For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ 2019: ಷೇರುದಾರರಿಗೆ ಖುಷಿ ನೀಡಿದ ರೈತ ಪರ ಘೋಷಣೆ

|

ನವದೆಹಲಿ, ಪೆಬ್ರುವರಿ 1: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಕೊಡುಗೆ ನಿರೀಕ್ಷಿಸಿದ್ದರಿಂದ ಮಂಡನೆಗೆ ಮುನ್ನವೇ ಕೃಷಿ-ವಲಯ ಷೇರುಗಳಲ್ಲಿ ಸಂಚಲನ ಉಂಟಾಗಿದೆ.

 

ಕೃಷಿ ವಲಯದ ಸಂಕಷ್ಟಗಳಿಗೆ ಕೇಂದ್ರ ಸರ್ಕಾರ ಪರಿಹಾರದ ಕೊಡುಗೆ ನೀಡಲಿದೆ ಎಂದು ನಿರೀಕ್ಷೆ ಇದ್ದಿದ್ದರಿಂದ ಶುಕ್ರವಾರ ಬೆಳಗ್ಗಿನಿಂದಲೇ ಕೃಷಿ ವಲಯದ ಷೇರು ವಹಿವಾಟು ವೃದ್ಧಿಯಾಗಿತ್ತು.

 

Interim Union Budget 2019 LIVE: ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಿಲ್ಲ Interim Union Budget 2019 LIVE: ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಿಲ್ಲ

ರೈತರ ಅದಾಯವನ್ನು ಹೆಚ್ಚಿಸಲು ಕನಿಷ್ಠ ಬೆಂಬಲ ಬೆಲೆ ದರ ಹೆಚ್ಚಳ ಮತ್ತು ಶೂನ್ಯ ಬಡ್ಡಿದರದ ಸಾಲದ ಕೊಡುಗೆ ಸಾಧ್ಯತೆ ಇದ್ದಿದ್ದರಿಂದ ಈ ಬೆಳವಣಿಗೆ ಉಂಟಾಗಿದೆ.

ರೈತರಿಗೆ ಕೊಡುಗೆ: ಥಟ್ಟನೆ ಜಿಗಿದ ಕೃಷಿ ವಲಯದ ಷೇರುಗಳು

ಆಹಾರ ಬೆಳೆಗಳ ಮೇಲಿನ ವಿಮೆಯಲ್ಲಿ ಪ್ರೀಮಿಯಂನ ಸಂಪೂರ್ಣ ಮನ್ನಾ ಮಾಡುವ ಪ್ರಸ್ತಾವವಿತ್ತು. ಅಲ್ಲದೆ, ತೆಲಂಗಾಣ ಮತ್ತು ಒಡಿಶಾ ಮಾದರಿಯಲ್ಲಿ ರೈತರ ಖಾತೆಗಳಿಗೆ ನೇರವಾಗಿ ನಿರ್ದಿಷ್ಟ ಹಣ ವರ್ಗಾವಣೆ ಮಾಡುವ ಯೋಜನೆ ಇದ್ದು, ಕೇಂದ್ರ ಸರ್ಕಾರ 6,000 ರೂಪಾಯಿ ವಾರ್ಷಿಕ ಹಣಕಾಸು ನೆರವು ಪ್ರಕಟಿಸಿದೆ.

ಜೆಕೆ ಅಗ್ರಿ ಜೆನೆಟಿಕ್ಸ್ ಶೇ 5.67, ಕೆಆರ್‌ಬಿಎಲ್ ಶೇ 5.02, ಅಗ್ರಿ ಟೆಕ್ ಇಂಡಿಯಾ ಶೇ 4.97, ವೈಟ್ ಆರ್ಗಾನಿಕ್ ಆಗ್ರೋ ಶೇ 4.83ರಷ್ಟು ಷೇರುಗಳ ಏರಿಕೆ ಕಂಡಿವೆ.

ಮಧ್ಯಂತರ ಬಜೆಟ್ 2019: ಮೋದಿ ಸರ್ಕಾರದ ಕೊನೆ ಬಜೆಟ್ ಜನಪ್ರಿಯ ಯೋಜನೆಗಳ ಸಂಪೂರ್ಣ ಮಾಹಿತಿ.. ಮಧ್ಯಂತರ ಬಜೆಟ್ 2019: ಮೋದಿ ಸರ್ಕಾರದ ಕೊನೆ ಬಜೆಟ್ ಜನಪ್ರಿಯ ಯೋಜನೆಗಳ ಸಂಪೂರ್ಣ ಮಾಹಿತಿ..

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ, ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿಯುಳ್ಳ ರೈತರಿಗೆ 6 ಸಾವಿರ ನಗದು ನೇರವಾಗಿ ಖಾತೆಗೆ ವರ್ಗಾವಣೆ ಮಾಡಲಾಗುವುದು. ಡಿಸೆಂಬರ್ 2018ರಿಂದಲೇ ಈ ಯೋಜನೆ ಅನ್ವಯವಾಗಲಿದೆ ಎಂದು ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಕೇಂದ್ರ ಮಧ್ಯಂತರ ಬಜೆಟ್ 2019: ಸಣ್ಣ ರೈತರಿಗೆ ಆರ್ಥಿಕ ನೆರವಿನ ಕೊಡುಗೆ ಘೋಷಣೆಕೇಂದ್ರ ಮಧ್ಯಂತರ ಬಜೆಟ್ 2019: ಸಣ್ಣ ರೈತರಿಗೆ ಆರ್ಥಿಕ ನೆರವಿನ ಕೊಡುಗೆ ಘೋಷಣೆ

ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿ ಹಣ ರೈತರ ಖಾತೆಗಳಿಗೆ ಜಮೆ ಆಗಲಿದೆ. ಇದರಿಂದ 12 ಕೋಟಿ ರೈತರಿಗೆ ಅನುಕೂಲವಾಗಲಿದೆ. ಈ ಯೋಜನೆಗೆ 75,000 ಕೋಟಿ ಮೀಸಲಿಡಲಾಗುವುದು ಎಂದು ಗೋಯಲ್ ತಿಳಿಸಿದ್ದಾರೆ.

English summary

Interim Union Budget 2019 agriculture agri sector stocks jumps

Interim Union Budget: Agri sector stocks were trading with gains in Friday morning ahead of budget.
Story first published: Friday, February 1, 2019, 12:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X