For Quick Alerts
ALLOW NOTIFICATIONS  
For Daily Alerts

ಬಜೆಟ್ 2019 : ಪಿಂಚಣಿದಾರರಿಗಾಗಿ ಮೆಗಾ ಪೆನ್ಶನ್ ಸ್ಕೀಂ ಘೋಷಣೆ

|

ನವದೆಹಲಿ, ಫೆಬ್ರವರಿ 1 : ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಧ್ಯಂತರ ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವ ಪಿಯೂಶ್ ಗೋಯಲ್ ಅವರು ಪಿಂಚಣಿದಾರರಿಗಾಗಿ 'ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧನ್' ಬೃಹತ್ ಯೋಜನೆಯನ್ನು ಘೋಷಿಸಿದರು.

ಈ ಮೆಗಾ ಪೆನ್ಶನ್ ಸ್ಕೀಂ ಅಡಿಯಲ್ಲಿ 60 ವರ್ಷದ ನಿವೃತ್ತಿ ವಯಸ್ಸು ಪೂರೈಸಿದ ನಂತರ ಪಿಂಚಣಿದಾರರಿಗೆ 3000 ರುಪಾಯಿ ಮಾಸಿಕ ಹಣವನ್ನು ನೀಡಲಾಗುವುದು ಎಂದು ಗೋಯಲ್ ಪ್ರಕಟಿಸಿದರು. ಇದಕ್ಕೆ ಆಡಳಿತ ಪಕ್ಷದಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಸಂಸದರು ಮೇಜು ಕುಟ್ಟಿ ಈ ಯೋಜನೆಯನ್ನು ಸ್ವಾಗತಿಸಿದರು.

Interim Union Budget 2019 LIVE: ರೈತರಿಗಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿInterim Union Budget 2019 LIVE: ರೈತರಿಗಾಗಿ ಪಿಎಂ ಕಿಸಾನ್ ಸಮ್ಮಾನ್ ನಿಧಿ

ಈ ಬೃಹತ್ ಪಿಂಚಣಿ ಯೋಜನೆ ಅಡಿಯಲ್ಲಿ 15 ಸಾವಿರ ರುಪಾಯಿಗಿಂತ ಹೆಚ್ಚು ಸಂಬಳ ಪಡೆಯುತ್ತಿರುವ, ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ನೌಕರರು ಕಡ್ಡಾಯವಾಗಿ 60 ವರ್ಷ ಪೂರೈಸುವವರೆಗೆ ತಿಂಗಳಿಗೆ 100 ರು. ಜಮಾ ಮಾಡಬೇಕು. 3000 ರು. ಪಿಂಚಣಿ ಪಡೆಯಲು 100 ರು. ಜಮಾ ಮಾಡಬೇಕಾಗಿರುವುದು ಕಡ್ಡಾಯವಾಗಿದೆ.

ಬಜೆಟ್ 2019 : ಪಿಂಚಣಿದಾರರಿಗಾಗಿ ಮೆಗಾ ಪೆನ್ಶನ್ ಸ್ಕೀಂ ಘೋಷಣೆ

ಈ ಯೋಜನೆಯಿಂದಾಗಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ 10 ಕೋಟಿ ಕಾರ್ಮಿಕರಿಗೆ ಪಿಂಚಣಿಯ ಲಾಭ ಸಿಗಲಿದೆ. ಇದು ಇನ್ನು ಐದು ವರ್ಷಗಳಲ್ಲಿ ವಿಶ್ವದಲ್ಲಿಯೇ ಅತೀದೊಡ್ಡ ಪಿಂಚಣಿ ಯೋಜನೆಯಾಗಲಿದೆ ಎಂದು ಪಿಯೂಶ್ ಗೋಯಲ್ ಬಜೆಟ್ ನಲ್ಲಿ ಪ್ರಕಟಿಸಿದರು.

ಮಧ್ಯಂತರ ಬಜೆಟ್ 2019: ಮೋದಿ ಸರ್ಕಾರದ ಕೊನೆ ಬಜೆಟ್ ಜನಪ್ರಿಯ ಯೋಜನೆಗಳ ಸಂಪೂರ್ಣ ಮಾಹಿತಿ..ಮಧ್ಯಂತರ ಬಜೆಟ್ 2019: ಮೋದಿ ಸರ್ಕಾರದ ಕೊನೆ ಬಜೆಟ್ ಜನಪ್ರಿಯ ಯೋಜನೆಗಳ ಸಂಪೂರ್ಣ ಮಾಹಿತಿ..

ಕೇಂದ್ರ ರೈಲ್ವೆ ಸಚಿವರಾಗಿರುವ ಪಿಯೂಶ್ ಗೋಯಲ್ ಅವರು ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ಹಂಗಾಮಿ ವಿತ್ತ ಸಚಿವರಾಗಿ ಮಧ್ಯಂತರ ಬಜೆಟ್ ಮಂಡಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಇನ್ನು ನಾಲ್ಕೇ ತಿಂಗಳು ಇರುವುದರಿಂದ ಇದನ್ನು ಮತದಾರರನ್ನು ಓಲೈಸುವ ಚುನಾವಣಾ ಬಜೆಟ್ ಎಂದೇ ಬಿಂಬಿಸಲಾಗುತ್ತಿದೆ.

English summary

Budget 2019 : Piyush Goyal announces mega pension scheme

Interim union Budget 2019 in Kannada : Mega Pension Yojana, namely Pradhan Mantri Shram Yogi Mandhan, to provide assured monthly pension of 3000 rupees per month, with contribution of 100 rupees per month, for workers in unorganized sector after 60 years of age.
Story first published: Friday, February 1, 2019, 12:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X