For Quick Alerts
ALLOW NOTIFICATIONS  
For Daily Alerts

ನೆಟ್ ಬ್ಯಾಂಕಿಂಗ್ ವಂಚನೆಯ ಬಗ್ಗೆ 900ಕ್ಕೂ ಹೆಚ್ಚು ದೂರುಗಳು ದಾಖಲು

|

ಡೆಬಿಟ್/ಕ್ರೆಡಿಟ್ ಕಾರ್ಡ್ಸ್, ಇಂಟರ್ ನೆಂಟ್ ಬ್ಯಾಂಕಿಂಗ್ ಗೆ ಸಂಬಂಧಿಸಿದ ವಂಚನೆ ಪ್ರಕರಣಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಮೊತ್ತ ಒಳಗೊಂಡಂಥ 900ಕ್ಕೂ ಹೆಚ್ಚು ದೂರುಗಳು ಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯೆ 2018ನೇ ಇಸವಿಯಲ್ಲಿ ದಾಖಲಾಗಿದೆ ಎಂದು ಬುಧವಾರ ಸಂಸತ್ ನಲ್ಲಿ ಮಾಹಿತಿ ನೀಡಲಾಯಿತು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಟ್ಟು 921 ಪ್ರಕರಣ ದಾಖಲಿಸಿದೆ. ಅದು 1 ಲಕ್ಷ ರುಪಾಯಿಗೂ ಹೆಚ್ಚು ಮೊತ್ತ ವಂಚನೆ ಆಗಿರುವ ಎಟಿಎಂ/ಡೆಬಿಟ್ ಕಾರ್ಡ್ಸ್, ಕ್ರೆಡಿಟ್ ಕಾರ್ಡ್ಸ್ ಮತ್ತು ಇಂಟರ್ ನೆಟ್ ಬ್ಯಾಂಕ್ ಗೆ ಸಂಬಂಧಿಸಿದ್ದಾಗಿವೆ. 2018-19ನೇ ಸಾಲಿನಲ್ಲಿ (ಸೆಪ್ಟೆಂಬರ್ 30, 2018 ತನಕ) ಇಷ್ಟು ಪ್ರಮಾಣದ ವಂಚನೆ ಆಗಿದೆ ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಖಾತೆಯ ರಾಜ್ಯ ಸಚಿವ ಎಸ್.ಎಸ್.ಅಹ್ಲುವಾಲಿಯ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

ಇಂಟರ್‌ನೆಟ್ ಬ್ಯಾಕಿಂಗ್ ಪಾಸ್‌ವರ್ಡ್ ಬದಲಾವಣೆ ಹೇಗೆ?ಇಂಟರ್‌ನೆಟ್ ಬ್ಯಾಕಿಂಗ್ ಪಾಸ್‌ವರ್ಡ್ ಬದಲಾವಣೆ ಹೇಗೆ?

2015-16, 2016-17, 2017-18ನೇ ಸಾಲಿನಲ್ಲಿ ರಿಸರ್ವ್ ಬ್ಯಾಂಕ್ ನಿಂದ ದಾಖಲಾದ ಇಂಥ ವಂಚನೆ ಪ್ರಕರಣಗಳ ಸಂಖ್ಯೆ ಕ್ರಮವಾಗಿ 1,191, 1,372 ಹಾಗೂ 2059 ಆಗಿದೆ. ಒಟ್ಟಾರೆ 3, 14 ಹಾಗೂ 6 ಆರ್ಥಿಕ ವಂಚನೆ ಪ್ರಕರಣಗಳು ಎಟಿಎಂಗಳಿಗೆ, ಕಾರ್ಡ್ ಗಳಿಗೆ ಹಾಗೂ ಪಾಯಿಂಟ್ ಆಫ್ ಸೇಲ್ ಸಿಸ್ಟಮ್ಸ್ ಮತ್ತು ಯುಪಿಐಗೆ ಸಂಬಂಧಿಸಿದ್ದಾಗಿದೆ. ಈ ಸಂಖ್ಯೆಗಳು 2016, 2017 ಹಾಗೂ 2018 (ನವೆಂಬರ್ ತನಕ)ರಲ್ಲಿ ವರದಿಯಾಗಿವೆ.

ನೆಟ್ ಬ್ಯಾಂಕಿಂಗ್ ವಂಚನೆಯ ಬಗ್ಗೆ 900ಕ್ಕೂ ಹೆಚ್ಚು ದೂರುಗಳು ದಾಖಲು

ರಾಷ್ಟ್ರೀಯ ಅಪರಾಧ ದಾಖಲೆ ದಳದ ಪ್ರಕಾರ, 12,317 ಸೈಬರ್ ಅಪರಾಧ ಪ್ರಕರಣಗಳು 2016ನೇ ಇಸವಿಯಲ್ಲಿ ದಾಖಲಾಗಿದೆ. 2014 ಹಾಗೂ 2015ರಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಕ್ರಮವಾಗಿ 9,622 ಮತ್ತು 11,592 ಇತ್ತು.

English summary

Over 900 cases of fraud involving cards, net banking registered by RBI

Over 900 cases of fraud related to debit/credit cards and internet banking, involving amount of Rs 1 lakh and above, were registered during April-September 2018, Parliament was informed Wednesday.
Story first published: Wednesday, February 13, 2019, 18:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X