For Quick Alerts
ALLOW NOTIFICATIONS  
For Daily Alerts

ಅನಿಲ್ ಅಂಬಾನಿ ವಿರುದ್ಧ ಅಪರಾಧ ಪ್ರಕರಣ: ರಿಲಯನ್ಸ್ ಗ್ರೂಪ್ ಷೇರುಗಳು ಭಾರೀ ಕುಸಿತ

ಎರಿಕ್ಸನ್ ಪ್ರಕರಣದಲ್ಲಿ ಅನಿಲ್ ಅಂಬಾನಿ ಹಾಗೂ ಇನ್ನಿಬ್ಬರು ನಿರ್ದೇಶಕರು ನ್ಯಾಯಾಂಗ ನಿಂದನೆ ಮಾಡಿದ್ದು, ತಪ್ಪಿತಸ್ಥರೆಂದು ಸಾಬೀತಾಗಿದೆ.

|

ಎರಿಕ್ಸನ್ ಪ್ರಕರಣದಲ್ಲಿ ಅನಿಲ್ ಅಂಬಾನಿ ಹಾಗೂ ಇನ್ನಿಬ್ಬರು ನಿರ್ದೇಶಕರು ನ್ಯಾಯಾಂಗ ನಿಂದನೆ ಮಾಡಿದ್ದು, ತಪ್ಪಿತಸ್ಥರೆಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ವಾರದಲ್ಲಿ ಹಣ ಪಾವತಿ ಮಾಡದೆ ಹೋದರೆ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿರುವುದರಿಂದ ರಿಲಯನ್ಸ್ ಗ್ರೂಪ್ ಕಂಪನಿಗಳ ಷೇರುಗಳು ಒತ್ತಡಕ್ಕೆ ಸಿಲುಕಿವೆ.

 
ಅನಿಲ್ ಅಂಬಾನಿ ಅಪರಾಧ ಪ್ರಕರಣ: ರಿಲಯನ್ಸ್ ಗ್ರೂಪ್ ಷೇರು  ಭಾರೀ ಕುಸಿತ

ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಮುಂಬೈ ಷೇರುಪೇಟೆ ಸೂಚ್ಯಂಕದಲ್ಲಿ ರಿಲಯನ್ಸ್ ಕಮ್ಯೂನಿಕೇಷನ್ಸ್ ಶೇ. 9.46 ರಷ್ಟು ಕುಸಿದಿದೆ. ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಶೇ. 8.75 ರಿಂದ ಶೇ. 111.50, ರಿಲಯನ್ಸ್ ಕ್ಯಾಪಿಟಲ್ ಶೇ. 10.26 ರಿಂದ ಶೇ. 135.95, ರಿಲಯನ್ಸ್ ಪವರ್ ಶೇ. 5.53 ರಿಂದ ಶೇ. 10.25, ರಿಲಯನ್ಸ್ ನೌಕಾ ಮತ್ತು ಇಂಜಿನಿಯರಿಂಗ್ ಶೇ. 8.56 ರಿಂದ ಶೇ. 8.22 ಮತ್ತು ರಿಲಯನ್ಸ್ ಹೋಮ್ ಫೈನಾನ್ಸ್ ಶೇ. 4.26 ರಿಂದ 24.70ಕ್ಕೆ ಕುಸಿತ ಕಂಡಿವೆ.

 

ನಾಲ್ಕು ವಾರಗಳಲ್ಲಿ ರೂ. 453 ಕೋಟಿ ಹಣ ಹಿಂದಿರುಗಿಸದಿದ್ದರೆ ಅನಿಲ್ ಅಂಬಾನಿಗೆ ಮೂರು ತಿಂಗಳು ಜೈಲು ಶಿಕ್ಷೆಯಾಗಲಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.

ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಸಂಸ್ಥೆ ಉದ್ದೇಶಪೂರ್ವಕವಾಗಿಯೇ ಹಣ ಪಾವತಿಸಿಲ್ಲ. ರಫೇಲ್ ಜೆಟ್ ಒಪ್ಪಂದಕ್ಕೆ ರಿಲಯನ್ಸ್ ಗ್ರೂಪ್ ಬಳಿ ಹಣವಿದೆ. ಆದರೆ ಸಾಲ ತೀರಿಸಲು ಹಣವಿಲ್ಲವೆಂದು ಅನಿಲ್ ಅಂಬಾನಿ ಸುಳ್ಳು ಹೇಳ್ತಿದ್ದಾರೆಂದು ಎರಿಕ್ಸನ್ ಆರೋಪ ಮಾಡಿತ್ತು.

2014 ರಲ್ಲಿ ಎರಿಕ್ಸನ್ ಇಂಡಿಯಾ RCom ನೊಂದಿಗೆ ಏಳು ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಿತ್ತು. ಕಳೆದ ವರ್ಷ ಎರಿಕ್ಸನ್ ಅನಿಲ್ ಅಂಬಾನಿ ಕಂಪೆನಿ ವಿರುದ್ಧ ರೂ. 550 ಕೋಟಿ ಬಾಕಿ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

English summary

Reliance Group Shares Fall After Anil Ambani Found Guilty Of Contempt

Reliance Communications (RCom) fell as much as 9.46 per cent to Rs. 5.45 on the BSE.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X