For Quick Alerts
ALLOW NOTIFICATIONS  
For Daily Alerts

ರೂ. 453 ಕೋಟಿ ಪಾವತಿಸದೆ ಹೋದರೆ ಅನಿಲ್ ಅಂಬಾನಿಗೆ ಜೈಲು

ಉದ್ಯಮಿ ಅನಿಲ್ ಅಂಬಾನಿಗೆ ಎರಿಕ್ಸನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಭಾರೀ ಹಿನ್ನಡೆಯಾಗಿದೆ.

|

ಉದ್ಯಮಿ ಅನಿಲ್ ಅಂಬಾನಿಗೆ ಎರಿಕ್ಸನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಭಾರೀ ಹಿನ್ನಡೆಯಾಗಿದೆ.

 
ರೂ. 453 ಕೋಟಿ ಪಾವತಿಸದೆ ಹೋದರೆ ಅನಿಲ್ ಅಂಬಾನಿಗೆ ಜೈಲು

ಅನಿಲ್ ಅಂಬಾನಿ ಹಾಗೂ ಇಬ್ಬರು ನಿರ್ದೇಶಕರು ಎರಿಕ್ಸನ್ ಇಂಡಿಯಾಗೆ ರೂ. 453 ಕೋಟಿ ನೀಡಬೇಕಿದ್ದು, ನಾಲ್ಕು ವಾರಗಳಲ್ಲಿ ಹಣವನ್ನು ಪಾವತಿಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ. ನಾಲ್ಕು ವಾರಗಳಲ್ಲಿ ಹಣ ಹಿಂದಿರುಗಿಸಿ ಇಲ್ಲದಿದ್ದರೆ ಜೈಲು ಶಿಕ್ಷೆ ಅನುಭವಿಸಲು ಸಿದ್ದರಾಗಿ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಆದೇಶ ಮಾಡಿದೆ.

 

ಎರಿಕ್ಸನ್ ಪ್ರಕರಣದಲ್ಲಿ ಅನಿಲ್ ಅಂಬಾನಿ ಹಾಗೂ ಇನ್ನಿಬ್ಬರು ನಿರ್ದೇಶಕರು ನ್ಯಾಯಾಂಗ ನಿಂದನೆ ಮಾಡಿರುವುದು ಸ್ಪಷ್ಟವಾಗಿದೆ. ನಾಲ್ಕು ವಾರದಲ್ಲಿ ಹಣ ಪಾವತಿ ಮಾಡದೆ ಹೋದರೆ ಪ್ರತಿಯೊಬ್ಬರು ರೂ. 1 ಕೋಟಿ ದಂಡ ಹಾಗು 1 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕೆಂದು ಕೋರ್ಟ್ ಹೇಳಿದೆ.

ರಿಲಯನ್ಸ್‌ ಕಮ್ಯುನಿಕೇಷನ್ಸ್‌ಸಂಸ್ಥೆ ಉದ್ದೇಶಪೂರ್ವಕವಾಗಿಯೇ ಹಣ ಪಾವತಿಸಿಲ್ಲ. ಈ ಹಿಂದೆ ಸೂಚನೆ ನೀಡಲಾಗಿತ್ತಾದರೂ ಪಾಲಿಸಿಲ್ಲ ಎಂದು ಸುಪ್ರೀಂಕೋರ್ಟ್‌ ನ್ಯಾಯಪೀಠ ಹೇಳಿದೆ. ರಫೇಲ್ ಜೆಟ್ ಒಪ್ಪಂದಕ್ಕೆ ರಿಲಯನ್ಸ್ ಗ್ರೂಪ್ ಬಳಿ ಹಣವಿದೆ. ಆದರೆ ಸಾಲ ತೀರಿಸಲು ಹಣವಿಲ್ಲವೆಂದು ಅನಿಲ್ ಅಂಬಾನಿ ಸುಳ್ಳು ಹೇಳ್ತಿದ್ದಾರೆಂದು ಎರಿಕ್ಸನ್ ಆರೋಪ ಮಾಡಿತ್ತು.

2014 ರಲ್ಲಿ ಎರಿಕ್ಸನ್ ಇಂಡಿಯಾ RCom ನೊಂದಿಗೆ ಏಳು ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಿತ್ತು. ಕಳೆದ ವರ್ಷ ಎರಿಕ್ಸನ್ ಅನಿಲ್ ಅಂಬಾನಿ ಕಂಪೆನಿ ವಿರುದ್ಧ ರೂ. 550 ಕೋಟಿ ಬಾಕಿ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು

English summary

Anil Ambani Guilty Of Contempt; Pay Up Or Go To Jail, Says Supreme Court

Anil Ambani was held guilty of contempt today by the Supreme Court, which said he will go to jail for three months if he doesn't pay Rs. 453 crores to Ericsson India within four weeks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X