For Quick Alerts
ALLOW NOTIFICATIONS  
For Daily Alerts

ಹೂಡಿಕೆದಾರರಿಗೆ ಸಿಹಿ ಕಹಿ ಸುದ್ದಿ! ಅಂಚೆ ಕಚೇರಿ, ಪಿಪಿಎಫ್, ಸುಕನ್ಯಾ, ಹಿರಿಯ ನಾಗರಿಕ ಯೋಜನೆಗಳ ಬಡ್ಡಿದರ ಎಷ್ಟು?

ಸರ್ಕಾರ ಪ್ರಮುಖ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿ, ಅಂಚೆ ಕಚೇರಿ ಕಡಿಮೆ ಅವಧಿಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ.

|

ಸರ್ಕಾರ ಪ್ರಮುಖ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿ, ಅಂಚೆ ಕಚೇರಿ ಕಡಿಮೆ ಅವಧಿಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಸಣ್ಣ ಉಳಿತಾಯ ಯೋಜನೆಗಳ ಮೇಲೆ ಹೂಡಿಕೆ ಮಾಡುವ ಗ್ರಾಹಕರಿಗೆ ಸಿಹಿ ಕಹಿ ಎರಡನ್ನೂ ನೀಡಿದೆ.

ಬಡ್ಡಿದರ ಏರಿಕೆ

ಬಡ್ಡಿದರ ಏರಿಕೆ

ಡಿಸೆಂಬರ್ 31, 2018ರ ಅಧಿಸೂಚನೆಯಲ್ಲಿ ಪ್ರಕಟಿಸಿದಂತೆ, ಹಣಕಾಸು ಸಚಿವಾಲಯವು 1 ವರ್ಷದ ಅವಧಿಯ ಅಂಚೆ ಕಚೇರಿಯ ಠೇವಣಿ ಮೇಲಿನ ಬಡ್ಡಿದರವು ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಶೇ .7 ರಷ್ಟು ಹೆಚ್ಚಳವಾಗಿದೆ. ಹಿಂದಿನ ತ್ರೈಮಾಸಿಕದಲ್ಲಿ ಬಡ್ಡಿದರ ಶೇ. 6.9ರಷ್ಟಿತ್ತು.

ಬಡ್ಡಿದರ ಇಳಿಕೆ

ಬಡ್ಡಿದರ ಇಳಿಕೆ

ಅಂಚೆ ಕಚೇರಿಯ ಮೂರು ವರ್ಷಗಳ ಅವಧಿಯ ಮೇಲಿನ ಬಡ್ಡಿದರವನ್ನು ಶೇ. 7.2ರಿಂದ ಶೇ. 7ಕ್ಕೆ ಇಳಿಸಲಾಗಿದೆ. 2 ವರ್ಷ ಮತ್ತು 5 ವರ್ಷದ ಅಂಚೆ ಕಚೇರಿ ಠೇವಣಿಗಳ ಮೇಲಿನ ಬಡ್ಡಿದರಗಳು ಅನುಕ್ರಮವಾಗಿ 7% ಮತ್ತು 7.8% ರಷ್ಟು ಯಥಾಸ್ಥಿತಿಯಲ್ಲಿ ಉಳಿಸಲಾಗಿದೆ. ಅದೇ ರೀತಿ, 5 ವರ್ಷದ ಅಂಚೆ ಕಚೇರಿ ಮರುಕಳಿಸುವ ಠೇವಣಿಯ ಮೇಲಿನ ಬಡ್ಡಿ ದರವನ್ನು ಶೇ.7.3ರಷ್ಟು ಸ್ಥಿರವಾಗಿ ಇರಿಸಲಾಗಿದೆ.

ಪ್ರಮುಖ ಯೋಜನೆಗಳ ಬಡ್ಡಿದರ

ಪ್ರಮುಖ ಯೋಜನೆಗಳ ಬಡ್ಡಿದರ

ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಯೋಜನೆಗಳ ಮೇಲಿನ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಉಳಿಸಲಾಗಿದೆ.
ಪಿಪಿಎಫ್ ಬಡ್ಡಿದರ ಶೇ. 8, ಸುಕನ್ಯಾ ಸಮೃದ್ಧಿ ಖಾತೆ ಬಡ್ಡಿದರ ಶೇ 8.5. ಹಿರಿಯ ನಾಗರಿಕರ ಉಳಿತಾಯ ಖಾತೆ ಬಡ್ಡಿದರ ಶೇ. 8.7 ಉಳಿಸಲಾಗಿದೆ.

ಬಡ್ಡಿದರ ಪರಿಷ್ಕರಣೆ

ಬಡ್ಡಿದರ ಪರಿಷ್ಕರಣೆ

ಸಣ್ಣ ಉಳಿತಾಯದ ಮೇಲಿನ ಬಡ್ಡಿ ದರಗಳನ್ನು ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ಪರಿಷ್ಕರಿಸಲಾಗುತ್ತಿದೆ. ಈ ಬಾರಿ ಎಲ್ಲಾ ಪ್ರಮುಖ ಯೋಜನೆಗಳ ಬಡ್ಡಿದರವನ್ನು ಯಥಾಸ್ಥಿತಿ ಉಳಿಸಲಾಗಿದೆ. ಅಂಚೆ ಕಚೇರಿ ಗ್ರಾಹಕರಿಗೆ ಸಿಹಿ ನೀಡಿದರೆ, ಉಳಿದವರಿಗೆ ಕಹಿ ನೀಡಿದೆ.

English summary

What is Post office, PPF, Sukhanya and senior citizen schemes Interest rates?

The government has revised the interest rate on post office time deposit schemes while leaving rates of other popular small savings schemes.
Story first published: Friday, January 4, 2019, 12:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X