For Quick Alerts
ALLOW NOTIFICATIONS  
For Daily Alerts

ಮಧ್ಯಂತರ ಬಜೆಟ್ 2019: 9 ವಿವಿಧ ಕ್ಷೇತ್ರದ ಪ್ರಮುಖಾಂಶಗಳು

|

ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಮಧ್ಯಂತರ ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ, ಗ್ರಾಮೀಣ ಭಾಗದವರಿಗೆ, ರೈತರು ಮತ್ತು ಅಸಂಘಟಿತ ಕಾರ್ಮಿಕರಿಗೆ ಭರ್ಜರಿ ಘೋಷಣೆಗಳನ್ನೇ ಮಾಡಿದೆ. ಲೋಕಸಭಾ ಚುನಾವಣೆಯನ್ನು ಕಣ್ಣೆದುರಿಗೆ ಇಟ್ಟುಕೊಂಡು ಜನಪ್ರಿಯ ಘೋಷಣೆಗಳನ್ನು ಮಾಡಿರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ.

 

ಎಲ್ಲರನ್ನೂ ಅಂದರೆ ಎಲ್ಲ ವರ್ಗದವರನ್ನೂ ಸಂತೋಷ ಪಡಿಸಬೇಕು ಎಂಬ ಗುರಿ ಇಟ್ಟುಕೊಂಡೇ ಬಜೆಟ್ ರೂಪಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ವೇತನ ಪಡೆಯುವ ವರ್ಗದವರಿಗೆ ತೆರಿಗೆಯಲ್ಲಿ ವಿನಾಯಿತು, ರೈತರಿಗೆ ನೇರವಾಗಿ ಹಣ ವರ್ಗಾವಣೆ ಮತ್ತು ಇತರ ಸಾಮಾಜಿಕ ವಲಯದ ಯೋಜನೆಗಳು ಎದ್ದುಕಾಣುವಂತಿವೆ.

ಲೋಕಸಭಾ ಚುನಾವಣೆಯ ದಿಕ್ಕು ಬದಲಿಸುವ ಬಜೆಟ್ ನ 5 ಘೋಷಣೆಗಳುಲೋಕಸಭಾ ಚುನಾವಣೆಯ ದಿಕ್ಕು ಬದಲಿಸುವ ಬಜೆಟ್ ನ 5 ಘೋಷಣೆಗಳು

ಕೇಂದ್ರದ ಹಣಕಾಸು ಸಚಿವ ಪಿಯೂಷ್ ಗೋಯಲ್ ಮಂಡಿಸಿದ ಮಧ್ಯಂತರ ಬಜೆಟ್ ನ 9 ಪ್ರಮುಖ ಅಂಶಗಳನ್ನು ಇಲ್ಲಿ ಕೊಡಲಾಗಿದೆ.

ತೆರಿಗೆಗೆ ಸಂಬಂಧಿಸಿದ ಸಂಗತಿಗಳು:

ತೆರಿಗೆಗೆ ಸಂಬಂಧಿಸಿದ ಸಂಗತಿಗಳು:

* ಆದಾಯ ತೆರಿಗೆ ವಿನಾಯಿತಿ ಐದು ಲಕ್ಷ ರುಪಾಯಿ ತನಕ ಏರಿಕೆ

* ಕ್ಯಾಪಿಟಲ್ ಟ್ಯಾಕ್ಸ್ ಗೇಯ್ನ್ ಮೇಲಿನ ಅನುಕೂಲವನ್ನು ಈ ಹಿಂದೆ ಇದ್ದ ಒಂದು ಮನೆಯಿಂದ ಎರಡಕ್ಕೆ ಏರಿಕೆ

* ಎರಡು ಕೋಟಿ ರುಪಾಯಿ ತನಕ ಕ್ಯಾಪಿಟಲ್ ಗೇಯ್ನ್ಸ್ ಅನ್ನು ಜೀವಿತಾವಧಿಯಲ್ಲಿ ಒಮ್ಮೆ ಎರಡು ಕೋಟಿ ರುಪಾಯಿ ತನಕ ಪಡೆಯಬಹುದು

* ಐಟಿ ರಿಟರ್ನ್ಸ್ ಇಪ್ಪತ್ನಾಲ್ಕು ಗಂಟೆಯೊಳಗೆ ಪ್ರಕ್ರಿಯೆ ಮಾಡಬೇಕು ಮತ್ತು ರಿಟರ್ನ್ಸ್ ಅನ್ನು ತಕ್ಷಣವೇ ಪಾವತಿಸಬೇಕು

 

ಕೃಷಿಗೆ ಸಂಬಂಧಿಸಿದ ಸಂಗತಿಗಳು:

ಕೃಷಿಗೆ ಸಂಬಂಧಿಸಿದ ಸಂಗತಿಗಳು:

* ಸಣ್ಣ ಪ್ರಮಾಣದ ಭೂಮಿ ಹೊಂದಿದ ರೈತರಿಗೆ ವರ್ಷಕ್ಕೆ ಆರು ಸಾವಿರ ರುಪಾಯಿ ಖಾತ್ರಿ ವರಮಾನ

* ಈ ಯೋಜನೆಗೆ ಸರಕಾರದಿಂದ ಎಪ್ಪತ್ತೈದು ಸಾವಿರ ಕೋಟಿ ರುಪಾಯಿ

* ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ರೈತರಿಗೆ ಬಡ್ಡಿಯಲ್ಲಿ ಎರಡು ಪರ್ಸೆಂಟ್ ವಿನಾಯಿತಿ ಮತ್ತು ಸರಿಯಾದ ಸಮಯದಲ್ಲಿ ಸಲ ಹಿಂತಿರುಗಿಸಿದರೆ ಹೆಚ್ಚುವರಿ ಮೂರು ಪರ್ಸೆಂಟ್ ವಿನಾಯಿತಿ

* ಹೈನುಗಾರಿಕೆ ಹಾಗೂ ಮೀನುಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಎರಡು ಪರ್ಸೆಂಟ್ ಬಡ್ಡಿ ವಿನಾಯಿತಿ

 

ಗ್ರಾಮೀಣ ವಲಯಕ್ಕೆ ಸಂಬಂಧಿಸಿದ ಸಂಗತಿಗಳು:
 

ಗ್ರಾಮೀಣ ವಲಯಕ್ಕೆ ಸಂಬಂಧಿಸಿದ ಸಂಗತಿಗಳು:

* 2019-20ನೇ ಸಾಲಿಗೆ ಗ್ರಾಮ್ ಸಡಕ್ ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಾಣಕ್ಕೆ ಬಜೆಟ್ ನಲ್ಲಿ 19 ಸಾವಿರ ಕೋಟಿ ರುಪಾಯಿ ಮೀಸಲು

* ನರೇಗಾ ಯೋಜನೆಗೆ 60 ಸಾವಿರ ಕೋಟಿ ರುಪಾಯಿ ಮೀಸಲು

ಉದ್ಯೋಗ:

ಉದ್ಯೋಗ:

* ಅಸಂಘಟಿತ ವಲಯದ ಕಾರ್ಮಿಕರಿಗೆ ಹೊಸದಾಗಿ ಸಾಮಾಜಿ ಭದ್ರತಾ ಯೋಜನೆ

* ತಿಂಗಳಿಗೆ ನೂರು ರುಪಾಯಿ ಪಾವತಿಸಿದರೆ ಅಸಂಘಟಿತ ವಲಯದ ಅರವತ್ತು ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ತಿಂಗಳಿಗೆ ಮೂರು ಸಾವಿರ ಪಿಂಚಣಿ

* ಅಸಂಘಟಿತ ವಲಯದ ಹತ್ತು ಕೋಟಿ ಕಾರ್ಮಿಕರಿಗೆ ಇದರಿಂದ ಅನುಕೂಲ. ಇನ್ನು ಐದು ವರ್ಷದಲ್ಲಿ ಅಸಂಘಟಿತ ವಲಯದ ಜಗತ್ತಿನ ಅತಿ ದೊಡ್ಡ ಯೋಜನೆ ಇದಾಗಲಿದೆ

 

ಜಿಎಸ್ ಟಿ ಸಂಗತಿಗಳು:

ಜಿಎಸ್ ಟಿ ಸಂಗತಿಗಳು:

* ಗೃಹ ಖರೀದಿ ಮಾಡುವವರಿಗೆ ಜಿಎಸ್ ಟಿ ದರ ಇಳಿಕೆ ಮಾಡುವ ಮಾರ್ಗಗಳನ್ನು ಸೂಚಿಸಲು ಸಚಿವರಿಗೆ ಸಲಹೆ

* ಸಣ್ಣ ಹಾಗೂ ಮಧ್ಯಮ ಪ್ರಮಾಣದ ವ್ಯಾಪಾರ ಜಿಎಸ್ ಟಿ ಅಡಿಯಲ್ಲಿ ನೋಂದಣಿ ಮಾಡಿದವರಿಗೆ ಎರಡು ಪರ್ಸೆಂಟ್ ಬಡ್ಡಿ ದರದಲ್ಲಿ ಒಂದು ಕೋಟಿ ತನಕ ಸಾಲ

 

ಆರ್ಥಿಕತೆ ವಿಚಾರಗಳು:

ಆರ್ಥಿಕತೆ ವಿಚಾರಗಳು:

* ಈ ವರ್ಷದಲ್ಲಿ ಈ ವರೆಗೆ ತಿಂಗಳ ಸರಾಸರಿ ತೆರಿಗೆ ಸಂಗ್ರಹ 97,100 ಕೋಟಿ ರುಪಾಯಿ

* ಮಾರುಕಟ್ಟೆಯಿಂದ ಸಗಟಾಗಿ ಸಾಲ ಎತ್ತುವ ಮೊತ್ತ 7.04 ಲಕ್ಷ ಕೋಟಿ 2019/20ರ ಅವಧಿಗೆ

 

ವಾರ್ಷಿಕ ಲೆಕ್ಕಾಚಾರಗಳು:

ವಾರ್ಷಿಕ ಲೆಕ್ಕಾಚಾರಗಳು:

* ವಿತ್ತೀಯ ಕೊರತೆ 2018/19ನೇ ಸಾಲಿಗೆ ಜಿಡಿಪಿಯ 3.4%

* 2019/20ನೇ ಸಾಲಿಗೆ ವಿತ್ತೀಯ ಕೊರತೆ ಅಂದಾಜು ಜಿಡಿಪಿಯ 3.4%

* 2020/21 ರ ಹೊತ್ತಿಗೆ ಕೊರತೆಯು ಜಿಡಿಪಿಯ 3 ಪರ್ಸೆಂಟ್ ತರುವ ನಿರೀಕ್ಷೆ

* ಸರಕಾರವು ಈ ಹಿಂದೆ ವಿತ್ತೀಯ ಕೊರತೆಯನ್ನು 2020ರ ಮಾರ್ಚ್ ಹೊತ್ತಿಗೆ ಜಿಡಿಪಿಯ 3.1% ಮತ್ತು ‌2021ರ ಮಾರ್ಚ್ ಕೊನೆ ಹೊತ್ತಿಗೆ 3 ಪರ್ಸೆಂಟ್ ಗೆ ತರಲು ಬದ್ಧವಾಗಿರುವುದಾಗಿ ಸರಕಾರ ಹೇಳಿತ್ತು.

* 2018/19ರ ಅವಧಿಗೆ ಚಾಲ್ತಿ ಖಾತೆ ಕೊರತೆ ಜಿಡಿಪಿಯ 2.5% ಇದೆ.

* ಸಾಲ ಹಾಗೂ ಜಿಡಿಪಿ ಪ್ರಮಾಣವನ್ನು 2024/25ರ ಹೊತ್ತಿಗೆ 40 ಪರ್ಸೆಂಟ್ ಗೆ ತರುವ ಉದ್ದೇಶ ಹೊಂದಿದೆ.

 

ರೈಲ್ವೆ ಇಲಾಖೆಗೆ ಸಂಬಂಧಿಸಿದ ಸಂಗತಿ:

ರೈಲ್ವೆ ಇಲಾಖೆಗೆ ಸಂಬಂಧಿಸಿದ ಸಂಗತಿ:

* ರೈಲ್ವೆಯ ಕಾರ್ಯ ನಿರ್ವಹಣಾ ವೆಚ್ಚದ ಪ್ರಮಾಣ ಆರ್ಥಿಕ ವರ್ಷ 2019ರಲ್ಲಿ 96.2% ಇದ್ದರೆ 2020ಕ್ಕೆ 95% ಇದೆ

* 2020ರ ಆರ್ಥಿಕ ವರ್ಷದಲ್ಲಿ ರೈಲ್ವೆಗೆ ಹರಿದುಬರಲಿರುವ ಬಂಡವಾಳ 1.6 ಲಕ್ಷ ಕೋಟಿ

* ಭಾರತದಲ್ಲಿ ಸಿಬ್ಬಂ ಇಲ್ಲದ ಬ್ರಾಡ್ ಗೇಜ್ ರೈಲ್ವೆ ಕ್ರಾಸಿಂಗ್ ಯಾವುದೂ ಇಲ್ಲ

 

 

ರಕ್ಷಣಾ ಬಜೆಟ್ ಸಂಗತಿಗಳು:

ರಕ್ಷಣಾ ಬಜೆಟ್ ಸಂಗತಿಗಳು:

* ಸರಕಾರವು ರಕ್ಷಣಾ ವಲಯದ ಬಜೆಟ್ ಅನ್ನು 3 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಹಣಕಾಸನ್ನು ಸರಕಾರ ಒದಗಿಸಲಿದೆ

* OROP (ಏಕ ಶ್ರೇಣಿ ಏಕ ಪಿಂಚಣಿ) ಯೋಜನೆ ಅಡಿಯಲ್ಲಿ ಸರಕಾರ ಕಳೆದ ಕೆಲವು ವರ್ಷಗಳಲ್ಲಿ 35 ಸಾವಿರ ಕೋಟಿ ವಿತರಿಸಿದೆ.

 

English summary

Interim budget 2019 explained in 9 easy points

Modi government today unveiled an interim budget with mega announcements for middle class, rural citizens, farmers and unorganised sector workers. Keeping any eye on the Lok Sabha polls, government made a slew of announcements to keep everybody happy. Here are 9 key highlights Finance Minister Piyush Goyal's announced in Interim budget 2019.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X