For Quick Alerts
ALLOW NOTIFICATIONS  
For Daily Alerts

ರೂ. 2000 ನೋಟು ಮುದ್ರಣ ಸ್ಥಗಿತ, ಯಾಕೆ ಗೊತ್ತಾ?

ಭಾರತ ಸರ್ಕಾರ ರೂ. 2000 ಮುಖಬೆಲೆಯ ನೋಟುಗಳನ್ನು ಮುದ್ರಿಸುವುದನ್ನು ನಿಲ್ಲಿಸಿದೆ ಎಂದು ವರದಿಯಾಗಿದೆ. ರೂ. 2000 ನೋಟುಗಳ ಚಲಾವಣೆಯನ್ನು ನಿಧಾನವಾಗಿ ನಿಲ್ಲಿಸುವ ಸಲುವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

|

ಭಾರತ ಸರ್ಕಾರ ರೂ. 2000 ಮುಖಬೆಲೆಯ ನೋಟುಗಳನ್ನು ಮುದ್ರಿಸುವುದನ್ನು ನಿಲ್ಲಿಸಿದೆ ಎಂದು ವರದಿಯಾಗಿದೆ.

 

ರೂ. 2000 ನೋಟುಗಳ ಚಲಾವಣೆಯನ್ನು ನಿಧಾನವಾಗಿ ನಿಲ್ಲಿಸುವ ಸಲುವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರ 2016 ರ ನವೆಂಬರ್ ನಲ್ಲಿ ಕಪ್ಪುಹಣ ಕಡಿವಾಣ ಹಾಕುವ ಉದ್ದೇಶದಿಂದ ದೊಡ್ಡ ಮೊತ್ತದ ನೋಟುಗಳನ್ನು ರದ್ದುಪಡಿಸಿ ನಂತರದಲ್ಲಿ ಹೊಸ ನೋಟುಗಳನ್ನು ಚಲಾವಣೆಗೆ ತಂದಿತ್ತು.

2000 ನೋಟು ಚಲಾವಣೆ

2000 ನೋಟು ಚಲಾವಣೆ

2016 ರ ನೋಟು ರದ್ದತಿಯಾದ ಸಂದರ್ಭದಲ್ಲಿ ರೂ. 2000 ದೊಡ್ಡ ಮುಖಬೆಲೆಯ ನೋಟನ್ನು ಪರಿಚಯಿಸಲಾಗಿತ್ತು. ನಂತರದಲ್ಲಿ ರೂ. 500, ರೂ. 200 ದೊಡ್ಡ ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರಲಾಗಿತ್ತು. ಆದರೆ ಈಗ ದಿಢೀರನೇ ರೂ. 2000 ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸಿದೆ ಎಂದು ವರದಿಯಾಗಿದೆ.

ಚಲಾವಣೆ ಪ್ರಮಾಣ ಕಡಿಮೆ

ಚಲಾವಣೆ ಪ್ರಮಾಣ ಕಡಿಮೆ

ಐಟಿ ದಾಳಿಗಳ ಸಂದರ್ಭದಲ್ಲಿ ರೂ. 2000 ನೋಟುಗಳಿಂದಲೇ ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹಿಸಿರುವುದು ಕಂಡು ಬಂದಿದೆ.
ಅತಿ ಹೆಚ್ಚು ಪ್ರಮಾಣದಲ್ಲಿ ರೂ. 2000 ಮೊತ್ತದ ನೋಟುಗಳನ್ನು ಮುದ್ರಣ ಮಾಡಲಾಗಿದ್ದರೂ, ಚಲಾವಣೆ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ನೋಟಿನ ಮುದ್ರಣವನ್ನು ನಿಲ್ಲಿಸಲಾಗಿದೆ.

ಚಲಾವಣೆಯಾದ ಒಟ್ಟು ಕರೆನ್ಸಿ ಮೌಲ್ಯ
 

ಚಲಾವಣೆಯಾದ ಒಟ್ಟು ಕರೆನ್ಸಿ ಮೌಲ್ಯ

ಮಾರ್ಚ್ 2018 ರ ವೇಳೆಗೆ ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿ ಮೌಲ್ಯವು ರೂ. 18.03 ಲಕ್ಷ ಕೋಟಿಯಾಗಿದೆ. ಇವುಗಳಲ್ಲಿ 6.73 ಲಕ್ಷ ಕೋಟಿ ಅಥವಾ ಶೇ. 37 ರೂ. 2,000 ನೋಟುಗಳದ್ದಾಗಿದ್ದರೆ, ಸುಮಾರು ಶೇ. 43 ರಷ್ಟು ಅಥವಾ 7.73 ಲಕ್ಷ ಕೋಟಿ ರೂ. 500 ರ ನೋಟುಗಳಾಗಿವೆ. ಉಳಿದದ್ದು ಕಡಿಮೆ ಮುಖಬೆಲೆಯ ನೋಟುಗಳಾಗಿವೆ.

ಆರ್ಥಿಕತೆ ಮೇಲೆ ಪರಿಣಾಮ

ಆರ್ಥಿಕತೆ ಮೇಲೆ ಪರಿಣಾಮ

ಒಂದೇ ಬಾರಿ ರೂ. 2000 ನೋಟು ರದ್ದುಪಡಿಸಿದರೆ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸದ್ಯಕ್ಕೆ ಮುದ್ರಣ ನಿಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ರೂ. 2000 ನೋಟನ್ನು ಹಿಂದಕ್ಕೆ ಪಡೆದರೆ ಅಚ್ಚರಿ ಪಡಬೇಕಿಲ್ಲ.

Read more about: notes demonetization money banking rbi
English summary

India Government stops printing new Rs 2,000 notes

The government of India has stopped printing Rs 2,000 currency notes in order to gradually stop their circulation.
Story first published: Friday, January 4, 2019, 10:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X