ನವದೆಹಲಿ, ಫೆಬ್ರವರಿ 1 : ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಮುಂದಿನ ಐದು ವರ್ಷಗಳಲ್ಲಿ ನವ ಭಾರತ ನಿರ್ಮಾಣ ಮಾಡುವುದಾಗಿ ಷೋಘಿಸಿರುವ ಹಂಗಾಮಿ ವಿತ್ತ ಸಚಿವ ಪಿಯೂಶ್ ಗೋಯಲ್ ಅವರು, ಸರಕಾರವನ್ನು 'ವಿಷನ್ 2030'ನತ್ತ ಮುನ್ನಡೆಸಲು 10 ಪ್ರಮುಖ ಸಂಗತಿಗಳನ್ನು ಪ್ರಕಟಿಸಿದ್ದಾರೆ.
1) ದೈಹಿಕವಾಗಿ ಮತ್ತು ಸಾಮಾಜಿಕವಾಗಿ ಜೀವನವನ್ನು ಸರಳ ಮತ್ತು ಸುಗಮವಾಗಿಸಲು ಮತ್ತು ಮುಂದಿನ ಪೀಳಿಗೆಗಾಗಿ ಮೂಲಸೌಕರ್ಯ ನಿರ್ಮಿಸಲು 10 ಟ್ರಿಲಿಯನ್ ಡಾಲರ್ ಆರ್ಥಿಕತೆ ನಿರ್ಮಾಣ.
2) ದೇಶದ ಪ್ರತಿ ನಾಗರಿಕನಿಗೆ ಡಿಜಿಟಲ್ ಇಂಡಿಯಾ ತಲುಪುವಂತಾಗಲು, ಅಸಂಖ್ಯ ಸ್ಟಾರ್ಟಪ್ ಮತ್ತು ಉದ್ಯೋಗಗಳನ್ನು ಯುವಜನತೆಯೇ ಸೃಷ್ಟಿಸಿ ದೇಶವನ್ನು ಮುನ್ನಡೆಸಲಿದ್ದಾರೆ.

3) ಸ್ವಚ್ಛ ಮತ್ತು ಹಸಿರು ಭಾರತ : ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಾಗಿ ಬಳಸಲಿದ್ದು, ಭಾರತದಲ್ಲಿ ವಿದ್ಯುತ್ ನವೀಕರಣ ಪ್ರಮುಖ ಶಕ್ತಿಯ ಮೂಲವಾಗಲಿದೆ, ಇದರಿಂದ ಕಚ್ಚಾ ತೈಲ ಆಮದು ಮೇಲಿನ ಅವಲಂಬನೆ ತಗ್ಗಲಿದೆ.
4) ಸಣ್ಣ ಪ್ರಮಾಣದ ಉದ್ಯಮ ಮತ್ತು ದೇಶದಾದ್ಯಂತ ಇರುವ ಸ್ಟಾರ್ಟಪ್ ಕಂಪನಿಗಳನ್ನು ಹಾಗು ಅತ್ಯಾಧುನಿಕ ಔದ್ಯೋಗಿಕ ತಂತ್ರಜ್ಞಾನಗಳನ್ನು ಬಳಸಿ ಗ್ರಾಮೀಣ ಔದ್ಯೋಗೀಕರಣವನ್ನು ವಿಸ್ತರಿಸುವುದು.
5) ಸ್ವಚ್ಛ ನದಿಗಳು : ಸಣ್ಣ ನೀರಾವರಿ ತಂತ್ರದ ಮೂಲಕ ಎಲ್ಲ ಭಾರತೀಯರಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು, ಆರೋಗ್ಯಕರ ಜೀವನ.
6) ಸಾಗರ ಮತ್ತು ಕರಾವಳಿಯ ಅಭಿವೃದ್ಧಿ. ಕರಾವಳಿಯನ್ನು ಆರ್ಥಿಕತೆ ವೃದ್ಧಿಸಲು ಬಳಸುವುದು.
7) ವಿದೇಶಿ ಖಗೋಳಯಾತ್ರಿಗಳಿಗೆ ಲಾಂಚ್ ಪ್ಯಾಡ್ ಆಗುತ್ತಿರುವ ಭಾರತದಿಂದ 2022ರಲ್ಲಿ ಭಾರತೀಯ ಖಗೋಳ ವಿಜ್ಞಾನಿಯನ್ನು ವ್ಯೋಮಕ್ಕೆ ಕಳಿಸುವುದು.
8) ಸಾವಯವ ಆಹಾರಕ್ಕೆ ಹೆಚ್ಚಿನ ಒತ್ತುಕೊಟ್ಟು ಕೃಷಿ ಉತ್ಪನ್ನವನ್ನು ಉತ್ತಮಪಡಿಸುವುದು ಮತ್ತು ಆಹಾರದ ಸದ್ಬಳಕೆ ಮಾಡುವುದು.
9) ಆರೋಗ್ಯಕರ ಭಾರತಕ್ಕಾಗಿ ಯಾವುದೇ ಕುಂದುಕೊರತೆಗಳಿಲ್ಲದ ಸಮಗ್ರ ಆರೋಗ್ಯ ವ್ಯವಸ್ಥೆಯನ್ನು ಜಾರಿಗೆ ತರುವುದು.
10) ಎಲೆಕ್ಟ್ರಾನಿಕ್ ಆಡಳಿತದ ಜಾರಿಯೊಂದಿಗೆ ಸದಾ ಕಾರ್ಯನಿರತ, ಜವಾಬ್ದಾರಿಯುತ ಮತ್ತು ಸ್ನೇಹಮಯಿ ಅಧಿಕಾರಿಗಳೊಂದಿಗೆ ಕನಿಷ್ಠ ಸರಕಾರ, ಗರಿಷ್ಠ ಆಡಳಿತದ ಗುರಿ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications