICATIONS  
For Daily Alerts

ನೋಟು ನಿಷೇಧ: ಎರಡೇ ವರ್ಷದಲ್ಲಿ ಚಲಾವಣೆಯಿಂದ ಹೊರ ಹೋಗುತ್ತಿವೆ ಹೊಸ ನೋಟುಗಳು!

ನೋಟು ನಿಷೇಧದ ನಂತರ ಆರ್ಬಿಐ ಹೊಸ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತಂದಿರುವ ವಿಷಯ ನಮಗೆಲ್ಲಾ ಗೊತ್ತಿದೆ. ಆದರೆ ಚಲಾವಣೆಗೆ ತರಲಾದ ಹೊಸ ನೋಟುಗಳು ಅಷ್ಟೇ ವೇಗದಲ್ಲಿ ಎರಡು ವರ್ಷಕ್ಕೆ ಮಾರುಕಟ್ಟೆಯಿಂದ ಹೊರ ಹಾಕಲ್ಪಡುತ್ತಿವೆ!

|

ನೋಟು ನಿಷೇಧದ ನಂತರ ಆರ್ಬಿಐ ಹೊಸ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತಂದಿರುವ ವಿಷಯ ನಮಗೆಲ್ಲಾ ಗೊತ್ತಿದೆ. ಆದರೆ ಚಲಾವಣೆಗೆ ತರಲಾದ ಹೊಸ ನೋಟುಗಳು ಅಷ್ಟೇ ವೇಗದಲ್ಲಿ ಎರಡು ವರ್ಷಕ್ಕೆ ಮಾರುಕಟ್ಟೆಯಿಂದ ಹೊರ ಹಾಕಲ್ಪಡುತ್ತಿವೆ!
ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಸಹಿಯಿರುವ 10 ರೂಪಾಯಿ ಹೊಸ ನೋಟು ಜನವರಿಯಲ್ಲಿ ಬಿಡುಗಡೆಯಾಗಿತ್ತು. ಇದೀಗ ಈ ಅಪಾಯ ಎದುರಿಸುತ್ತಿದೆ. ಹಳೆ ನೋಟುಗಳಿಗೆ ಹೋಲಿಸಿದರೆ ಹೊಸ ನೋಟುಗಳ ಗುಣಮಟ್ಟ ಉತ್ತಮವಾಗಿಲ್ಲ. ಇದಕ್ಕಾಗಿಯೇ ನೋಟುಗಳನ್ನು ಚಲಾವಣೆಯಿಂದ ಹೊರಗಿಡಲಾಗುತ್ತಿದೆ ಎನ್ನಲಾಗಿದೆ. ರೂ. 2000 ನೋಟಿನ ವಿಶೇಷತೆಗಳೇನು? ತಪ್ಪದೆ ನೋಡಿ...

ನೋಟುಗಳ ಕಳಪೆ ಗುಣಮಟ್ಟ

ನೋಟುಗಳ ಕಳಪೆ ಗುಣಮಟ್ಟ

ಹೊಸ ನೋಟುಗಳ ಗುಣಮಟ್ಟ ಉತ್ತಮವಾಗಿರದ ಕಾರಣ ನೋಟುಗಳು ಬೇಗ ಹಾಳಾಗುತ್ತಿದ್ದು, ಎರಡಕ್ಕಿಂತ ಹೆಚ್ಚು ಬಾರಿ ನೋಟುಗಳನ್ನು ಎಟಿಎಂಗೆ ಹಾಕಲು ಸಾಧ್ಯವಾಗುತ್ತಿಲ್ಲ. ಹಾಳಾದ ನೋಟುಗಳನ್ನು ಎಟಿಎಂಗೆ ಹಾಕಿದರೆ ಎಣಿಕೆಯಲ್ಲಿ ಯಂತ್ರ ತಪ್ಪು ಮಾಡುವ ಸಾಧ್ಯತೆಗಳಿವೆ. ಗುಣಮಟ್ಟ ಸರಿಯಿಲ್ಲವೆಂಬ ಕಾರಣ ನೀಡಿ ಬ್ಯಾಂಕುಗಳು ನೋಟುಗಳನ್ನು ವಹಿವಾಟಿನಿಂದ ಹೊರಗಿಡುತ್ತಿವೆ. ಹೊಸ 100 ರೂಪಾಯಿ ನೋಟು ಬಿಡುಗಡೆ! ಇಂಟರೆಸ್ಟಿಂಗ್ ವಿಶೇಷತೆಗಳೇನು ಗೊತ್ತೆ?

ಬ್ಯಾಂಕ್ ಅಧಿಕಾರಿ ಸ್ಪಷ್ಟನೆ

ಬ್ಯಾಂಕ್ ಅಧಿಕಾರಿ ಸ್ಪಷ್ಟನೆ

ಬ್ಯಾಂಕ್ ಅಧಿಕಾರಿಗಳ ಪ್ರಕಾರ ಗಿಷ್ಠ ಮುಖಬೆಲೆಯ ರೂ. 2000 ಹಾಗೂ 500 ನೋಟುಗಳಿಗಿಂತ ಈ ವರ್ಷ ಮುದ್ರಣವಾದ ರೂ. 10 ನೋಟು ಬೇಗ ಹಾಳಾಗುತ್ತಿದೆ. ಒಂದು ದಿನದಲ್ಲಿ ನೂರಾರು ಜನರ ಕೈಸೇರುವ ಹತ್ತು ರೂಪಾಯಿ ನೋಟು ಬೇಗ ಹಾಳಾಗುತ್ತಿದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.

ನಿರ್ವಹಣಾ ವೆಚ್ಚ

ನಿರ್ವಹಣಾ ವೆಚ್ಚ

ಹೊಸ ನೋಟುಗಳ ಮುದ್ರಣಕ್ಕೆ ಹೆಚ್ಚು ವೆಚ್ಚ ತಗಲಿದ್ದು, ಅಲ್ಲದೇ ಅದರ ನಿರ್ವಹಣಾ ವೆಚ್ಚ ಕೂಡ ದುಪ್ಪಟ್ಟಾಗಿದೆ. ಎಟಿಎಂ ಯಂತ್ರಗಳನ್ನು ಅವುಗಳ ಗಾತ್ರಕ್ಕೆ ಅನುಗುಣಕ್ಕೆ ಬದಲಾಯಿಸುವುದು ಸವಾಲಿನ ಕೆಲಸವಾಗಿದೆ. ಬ್ಯಾಂಕುಗಳಿಗೆ ಇದು ದೊಡ್ಡ ತಲೆನೋವಿನ ಕೆಲಸವಾಗಿದೆ.

English summary

New Notes out of Circulation only in Just two years after releasing

New Notes out of Circulation only in Just two years after releasing.
Story first published: Thursday, November 29, 2018, 12:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X