For Quick Alerts
ALLOW NOTIFICATIONS  
For Daily Alerts

ನರೇಗಾ: ಗ್ರಾಮೀಣ ಭಾಗದ ಉದ್ಯೋಗಕ್ಕಾಗಿ 60 ಸಾವಿರ ಕೋಟಿ ಘೋಷಣೆ

2019-20ರ ಹಣಕಾಸು ವರ್ಷಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ)ರೂ. 60 ಸಾವಿರ ಕೋಟಿ ಘೋಷಣೆ ಮಾಡಿದೆ.

|

ಕೇಂದ್ರ ಸರ್ಕಾರದ ಕೊನೆಯ ಬಜೆಟ್ ಮಂಡನೆ ಪ್ರಕ್ರಿಯೆ ಮುಗಿದಿದ್ದು, ಯಾವ ವಲಯಕ್ಕೆ ಹೆಚ್ಚು ನಿಧಿ ಮೀಸಲಿಟ್ಟಿದ್ದಾರೆ ಎಂಬುದರ ಬಗ್ಗೆ ವಿಶ್ಲೇಷಣೆ ಸಾಗಿದೆ. ಪಿಯೂಷ್ ಗೋಯಲ್ ತಮ್ಮ ಬಜೆಟ್ ನಲ್ಲಿ ರೈತರು, ಬಡವರು, ಮಧ್ಯಮ ವರ್ಗ ಮತ್ತು ಗ್ರಾಮೀಣ ಭಾಗದ ಜನರ ಸುಧಾರಣೆಗಾಗಿ ಹೆಚ್ಚು ಒತ್ತು ನೀಡಿದ್ದಾರೆ.

2019-20ರ ಹಣಕಾಸು ವರ್ಷಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ)ರೂ. 60 ಸಾವಿರ ಕೋಟಿ ಘೋಷಣೆ ಮಾಡಿದೆ.

ನರೇಗಾ ಯೋಜನೆ ದೇಶದ ಗ್ರಾಮೀಣ ಭಾಗದ ಜನರ ಉದ್ಯೋಗ ಮಟ್ಟವನ್ನು ಹೆಚ್ಚಿಸುವ ಗುರಿ ಹೊಂದಿದೆ. 2018-19ರಲ್ಲಿ ಈ ಯೋಜನೆಗೆ ರೂ. 55,000 ಕೋಟಿ ಕಲ್ಪಿಸಲಾಗಿತ್ತು. ಕೇಂದ್ರ ಬಜೆಟ್ 2019: ಪಿಯೂಷ್‌ ಗೋಯಲ್‌ ಮಂಡಿಸಿರುವ ಪ್ರಮುಖ ಜನಪ್ರಿಯ ಯೋಜನೆಗಳ ವಿವರ ಇಲ್ಲಿದೆ...

100 ದಿನಗಳ ಕೆಲಸ

100 ದಿನಗಳ ಕೆಲಸ

ದೇಶದ ಗ್ರಾಮೀಣ ಭಾಗಗಳಲ್ಲಿ ಕನಿಷ್ಟ 100 ದಿನಗಳವರೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಮೂಲಕ ಪ್ರತಿ ವಯಸ್ಕರಿಗೆ ಕೆಲಸದ ಭರವಸೆ ನೀಡಲಾಗುತ್ತದೆ. ಈ ಯೋಜನೆಯನ್ನು 2005 ರಲ್ಲಿ ಪರಿಚಯಿಸಲಾಗಿತ್ತು.

ನರೇಗಾ ಅಡಿಯಲ್ಲಿ ಸರ್ಕಾರ ಮೀಸಲಿಟ್ಟ ಅನುದಾನ

ನರೇಗಾ ಅಡಿಯಲ್ಲಿ ಸರ್ಕಾರ ಮೀಸಲಿಟ್ಟ ಅನುದಾನ

2018-19ರಲ್ಲಿ ರೂ. 58,403.69 ಕೋಟಿ
2017-18ರಲ್ಲಿ ರೂ. 68,107.86 ಕೋಟಿ
2016-17ರಲ್ಲಿ ರೂ. 57,386.67 ಕೋಟಿ
2015-16ರಲ್ಲಿ ರೂ. 43,380.72 ಕೋಟಿ
2014-15ರಲ್ಲಿ ರೂ. 37,588.03 ಕೋಟಿ

ಯೋಜನೆಯಡಿ ಖರ್ಚು ಮಾಡಲ್ಪಟ್ಟ ಒಟ್ಟು ಮೊತ್ತ

ಯೋಜನೆಯಡಿ ಖರ್ಚು ಮಾಡಲ್ಪಟ್ಟ ಒಟ್ಟು ಮೊತ್ತ

2018-19ರಲ್ಲಿ ರೂ. 51,510.82 ಕೋಟಿ
2017-18ರಲ್ಲಿ ರೂ. 63,646.41 ಕೋಟಿ
2016-17ರಲ್ಲಿ ರೂ. 58,062.92 ಕೋಟಿ
2015-16ರಲ್ಲಿ ರೂ. 44,002.59 ಕೋಟಿ
2014-15ರಲ್ಲಿ ರೂ. 36,025.04 ಕೋಟಿ

ನರೇಗಾ ಅಡಿ ಮಾಡಲ್ಪಡುವ ಕೆಲಸಗಳು

ನರೇಗಾ ಅಡಿ ಮಾಡಲ್ಪಡುವ ಕೆಲಸಗಳು

ಎನ್ಡಿಎ ಸರಕಾರ ಪ್ರತಿ ವರ್ಷವೂ ಈ ಯೋಜನೆಗೆ ಅನುದಾನ ಹೆಚ್ಚಿಸುತ್ತಾ ಬಂದಿದೆ. ಜಲ ಸಂರಕ್ಷಣೆ, ಕೆರೆಗಳ ಹೂಳೆತ್ತುವಿಕೆ, ಭೂ ಅಭಿವೃದ್ಧಿ, ಅಣೆಕಟ್ಟು ನಿರ್ಮಾಣ, ನೀರಾವರಿ ಚಾನೆಲ್, ಚೆಕ್ ಡ್ಯಾಮ್, ಕೊಳಗಳು, ಬಾವಿಗಳು ನಿರ್ಮಾಣದಂತ ಕೆಲಸಗಳನ್ನು ನರೇಗಾ ಮೂಲಕ ನಿರ್ವಹಿಸಲಾಗುತ್ತದೆ.

English summary

MGNREGA: Budget Allocation Increased 60000 crore

the government announced the allocation of Rs 60,000 crore for the Mahatma Gandhi National Rural Employment Guarantee Act (MGNREGA) for the financial year 2019-20.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X