ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪ್ರದೇಶಾಭಿವೃದ್ಧಿಗೆ ಬಜೆಟ್ ಕೊಡುಗೆಗಳೇನು?

ಬೆಂಗಳೂರು, ಫೆಬ್ರವರಿ 8: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಲಯಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಲವು ಘೋಷಣೆಗಳನ್ನು ಮಾಡಿದ್ದಾರೆ.

* 2019ಅನ್ನು ಜಲವರ್ಷ ಎಂದು ಘೋಷಣೆ. 'ಜಲಾಮೃತ' ಯೋಜನೆಯಡಿ 20,000 ಜಲಸಂರಕ್ಷಣಾ ಕಾಮಗಾರಿಗಳನ್ನು ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳಡಿ ನಿರ್ವಹಿಸಲು 500 ಕೋಟಿ ರೂ. ಅನುದಾನ.

* ರಾಯಚೂರು, ವಿಜಯಪುರ, ಮಂಡ್ಯ ಮತ್ತು ಕೋಲಾರ ಜಿಲ್ಲೆಗಳಲ್ಲಿ 4000 ಕೋಟಿ ರೂ. ವೆಚ್ಚದಲ್ಲಿ 'ಜಲಧಾರೆ' ಮೊದಲ ಹಂತದ ಯೋಜನೆ ಪ್ರಾರಂಭಿಸಲು ಕ್ರಮ.

ಬಜೆಟ್: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ಗೆ ಕೊಡುಗೆಗಳೇನು?

* ನರೇಗಾ ಯೋಜನೆಯಡಿ 12 ಕೋಟಿ ಮಾನವ ದಿನಗಳ ಸೃಜನೆಯ ಗುರಿ.

* "ಸುಭದ್ರ ಶಾಲೆ ಯೋಜನೆ"ಯಡಿ ರಾಜ್ಯದ 6825 ಗ್ರಾಮೀಣ ಶಾಲೆಗಳಿಗೆ ನರೇಗಾ ಯೋಜನೆ ಮೂಲಕ 90 ಕೋಟಿ ರೂ. ವೆಚ್ಚದಲ್ಲಿ ಕಾಂಪೌಂಡ್ ತಡೆಗೋಡೆಗಳ ನಿರ್ಮಾಣ.

* 1000 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿಗಾಗಿ ಒಣ ಮತ್ತು ಹಸಿ ತ್ಯಾಜ್ಯವನ್ನು ವಿಂಗಡಿಸಿ ಒಣ ಕಸ ಮರುಬಳಕೆ ಹಾಗೂ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ "ಸ್ವಚ್ಛಮೇವ ಜಯತೆ" ಆಂದೋಲನ.

* ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳ ಡಿಜಿಟಲೀಕರಣ; ತೆರಿಗೆ ವ್ಯಾಪ್ತಿಯ ಹೊರಗೆ ಉಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಸೇರ್ಪಡೆಗೆ ಕ್ರಮ.

* ಪ್ರತಿ ಜಿಲ್ಲಾ ಪಂಚಾಯತಿಯ ಅನಿರ್ಬಂಧಿತ ಅಭಿವೃದ್ಧಿ ಅನುದಾನ ಗರಿಷ್ಠ 8 ಕೋಟಿ ರೂ. ಗಳಿಗೆ ಹೆಚ್ಚಳ; ಇದಕ್ಕಾಗಿ 172 ಕೋಟಿ ರೂ.ಗಳ ಅನುದಾನ.

* ಪ್ರತಿ ತಾಲ್ಲೂಕು ಪಂಚಾಯತಿಯ ಅನಿರ್ಬಂಧಿತ ಅಭಿವೃದ್ಧಿ ಅನುದಾನ ಗರಿಷ್ಠ 2 ಕೋಟಿ ರೂ.ಗಳವರೆಗೆ ಹೆಚ್ಚಳ. ಇದಕ್ಕಾಗಿ 372 ಕೋಟಿ ರೂ. ಅನುದಾನ.

* ಮಹಾತ್ಮಾ ಗಾಂಧೀಜಿಯವರ 150 ನೇ ಜಯಂತಿ ಅಂಗವಾಗಿ ಗ್ರಾಮ ಪಂಚಾಯಿತಿಗಳ ಆಡಳಿತದಲ್ಲಿ ಪಾರದರ್ಶಕತೆ ಬಿಂಬಿಸಲು ಮತ್ತು ಸಾರ್ವಜನಿಕರ ಮಾಹಿತಿಗಾಗಿ ಗ್ರಾಮ ಪಂಚಾಯಿತಿ ಆಯವ್ಯಯ ಕಿರು ಪುಸ್ತಕ ಪ್ರಕಟಣೆ.

ಯೋಜನೆ ಮತ್ತು ಪ್ರದೇಶಾಭಿವೃದ್ಧಿ
* ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈ ವರ್ಷ 1,500 ಕೋಟಿ ರೂ. ಅನುದಾನ; ಹಾಗೂ ಮಲೆನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ 70 ಕೋಟಿ ರೂ. ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರಕ್ಕೆ 95 ಕೋಟಿ ರೂ. ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 30 ಕೋಟಿ ರೂ. ಅನುದಾನದಲ್ಲಿ ಕ್ರಿಯಾ
ಯೋಜನೆ ಕೈಗೆತ್ತಿಕೊಳ್ಳಲು ಕ್ರಮ.

* ಶಾಸಕರ ಸ್ಥಳೀಯ ಅಭಿವೃದ್ಧಿ ಯೋಜನೆಗಳಿಗಾಗಿ 600 ಕೋಟಿ ರೂ. ಅನುದಾನ.

* ನಂಜುಂಡಪ್ಪ ಸಮಿತಿ ಶಿಫಾರಸುಗಳ ಅನ್ವಯ ಅತೀ ಹಿಂದುಳಿದ ಹಾಗೂ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆಯಡಿ 3010 ಕೋಟಿ ರೂ. ಅನುದಾನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+