For Quick Alerts
ALLOW NOTIFICATIONS  
For Daily Alerts

ಕೇಬಲ್, ಡಿಟಿಎಚ್ ಗ್ರಾಹಕರಿಗೆ ಶುಭ ಸುದ್ದಿ! ಏನಿದು ಗೊತ್ತಾ..?

ಗ್ರಾಹಕರು ನೂತನ ದರ ನೀತಿಯನ್ನು ಆಯ್ಕೆ ಮಾಡಿಕೊಳ್ಳಲು ಅವಧಿಯನ್ನು ವಿಸ್ತರಿಸಲಾಗಿದೆ. ಚಾನೆಲ್ ಆಯ್ಕೆ ಪ್ರಕ್ರಿಯೆಯಲ್ಲಿ ಇರುವ ಗೊಂದಲದಿಂದಾಗಿ ಹೆಚ್ಚಿನ ಗ್ರಾಹಕರು ನೂತನ ನೀತಿಗೆ ಬದಲಾಗದೆ ಇರುವುದರಿಂದ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ.

|

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕೇಬಲ್ ಹಾಗೂ ಡಿಟಿಎಚ್ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ.

ಗ್ರಾಹಕರು ನೂತನ ದರ ನೀತಿಯನ್ನು ಆಯ್ಕೆ ಮಾಡಿಕೊಳ್ಳಲು ಅವಧಿಯನ್ನು ವಿಸ್ತರಿಸಲಾಗಿದೆ. ಚಾನೆಲ್ ಆಯ್ಕೆ ಪ್ರಕ್ರಿಯೆಯಲ್ಲಿ ಇರುವ ಗೊಂದಲದಿಂದಾಗಿ ಹೆಚ್ಚಿನ ಗ್ರಾಹಕರು ನೂತನ ನೀತಿಗೆ ಬದಲಾಗದೆ ಇರುವುದರಿಂದ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಫೆ.1 ರಿಂದ ಹೊಸ ನಿಯಮ ಜಾರಿ: ಕೇಬಲ್ ಟಿವಿ, ಡಿಟಿಹೆಚ್ ಚಾನೆಲ್ ಹೊಸ ದರದ ಮಾಹಿತಿ ಇಲ್ಲಿದೆ..

ಜನವರಿ 31 ಕೊನೆ ದಿನ

ಜನವರಿ 31 ಕೊನೆ ದಿನ

ಕೇಬಲ್ ಹಾಗೂ ಡಿಟಿಎಚ್ ಗ್ರಾಹಕರು ತಮ್ಮ ಆಯ್ಕೆ ಚಾನೆಲ್ ಗಳಿಗೆ ಮಾತ್ರ ಪಾವತಿ ಮಾಡುವ ನೂತನ ದರ ನೀತಿಯನ್ನು ಅನುಷ್ಠಾನಗೊಳಿಸಲು ಕಾಲಾವಕಾಶ ಕೋರಿದ ಹಿನ್ನಲೆಯಲ್ಲಿ ಅವಧಿಯನ್ನು 2019 ರ ಜನವರಿ 31ರ ವರೆಗೆ ವಿಸ್ತರಿಸಲಾಗಿತ್ತು. ಆದರೆ ಈ ಹಿಂದೆ 2018 ರ ಡಿಸೆಂಬರ್ 31 ಅಂತಿಮ ದಿನವೆಂದು ಟ್ರಾಯ್ ತಿಳಿಸಿತ್ತು.

ಹೊಸ ನೀತಿ ಅವಧಿ ವಿಸ್ತರಣೆ

ಹೊಸ ನೀತಿ ಅವಧಿ ವಿಸ್ತರಣೆ

ಟ್ರಾಯ್ ಜಾರಿ ತಂದಿರುವ ನೂತನ ದರ ನೀತಿಗೆ ಗ್ರಾಹಕರು ನಿರೀಕ್ಷಿತ ಮಟ್ಟದಲ್ಲಿ ಬದಲಾಗಿಲ್ಲ. ಈ ಹಿನ್ನಲೆಯಲ್ಲಿ ಅವಧಿಯನ್ನು 2019 ರ ಮಾರ್ಚ್ 31ರವರೆಗೆ ವಿಸ್ತರಣೆ ಮಾಡಲಾಗಿದೆ. ನೂತನ ದರ ನೀತಿ ಅಡಿಯಲ್ಲಿ ಚಾನೆಲ್ ಗಳನ್ನು ಆಯ್ಕೆ ಮಾಡಲು ಹೊಸ ನಿಯಮಾವಳಿಗಳನ್ನು ಟ್ರಾಯ್ ಜಾರಿಗೆ ತಂದಿದೆ.

ಹೊಸ ನೀತಿಗೆ ಬದಲಾದ ಗ್ರಾಹಕರೆಷ್ಟು?

ಹೊಸ ನೀತಿಗೆ ಬದಲಾದ ಗ್ರಾಹಕರೆಷ್ಟು?

ದೇಶದಲ್ಲಿ ಒಟ್ಟು 100 ಮಿಲಿಯನ್ ಕೇಬಲ್ ಹಾಗೂ 67 ಮಿಲಿಯನ್ ಡಿಟಿಎಚ್ ಗ್ರಾಹಕರಿದ್ದಾರೆ. ಟ್ರಾಯ್ ನ ನೂತನ ದರ ನೀತಿ ಜಾರಿಗೆ ಬಂದ ಬಳಿಕ ಶೇ. 65 ಕೇಬಲ್ ಹಾಗೂ ಶೇ. 35 ಡಿಟಿಎಚ್ ಗ್ರಾಹಕರು ಮಾತ್ರ ಹೊಸ ವ್ಯವಸ್ಥೆಗೆ ಬದಲಾಗಿದ್ದಾರೆ ಎನ್ನಲಾಗಿದೆ. ಚಾನೆಲ್ ಆಯ್ಕೆ ಪ್ರಕ್ರಿಯೆಯಲ್ಲಿ ಇರುವ ಗೊಂದಲದಿಂದಾಗಿ ಹೆಚ್ಚಿನ ಗ್ರಾಹಕರು ನೂತನ ನೀತಿಗೆ ಬದಲಾಗಿಲ್ಲ ಎಂದು ಹೇಳಲಾಗಿದ್ದು, ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ.

Read more about: trai telecom money
English summary

Trai allows consumers time till March 31st to select channels under new tariff regime

The Telecom Regulatory Authority of India (Trai) has once again extended deadline for consumers to select TV channels they want to pay for, till March 31st, 2019.
Story first published: Wednesday, February 13, 2019, 11:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X